Asianet Suvarna News Asianet Suvarna News

ಇಂದಿರಾ ಗಾಂಧಿ ಹತ್ಯೆ ಸಂಭ್ರಮಿಸಿದ ಖಲಿಸ್ತಾನಿ, ಕೆನಡಾಗೆ ವಿದೇಶಾಂಗ ಸಚಿವರ ವಾರ್ನಿಂಗ್!

ಕೆನಡಾದಲ್ಲಿ ಖಲಿಸ್ತಾನಿ ಉಗ್ರ ಸಂಘಟನೆ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಹತ್ಯೆಯ ಸ್ಥಬ್ಧಚಿತ್ರ ಮೆರವಣಿ ಮೂಲಕ ಸಂಭ್ರಮ ಆಚರಿಸಿದೆ. ಈ ಘಟನೆ ಬೆನ್ನಲ್ಲೇ ಭಾರತ ಖಡಕ್ ವಾರ್ನಿಂಗ್ ನೀಡಿದೆ. ಖಲಿಸ್ತಾನಕ್ಕೆ ಮಾತ್ರವಲ್ಲ, ಕೆನಡಾಗೂ ಎಚ್ಚರಿಕೆ ನೀಡಲಾಗಿದೆ.

EAM Dr S Jaishankar warns Khalistan and canada for celebrating  late PM Indira Gandhi assassination ckm
Author
First Published Jun 8, 2023, 12:36 PM IST

ನವದೆಹಲಿ(ಜೂ.08): ಭಾರತದಲ್ಲಿ ನಿಷೇಧವಾಗಿರುವ ಖಲಿಸ್ತಾನ ಉಗ್ರ ಸಂಘಟನೆ ಕೆನಡಾದಲ್ಲಿ ಅತ್ಯಂತ ಬಲಿಷ್ಠವಾಗಿದೆ. ಕೆನಡಾದಲ್ಲಿ ಸಿಖ್ ಸಮುದಾಯವನ್ನು ಒಲೈಸಲು ಅಲ್ಲಿನ ಸರ್ಕಾರ ಖಲಿಸ್ತಾನಿಗಳಿಗೆ ಭಾರಿ ಬೆಂಬಲ ನೀಡಿದೆ. ಇದರ ಪರಿಣಾಮ ಇದೀಗ ಕೆನಾಡದ ಖಲಿಸ್ತಾನ ಸಂಘಟನೆಯ ನಡೆಗೆ ಭಾರತ ಕೆರಳಿದೆ. ಮಾಜಿ ಪ್ರಧಾನಿ ಇಂದಿರಾ ಗಾಂಧಿ ಹತ್ಯೆಯ ಸ್ಥಬ್ಧಚಿತ್ರ ಮೆರವಣಿಗೆ ಮಾಡಿದ ಖಲಿಸ್ತಾನಿ ಉಗ್ರರು ಭಾರಿ ಸಂಭ್ರಮ ಆಚರಿಸಿದ್ದಾರೆ. ಈ ಘಟನೆ ಬೆನ್ನಲ್ಲೇ ಭಾರದ ವಿದೇಶಾಂಗ ಸಚಿವ ಎಸ್ ಜೈಶಂಕರ್ ಖಡಕ್ ಎಚ್ಚರಿಕೆ ನೀಡಿದ್ದಾರೆ. ಮತಬ್ಯಾಂಕ್ ರಾಜಕಾರಣಕ್ಕಾಗಿ ಈ ರೀತಿ ಉಗ್ರ ಸಂಘಟನೆಗಳ ಚಟುವಟಿಕೆಗೆ ಅವಕಾಶ ನೀಡುವುದು ತಪ್ಪು. ಇದು ಖಲಿಸ್ತಾನಕ್ಕೆ ಮಾತ್ರವಲ್ಲ, ಭವಿಷ್ಯದಲ್ಲಿ ದ್ವಿಪಕ್ಷೀಯ ಸಂಬಂಧಗಳ ಕಾರಣಗಳಿಂದ ಕೆನಾಡಾಗೂ ಒಳ್ಳಯದಲ್ಲ ಎಂದು ಎಚ್ಚರಿಸಿದ್ದಾರೆ.

ಇದು ಅತ್ಯಂತ ಗಂಭೀರ ಸಮಸ್ಯೆಯಾಗಿದೆ. ಪ್ರತ್ಯೇಕವಾದಿಗಳಿಗೆ, ಉಗ್ರಗಾಮಿಗಳಿಗೆ, ಹಿಂಸಾಚಾರವನ್ನು ಪ್ರತಿಪಾದಿಸುವ ಜನರಿಗೆ ಜಾಗ ನೀಡಲಾಗಿದೆ. ಅವರ ಚಟುವಟಿಕೆಗೆ ಅವಕಾಶ ನೀಡಲಾಗಿದೆ. ಇದು ಕೆನಡಾಗೆ ಒಳ್ಳೆಯದಲ್ಲ. ಭಾರತದ ಜೊತೆಗಿನ ಸಂಬಂಧಕ್ಕೆ ಧಕ್ಕೆಯಾಗಲಿದೆ ಎಂದು ಜೈಶಂಕರ್ ಹೇಳಿದ್ದಾರೆ. ಇದೀಗ ಈ ಘಟನೆಯನ್ನು ಭಾರತ ಗಂಭೀರವಾಗಿ ಪರಿಗಣಿಸಿದ್ದು, ಕೆನಾಡಾಗೆ ಮಹತ್ವದ ಸಂದೇಶ ರವಾನಿಸಿದೆ.

ರಾಹುಲ್‌ ಗಾಂಧಿ ಕಾರ್ಯಕ್ರಮದಲ್ಲಿ ಮೊಳಗಿದ 'ಖಲಿಸ್ತಾನಿ ಜಿಂದಾಬಾದ್‌' ಘೋಷಣೆ!

ಕೆನಾಡಾದಲ್ಲಿ ಖಲಿಸ್ತಾನ ಸಂಘಟನೆ ಗಟ್ಟಿಯಾಗಿ ಬೇರೂರಿದೆ.ಇತ್ತೀಚೆಗೆ ಆಸ್ಟ್ರೇಲಿಯಾ ಹಾಗೂ ಅಮೆರಿಕದಲ್ಲಿ ಹಿಂದೂ ದೇಗುಲದ ಮೇಲೆ ಖಲಿಸ್ತಾನ ಉಗ್ರರು ದಾಳಿ ಮಾಡಿದ್ದರು. ಇದೀಗ ಕೆನಾಡಾದಲ್ಲಿ ಇಂದಿರಾ ಗಾಂಧಿ ಹತ್ಯೆಯ ಸ್ಥಬ್ದಚಿತ್ರ ಮೆರೆವಣಿಗೆ ಮಾಡಿದ್ದಾರೆ. ಜೂನ್ 4 ರಂದು ಈ ಘಟನೆ ನಡೆದಿದೆ. ಜೂನ್ 4 ರಂದು ಆಪರೇಶನ್ ಬ್ಲೂಸ್ಟಾರ್ ಕಾರ್ಯಾಚರಣೆ ವರ್ಷಾಚರಣೆಯಾಗಿದೆ.

 

 

ಅಮೃತಸರದ ಸ್ವರ್ಣಮಂದಿರದಲ್ಲಿ ಅವಿತು ಕುಳಿತು ದೇಶವನ್ನೈ ಹೈಜಾಕ್ ಮಾಡಲು ಹೊರಟ ಖಲಿಸ್ತಾನ ಉಗ್ರ ಸಂಘಟನೆ ಮುಖ್ಯಸ್ಥ ಬ್ರಿಂದನ್‌ವಾಲೆ ಹಾಗೂ ಇತರ ಉಗ್ರರ ಮೇಲೆ ಭಾರತೀಯ ಸೇನೆ ಕಾರ್ಯಾಚರಣೆ ನಡೆಸಿತ್ತು. ಅಂದಿನ ಪ್ರಧಾನಿ ಇಂದಿರಾ ಗಾಂಧಿ ಈ ಕಾರ್ಯಾಚರಣೆಗೆ ಆದೇಶ ನೀಡಿದ್ದರು. ಆಪರೇಶನ್ ಬ್ಲೂ ಸ್ಟಾರ್ ಹೆಸರಿನಲ್ಲಿ ಈ ಕಾರ್ಯಾಚರಣೆ ನಡೆದಿತ್ತು. ಭಾರತೀಯ ಸೇನೆ ಯಶಸ್ವಿಯಾಗಿ ಬ್ರಿಂದನ್ ವಾಲೆ ಹಾಗೂ ಖಲಿಸ್ತಾನ ಉಗ್ರರನ್ನು ಮಟ್ಟಹಾಕಿ ಪಂಜಾಬ್ ರಾಜ್ಯವನ್ನು ಉಗ್ರರ ಕಪಿಮುಷ್ಠಿಯಿಂದ ಬಿಡಿಸಿತ್ತು. 

ಪಂಜಾಬ್‌ ಗೋಲ್ಡನ್‌ ಟೆಂಪಲ್‌ ಬಳಿ 2 ದಿನದಲ್ಲಿ 2 ಸ್ಫೋಟ: ಖಲಿಸ್ತಾನಿ ಉಗ್ರರ ಕೃತ್ಯ?

ಜೂನ್ 4 ರಂದು ಈ ಕಾರ್ಯಾಚರಣೆ ಅಂತ್ಯಗೊಂಡು ಪಂಜಾಬ್ ಖಲಿಸ್ತಾನ ಉಗ್ರರಿಂದ ಮುಕ್ತವಾಗಿತ್ತು.  ಹೀಗಾಗಿ ಜೂನ್ 4 ರಂದು ಆಪರೇಶನ್ ಬ್ಲೂ ಸ್ಟಾರ್ ವರ್ಷಾಚರಣೆ ನಡೆಸಲಾಗುತ್ತದೆ. ಇದೇ ದಿನ ಖಲಿಸ್ತಾನಿ ಉಗ್ರರು ಇಂದಿರಾ ಗಾಂಧಿ ಹತ್ಯೆಯ ಸ್ಥಬ್ದಚಿತ್ರ ಮೆರವಣಿಗೆ ಮಾಡಿ ಸಂಭ್ರಮ ಆಚರಿಸಲಾಗಿದೆ. ಇತ್ತೀಚೆಗೆ ರಾಹುಲ್ ಗಾಂಧಿ ಅಮೆರಿಕ ಪ್ರವಾಸದಲ್ಲಿ ಭಾಷಣ ಮಾಡಿದ್ದರು. ಈ ವೇಳೆ ರಾಹುಲ್ ಸಭೆಯಲ್ಲಿ ಖಲಿಸ್ತಾನ ಪರ ಘೋಷಣೆ ಕೂಗಲಾಗಿತ್ತು. ಇದೀಗ ಕಾಂಗ್ರೆಸ್ ಹಾಗೂ ರಾಹುಲ್ ಗಾಂಧಿ ಕೆನಡಾ ಘಟನೆ ಕುರಿತು ಒಂದು ಮಾತು ಆಡುತ್ತಿಲ್ಲ. ಕಾಂಗ್ರೆಸ್‌ಗೆ ತಮ್ಮ ರಾಜಕೀಯವೇ ಮುಖ್ಯವಾಗಿದೆ. ಭಾರತದ ಗೌರವ, ಭಾರತಕ್ಕೆ ಅಪಮಾನ ಮಾಡಿದರೆ ಅವರ ರಕ್ತು ಕುದಿಯುತ್ತಿಲ್ಲ ಎಂದು ಹಲವರು ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Latest Videos
Follow Us:
Download App:
  • android
  • ios