Asianet Suvarna News Asianet Suvarna News

ಸೋನೆ ಮಳೆ ಮಧ್ಯೆ ತಾತನ ಸೈಕಲ್ ಸ್ಟಂಟ್: ಕೈ ಬಿಟ್ಟು ಸೈಕಲ್ ಓಡಿಸುವ ಅಜ್ಜ

ಇಲ್ಲೊಬ್ಬರು ವೃದ್ಧರೂ ಜಗದ ಚಿಂತೆ ಮರೆತು ನವ ತರುಣರಂತೆ ಸೈಕಲ್‌ ಹ್ಯಾಂಡಲ್‌ನಿಂದ ಎರಡು ಕೈಗಳನ್ನು ಬಿಟ್ಟು ಬಿಂದಾಸ್ ಆಗಿ ಸಾಗುತ್ತಿದ್ದು, ಈ ವಿಡಿಯೋ ಈಗ ಸಾಕಷ್ಟು ವೈರಲ್ ಆಗಿದೆ.

elderly man cycle stunt goes viral in social Media watch video akb
Author
First Published Dec 1, 2022, 6:29 PM IST

ನಾಳೆ ಇನ್ನಿಲ್ಲವೆಂಬಂತೆ ಜೀವಿಸಿ, ಈ ಕ್ಷಣವನ್ನು ಎಂಜಾಯ್ ಮಾಡಿ, ಈ ಕ್ಷಣದಲ್ಲಿ ಬದುಕಿ ನಾಳೆ ಏನಾಗುವುದೋ ಏನೋ ಯಾರಿಗೆ ಗೊತ್ತು. ಹೀಗಿರುವಾಗ ನಾಳೆಯ ಯೋಚನೆ ಏಕೆ ಎಂಬಿತ್ಯಾದಿ ಮಾತುಗಳನ್ನು ನೀವು ಕೇಳಿರಬಹುದು. ಆದರೆ ನಾಳೆಯ ಚಿಂತೆಯನ್ನು ಮರೆತು ಬದುಕುವವರು ತೀರಾ ವಿರಳ. ನಾಳೆ ಏನಾಗುವುದೋ ಎಂಬ ಚಿಂತೆಯಲ್ಲೇ ಬಹುತೇಕರು ವಾಸ್ತವದಲ್ಲಿ ಬದುಕಲಾಗದೇ ಖುಷಿ ಪಡಲಾಗದೇ ಇರುವ ಕ್ಷಣವನ್ನು ಸಂಭ್ರಮಿಸಲಾಗದೇ ಹೋಗುತ್ತಾರೆ. ಆದರೆ ಇಲ್ಲೊಬ್ಬರು ವೃದ್ಧರೂ ಜಗದ ಚಿಂತೆ ಮರೆತು ನವ ತರುಣರಂತೆ ಸೈಕಲ್‌ ಹ್ಯಾಂಡಲ್‌ನಿಂದ ಎರಡು ಕೈಗಳನ್ನು ಬಿಟ್ಟು ಬಿಂದಾಸ್ ಆಗಿ ಸಾಗುತ್ತಿದ್ದು, ಈ ವಿಡಿಯೋ ಈಗ ಸಾಕಷ್ಟು ವೈರಲ್ ಆಗಿದೆ.

ವಯಸ್ಸು ಕೇವಲ ಸಂಖ್ಯೆ ಮಾತ್ರ ಎಂಬುದನ್ನು ಅನೇಕರು ಸಾಧಿಸಿ ತೋರಿಸಿದ್ದಾರೆ. ಖುಷಿ ಪಡುವುದಕ್ಕೆ, ಸಂಭ್ರಮಿಸುವುದಕ್ಕೆ, ಸಾಧನೆ ಮಾಡುವುದಕ್ಕೆ ವಯಸ್ಸಿನ ಮಿತಿ (Age bar) ಇಲ್ಲ ಎಂಬುದನ್ನು ಅನೇಕರು ಸಾಧಿಸಿ ತೋರಿಸಿದ್ದಾರೆ. ಹಾಗೆಯೇ ಈ ಅಜ್ಜನೂ ತಾನಿನೂ ಹರೆಯದಲ್ಲಿರುವೆನೋ ಎಂಬಂತೆ ಸುರಿಯುತ್ತಿರುವ ಸೋನೆ ಮಳೆಯ ಮಧ್ಯೆ ವಾಹನಗಳು ಗಿಜಿಗುಡುತ್ತಿರುವ ರಸ್ತೆಯಲ್ಲಿ ನಾನು ಯಾರಿಗೂ ಕಡಿಮೆ ಇಲ್ಲ ಎಂಬಂತೆ ಸೈಕಲ್ ಓಡಿಸುತ್ತಿದ್ದು, ಈ ವಿಡಿಯೋ ಸಾಕಷ್ಟು ವೈರಲ್ ಆಗಿದೆ. 50 ಸಾವಿರಕ್ಕೂ ಹೆಚ್ಚು ಜನ ಈ ವಿಡಿಯೋವನ್ನು ವೀಕ್ಷಿಸಿದ್ದು ತಾತನಿಗೆ (Old man) ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

ಟ್ಟಿಟ್ಟರ್‌ನಲ್ಲಿ ಗುಲ್ಜರ್ ಸಹಾಬ್ ಎಂಬುವವರು ಈ ವಿಡಿಯೋವನ್ನು ಪೋಸ್ಟ್ ಮಾಡಿದ್ದು, ಪ್ರತಿಕ್ಷಣವನ್ನು ಆನಂದಿಸಿ ಎಂದು ಬರೆದುಕೊಂಡಿದ್ದಾರೆ. ವಿಡಿಯೋದ ಹಿನ್ನೆಲೆಯಲ್ಲಿ ತೆಲುಗಿನ (telugu) ಬ್ಲಾಕ್ಬಸ್ಟರ್ ಸಿನಿಮಾ ಸೀತಾರಾಮದ ಹಾಡಿನ ಹಿನ್ನೆಲೆ ಸಂಗೀತಾ (Music) ಕೇಳಿ ಬರುತ್ತಿದೆ. 26 ಸೆಕೆಂಡ್‌ಗಳ ಈ ವಿಡಿಯೋ ನೋಡಿ ಅನೇಕರು ಕಾಮೆಂಟ್ ಮಾಡಿದ್ದಾರೆ. ಜೀವನ ಬಹಳ ಸುಂದರವಾಗಿದೆ ಎಂದು ಒಬ್ಬರು ಪ್ರತಿಕ್ರಿಯಿಸಿದರೆ, ಸಂತೋಷವೇ ಜೀವನ ಎಂದು ಮತ್ತೊಬ್ಬರು ಪ್ರತಿಕ್ರಿಯಿಸಿದ್ದಾರೆ. ವಯಸ್ಸು ಕೇವಲ ಸಂಖ್ಯೆ ಅಷ್ಟೇ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. 

ಡಾನ್ಸ್‌ಗೆ ಕರೆದ ತಾತನಿಗೆ ನೋ ಎಂದ ಅಜ್ಜಿ... ಆಮೇಲೆ ತಾತ ಮಾಡಿದ್ದು ಕಿತಾಪತಿ..!

ಕೆಲ ದಿನಗಳ ಹಿಂದೆ ವೃದ್ಧರೊಬ್ಬರು ತಮ್ಮ ಪತ್ನಿ ಮುಂದೆ ಡಾನ್ಸ್ ಮಾಡುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿತ್ತು. ದಳಪತಿ ವಿಜಯ್ (thalapathy Vijay) ಹಾಗೂ ಪೂಜಾ ಹೆಗ್ಡೆ (Puja Hegde) ಅಭಿನಯದ ತಮಿಳು ಸಿನಿಮಾ(Tamil Film) ಬೀಸ್ಟ್‌ ನ ಖ್ಯಾತ ಹಾಡು Halamithi Habibo... Halamithi Habibo.. ಹಾಡನ್ನು ಯಾರು ಕೇಳಿಲ್ಲ. ಹೇಳಿ ಈ ಹಾಡಿಗೆ ಹೆಜ್ಜೆ ಹಾಕದ ಜನರೇ ಇಲ್ಲ. ಹಾಗೆಯೇ ಈ ವೃದ್ಧರಿಗೂ ಹಾಡನ್ನು ಕೇಳಿ ಕುಣಿಯುವ ಆಸೆ ಆಗಿದ್ದು, ಪ್ರೀತಿಯ ಪತ್ನಿ ಮುಂದೆ ತಮ್ಮ ಡಾನ್ಸ್ ಪ್ರತಿಭೆಯನ್ನು ಪ್ರದರ್ಶಿಸಿದ್ದಾರೆ. ಈ ವೃದ್ಧ ದಂಪತಿಯ ಪುತ್ರಿಯೇ ದೃಶ್ಯವನ್ನು ಸೆರೆ ಹಿಡಿದಿದ್ದಾಳೆ. ಇಳಿ ವಯಸ್ಸಿನಲ್ಲಿ ಅಪ್ಪನ ಹುರುಪು ಕಂಡು ಮಗಳು ಕೂಡ ನಗುತ್ತಲೇ ವಿಡಿಯೋ ಮಾಡಿರುವುದು ವಿಡಿಯೋದ ಹಿನ್ನೆಲೆಯಲ್ಲಿ ಕೇಳಿಸುತ್ತಿದೆ. 

ಡಾನ್ಸ್ ಫ್ಲೋರ್ ಚಿಂದಿ ಮಾಡಿದ ಅಜ್ಜಿ : ವಿಸಿಲ್ ಹೊಡೆದು ಹುರಿದುಂಬಿಸಿದ ತರುಣರು

ವಿಡಿಯೋದಲ್ಲಿ ಅಜ್ಜಿ ಹಸಿರು ಬಣ್ಣದ  ನೈಟಿ ಧರಿಸಿ ಕುರ್ಚಿ ಮೇಲೆ ಕುಳಿತಿದ್ದಾರೆ. ಕಷಾಯ ಬಣ್ಣದ ಲುಂಗಿ ಹಾಗೂ ಬಿಳಿ ಬನಿಯನ್ ತೊಟ್ಟ 70 ವರ್ಷದ ತಾತ ಆಕೆಯ ಮುಂದೆ ತಮಗಿಷ್ಟ ಬಂದಂತೆ ಸ್ಟೆಪ್ ಹಾಕುತ್ತಿದ್ದಾರೆ. ಶ್ರುತಿ ಎಂಬುವವರು ಈ ವಿಡಿಯೋವನ್ನು ತಮ್ಮ ಇನ್ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಮನವಿಯ ಮೇರೆಗೆ ಈ ವಿಡಿಯೋವನ್ನು ಅಪ್‌ಲೋಡ್ ಮಾಡುತ್ತಿದ್ದೇನೆ. ನಿಮ್ಮ ಮನದೊಳಗಿರುವ ಮಗು ಮನಸ್ಸನ್ನು ಬಿಟ್ಟರೆ ನಿಮ್ಮ ಸುತ್ತಲೂ ಸದಾ ಖುಷಿ ನೆಲೆಸಿರುತ್ತದೆ. ಇವರು ನನ್ನ ಅಪ್ಪ ಮತ್ತು ಅಮ್ಮ. 10 ವರ್ಷ ವಯಸ್ಸಿನ ಇವರು ತಮ್ಮ ಎಪ್ಪತ್ತರ ಹರೆಯದಲ್ಲಿದ್ದಾರೆ ಎಂದು ಅವರು ಬರೆದುಕೊಂಡಿದ್ದು, ಈ ಅರೇಬಿಕ್ ಕುಟ್ಟು ಹಾಡಿನ ಸಂಯೋಜಕ ಅನಿರುದ್ಧ್ ರವಿಚಂದರ್ (Anirudh Ravichander) ಅವರಿಗೆ ಈ ವಿಡಿಯೋವನ್ನು ಟ್ಯಾಗ್ ಮಾಡಿದ್ದಾರೆ. ಒಟ್ಟಿನಲ್ಲಿ ಈ ವೃದ್ಧ ಜೋಡಿಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿತ್ತು. 

Follow Us:
Download App:
  • android
  • ios