ಇಂಟರ್ನೆಟ್‌ನಲ್ಲಿ ಭಾರಿ ವೈರಲ್ ಆಗಿದ್ದ ಮೀಮ್ಸ್ ನಾಯಿ ‘ಚೀಮ್ಸ್’ ಇನ್ನಿಲ್ಲ: ನೆಟ್ಟಿಗರ ಸಂತಾಪ
"ಬಾಲ್ಟ್ಜೆ" ಎಂಬ ಪರ್ಯಾಯ ಹೆಸರಿನಿಂದ ಕರೆಯಲ್ಪಡುವ ಚೀಮ್ಸ್, ಕ್ಯಾನ್ಸರ್ ಎಂಬ ಮಾರಣಾಂತಿಕ ಕಾಯಿಲೆಗೆ ಬಲಿಯಾಗಿದೆ.
ನವದೆಹಲಿ (ಆಗಸ್ಟ್ 20, 2023): ಇಂಟರ್‌ನೆಟ್‌ನಲ್ಲಿ, ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ಜನಪ್ರಿಯತೆ ಗಳಿಸಿ ಲಕ್ಷಾಂತರ ಜನರ ನಕ್ಕು ನಗಿಸಿದ್ದ ವೈರಲ್ ಮೀಮ್ಸ್ ಸೆನ್ಸೇಷನ್ ಚೀಮ್ಸ್ ನಾಯಿ ನಿಧನವಾಗಿದೆ. ಶಿಬಾ ಇನು ನಾಯಿ ಎಂದೇ ಖ್ಯಾತಿ ಗಳಿಸಿದ್ದ ವೈರಲ್ ಮೀಮ್ ಸೆನ್ಸೇಷನ್ ಚೀಮ್ಸ್ 12 ನೇ ವಯಸ್ಸಿನಲ್ಲಿ ಮೃತಪಟ್ಟಿದೆ. ಈ ಬಗ್ಗೆ ಇನ್ಸಾಗ್ರಾಮ್ ಪೋಸ್ಟ್‌ನಲ್ಲಿ ಮಾಲೀಕರು ಬರೆದುಕೊಂಡಿದ್ದಾರೆ. ಈ ಶ್ವಾನ ಬಲಿಯಾಗಿರುವುದಕ್ಕೆ ಹಲವು ಇಂಟರ್ನೆಟ್ ಬಳಕೆದಾರರು ಸಂತಾಪ ಸೂಚಿಸಿದ್ದಾರೆ.
"ಬಾಲ್ಟ್ಜೆ" ಎಂಬ ಪರ್ಯಾಯ ಹೆಸರಿನಿಂದ ಕರೆಯಲ್ಪಡುವ ಚೀಮ್ಸ್, ಕ್ಯಾನ್ಸರ್ ಎಂಬ ಮಾರಣಾಂತಿಕ ಕಾಯಿಲೆ ವಿರುದ್ದ ದೀರ್ಘ ಸಮಯದಿಂದ ಹೋರಾಡುತ್ತಿತ್ತು. ಅದರೀಗ ಕ್ಯಾನ್ಸರ್‌ಗೇ ಬಲಿಯಾಗಿದೆ. ಕೊನೆಯ ಶಸ್ತ್ರಚಿಕಿತ್ಸೆಯ ಸಮಯದಲ್ಲಿ, ಚೀಮ್ಸ್ ಶಾಂತಿಯುತವಾಗಿ ನಿದ್ರಿಸಿದ ಬಳಿಕ ಎಚ್ಚರಗೊಳ್ಳಲಿಲ್ಲ ಎಂದು ಶ್ವಾನದ ಮಾಲೀಕರು ಶೇರ್ ಮಾಡಿಕೊಂಡಿದ್ದಾರೆ. ಹೆಚ್ಚಿನ ವೈದ್ಯಕೀಯ ಮಧ್ಯಸ್ಥಿಕೆಗಾಗಿ ಯೋಜನೆಗಳನ್ನು ಮಾಡಲಾಗಿದ್ರೂ ಆ ವೇಳೆಗೆ ನಾಯಿ ಮೃತಪಟ್ಟಿದೆ.
ಇದನ್ನು ಓದಿ: ಬೆಂಗಳೂರು ಏರ್‌ಪೋರ್ಟ್ ಹಾಡಿ ಹೊಗಳಿದ ಸನ್ನಿ ಲಿಯೋನ್: ಟರ್ಮಿನಲ್ - 2 ಅನ್ನು ಕಲಾಕೃತಿಗೆ ಹೋಲಿಸಿದ ಹಾಟ್ ನಟಿ!
2017 ರಲ್ಲಿ ಚೀಮ್ಸ್‌ನ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ಬಳಿಕ ಚೀಮ್ಸ್ ಇಂಟರ್ನೆಟ್ ಸ್ಟಾರ್‌ಡಮ್‌ಗೆ ಏರಿದೆ. ಚೀಮ್ಸ್ ಮತ್ತು ಚೀಸ್ ನಡುವಿನ ವಿಲಕ್ಷಣ ಹೋಲಿಕೆಯನ್ನು ನೆಟ್ಟಿಗರು ಗುರುತಿಸಿದ ಬಳಿಕ ಈ ಶ್ವಾನಕ್ಕೆ ಚೀಮ್ಸ್ ಎಂದು ಕರೆಯಲಾಯ್ತು. ಚೀಮ್ಸ್ ತನ್ನ ಮಾಲೀಕರಾದ ಕ್ಯಾಥಿ ಅವರ ಆರೈಕೆಯಲ್ಲಿ ಹಾಂಗ್ ಕಾಂಗ್‌ನಲ್ಲಿ ವಾಸಿಸುತ್ತಿತ್ತು. ತನ್ನ, ಫೋಟೋಜೆನಿಕ್ ಆಕರ್ಷಣೆಯನ್ನು ನಿರಂತರವಾಗಿ ನೆಟ್ಟಿಗರಿಗೆ ಪ್ರದರ್ಶಿಸುತ್ತಿತ್ತು.
ಚೀಮ್ಸ್ ಸಾವು ಲಕ್ಷಾಂತರ ಅಭಿಮಾನಿಗಳ ದುಃಖಕ್ಕೆ ಕಾರಣವಾಗಿದೆ. ಚೀಮ್ಸ್ ಕೆಲವು ಕಷ್ಟದ ತಿಂಗಳುಗಳನ್ನು ಎದುರಿಸುತ್ತಿರುವಾಗ ಚಿಕಿತ್ಸೆ ನೀಡಿದ ವೆಟರಿನರಿ ವೈದ್ಯರಿಗೆ ಅದರ ಮಾಲೀಕರು ಧನ್ಯವಾದ ಹೇಳಿದ್ದಾರೆ. ಚೀಮ್ಸ್‌ನ ವೈದ್ಯಕೀಯ ವೆಚ್ಚಕ್ಕಾಗಿ ಸಂಗ್ರಹಿಸಿದ ಹಣವನ್ನು ಈಗ ಪ್ರಾಣಿ ಕಲ್ಯಾಣ ಸಂಸ್ಥೆಗಳಿಗೆ ನೀಡಲಾಗುವುದು ಎಂದೂ ಅವರು ಹೇಳಿದ್ದಾರೆ.
ಇದನ್ನೂ ಓದಿ: ಬದುಕೋಕೆ ಎಷ್ಟು ಹೋರಾಡ್ಬೇಕು ನೋಡಿ: 30ಕ್ಕೂ ಹೆಚ್ಚು ಹಿಪ್ಪೋಗಳೊಂದಿಗೆ ಒಂಟಿ ಮೊಸಳೆ ಫೈಟ್!