ಡಾನ್ಸ್ ಫ್ಲೋರ್ ಚಿಂದಿ ಮಾಡಿದ ಅಜ್ಜಿ : ವಿಸಿಲ್ ಹೊಡೆದು ಹುರಿದುಂಬಿಸಿದ ತರುಣರು
ವೈರಲ್ ಆಗಿರುವ ವಿಡಿಯೋವೊಂದರಲ್ಲಿ ವಯಸ್ಸಾದ ಮಹಿಳೆಯೊಬ್ಬರು ಯುವಕರು ನಾಚಿಸುವಂತೆ ಡಾನ್ಸ್ ಮಾಡುತ್ತಿದ್ದಾರೆ. Shailarmy ಎಂಬ ಇನ್ಸ್ಟಾಗ್ರಾಮ್ ಪೇಜ್‌ನಿಂದ ಈ ವಿಡಿಯೋ ವೈರಲ್ ಆಗಿದ್ದು ವೃದ್ಧರೊಬ್ಬರ ಈ ಜೀವನೋತ್ಸಾಹಕ್ಕೆ ಜನ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಡಾನ್ಸ್ ಯಾರಿಗೆ ಇಷ್ಟ ಇಲ್ಲ ಹೇಳಿ. ನಮ್ಮ ಸ್ಥಳೀಯವಾಗಿ ಹೇಳಬೇಕೆಂದರೆ ತಮಟೆ ಸದ್ದು ಕಿವಿಗೆ ಬೀಳುತ್ತಿದ್ದಂತೆ ಕೈ ಕಾಲುಗಳು ತಾನಾಗೆ ಕುಣಿಯಲು ಶುರು ಮಾಡುತ್ತವೆ. ದೇಶ ಭಾಷೆಯ ಹಂಗು ತೊರೆದು ನೃತ್ಯ ಎಲ್ಲರನ್ನೂ ಒಂದಾಗಿಸುತ್ತದೆ. ದೊಡ್ಡವರು ಸಣ್ಣವರೆಂಬ ಬೇಧವಿಲ್ಲದೇ ಎಲ್ಲರೂ ಸಂಗೀತಕ್ಕೆ ತಕ್ಕ ಹೆಜ್ಜೆ ಹಾಕುತ್ತಾರೆ. ತಮ್ಮ ವಯಸ್ಸನ್ನು ಮರೆತು ಅನೇಕರು ಬಿಂದಾಸ್ ಆಗಿ ಫೇಮಸ್ ಹಾಡುಗಳಿಗೆ ಹೆಜ್ಜೆ ಹಾಕುತ್ತಾರೆ. ಇಂತಹ ಸಾಕಷ್ಟು ವಿಡಿಯೋಗಳನ್ನು ನಾವು ಸಾಮಾಜಿಕ ಜಾಲತಾಣದಲ್ಲಿ ನೋಡಿದ್ದೇವೆ.
ಅದೇ ರೀತಿ ಈಗ ವೈರಲ್ ಆಗಿರುವ ವಿಡಿಯೋವೊಂದರಲ್ಲಿ ವಯಸ್ಸಾದ ಮಹಿಳೆಯೊಬ್ಬರು ಯುವಕರು ನಾಚಿಸುವಂತೆ ಡಾನ್ಸ್ ಮಾಡುತ್ತಿದ್ದಾರೆ. Shailarmy ಎಂಬ ಇನ್ಸ್ಟಾಗ್ರಾಮ್ ಪೇಜ್‌ನಿಂದ ಈ ವಿಡಿಯೋ ವೈರಲ್ ಆಗಿದ್ದು ವೃದ್ಧರೊಬ್ಬರ ಈ ಜೀವನೋತ್ಸಾಹಕ್ಕೆ ಜನ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ವಿಡಿಯೋವನ್ನು ಶೇರ್ ಮಾಡಿರುವ Shailarmy ಅವರು ವಯಸ್ಸು ಕೇವಲ ಸಂಖ್ಯೆ ಎಂಬುದಕ್ಕೆ ಇದು ಮತ್ತೊಂದು ಉದಾಹರಣೆ. ಇಂದು ನಾನು ನಡೆಸಿಕೊಟ್ಟ ಕನ್ಸರ್ಟ್ ಒಂದರಲ್ಲಿ ಕಂಡುಬಂದ ದೃಶ್ಯವಿದು. ಇವರ ಹೆಸರು ರೇಖಾ ಮಾಮ್. ಸಂಪ್ರದಾಯಿಕ ಪಂಜಾಬಿ ಹಾಡುಗಳಿಗೆ ಬಿಂದಾಸ್ ಆಗಿ ನರ್ತಿಸುವ ಮೂಲಕ ಡ್ಯಾನ್ಸ್ ಫ್ಲೋರ್‌ಗೆ ಕಿಚ್ಚು ಹಚ್ಚಿದರು. ಅವರ ನೃತ್ಯ ನೋಡಿ ಸುತ್ತಲಿದ್ದ ಜನರು ಮೂಕ ವಿಸ್ಮಿತರಾದರು. ಈ ವಿಡಿಯೋ ಜೀವನವನ್ನು ನೀವು ಹೇಗೆ ಪರಿಗಣಿಸಬೇಕು ಎಂಬುದನ್ನು ತೋರಿಸಿಕೊಡುತ್ತಿದೆ. ಜೀವನದ ಪ್ರತಿಕ್ಷಣವನ್ನು ಆನಂದಿಸಬೇಕು. ಜೀವನವನ್ನು ಸಂಪೂರ್ಣವಾಗಿ ಬದುಕಬೇಕು ಎಂದು ಅವರು ಬರೆದುಕೊಂಡಿದ್ದಾರೆ.
ಸೆಖೆಯಿಂದ ಪಾರಾಗಲು ತಾತನ ಹೊಸ ಟ್ರಿಕ್ಸ್: ಇಂಟರ್‌ನೆಟ್‌ನಲ್ಲಿ ಫೋಟೋ ವೈರಲ್
ವಿಡಿಯೋದಲ್ಲಿ ಕಾಣಿಸುವಂತೆ ಕೆಂಪು ಬಣ್ಣದ ಸೀರೆ ಧರಿಸಿದ ವಯಸ್ಸಾದ ಮಹಿಳೆಯೊಬ್ಬರು ಪಂಜಾಬಿ ಹಾಡು ಡೋಲ್ ಜಗಿರೋ ದಾ ಹಾಡಿಗೆ ಸಖತ್ ಆಗಿ ಹೆಜ್ಜೆ ಹಾಕುತ್ತಿದ್ದಾರೆ. ಇವರ ಸುಂದರ ನರ್ತನ ನೋಡಿದ ಸುತ್ತಲಿದ್ದವರೆಲ್ಲ ತಮ್ಮ ಡಾನ್ಸ್ ನಿಲ್ಲಿಸಿ ಇವರಿಗೆ ಚಪ್ಪಾಳೆ ತಟ್ಟುವ ಮೂಲಕ ಪ್ರೋತ್ಸಾಹಿಸುತ್ತಿದ್ದಾರೆ. ಮತ್ತೆ ಕೆಲವರು ವಿಸಿಲ್ ಹೊಡಿತಿದ್ದಾರೆ. ಈ ವಿಡಿಯೋ ನೋಡಿದ ಅನೇಕರು ಕಾಮೆಂಟ್ ಮಾಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ನನ್ನ 60ನೇ ವಯಸ್ಸಿನಲ್ಲಿ ನಾನು ಹೀಗಿರಲು ಬಯಸುವೆ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು ನಮಗೂ ಈ ಹುಮ್ಮಸ್ಸು ಕೊಡು ದೇವರೇ ಎಂದು ಬೇಡಿಕೊಂಡಿದ್ದಾರೆ. ಅಬ್ಬಾ ಈ ವಯಸ್ಸಲ್ಲಿ ಎಂಥಾ ಎನರ್ಜಿ ಇವರದು ಎಂದು ಕೆಲವರು ಉದ್ಘರಿಸಿದ್ದಾರೆ. ಇದಂತು ಕಣ್ಣುಗಳಿಗೆ ಹಬ್ಬ ನಾನು ಇದೇ ರೀತಿ ದೊಡ್ಡವಳಾಗಲು ಬಯಸುವೆ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು ಇವರು ರೇಖಾ ಬಜಾಜ್ ಮ್ಯಾಮ್ ಅವರು ಇಡೀ ಶೋವನೆ ತಮ್ಮ ಡಾನ್ಸ್‌ನಿಂದ ಸೊರೆಗೊಳಿಸಿದ್ದಾರೆ ಎಂದು ಮಗದೊಬ್ಬರು ಕಾಮೆಂಟ್ ಮಾಡಿದ್ದಾರೆ.
ಈ ಜನರೇಷನ್‌ನಲ್ಲಿ ಹುಟ್ಟಿದ್ರೆ ಈ ತಾತನ ಹಿಡಿಯಕ್ಕಾಗ್ತಿರ್ಲಿಲ್ಲ ಬಿಡಿ: ಹೆಂಗೆ ಕುಣಿತಾರೆ ನೋಡಿ