ಮುಂಬೈ(ಮೇ.31): ಕೊರೋನಾ ವೈರಸ್ ವಕ್ಕರಿಸಿದ ಬಳಿಕ ಅಡ್ಡಪರಿಣಾಮಗಳ ಪಟ್ಟಿ ಬೆಳೆಯುತ್ತಲೇ ಇದೆ. ಕೋವಿಡ್ ಸೋಂಕಿತರಲ್ಲಿ ಬ್ಲಾಕ್ ಫಂಗಸ್, ವೈಟ್ ಫಂಗಸ್, ಯೆಲ್ಲೋ ಫಂಗಸ್ ಕಾಣಿಸಿಕೊಳ್ಳುತ್ತಿದೆ. ಇದರ ನಡುವೆ ವೈದ್ಯರ ಅಧ್ಯಯನ ವರದಿಯಲ್ಲಿ ಕೋವಿಡ್ ಗುಣಮುಖರಾದವರಿಗೆ ಸ್ಟ್ರೋಕ್ ಹಾಗೂ ಹೃದಯಾಘಾತ ಕಾಣಿಸಿಕೊಳ್ಳುತ್ತಿದೆ ಎಂದಿದ್ದಾರೆ.

ಕೋವಿಡ್‌ನಿಂದ ಗುಣಮುಖರಾದರೂ ಮಕ್ಕಳಿಗೆ ಕಾಡುತ್ತಿದೆ 'ಕವಾಸಕಿ' ಕಂಟಕ.

ಮುಂಬೈನ ಚಂದ್ರಶೇಖರ್ ರೆಡ್ಡಿ ಅನ್ನೋ ವ್ಯಕ್ತಿ ಸಣ್ಣ ವ್ಯಾಪಾರ ಮಾಡಿಕೊಂಡು ತನ್ನ ಪತ್ನಿ ಹಾಗೂ ಇಬ್ಬರು ಮಕ್ಕಳು ಜೊತೆ ಜೀವನ ಸಾಗಿಸುತ್ತಿದ್ದರು. 36 ವರ್ಷದ ರೆಡ್ಡಿಗೆ  ಮೈಲ್ಡ್ ಕೊರೋನಾ ಕಾಣಿಸಿಕೊಂಡಿತ್ತು.  ಕೊರೋನಾಗೆ ಚಿಕಿತ್ಸೆ ಪಡೆದ ರೆಡ್ಡೆ 13 ದಿನಗಳಲ್ಲಿ ಸಂಪೂರ್ಣ ಗುಣಮುಖರಾಗಿದ್ದರು. ಆದರೆ ಚೇತರಿಸಿಕೊಂಡ ಒಂದು ತಿಂಗಳಿಗೆ ಸ್ಟ್ರೋಕ್ ಹೊಡೆತ ನೀಡಿದೆ. 

ಪ್ಯಾರಾಲಿಸಿಸ್‌ಗೆ ತುತ್ತಾಗಿರುವ ರೆಡ್ಡಿ ಗುಣಮುಖರಾಗಲು 6 ತಿಂಗಳ ಅವಶ್ಯಕತೆ ಇದೆ. ಬ್ರೈನ್ ಸರ್ಜರಿ ಹಾಗೂ ಇಂಟೆನ್ಸೀವ್ ಫಿಸಿಯೋಥೆರಪಿ ಅವಶ್ಯಕತೆ ಇದೆ ಎಂದು ವೈದ್ಯರು ಹೇಳಿದ್ದಾರೆ. ಈ ಪ್ರಕರಣದ ಬೆನ್ನಲ್ಲೇ ತಜ್ಞ ವೈದ್ಯರು ನಡೆಸಿದ ಅಧ್ಯಯನ ವರದಿ ಬಿಡುಗಡೆಯಾಗಿದೆ. ಈ ವರದಿಯಲ್ಲಿ ಕೋವಿಡ್‌ನಿಂದ ಚೇತರಿಸಿಕೊಂಡವರಲ್ಲಿ ಸ್ಟ್ರೋಕ್ ಹಾಗೂ ಹೃದಯಾಘಾತ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದೆ ಅನ್ನೋದನ್ನು ವೈದ್ಯರು ಪತ್ತೆ ಹಚ್ಚಿದ್ದಾರೆ.

ಅಧ್ಯಯನ ವರದಿ ಪ್ರಕಾರ ಕೋವಿಡ್‌ನಿಂದ ಗುಣಮುಖರಾದ ಶೇಕಡಾ 9 ರಿಂದ 23 ರಷ್ಟು ಮಂದಿ ಸ್ಟ್ರೋಕ್‌ಗೆ ತುತ್ತಾಗುತ್ತಿದ್ದಾರೆ.  ಸ್ಟ್ರೋಕ್‌ಗೆ ತುತ್ತಾಗಿರುವ ಚಂದ್ರಶೇಕರ್ ರೆಡ್ಡಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯ ವಿಶ್ವನಾಥನ್ ಐಯರ್ ಈಗಾಗಲೇ ಈ ರೀತಿಯ 4 ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದಾರೆ ಎಂದಿದ್ದಾರೆ.

13 ವರ್ಷದ ಮಗುವಿಗೂ ಬ್ಲ್ಯಾಕ್ ಫಂಗಸ್ ಅಟ್ಯಾಕ್, ಕೊರೋನಾ ಬಂದಿದ್ದೇ ಗೊತ್ತಿಲ್ಲ

ಕೆಇಎಂ ಆಸ್ಪತ್ರೆ ನ್ಯೂರಾಲಜಿಸ್ಟ್ ಡಾ. ನಿತಿನ್ ದಾಂಗೆ ಈಗಾಗಲೇ 20ಕ್ಕೂ ಹೆಚ್ಚು ಕೋವಿಡ್‌ನಿಂದ ಗುಣಮುಖರಾದ ರೋಗಿಗಳು ಸ್ಟ್ರೋಕ್ ಹಾಗೂ ಲಘು ಹೃದಯಾಘಾತದಿಂದ ಆಸ್ಪತ್ರೆ ದಾಖಲಾಗಿದ್ದಾರೆ. ಇತರ ಆರೋಗ್ಯ ಸಮಸ್ಯೆ ಇದ್ದು ಕೋವಿಡ್‌ನಿಂದ ಗುಣಮುಖರಾದವರು ಒಂಂದು ತಿಂಗಳಲ್ಲೇ ಸ್ಟ್ರೋಕ್ ಹಾಗೂ ಹೃದಯಾಘಾತದಿಂದ ಆಸ್ಪತ್ರೆ ದಾಖಲಾಗಿದ್ದಾರೆ. ಇನ್ನು ಯುವಕರು ಇತರ ಯಾವುದೇ ಆರೋಗ್ಯ ಸಮಸ್ಯೆ ಇಲ್ಲದವರು ಕೋವಿಡ್‌ನಿಂದ ಗುಣಮುಖರಾದ 2 ತಿಂಗಳಲ್ಲಿ ಈ ಪ್ರಕರಣದ ಕಾರಣ ಆಸ್ಪತ್ರೆ ದಾಖಲಾಗಿದ್ದಾರೆ ಎಂದು ನಿತಿನ್ ದಾಂಗೆ ಹೇಳಿದ್ದಾರೆ.

ಮುಂಬೈನ ಜುಪಿಟರ್ ಆಸ್ಪತ್ರೆಯಲ್ಲಿ 50 ವರ್ಷದ ವ್ಯಕ್ತಿ ತೀವ್ರವಾಗಿ ಕೋವಿಡ್ ಸಮಸ್ಯೆ ಕಾಡಿತ್ತು. ಸತತ ಚಿಕಿತ್ಸೆಯಿಂದ ಸಂಪೂರ್ಣ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದರು. ಆಸ್ಪತ್ರೆಯಿಂದ ಬಿಡುಗಡೆಯಾದ 7 ದಿನಕ್ಕೆ ಬ್ರೈನ್ ಸ್ಟ್ರೋಕ್‌ನಿಂದ ನಿಧರಾಗಿದ್ದಾರೆ. 6 ದಿನ ಮನೆಯಲ್ಲಿ ಆರಾಮವಾಗಿ ವಿಶ್ರಾಂತಿ ಪಡೆದಿದ್ದ ವ್ಯಕ್ತಿ 7ನೇ ದಿನ ಎದ್ದಾಗ ಕೈ ಕಾಲು ಅಲುಗಾಡಿಸಲು ಸಾಧ್ಯವಾಗದೆ ಮಾತು ಆಡಲು ಸಾಧ್ಯವಾಗಲಿಲ್ಲ. ಮೆದುಳಿನ ಸ್ಟ್ರೋಕ್‌ನಿಂದ ವ್ಯಕ್ತಿ ಸಾವನ್ನಪ್ಪಿರುವುದು MRI ಸ್ಕ್ಯಾನ್‌ನಲ್ಲಿ ದೃಢಪಟ್ಟಿತ್ತು ಎಂದು ಜುಪಿಟರ್ ಆಸ್ಪತ್ರೆ ವೈದ್ಯ ಆಶಿಸ್ ನಬಾರ್ ಹೇಳಿದ್ದಾರೆ.

2020 ಹಾಗೂ 2021ರಲ್ಲಿ ಕೋವಿಡ್‌ನಿಂದ ಸಂಪೂರ್ಣ ಗುಣಮುಖರಾಗಿ ಮನೆ ಸೇರಿಕೊಂಡವರ ಪೈಕಿ 20 ಪ್ರಕರಣಗಳು ಹೃದಯಾಘಾತದಿಂದ ಮತ್ತೆ ಆಸ್ಪತ್ರೆ ದಾಖಲಾಗಿದ್ದಾರೆ. ಸರಸಾರಿ 2 ರಿಂದ 3 ತಿಂಗಳ ಒಳಗೆ ಕೋವಿಡ್ ಗುಣಮುಖರಿಗೆ ಹೃದಯಾಘಾತವಾಗಿದೆ. ಕಾರ್ಡಿಯಾಲಜಿಸ್ಟ್ ಡಾ.ಪಿಂಟೋ ಹೇಳಿದ್ದಾರೆ.