ಅಜ್ಜನ 90 ಲಕ್ಷ ಕದ್ದು, ದೇವರ ಹುಂಡಿಗೆ 1 ಲಕ್ಷ ಹಾಕಿ ಎಂಜಾಯ್ ಮಾಡಲು ಮನಾಲಿಗೆ ಹೋದಳು!
90 ಲಕ್ಷ ರೂಪಾಯಿ ಹಣ ಕಳ್ಳತನ ಬಳಿಕ ಮೊದಲಿಗೆ ಖಾಟೂ ಶ್ಯಾಮ ದೇವಸ್ಥಾನಕ್ಕೆ ತೆರಳಿ ಅಲ್ಲಿ 1 ಲಕ್ಷ ರೂಪಾಯಿ ಹುಂಡಿಗೆ ಹಾಕಿದ್ದಾಳೆ. ಬಳಿಕ ಒಂದೂವರೆ ಲಕ್ಷ ನೀಡಿ ಸೆಕೆಂಡ್ ಹ್ಯಾಂಡ್ ಕಾರ್ ಖರೀದಿ ಮಾಡಿ ಕುಲ್ಲು, ಮನಾಲಿ ಸುತ್ತಾಡಲು ತೆರಳಿದ್ದಾರೆ.
ಜೈಪುರ: ಅಜ್ಜನ ಮನೆಯಲ್ಲಿ 90 ಲಕ್ಷ ರೂಪಾಯಿ ಹಣ ಕದ್ದು (Money Theft) ಎಂಜಾಯ್ ಮಾಡಲು ಮನಾಲಿಗೆ ತೆರಳಿದ್ದ ಖತರ್ನಾಕ ಮೊಮ್ಮಗಳನ್ನು (Grand Daughter) ಪೊಲೀಸರು ಬಂಧಿಸಿದ್ದಾರೆ. ರಾಜಸ್ಥಾನದ ಭಿಲ್ವಾಡ (Bhilwara, Rajasthan) ಜಿಲ್ಲೆಯ ಹರಣಿ ಗ್ರಾಮದ ನಿವಾಸಿ ಬಕ್ಸೂ ಜಾಟ್ ಎಂಬವರ ಮನೆಯಲ್ಲಿ ಈ ಕಳ್ಳತನ ನಡೆದಿದೆ. ಕಳ್ಳತನವಾದ 90 ಲಕ್ಷ ರೂ. ಪೈಕಿ ಪೊಲೀಸರು 82 ಲಕ್ಷ ರೂ.ಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಬಕ್ಸೂ ಜಾಟ್ ಅವರ ಮೊಮ್ಮಗಳು ಪೂಜಾ ಚೌಧರಿಯೇ ಅಜ್ಜನ ಹಣದ ಮೇಲೆ ಕಣ್ಣು ಹಾಕಿ ಜೈಲುಪಾಲಾಗಿದ್ದಾಳೆ. ಕಳ್ಳತನಕ್ಕೆ ಪೂಜಾ ತನ್ನ ಸ್ನೇಹಿತರ ಸಹಾಯ ಪಡೆದುಕೊಂಡಿದ್ದಳು. ಈ ಸಂಬಂಧ ಕೋತ್ವಾಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೆಲ ದಿನಗಳ ಹಿಂದೆ ಬಕ್ಸೂ ಜಾಟ್ ತಮ್ಮ ಜಮೀನು ಮಾರಾಟ ಮಾಡಿ ಬಂದಿದ್ದ ಹಣವನ್ನು ಮನೆಯಲ್ಲಿರಿಸಿದ್ದರು. ಮನೆಯಲ್ಲಿ ಹಣ ಇರೋ ವಿಷಯ ನೆರೆಹೊರೆಯವರಿಗೂ ಗೊತ್ತಿತ್ತು. ಆರೋಪಿ ಪೂಜಾ ಚೌಧರಿ ದೂರದ ಸಂಬಂಧಿಯಾಗಿದ್ದು, ಬಕ್ಸೂ ಜಾಟ್ ಅವರ ಪಕ್ಕದ್ಮನೆಯಲ್ಲಿಯೇ ವಾಸವಾಗಿದ್ದಳು. ಅಜ್ಜ ಬಕ್ಸೂ ಮನೆಯಲ್ಲಿ 90 ಲಕ್ಷ ಹಣವಿರೋ ವಿಷಯ ಪೂಜಾಗೂ ತಿಳಿದಿತ್ತು. ಹಾಗಾಗಿ 90 ಲಕ್ಷ ರೂ. ಹಣ ಕದಿಯಲು ಪೂಜಾ ಪ್ಲಾನ್ ಮಾಡ್ಕೊಂಡಿದ್ದಳು.
I am sorry ಅಪ್ಪಾ.. 8ನೇ ಮಹಡಿಯಿಂದ ಜಿಗಿದ TCS ಕಂಪನಿಯ ಪ್ರೊಜೆಕ್ಟ್ ಮ್ಯಾನೇಜರ್
ಸಂಬಂಧಿ, ಸ್ನೇಹಿತರ ಸಹಾಯದಿಂದ ಕಳ್ಳತನ
ರಾತ್ರಿ ಬಕ್ಸೂ ಮಲಗುವ ಮುನ್ನ ತಿಜೋರಿ ಕೀ ದಿಂಬಿನ ಕೆಳಗೆ ಇರಿಸಿ ಮಲಗಿದ್ದರು. ಉಪಾಯವಾಗಿ ಮನೆಯೊಳಗೆ ಬಂದ ಪೂಜಾ, ಕೀ ತೆಗೆದುಕೊಂಡು 90 ಲಕ್ಷ ರೂಪಾಯಿ ಕಳ್ಳತನ ಮಾಡಿದ್ದಾಳೆ. ಈ ಕಳ್ಳತನಕ್ಕೆ ಪೂಜಾಗೆ ಸಂಬಂಧಿ ಸ್ನೇಹಿತರಾದ ಸುರೇಶ್ ಜಾಟ್ ಮತ್ತು ನಾರಾಯಾಣ್ ಜಾಟ್ ಹಾಗೂ ಕೆಲವರು ಪರಿಚಿತರು ಸಹಾಯ ಮಾಡಿದ್ದಾರೆ.
90 ಲಕ್ಷ ರೂಪಾಯಿ ಹಣ ಕಳ್ಳತನ ಬಳಿಕ ಮೊದಲಿಗೆ ಖಾಟೂ ಶ್ಯಾಮ ದೇವಸ್ಥಾನಕ್ಕೆ ತೆರಳಿ ಅಲ್ಲಿ 1 ಲಕ್ಷ ರೂಪಾಯಿ ಹುಂಡಿಗೆ ಹಾಕಿದ್ದಾಳೆ. ಬಳಿಕ ಒಂದೂವರೆ ಲಕ್ಷ ನೀಡಿ ಸೆಕೆಂಡ್ ಹ್ಯಾಂಡ್ ಕಾರ್ ಖರೀದಿ ಮಾಡಿ ಕುಲ್ಲು, ಮನಾಲಿ ಸುತ್ತಾಡಲು ತೆರಳಿದ್ದಾರೆ. ಕೆಲವೇ ದಿನಗಳಲ್ಲಿ ಬರೋಬ್ಬರಿ 8 ಲಕ್ಷ ರೂಪಾಯಿ ಖರ್ಚು ಮಾಡಿದ್ದಾರೆ. ಇತ್ತ ಹಣ ಕಳ್ಳತನವಾದ ವಿಷಯ ತಿಳಿದ ಬಕ್ಸೂ ಜಾಟ್ ಪೊಲೀಸ್ ಠಾಣೆಗೆ ದೂರು ಸಲ್ಲಿಸಿ, ನಾಪತ್ತೆಯಾಗಿದ್ದ ಪೂಜಾ ಮೇಲೆಯೇ ಅನುಮಾನ ವ್ಯಕ್ತಪಡಿಸಿದ್ದರು.
30 ಸೆಕೆಂಡ್‌ನಲ್ಲಿ 50 ಬಾರಿ ಬೆಲ್ಟ್‌ನಿಂದ ಹೊಡೆದು ಐವರಿಂದ ಮೃಗೀಯ ವರ್ತನೆ
ಪ್ರಕರಣ ದಾಖಲಿಸಿಕೊಂಡ ಪೊಲೀಸರು ಪೂಜಾ ಸೇರಿದಂತೆ ಎಲ್ಲಾ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತರಿಂದ 82 ಲಕ್ಷ ನಗದು ಹಾಗೂ ಕಾರ್ ವಶಕ್ಕೆ ಪಡೆದುಕೊಂಡಿದ್ದಾರೆ.