ಕುಡಿದ ಮತ್ತಿನಲ್ಲಿ ವ್ಯಕ್ತಿಯೊಬ್ಬ ಹೆಂಡತಿ ಮತ್ತು ಮಗುವನ್ನು ಬೈಕ್‌ನಲ್ಲಿ ಕೂರಿಸಿಕೊಂಡು ಅಜಾಗರೂಕತೆಯಿಂದ ವಾಹನ ಚಾಲನೆ ಮಾಡಿದ್ದಾನೆ. ಚಾಲನೆ ವೇಳೆ ಹೆಂಡತಿ ಬೈಕ್‌ನಿಂದ ಬಿದ್ದರೂ ಗಮನಿಸದೆ ಮುಂದೆ ಸಾಗಿದ ಘಟನೆ ವೈರಲ್ ಆಗಿದೆ.

ಕುಡಿದ ಮೇಲೆ ತಾವು ಏನು ಮಾಡುತ್ತಿದ್ದೇವೆ ಎಂಬುದೂ ಅನೇಕರಿಗೆ ಗೊತ್ತೆ ಇರುವುದಿಲ್ಲ, ಕುಡಿದಾಗ ಸಿಂಹದಂತಿರುವವರು ಬೀರಿದಾಗ ಇಲಿಗಳಂತಿರುತ್ತಾರೆ. ಜೊತೆಗೆ ಮಾಡಬಾರದ ಅವಾಂತರಗಳೆಲ್ಲವನ್ನೂ ಕಂಠಪೂರ್ತಿ ಕುಡಿದಿರುವ ಸಮಯದಲ್ಲೇ ಅನೇಕರು ಮಾಡುತ್ತಿರುತ್ತಾರೆ. ಅದೇ ರೀತಿ ಇಲ್ಲೊಬ್ಬ ಕುಡಿದ ಮತ್ತಿನಲ್ಲಿ ಹೆಂಡ್ತಿ ಮಗುವನ್ನು ಕೂರಿಸಿಕೊಂಡು ವಾಹನಗಳಿಂದ ತುಂಬಿದ್ದ ರಸ್ತೆಯಲ್ಲಿ ತಿರುಗ ಮುರುಗ ಗಾಡಿ ಓಡಿಸಿದ್ದಾನೆ. ಬರೀ ಗಾಡಿ ಓಡಿಸಿದ್ದರೆ ಇದು ದೊಡ್ಡ ವಿಚಾರ ಆಗ್ತಿರಲಿಲ್ಲ. ಈತನ ಬೈಕ್ ಹಿಂದೆ ಹೆಂಡ್ತಿ ಹಾಗೂ ಪುಟ್ಟ ಮಗುವೂ ಇತ್ತು ಬರೀ ಇಷ್ಟೇ ಅಲ್ಲ, ಈತ ಬೈಕ್ ಓಡಿಸುವ ಭರದಲ್ಲಿ ಹೆಂಡ್ತಿ ಬೈಕ್‌ನಿಂದ ಜಾರಿ ಬಿದ್ದರೂ ಆತನಿಗೆ ಗೊತ್ತೆ ಆಗಿಲ್ಲ, ಇತ್ತ ಮಗು ಅಪ್ಪನನ್ನು ಗಟ್ಟಿ ಹಿಡಿದುಕೊಂಡು ಹಿಂದೆ ಕುಳಿತಿದ್ದು, ಅಮ್ಮ ಬಿದ್ದಿರುವುದನ್ನು ಅಪ್ಪನಿಗೆ ಹೇಳುವುದಕ್ಕೆ ಅದಕ್ಕೆ ಸಾಧ್ಯವಾಗುತ್ತಿಲ್ಲ, ಅಷ್ಟೊಂದು ವೇಗವಾಗಿ ಆತ ಇತರ ವಾಹನಗಳ ಮಧ್ಯೆ ತನ್ನ ಬೈಕ್ ನುಗ್ಗಿಸಿಕೊಂಡು ಹೋಗುತ್ತಿದ್ದಾನೆ.

ಈತನ ಅವಾತರ ನೋಡಿದ ಅದೇ ದಾರಿಯಲ್ಲಿ ಸಾಗುತ್ತಿದ್ದ ಇತರ ವಾಹನ ಸವಾರರು ಕಡೆಗೂ ಆತನ ಬೈಕನ್ನು ಅಡ್ಡಹಾಕಿ ಆತನಿಗೆ ಆತನ ಹೆಂಡ್ತಿ ಕಿಲೋ ಮೀಟರ್ ಹಿಂದೆಯೇ ಬೈಕ್‌ನಿಂದ ಬಿದ್ದಿರುವ ವಿಚಾರವನ್ನು ತಿಳಿಸಿ ಆತನಿಗೆ ತರಾಟೆಗೆ ತೆಗೆದುಕೊಂಡಿದ್ದಾರೆ. ಆಗಲೇ ಅವನಿಗೆ ಹಿಂದೆ ಕುಳಿತಿದ್ದ ಹೆಂಡ್ತಿ ಬೈಕ್‌ನಿಂದ ಬಿದ್ದ ವಿಚಾರ ತಿಳಿದಿರುವುದು. ಇದರ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಆದರೆ ಈ ಘಟನೆ ಎಲ್ಲಿ ನಡೆದಿದೆ ಎಂಬ ಬಗ್ಗೆ ಮಾಹಿತಿ ಇಲ್ಲ ಆದರೆ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈತನಿಗೆ ಹೆಂಡ್ತಿ ಬೈಕಿನಿಂದ ಬಿದ್ದಿರುವುದು ಕೂಡ ಗೊತ್ತಿಲ್ಲ, ಜೊತೆಗೆ ಮಗು ಕೂಡ ಹಿಂದೆ ಕುಳಿತಿದೆ ಹೀಗೆ ಹಿಗ್ಗಾಮುಗ್ಗಾ ಗಾಡಿ ಓಡಿಸಿ ಏನಾದರೂ ಆದರೆ ಮಗುವಿಗೂ ಹಾನಿಯಾಗಬಹುದು ಎಂಬುದರ ಅರಿವಿಲ್ಲದೇ ಈತ ಕುಡಿದ ಮತ್ತಿನಲ್ಲಿ ಗಾಡಿಯನ್ನು ಓಡಿಸಿದ್ದಾನೆ. 

ವೈರಲ್ ಆದ ವೀಡಿಯೋದಲ್ಲಿ ಇತ್ತ ಬೈಕ್‌ನಿಂದ ಕೆಳಗೆ ಇಳಿದುಕೊಂಡ ಮಹಿಳೆ ಮುಂದೆ ನೋಡುವಷ್ಟರಲ್ಲಿ ಆಕೆಯ ಗಂಡ ಅಲ್ಲಿಂದ ಸುಮಾರು ದೂರ ಮುಂದೆ ಹೋಗಿ ಆಗಿದೆ. ಹಿಂದಿದ್ದ ವಾಹನ ಸವಾರರು ಈ ಬೈಕ್ ಸವಾರನನ್ನು ಹೋ ಭಾಯಿ ಭಾಯಿ ಎಂದು ಕರೆಯುವುದನ್ನು ಕೇಳಬಹುದು. ಆದರೂ ಆತ ಬೈಕ್ ನಿಲ್ಲಿಸುವುದಿಲ್ಲ, ಇದಾದ ನಂತರ ಯಾರೋ ಬೈಕ್ ಸವಾರರು ವೇಗವಾಗಿ ಆತನಿಗಿಂತ ಮುಂದೆ ಹೋಗಿ ಆತನಿಗೆ ಹತ್ತಿರದಿಂದ ಬೈಕ್ ನಿಲ್ಲಿಸುವಂತೆ ಹೇಳುತ್ತಾರೆ. ಹೇಗೆ ನೀವು ನಿಮ್ಮ ಹೆಂಡ್ತಿಯನ್ನು ಅಲ್ಲೇ ಬಿಟ್ಟು ಬಂದಿದ್ದೀರಿ ಎಂದು ಇತರ ಬೈಕ್ ಸವಾರರು ಆತನ ಬಳಿ ಕೇಳುವುದನ್ನು ವೀಡಿಯೋದಲ್ಲಿ ನೋಡಬಹುದು. 

ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಅನೇಕರು ವಿವಿಧ ರೀತಿಯಲ್ಲಿ ಪ್ರತಿಕ್ರಿಯಿಸಿದ್ದಾರೆ. ಅನೇಕರು ಆತ ಪ್ಲಾನ್ ಮಾಡಿಯೇ ಹಾಗೆ ಮಾಡಿದ್ದಾನೆ ಎಂದಿದ್ದಾರೆ. ಅಲ್ಲದೇ ಮಗು ಯಾಕೆ ಅಮ್ಮ ಬೈಕ್‌ನಿಂದ ಕೆಳಗೆ ಬಿದ್ದರೂ ಸುಮ್ಮನೇ ಕುಳಿತಿದೆ ಎಂದು ಕೆಲವರು ಪ್ರಶ್ನೆ ಮಾಡಿದ್ದಾರೆ. ಮತ್ತೆ ಕೆಲವರು ಆಕೆ ಕೆಳಗೆ ಜಾರುವಾಗ ಮಗುವನ್ನು ಒಟ್ಟಿಗೆ ಕರೆದುಕೊಂಡಿಲ್ಲ, ಅವಳೆಂಥಾ ತಾಯಿ ಎಂದು ಮತ್ತೆ ಕೆಲವರು ಮಹಿಳೆಯನ್ನು ದೂರಿದ್ದಾರೆ. ಅನೇಕರು ಕುಡಿದು ಹೀಗೆ ವಾಹನ ಚಾಲನೆ ಮಾಡುವ ಮೂಲಕ ಬೇರೆಯವರ ಪ್ರಾಣಕ್ಕೆ ಸಂಚಾಕಾರ ತರುತ್ತಿರುವ ಈತನನ್ನು ಬಂಧಿಸಬೇಕು ಎಂದು ಆಗ್ರಹಿಸಿದ್ದಾರೆ.

View post on Instagram