ಬಿಹಾರದ ದರ್ಭಾಂಗ್‌ನ ಕೊನೆಯ ರಾಣಿ, 96 ವರ್ಷದ ಕಾಮಸುಂದರಿ ದೇವಿ ನಿಧನರಾಗಿದ್ದಾರೆ. 1962ರ ಭಾರತ-ಚೀನಾ ಯುದ್ಧದ ಸಮಯದಲ್ಲಿ, ಅವರ ರಾಜಮನೆತನವು ದೇಶಕ್ಕೆ 600 ಕೆಜಿ ಬಂಗಾರವನ್ನು ದಾನ ಮಾಡಿತ್ತು. ಅವರ ನಿಧನವು ದರ್ಭಾಂಗ್ ರಾಜಮನೆತನದ ಐತಿಹಾಸಿಕ ಕೊಡುಗೆಗಳನ್ನು ಮತ್ತೆ ಮುನ್ನೆಲೆಗೆ ತಂದಿದೆ.
ಭಾರತ ಚೀನಾ ಯುದ್ಧದ ಸಮಯದಲ್ಲಿ ತಮ್ಮ ಬಳಿ ಇದ್ದ 600 ಕೇಜಿ ಬಂಗಾರವನ್ನು ದೇಶಕ್ಕೆ ನೀಡಿ, ದೇಶಕ್ಕೆ ಆಪತ್ತು ಬಂದ ಸಮಯದಲ್ಲಿ ನೆರವಾಗಿದ್ದ ಬಿಹಾರದ ದರ್ಭಾಂಗ್‌ನ ಕೊನೆಯ ರಾಣಿ ಕಾಮಸುಂದರಿ ದೇವಿ ನಿಧನರಾಗಿದ್ದಾರೆ. ಅವರಿಗೆ 96 ವರ್ಷ ವಯಸ್ಸಾಗಿತ್ತು. ಅವರು ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ತಮ್ಮ 8ನೇ ವಯಸ್ಸಿನಲ್ಲಿ ದರ್ಭಾಂಗ್ ಮಹಾರಾಜನ 3ನೇ ಪತ್ನಿಯಾಗಿ ಅವರು ದಾಂಪತ್ಯಕ್ಕೆ ಕಾಲಿರಿಸಿದ್ದರು. ಸೋಮವಾರ ಮುಂಜಾನೆ ಸ್ಥಳೀಯ ಕಲ್ಯಾಣಿ ನಿವಾಸದಲ್ಲಿ ಅವರು ನಿಧನರಾಗಿದ್ದು, ಅವರ ಸಾವು ಐತಿಹಾಸಿಕ ದರ್ಭಾಂಗ ರಾಜ ಮನೆತನವನ್ನು ಮತ್ತೆ ಮುನ್ನೆಲೆಗೆ ತಂದಿದೆ.
ಇದನ್ನೂ ಓದಿ: ವಿದೇಶಗಳಿಗೆ ಬಾಳೆ ಎಲೆ ರಪ್ತು ಮಾಡಿ ಗಳಿಸಿ ಲಕ್ಷ ಲಕ್ಷ ಆದಾಯ: ಉದ್ಯಮ ಆರಂಭಿಸುವವರಿಗಾಗಿ ಇಲ್ಲಿದೆ ಹಂತ ಹಂತದ ಮಾರ್ಗದರ್ಶನ
ದರ್ಭಾಂಗ್ ರಾಜಮನೆತನವು ಭಾರತದ ಸ್ವಾತಂತ್ರ್ಯ ಚಳುವಳಿ, ಶಿಕ್ಷಣ, ಸಂಸ್ಕೃತಿ ಮತ್ತು ರಾಷ್ಟ್ರೀಯ ಬಿಕ್ಕಟ್ಟುಗಳಿಗೆ ಆಳವಾದ ಕೊಡುಗೆಗಳನ್ನು ನೀಡಿತ್ತು. ಆಧುನಿಕ ಇತಿಹಾಸದಲ್ಲಿ ಇದ್ಯಾವುದು ಉಲ್ಲೇಖವೇ ಆಗಿಲ್ಲ. ಸೋಮವಾರ ನಿಧನರಾದ ರಾಣಿ ಕಾಮಸುಂದರಿ ದೇವಿ ಅವರು ಅಂತಿಮ ಸಂಸ್ಕಾರವನ್ನು ದರ್ಭಂಗಾ ರಾಜ್ ಸಂಕೀರ್ಣದಲ್ಲಿ ರಾಜಮನೆತನದ ಸಂಪ್ರದಾಯದಂತೆ ನೆರವೇರಿಸಲಾಯ್ತು. ಅವರ ಅಂತಿಮ ಯಾತ್ರೆಯಲ್ಲಿ ಸಾವಿರಾರು ಜನರು ಸೇರಿದ್ದರು.
ಕಾಮೇಶ್ವರ ನಗರದ ಮಾದೇಶ್ವರನಾಥ ಸಂಕೀರ್ಣದಲ್ಲಿ ಕುಟುಂಬದ ಎಲ್ಲಾ ಮಹಾರಾಜರು ಮತ್ತು ಮಹಾರಾಣಿಯರ ಅಂತ್ಯಕ್ರಿಯೆ ನಡೆಸಲಾಗುತ್ತದೆ. ಅಲ್ಲಿಯೇ ರಾಣಿ ಕಾಮಸುಂದರಿ ದೇವಿ ಅವರ ಅಂತ್ಯಸಂಸ್ಕಾರ ನಡೆಸಲಾಗಿದೆ.
ಇದನ್ನೂ ಓದಿ: 15ನೇ ವಾರ್ಷಿಕೋತ್ಸವಕ್ಕೆ ಗಿಫ್ಟ್ ಎಂದು ಡಿವೋರ್ಸ್ ನೀಡಿದ ಪತಿ: ಮಕ್ಕಳ ಭೇಟಿ ಮಾಡಲಾಗದೇ ಕೊರಗುತ್ತಿರುವ ನಟಿ
ಮಹಾರಾಣಿ ಕಾಮಸುಂದರಿ ದೇವಿ ದರ್ಭಂಗಾ ರಾಜ್‌ನ ಕೊನೆಯ ದೊರೆ ಮಹಾರಾಜ ಕಾಮೇಶ್ವರ ಸಿಂಗ್ ಅವರ ಮೂರನೇ ಪತ್ನಿಯಾಗಿದ್ದು, 1940 ರ ದಶಕದಲ್ಲಿ ಇವರ ಮದುವೆ ನಡೆದಿತ್ತು. 1962ರಲ್ಲಿ ಮಹಾರಾಜ ಕಾಮೇಶ್ವರ ಸಿಂಗ್ ನಿಧನರಾದರು. ಅವರ ಮೊದಲ ಪತ್ನಿ ಮಹಾರಾಣಿ ರಾಜಲಕ್ಷ್ಮಿ ದೇವಿ 1976 ರಲ್ಲಿ ನಿಧನರಾದರು. ಅವರ ಎರಡನೇ ಪತ್ನಿ ಮಹಾರಾಣಿ ಕಾಮೇಶ್ವರಿ ಪ್ರಿಯಾ 1940 ರಲ್ಲಿ ನಿಧನರಾದರು. ಮಹಾರಾಜರಿಗೆ ಯಾವುದೇ ಮದುವೆಯಿಂದಲೂ ಮಕ್ಕಳಿರಲಿಲ್ಲ.
1962 ರ ಯುದ್ಧದ ಸಮಯದಲ್ಲಿ 600 ಕೆಜಿ ಚಿನ್ನ ದಾನ
1962 ರ ಭಾರತ ಚೀನಾ ಯುದ್ಧದ ಸಮಯದಲ್ಲಿ, ಸರ್ಕಾರದ ಮನವಿಗೆ ಸ್ಪಂದಿಸಿದ ಮೊದಲ ವ್ಯಕ್ತಿ ದರ್ಭಂಗಾ ಮಹಾರಾಜ ಆಗಿದ್ದರು. ದರ್ಭಂಗಾದ ಇಂದ್ರಭವನ ಮೈದಾನದಲ್ಲಿ, 15 ಮೌಂಡ್ ಅಥವಾ 600 ಕೆಜಿ ಚಿನ್ನವನ್ನು ತೂಗಿ ಸರ್ಕಾರಕ್ಕೆ ದಾನ ಮಾಡಲಾಯಿತು. ಜೊತೆಗೆ ಮೂರು ವಿಮಾನಗಳು ಮತ್ತು ಅವರ 90 ಎಕರೆ ಖಾಸಗಿ ವಿಮಾನ ನಿಲ್ದಾಣವನ್ನು ಸಹ ದಾನ ಮಾಡಿದೆ. ಇಂದು, ದರ್ಭಂಗಾ ವಿಮಾನ ನಿಲ್ದಾಣವು ರಾಜಮನೆತನ ದಾನ ಮಾಡಿದ ಭೂಮಿಯಲ್ಲಿ ನಿಂತಿದೆ.


