Asianet Suvarna News Asianet Suvarna News

Kolar: ಕೊಲೆ ಮಾಡಿ ಅವಿತು ಕುಳಿತಿದ್ದ ಆರೋಪಿಯನ್ನ 24 ಗಂಟೆಯಲ್ಲಿ ಪತ್ತೆ ಹಚ್ಚಿದ ಶ್ವಾನ!

ಜಿಲ್ಲೆಯ ಮುಳಬಾಗಿಲು ತಾಲೂಕಿನ ನಂಗಲಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಿನ್ನೆ ನಡೆದಿದ್ದ ಕೊಲೆ ಪ್ರಕರಣದ ಆರೋಪಿಯನ್ನು ಕೇವಲ 24 ಗಂಟೆಯೊಳಗೆ ಪೊಲೀಸ್ ಇಲಾಖೆಯ ರಕ್ಷಾ ಎಂಬುವ ಶ್ವಾನವು ಪತ್ತೆ ಹಚ್ಚಿದ್ದು, ಪೊಲೀಸ್ ಇಲಾಖೆ ಹಾಗೂ ಜನರ ಮೆಚ್ಚುಗೆಗೆ ಶ್ವಾನವೂ ಪಾತ್ರವಾಗಿದೆ. 

kolar police dog helps crack gruesome murder case and police arrested accused gvd
Author
First Published Aug 12, 2023, 9:34 PM IST

ವರದಿ: ದೀಪಕ್, ಏಷ್ಯಾನೆಟ್ ಸುವರ್ಣ ನ್ಯೂಸ್, ಕೋಲಾರ

ಕೋಲಾರ (ಆ.12): ಜಿಲ್ಲೆಯ ಮುಳಬಾಗಿಲು ತಾಲೂಕಿನ ನಂಗಲಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಿನ್ನೆ ನಡೆದಿದ್ದ ಕೊಲೆ ಪ್ರಕರಣದ ಆರೋಪಿಯನ್ನು ಕೇವಲ 24 ಗಂಟೆಯೊಳಗೆ ಪೊಲೀಸ್ ಇಲಾಖೆಯ ರಕ್ಷಾ ಎಂಬುವ ಶ್ವಾನವು ಪತ್ತೆ ಹಚ್ಚಿದ್ದು, ಪೊಲೀಸ್ ಇಲಾಖೆ ಹಾಗೂ ಜನರ ಮೆಚ್ಚುಗೆಗೆ ಶ್ವಾನವೂ ಪಾತ್ರವಾಗಿದೆ. ಕೋಲಾರ ಜಿಲ್ಲಾ ಅಪರಾಧ ವಿಭಾಗದ ರಕ್ಷಾ ಹೆಸರಿನ ಶ್ವಾನ ಯಾವುದೇ ಸುಳಿವು ನೀಡಿದೆ ಕೊಲೆ ಮಾಡಿ ಎಸ್ಕೇಪ್ ಆಗಿದ್ದ ಆರೋಪಿಯನ್ನು ಪತ್ತೆ ಹಚ್ಚಿ ಪೊಲೀಸರಿಗೆ ನೆರವಾಗಿದೆ. 

ನಿನ್ನೆ ಮುಳಬಾಗಿಲು ತಾಲ್ಲೂಕು ಬೇವಹಳ್ಳಿ ಬಳಿ ಸುರೇಶ್ ಎಂಬುವರ ಕೊಲೆ ನಡೆದಿತ್ತು.  ಈ ಸಂಬಂಧ ನಂಗಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಕೊಲೆ ನಡೆದಿದ್ದ ಸ್ಥಳಕ್ಕೆ ಬಂದ ನಂಗಲಿ ಪೊಲೀಸ್ ಠಾಣೆಗೆ ಸಬ್ ಇನ್ಸ್ಪೆಕ್ಟರ್ ಪ್ರದೀಪ್ ಸಿಂಗ್ ಅವರ ತಂಡ ಆರೋಪಿ ಪತ್ತೆಗಾಗಿ ಜಿಲ್ಲಾ ಶ್ವಾನದಳದೊಂದಿಗೆ ಹುಡುಕಾಟ ಆರಂಭಿಸಿದ್ದಾರೆ. ಬೆರಳು ಮುದ್ರೆ ತಜ್ಞರು,ಎಫ್‌ಎಸ್‌ಎಲ್‌ ತಜ್ಞರನ್ನೂ ಸಹ ಸ್ಥಳಕ್ಕೆ ಕರೆಸಿಕೊಳ್ಳಲಾಗಿತ್ತು. 

ಬಳಿಕ ನಂಗಲಿ ಪೊಲೀಸ್‌ ಠಾಣೆಯ ಸಬ್‌ಇನ್‌ಸ್ಪೆಕ್ಟರ್‌ ಪ್ರದೀಪ್‌ ಸಿಂಗ್‌ ಮತ್ತು ತಂಡದವರು ತನಿಖೆಯ ನೇತೃತ್ವ ವಹಿಸಿದ್ದರು. ಇದೆ ವೇಳೆ ರಕ್ಷಾ ಎಂಬ ಶ್ವಾನವು ಕೊಲೆ ನಡೆದ ಬೇವಹಳ್ಳಿ ಗ್ರಾಮದ ಉತ್ತರಕ್ಕೆ ಸುಮಾರು 1.5 ಕಿ.ಮೀ ದೂರದಲ್ಲಿ ಮರ ಗಿಡಗಳ ಮಧ್ಯೆ ಅವಿತು ಕುಳಿತ್ತಿದ್ದ ಆರೋಪಿಯ ಮುಂದೆ ಹೋಗಿ ನಿಂತುಕೊಂಡಿದೆ. 

ನನ್ನ ಬಳಿ ಪೆನ್‌ಡ್ರೈವ್‌ ಇರೋದು ನಿಜ, ಸಮಯ ಬಂದಾಗ ಬಿಡುಗಡೆ: ಲಕ್ಷ್ಮಣ ಸವದಿ

ತನಿಖಾ ತಂಡವು ಆತನನ್ನು ಹಿಡಿದು ವಿಚಾರಣೆ ಮಾಡಿದಾಗ ಕೊಲೆ ಕೃತ್ಯ ಎಸಗಿರುವುದು ನಾನೇ ಎಂದು ಒಪ್ಪಿಕೊಂಡಿದ್ದು ಕೊಲೆ ಪ್ರಕರಣ ಬಯಲಾಗಿದೆ.ಇನ್ನು ಆರೋಪಿಯನ್ನು ಗುರುತು ಹಿಡಿಯುವಲ್ಲಿ ಯಶಸ್ವಿಯಾಗಿರುವ ಶ್ವಾನ ರಕ್ಷಾ ಕಾರ್ಯ ವೈಖರಿಗೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಎಂ.ನಾರಾಯಣ ಶ್ಲಾಘಿಸಿದ್ದಾರೆ.ಈ ಶ್ವಾನವು ಹಲವಾರು ವರ್ಷಗಳಿಂದ ಪೊಲೀಸ್‌ ಪಡೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ಹಲವು ಅಪರಾಧ ಪ್ರಕರಣ ಪತ್ತೆ ಹಚ್ಚಲು ನೆರವಾಗಿದೆ.

Follow Us:
Download App:
  • android
  • ios