ಮೂರು ತಿಂಗಳ ಪ್ರಾಯದ ನಾಯಿಮರಿಯೊಂದು ನಾಪತ್ತೆಯಾಗಿದ್ದು, ಈ ನಾಯಿಮರಿಯನ್ನು ಹುಡುಕಿ ಕೊಟ್ಟವರಿಗೆ ಒಂದು ಲಕ್ಷ ಬಹುಮಾನ ನೀಡುವುದಾಗಿ ನಾಯಿಯ ಮಾಲೀಕರು ನಗರದೆಲ್ಲೆಡೆ ಪೋಸ್ಟರ್ ಅಂಟಿಸಿದ್ದಾರೆ

ಜೈಪುರ: ಮೂರು ತಿಂಗಳ ಪ್ರಾಯದ ನಾಯಿಮರಿಯೊಂದು ನಾಪತ್ತೆಯಾಗಿದ್ದು, ಈ ನಾಯಿಮರಿಯನ್ನು ಹುಡುಕಿ ಕೊಟ್ಟವರಿಗೆ ಒಂದು ಲಕ್ಷ ಬಹುಮಾನ ನೀಡುವುದಾಗಿ ನಾಯಿಯ ಮಾಲೀಕರು ನಗರದೆಲ್ಲೆಡೆ ಪೋಸ್ಟರ್ ಅಂಟಿಸಿದ್ದಾರೆ. ಪಾಪ್‌ಕಾರ್ನ್ ಹೆಸರಿನ ಈ ಪುಟ್ಟ ಶ್ವಾನಕ್ಕಾಗಿ ಎಲ್ಲೆಡೆ ಮಾಲೀಕರು ಶೋಧ ನಡೆಸಿದ್ದರು ನಾಯಿಮರಿ (Puppy) ಮಾತ್ರ ಸಿಕ್ಕಿಲ್ಲ, ಇದರಿಂದ ಬೇಜಾರಾದ ಮಾಲೀಕ ಈ ಭಾರಿ ಮೊತ್ತದ ಬಹುಮಾನ ಘೋಷಿಸಿದ್ದಾರೆ. ಮೂರು ದಿನಗಳ ಹಿಂದೆ ಈ ನಾಯಿಮರಿ ಜೈಪುರ ನಗರದಲ್ಲಿ (Jaipur city) ತಪ್ಪಿಸಿಕೊಂಡಿದೆ. ನಾಯಿ ಮರಿಯ ಶೋಧಕ್ಕಾಗಿ ಇಡೀ ನಗರದಲ್ಲಿ ಮಾಲೀಕ ಪೋಸ್ಟರ್ ಕೂಡ ಅಂಟಿಸಿದ್ದಾರೆ. ಜೈಪುರ ಠಾಣೆಯಲ್ಲಿ ಈ ಬಗ್ಗೆ ದೂರು ಕೂಡ ದಾಖಲಿಸಿರುವ ಮಾಲೀಕರು ನಾಯಿ ಮರಿ ಹುಡುಕಿ ಕೊಟ್ಟವರಿಗೆ 1 ಲಕ್ಷ ರೂಪಾಯಿ ನಗದು ಹಣ ನೀಡುವುದಾಗಿ ಘೋಷಣೆ ಮಾಡಿದ್ದಾರೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಅಲ್ಲದೇ ಒಂದು ಸಿಸಿಟಿವಿ ದೃಶ್ಯಾವಳಿಯನ್ನು (Cctv Footage) ಕೂಡ ಪೊಲೀಸರಿಗೆ ಹಸ್ತಾಂತರಿಸಲಾಗಿದೆ. ಇದನ್ನು ಆಧರಿಸಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಜೈಪುರದ ಮಾಳವೀಯಾ ನಗರದಲ್ಲಿ ಈ ಘಟನೆ ನಡೆದಿದ್ದು, ಈ ಪ್ರದೇಶದಲ್ಲಿ ವಾಸಿಸುವ ಅನಿತಾ ದಾಸ್ ಎಂಬುವವರು ಈ ಬಗ್ಗೆ ಪ್ರಕರಣ ದಾಖಲಿಸಿದ್ದಾರೆ. ಅನಿತಾ ದಾಸ್ ಅವರು ವಿದೇಶಿ ತಳಿಯ ನಾಯಿಯೊಂದನ್ನು ಸಾಕಿದ್ದರು. ಎರಡು ದಿನಗಳ ಹಿಂದೆ ಇವರ ಮನೆಯ ಕೆಲಸಗಾರರು ಈ ಶ್ವಾನವನ್ನು ವಾಕಿಂಗ್ ಕರೆದೊಯ್ದಿದ್ದಾರೆ. ನಾಯಿ ವಾಕ್ ಹೋಗುತ್ತಿದ್ದ ಮಾರ್ಗದಲ್ಲಿ ಕಾರೊಂದು ನಿಂತಿದ್ದು, ನಾಯಿಯನ್ನು ನೋಡಿ ಕಾರಿನಲ್ಲಿದ್ದ ಇಬ್ಬರು ಯುವಕರು ಕೆಳಗಿಳಿದಿದ್ದಾರೆ. ಅಷ್ಟೇ ಅಲ್ಲ ಈ ವಿದೇಶಿ ತಳಿಯ (foreign breed Dog) ಶ್ವಾನವನ್ನು ಮುದ್ದು ಮಾಡಲು ನೋಡಿದ್ದಾರೆ. ಅಲ್ಲದೇ ನಾಯಿಯ ಜೊತೆಯೇ ಇವರು ನಡೆಯಲು ಆರಂಭಿಸಿದ್ದಾರೆ.

ಇಂಟರ್ನೆಟ್‌ನಲ್ಲಿ ಭಾರಿ ವೈರಲ್‌ ಆಗಿದ್ದ ಮೀಮ್ಸ್ ನಾಯಿ ‘ಚೀಮ್ಸ್’ ಇನ್ನಿಲ್ಲ: ನೆಟ್ಟಿಗರ ಸಂತಾಪ

ಈ ವೇಳೆ ನಾಯಿಯನ್ನು ನೋಡಿಕೊಳ್ಳುತ್ತಿದ್ದವರು ಈ ಯುವಕರು ನಾಯಿಯನ್ನು ಮುದ್ದು ಮಾಡುತ್ತಿದ್ದಾರೆ ಎಂದು ಭಾವಿಸಿದ್ದಾರೆ. ಆದರೆ ಈ ಖತರ್ನಾಕ್‌ ನಾಯಿ ಕಳ್ಳರು, ನಾಯಿಯನ್ನು ಹಿಡಿದು ಮೇಲೆತ್ತಿಕೊಂಡಿದ್ದು, ಬಳಿಕ ಮಡಿಲಲ್ಲಿ ಕೂರಿಸಿ ನಿಧಾನಕ್ಕೆ ಕಾರಿನತ್ತ ಕರೆದೊಯ್ದಿದ್ದಾರೆ. ಬಳಿಕ ಕಾರಿನಲ್ಲಿ ಕುಳಿತು ಮೆಲ್ಲನೇ ಪರಾರಿಯಾಗಿದ್ದಾರೆ. ಈ ಬಗ್ಗೆ ಮಾಲೀಕರು ದೂರು ನೀಡಿದ್ದು, ಸಿಸಿಟಿವಿ ದೃಶ್ಯಾವಳಿಯನ್ನು ಕೂಡ ಪೊಲೀಸರಿಗೆ ಒದಗಿಸಿದ್ದಾರೆ. ಹೀಗಾಗಿ ನಾಯಿ ಮಾಲೀಕರು ಬೇಸರಗೊಂಡಿದ್ದು, ನಗರದೆಲ್ಲೆಡೆ ಪೋಸ್ಟರ್ ಅಂಟಿಸಿರುವ ಜೊತೆ ಹುಡುಕಿ ಕೊಟ್ಟವರಿಗೆ ಬಹುಮಾನ ನೀಡುವುದಾಗಿ ಘೋಷಣೆ ಮಾಡಿದ್ದಾರೆ.

Kolar: ಕೊಲೆ ಮಾಡಿ ಅವಿತು ಕುಳಿತಿದ್ದ ಆರೋಪಿಯನ್ನ 24 ಗಂಟೆಯಲ್ಲಿ ಪತ್ತೆ ಹಚ್ಚಿದ ಶ್ವಾನ!