Asianet Suvarna News Asianet Suvarna News

ಶೋಪಿಯಾನ್‌ ರೇಪ್‌ ಕೇಸ್‌ ಕುರಿತಾಗಿ ಸುಳ್ಳು ವರದಿ, ಇಬ್ಬರು ವೈದ್ಯರು ಸೇವೆಯಿಂದಲೇ ವಜಾ!

ಜಮ್ಮು ಕಾಶ್ಮೀರದ ಶೋಪಿಯಾನ್‌ನಲ್ಲಿ ಸೇನಾ ಸಿಬ್ಬಂದಿ 14 ವರ್ಷದ ಬಾಲಕಿಯ ಮೇಲೆ ರೇಪ್‌ ಮಾಡಿದ ಪ್ರಕರಣ ಸುದ್ದಿಯಾಗಿತ್ತು. ಇದರಿಂದಾಗಿ 42 ದಿನ ಕಣಿವೆ ರಾಜ್ಯದಲ್ಲಿ ಹಿಂಸಾಚಾರ ನಡೆದಿತ್ತು. 
 

Doctor dismissed for making false report of Shopian rape case san
Author
First Published Jun 23, 2023, 5:35 PM IST

ಶ್ರೀನಗರ (ಜೂ.23): ಶೋಪಿಯಾನ್ ಅತ್ಯಾಚಾರ ಪ್ರಕರಣದಲ್ಲಿ ಸುಳ್ಳು ವೈದ್ಯಕೀಯ ವರದಿ ಬರೆದ ಇಬ್ಬರು ವೈದ್ಯರನ್ನು ಜಮ್ಮು ಮತ್ತು ಕಾಶ್ಮೀರ ಆಡಳಿತ ವಜಾಗೊಳಿಸಿದೆ. ಕಣಿವೆಯಲ್ಲಿ ಹಿಂಸಾಚಾರವನ್ನು ಪ್ರಚೋದಿಸಲು ಮತ್ತು ಸೇನೆಯನ್ನು ಗುರಿಯಾಗಿಸಲು ಪಾಕಿಸ್ತಾನದ ಆದೇಶದ ಮೇರೆಗೆ ಮರಣೋತ್ತರ ಪರೀಕ್ಷೆಯ ವರದಿಯಲ್ಲಿನ ಮಾಹಿತಿಯನ್ನು ಇಬ್ಬರೂ ವೈದ್ಯರು ಬದಲಾಯಿಸಿದ್ದಾರೆ ಎಂದು ಆರೋಪಿಸಲಾಗಿದೆ. 2009ರ ಮೇ 30 ರಂದು, ಜಮ್ಮು ಮತ್ತು ಕಾಶ್ಮೀರದ ಶೋಪಿಯಾನ್‌ನ ನದಿಯಲ್ಲಿ ಆಸಿಯಾ ಮತ್ತು ನಿಲೋಫರ್ ಎಂಬ ಇಬ್ಬರು ಮಹಿಳೆಯರ ಶವಗಳು ಪತ್ತೆಯಾಗಿದ್ದವು. ಪೋಸ್ಟ್‌ಮಾರ್ಟಂ ವರದಿಯಲ್ಲಿ ಇಬ್ಬರ ಮೇಲೂ ಅತ್ಯಾಚಾರ ನಡೆದಿದೆ ಎಂದು ಹೇಳಲಾಗಿತ್ತಲ್ಲದೆ, ಸೇನಾ ಸಿಬ್ಬಂದಿ ಇವರ ಮೇಲೆ ಅತ್ಯಾಚಾರ ಮಾಡಿದ್ದಾರೆ ಎಂದು ಆರೋಪಿಸಲಾಗಿತ್ತು. ಈ ವರದಿಯಿಂದಾಗಿ ಇಡೀ ಕಾಶ್ಮೀರ ಹೊತ್ತಿ ಉರಿದಿದ್ದರಿಂದ ಬರೋಬ್ಬರಿ 42 ದಿನಗಳ ಕಾಲ ಕಣಿವೆ ರಾಜ್ಯದಲ್ಲಿ ಅಕ್ಷರಶಃ ಬಂದ್‌ ಪರಿಸ್ಥಿತಿ ನಿರ್ಮಾಣವಾಗಿತ್ತು.

ಈ ಪ್ರಕರಣದಲ್ಲಿ, ಸಿಬಿಐ 2009 ರ ಡಿಸೆಂಬರ್ 14 ರಂದು ಜಮ್ಮು ಮತ್ತು ಕಾಶ್ಮೀರ ಹೈಕೋರ್ಟ್‌ನಲ್ಲಿ ಚಾರ್ಜ್ ಶೀಟ್ ಅನ್ನು ಪ್ರಸ್ತುತಪಡಿಸಿತು. ಇದರಲ್ಲಿ ಡಾ. ಬಿಲಾಲ್ ಅಹ್ಮದ್ ಮತ್ತು ಡಾ. ನಿಘತ್ ಶಾಹೀನ್ ಚಿಲ್ಲು ಜೊತೆಗೆ ಇತರ 13 ಜನರ ಮೇಲೆ ಸಾಕ್ಷ್ಯಾಧಾರಗಳನ್ನು ತಿರುಚಿದ ಪುರಾವೆಗಳು ಕಂಡುಬಂದಿವೆ. ಸೇನಾ ಸಿಬ್ಬಂದಿ ವಿರುದ್ಧ ಹೊರಿಸಲಾದ ಆರೋಪಗಳು ಸುಳ್ಳು ಎನ್ನುವುದು ತಿಳಿದುಬಂದಿದೆ. 

2009ರ ಮೇ 30 ರಂದು ಆಸಿಯಾ ಮತ್ತು ನಿಲೋಫರ್ ಶವಗಳು ಶೋಪಿಯಾನ್‌ನ ರಾಂಬಿಯಾರಾ ನದಿಯಲ್ಲಿ ಕಂಡುಬಂದವು. ಇವರಿಬ್ಬರೂ ನದಿಯಲ್ಲಿ ಮುಳುಗಿ ಸಾವು ಕಂಡಿದ್ದರು. ಆದರೆ, ಇವರ ಸಾವನ್ನು ಅತ್ಯಾಚಾರ ಮತ್ತು ಕೊಲೆ ಎಂದು ಬಿಂಬಿಸಲಾಗಿತ್ತಲ್ಲದೆ, ಈ ಆರೋಪವನ್ನು ಸೇನಾ ಸಿಬ್ಬಂದಿಗಳ ಮೇಲೆ ಹೊರಿಸಲಾಗಿತ್ತು. ಅಂದು ಜಮ್ಮು ಕಾಶ್ಮೀರದಲ್ಲಿ ಅಧಿಕಾರದಲ್ಲಿದ್ದ ಓಮರ್‌ ಅಬ್ದುಲ್ಲಾ ಸರ್ಕಾರ ಕೂಡ ಇದನ್ನು ಕಟುವಾಗಿ ಟೀಕೆ ಮಾಡಿತ್ತು. ಇದಾದ ಬಳಿಕ ಒಂದು ತಿಂಗಳು ಜಮ್ಮು ಕಾಶ್ಮೀರದಲ್ಲಿ ಪ್ರತಿಭಟನೆಗಳು ನಡೆದವು. . ಒತ್ತಡ ಹೆಚ್ಚಾದಂತೆ, ಪೊಲೀಸರು 7 ಜೂನ್ 2009 ರಂದು ಅತ್ಯಾಚಾರ ಮತ್ತು ಕೊಲೆಯ ಸೆಕ್ಷನ್‌ಗಳ ಅಡಿಯಲ್ಲಿ ಎಫ್‌ಐಆರ್ ದಾಖಲಿಸಿದರು. ರಾಜ್ಯ ಸರ್ಕಾರ ನಿವೃತ್ತ ನ್ಯಾಯಾಧೀಶರ ಅಧ್ಯಕ್ಷತೆಯಲ್ಲಿ ತನಿಖಾ ಸಮಿತಿಯನ್ನೂ ರಚಿಸಿತ್ತು. ಈ ಆಯೋಗದ ವರದಿಯಲ್ಲಿ ಪೊಲೀಸರು ಸಾಕ್ಷ್ಯಗಳನ್ನು ಅಳಿಸಿ ಹಾಕಿದ್ದಾರೆ ಎಂದು ಆರೋಪಿಸಲಾಗಿತ್ತು. ಅದರ ಆಧಾರದ ಮೇಲೆ ಸರ್ಕಾರವು ಅಂದಿನ ಎಸ್ಪಿ ಮತ್ತು ಶೋಪಿಯಾನ್‌ನ ಡೆಪ್ಯುಟಿ ಸೇರಿದಂತೆ ನಾಲ್ವರು ಪೊಲೀಸ್ ಅಧಿಕಾರಿಗಳನ್ನು ಅಮಾನತುಗೊಳಿಸಿದೆ. ಆದರೆ ಕಣಿವೆಯಲ್ಲಿ ಪ್ರತಿಭಟನೆ ಮುಂದುವರಿದ ಕಾರಣ ಪ್ರಕರಣವನ್ನು ಸಿಬಿಐಗೆ ವಹಿಸಲಾಗಿತ್ತು.

ಡಿಸೆಂಬರ್ 2009 ರಲ್ಲಿ, ಸಿಬಿಐ 66 ಪುಟಗಳ ವರದಿಯನ್ನು ಜಮ್ಮು ಮತ್ತು ಕಾಶ್ಮೀರ ಹೈಕೋರ್ಟ್‌ನಲ್ಲಿ ಪ್ರಸ್ತುತಪಡಿಸಿತು, ಅದರಲ್ಲಿ 13 ಜನರನ್ನು ಆರೋಪಿಗಳು ಎನ್ನಲಾಗಿತ್ತು. ಆಸಿಯಾ ಮತ್ತು ನಿಲೋಫರ್‌ನ ಅವರ ಒಟ್ಟು 3 ಮರಣೋತ್ತರ ಪರೀಕ್ಷೆಗಳು ನಡೆದಿದ್ದವು. ಮೊದಲ ತಂಡದಲ್ಲಿ ಡಾ.ಬಿಲಾಲ್ ಹಾಗೂ ಎರಡನೇ ತಂಡದಲ್ಲಿ ಡಾ.ಚಿಲ್ಲು ಅವರನ್ನು ಸೇರಿಸಲಾಗಿತ್ತು. ಡಾ. ಚಿಲ್ಲು ತನ್ನದೇ ಯೋನಿ ಮಾದರಿಯನ್ನು ನೀಡಿದ ಆಸಿಯಾ ಮೇಲೆ ರೇಪ್‌ ಆಗಿದೆ ಎಂದು ವರದಿಯಲ್ಲಿ ಬರೆದಿದ್ದರು. ಆ ಬಳಿಕ ಸಿಬಿಐ ಶವಗಳನ್ನು ಸಮಾಧಿಯಿಂದ ಹೊರತೆಗೆದಿದ್ದಲ್ಲದೆ, ಅವುಗಳನ್ನು ಏಮ್ಸ್‌ ವೈದ್ಯರಾದ ಡಾ. ಟಿಡಿ ಡೋಗ್ರಾ ಮತ್ತು ಡಾ. ಅನುಪಮಾ ರೈನಾ ಅವರ ವಿಧಿವಿಜ್ಞಾನ ತಂಡದಿಂದ ಪರೀಕ್ಷೆ ಮಾಡಿಸಿದ್ದರು. ಇಬ್ಬರ ಶ್ವಾಸಕೋಶದಲ್ಲಿ ಕಂಡುಬರುವ ಅದೇ ಡಯಾಟಮ್‌ಗಳು (ಪಾಚಿ) ದೇಹಗಳು ಪತ್ತೆಯಾದ ಪ್ರದೇಶದಲ್ಲಿಯೂ ಇದ್ದವು, ಅಷ್ಟೇ ಅಲ್ಲ ಆಸಿಯಾ ದೇಹದಲ್ಲಿ ಕನ್ಯಾಪೊರೆ ಕೂಡ ಇತ್ತು.

ಹಣ ಕೊಟ್ಟು ನಟರನ್ನು ಕರೆದೊಯ್ಯುವುದು ದೊಡ್ಡದಲ್ಲ: ಧೋವಲ್ ವಿರುದ್ಧ ಆಜಾದ್ ಕಿಡಿ

ಸಾಕ್ಷ್ಯಾಧಾರಗಳನ್ನು ಸೃಷ್ಟಿಸಿದ ಆರೋಪದ ಮೇಲೆ ಮೃತ ಮಹಿಳೆಯ ಸಹೋದರ ಸೇರಿದಂತೆ ಆರು ವೈದ್ಯರು, ಐವರು ವಕೀಲರು ಮತ್ತು ಇಬ್ಬರು ನಾಗರಿಕರ ವಿರುದ್ಧ ಸಿಬಿಐ ಚಾರ್ಜ್ ಶೀಟ್ ಸಲ್ಲಿಸಿತ್ತು. ಈ ಇಬ್ಬರನ್ನು ಸಾಕ್ಷಿಗಳನ್ನಾಗಿಸುವಂತೆ ಒತ್ತಾಯಿಸಿದವರು ವಕೀಲರು. ಇದಾದ ನಂತರ 47 ದಿನಗಳ ಕಾಲ ಬಂಧನದಲ್ಲಿದ್ದ ಸೈನಿಕರನ್ನು ಬಿಡುಗಡೆ ಮಾಡಲಾಯಿತು.

ಶೋಪಿಯನ್'ನಲ್ಲಿ ಭಾರತೀಯ ಸೇನಾ ಪಡೆ ಮೇಲೆ ಉಗ್ರರ ದಾಳಿ: 8 ಮಂದಿಗೆ ಗಾಯ

Follow Us:
Download App:
  • android
  • ios