ಚಪಕ್‌ ಚಿತ್ರಕ್ಕೆ ಬೆಂಬಲ: ಚಿತ್ರಮಂದಿರದ ಎಲ್ಲ ಟಿಕೆಟ್ ಬುಕ್ ಮಾಡಿದ 'ಕೈ' ಶಾಸಕ

ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಜೆಎನ್‌ಯು ಪ್ರತಿಭಟನಾಕಾರರಿಗೆ ಬೆಂಬಲ ನೀಡಿದ್ದನ್ನು ವಿರೋಧಿಸಿದ ಬಿಜೆಪಿ ಕಾರ್ಯಕರ್ತರು ಚಪಕ್‌ ಚಿತ್ರವನ್ನು ನಿಷೇಧಿಸುವಂತೆ ಆಗ್ರಹಿಸಿದೆ. ಆದರೆ, ಕಾಂಗ್ರೆಸ್ ಪಕ್ಷ ಈ ಚಿತ್ರಕ್ಕೆ ಬೆಂಬಲ ಸೂಚಿಸುವ ಮೂಲಕ ಬಿಜೆಪಿಗೆ ಕಾಂಗ್ರೆಸ್‌ ತಿರುಗೇಟು ನೀಡಿದೆ. 

ಟ್ವಿಟರ್ ಫಾಲೋವರ್ಸ್ ಗೆ 65 ಕೋಟಿ ರೂ. ಹಂಚಿದ ಕೋಟ್ಯಾಧಿಪತಿ!

ಜಪಾನ್ ಕೋಟ್ಯಾಧಿಪತಿ ಯುಸಾಕೂ ಮೆಯಿಜಾವಾ ತನ್ನ ಟ್ವಿಟರ್ ಫಾಲೋವರ್ಸ್ ಗೆ ಸರಿ ಸುಮಾರು 65 ಕೋಟಿ ರೂ ನೀಡುತ್ತಿದ್ದಾರೆ. ಅವರು ತಮ್ಮ 1 ಸಾವಿರ ಪಾಲೋವರ್ಸ್ ಗಳಿಗೆ 1 ಬಿಲಿಯನ್ ಎನ್ ಅಂದರೆ ಸುಮಾರು 65 ಕೋಟಿ ರೂಪಾಯಿ ಕೋಟಿ ಹಂಚಲಿದ್ದಾರೆ. 

ವರಸೆಯಲ್ಲಿ ತಂಗಿಯನ್ನೇ ವರಿಸಲು ಮುಂದಾದ ಬಿಜೆಪಿ ಮುಖಂಡ: ಹುಬ್ಬಳ್ಳಿ ನಲುಗಿಸಿದ ಭಂಡ!

ಪ್ರೀತಿಸುತ್ತಿದ್ದ ಯುವತಿಯನ್ನು ಮದುವೆ ಮಾಡಿಕೊಡದಿದ್ದಲ್ಲಿ ಯುವತಿ ಜತೆಗಿನ ಚಿತ್ರಗಳು, ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡುವುದಾಗಿ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದ ಪಾಂಡಿಚೇರಿ ಮೂಲದ ಬಿಜೆಪಿ‌ ಯುವ ಮುಖಂಡನನ್ನು ನಗರದ ಸೈಬರ್ ಕ್ರೈಂ ಪೊಲೀಸರು ಬಂದಿಸಿದ್ದಾರೆ. 

ಡಿಕೆಶಿಗೆ ಪ್ರಭಾವಿ ನಾಯಕ ಅಡ್ಡಗಾಲು: KPCC ಅಧ್ಯಕ್ಷ ಹುದ್ದೆ 3ನೇ ವ್ಯಕ್ತಿ ಪಾಲು..?...

ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ದಿನೇಶ್ ಗುಂಡೂರಾವ್ ರಾಜೀನಾಮೆ ಕೊಟ್ಟು ಬರೋಬ್ಬರಿ ಒಂದು ತಿಂಗಳಾಯ್ತು. ಆದ್ರೆ, ಈವರೆಗೆ ರಾಜ್ಯ ಕಾಂಗ್ರೆಸ್ ಸಾರಥ್ಯ ಯಾರಿಗೆ ನೀಡ್ಬೇಕೆಂದು ಇನ್ನೂ ಇತ್ಯರ್ಥವಾಗಿಲ್ಲ.  ಮೂಲಗಳ ಪ್ರಕಾರ ಪಕ್ಷ ನಿಷ್ಠರಿಗೆ, ಕೆಲಸ ಮಾಡುವವರಿಗೆ ಪಟ್ಟ ಅನ್ನೋ ಮಾತುಗಳು ಕಾಂಗ್ರೆಸ್ ಪಾಳಯದಲ್ಲಿ ಕೇಳಿ ಬರ್ತಿದೆ. ಡಿಕೆಶಿಗೆ ಕೆಪಿಸಿಸಿ  ಸಾರಥ್ಯ ಬಹುತೇಕ ಖಚಿತ ಎಂದು ಹೇಳಲಾಗ್ತಿದೆ. ಆದ್ರೆ, ಇದೀಗ ಡಿಕೆಶಿಗೆ ಮತ್ತೊಂದು ಸಮುದಾಯದ ನಾಯಕ ತೀವ್ರ ಸ್ಪರ್ಧೆಯೊಡ್ಡಿದ್ದಾರೆ

ನಿಯಮ ಉಲ್ಲಂಘನೆ: 343 ಮನೆಗಳಿದ್ದ ಅಪಾರ್ಟ್‌ಮೆಂಟ್ಸ್‌ ಕ್ಷಣದಲ್ಲಿ ನೆಲಸಮ!

ಕರಾವಳಿ ನಿಯಂತ್ರಣ ವಲಯದ ನಿಯಮಗಳನ್ನು ಗಾಳಿಗೆ ತೂರಿ ನಿರ್ಮಾಣ ಮಾಡಲಾಗಿದ್ದ ಕೊಚ್ಚಿಯ ಮರಾಡು ಫ್ಲ್ಯಾಟ್‌ಗಳನ್ನು ಸುಪ್ರೀಂ ಕೋರ್ಟ್‌ ಆದೇಶದಂತೆ ಜ.11 ಹಾಗೂ 12ರಂದು ಧ್ವಂಸಗೊಳಿಸಲು ಕೇರಳ ಸರ್ಕಾರ ಮುಂದಾಗಿದೆ. ಮೊದಲ ಹಂತವಾಗಿ ಬರೋಬ್ಬರಿ 800 ಕೆಜಿ ಸ್ಫೋಟಕ ಬಳಸಿ ಎರಡು ಅಪಾರ್ಟ್‌ಮೆಂಟ್‌ಗಳನ್ನು ನೆಲಸಮಗೊಳಿಸಲಾಗಿದೆ.

ಅಂತ್ಯಕ್ರಿಯೆ ಸ್ನಾನದ ವೇಳೆ ಸತ್ತ ಮಹಿಳೆ ಬದುಕಿದಳು!

ಸತ್ತಿದ್ದಾರೆಂದು ಭಾವಿಸಿ ಅಂತ್ಯಕ್ರಿಯೆ ಸಿದ್ಧತೆಯಲ್ಲಿದ್ದಾಗ ಮಹಿಳೆ ಕಣ್ಣುಬಿಟ್ಟ ಘಟನೆ ಬೆಳಗಾವಿ ಜಿಲ್ಲೆಯಲ್ಲಿ ನಡೆದಿತ್ತು. ಈ ಘಟನೆ ಬೆನ್ನಲ್ಲೇ 50 ವರ್ಷದ ಮಹಿಳೆಯೊಬ್ಬಳು ಸಾವಿಗೀಡಾಗಿದ್ದಾಳೆ ಎಂದು ಆಸ್ಪತ್ರೆಯ ವೈದ್ಯರೇ ಘೋಷಿಸಿ, ಇನ್ನೇನು ಅಂತ್ಯಕ್ರಿಯೆಯನ್ನೂ ನೆರವೇರಿಸಬೇಕು ಎನ್ನುವಷ್ಟರಲ್ಲಿ ಆಕೆ ಮರಳಿ ಜೀವ ಪಡೆದ ವಿಸ್ಮಯಕಾರಿ ಘಟನೆಯೊಂದು ಪಾಕಿಸ್ತಾನದಲ್ಲಿ ನಡೆದಿದೆ.

47ನೇ ವಸಂತಕ್ಕೆ ಕಾಲಿಟ್ಟ ರಾಹುಲ್ ದ್ರಾವಿಡ್; ದಿಗ್ಗಜನಿಗೆ ಶುಭಾಶಯಗಳ ಸುರಿಮಳೆ!...

ಟೀಂ ಇಂಡಿಯಾ ದಿಗ್ಗಜ ಕ್ರಿಕೆಟಿಗ, ಮಾಜಿ ನಾಯಕ, ಹೆಮ್ಮೆಯ ಕನ್ನಡಿಗ ರಾಹುಲ್ ದ್ರಾವಿಡ್‌ಗೆ ಹುಟ್ಟು ಹಬ್ಬದ ಸಂಭ್ರಮ. ಟೆಸ್ಟ್ ಕ್ರಿಕೆಟ್‌ಗೆ ಹೊಸ ಭಾಷ್ಯ ಬರೆದ ಜಂಟ್ಲಮೆನ್ ರಾಹುಲ್ ದ್ರಾವಿಡ್. ಕ್ರಿಕೆಟ್‌ನ ಎಲ್ಲಾ ಜವಾಬ್ದಾರಿ ನಿರ್ವಹಿಸಿದ ಅಪರೂಪದ ಕ್ರಿಕೆಟಿಗ ದ್ರಾವಿಡ್. ಇದೀಗ 47ನೇ ವಸಂತಕ್ಕೆ ಕಾಲಿಟ್ಟಿರುವ ರಾಹುಲ್ ದ್ರಾವಿಡ್‌ಗೆ ದಿಗ್ಗಜರು ಶುಭಾಶಯ ಕೋರಿದ್ದಾರೆ.

ಏಸು ಪ್ರತಿಮೆ ಬೆನ್ನಲ್ಲೇ ಮತ್ತೊಂದು ವಿವಾದ; ಸ್ಟಿಂಗ್‌ ಆಪರೇಷನ್‌ನಲ್ಲಿ ಸೀಕ್ರೆಟ್ ಔಟ್!

ರಾಮನಗರದಲ್ಲಿ ಕಾಂಗ್ರೆಸ್ ರಾಜಕಾರಣಿ ಡಿ.ಕೆ. ಶಿವಕುಮಾರ್ ತಮ್ಮ ಖರ್ಚಿನಿಂದ ಸ್ಥಾಪಿಸಿರುವ ಏಸು ಪ್ರತಿಮೆ ಹಿಂದಿನ ಸೀಕ್ರೆಟನ್ನು ಸುವರ್ಣನ್ಯೂಸ್ ರಹಸ್ಯ ಕಾರ್ಯಾಚರಣೆ ಮೂಲಕ ಬಯಲಿಗೆಳಿದಿದೆ. ಈ ವಿಚಾರ ಬರೇ ಏಸು ಪ್ರತಿಮೆಗೆ ಸೀಮಿತವಾಗಿಲ್ಲ.

Rapper ಚಂದನ್ ಶೆಟ್ಟಿ- ನಿವೇದಿತಾ ಗೌಡ ಮದುವೆ ಡೇಟ್‌ ಫಿಕ್ಸ್!

ರ‍್ಯಾಪರ್ ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ಹಸೆಮಣೆ ಏರಲು ಸಜ್ಜಾಗಿದ್ದಾರೆ. ಮದುವೆ ದಿನಾಂಕ ನಿಗದಿಯಾಗಿದ್ದು, ಮದುವೆ ತಯಾರಿ ಮಾಡಿಕೊಳ್ಳುತ್ತಿದ್ದಾರೆ. 

ಸ್ಯಾಂಡಲ್‌ವುಡ್‌ನಲ್ಲಿ 'ಗಾಳಿಪಟ' ಹಾರಿಸಿ 'ಅಟ್ಟಹಾಸ' ಮೆರೆದ ಭಾವನಾ ರಾವ್ ಎಲ್ಲೋದ್ರು?

'ಗಾಳಿಪಟ' ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ ಭಾವನಾ ರಾವ್ ಟಾಲಿವುಡ್ ಹಾಗೂ ಬಾಲಿವುಡ್‌ನ ಬೇಡಿಕೆಯ ನಟಿ. ಇನ್‌ಸ್ಟಾಗ್ರಾಂ ಖಾತೆಯಲ್ಲಿ ಭಾವನಾ ಹಲವು ಫೋಟೋ ಶೇರ್ ಮಾಡಿಕೊಂಡಿದ್ದಾರೆ. ಈ ಮೂಲಕ ತಮ್ಮ ಮುಂದಿನ ಹೆಜ್ಜೆ ಕುರಿತು ಸೂಚನೆ ನೀಡಿದ್ದಾರೆ.