Asianet Suvarna News Asianet Suvarna News

ಅಂತ್ಯಕ್ರಿಯೆ ಸ್ನಾನದ ವೇಳೆ ಸತ್ತ ಮಹಿಳೆ ಬದುಕಿದಳು!

ಅಂತ್ಯಕ್ರಿಯೆ ಸ್ನಾನದ ವೇಳೆ ಸತ್ತ ಮಹಿಳೆ ಬದುಕಿದಳು!| ಸಾವಿಗೀಡಾಗಿದ್ದಾಳೆ ಎಂದು ಪ್ರಮಾಣಪತ್ರ ನೀಡಿದ್ದ ವೈದ್ಯರು| ಪಾಕಿಸ್ತಾನದಲ್ಲೊಂದು ಅಚ್ಚರಿಯ ಘಟನೆ

Dead Woman Comes Back To Life At Funeral Bath In Pakistan
Author
Bangalore, First Published Jan 11, 2020, 12:12 PM IST
  • Facebook
  • Twitter
  • Whatsapp

ಇಸ್ಲಮಾಬಾದ್[ಜ.11]: ಸತ್ತಿದ್ದಾರೆಂದು ಭಾವಿಸಿ ಅಂತ್ಯಕ್ರಿಯೆ ಸಿದ್ಧತೆಯಲ್ಲಿದ್ದಾಗ ಮಹಿಳೆ ಕಣ್ಣುಬಿಟ್ಟ ಘಟನೆ ಬೆಳಗಾವಿ ಜಿಲ್ಲೆಯಲ್ಲಿ ನಡೆದಿತ್ತು. ಈ ಘಟನೆ ಬೆನ್ನಲ್ಲೇ 50 ವರ್ಷದ ಮಹಿಳೆಯೊಬ್ಬಳು ಸಾವಿಗೀಡಾಗಿದ್ದಾಳೆ ಎಂದು ಆಸ್ಪತ್ರೆಯ ವೈದ್ಯರೇ ಘೋಷಿಸಿ, ಇನ್ನೇನು ಅಂತ್ಯಕ್ರಿಯೆಯನ್ನೂ ನೆರವೇರಿಸಬೇಕು ಎನ್ನುವಷ್ಟರಲ್ಲಿ ಆಕೆ ಮರಳಿ ಜೀವ ಪಡೆದ ವಿಸ್ಮಯಕಾರಿ ಘಟನೆಯೊಂದು ಪಾಕಿಸ್ತಾನದಲ್ಲಿ ನಡೆದಿದೆ.

ರಷೀದಾ ಬೀಬಿ ಎಂಬಾಕೆಯನ್ನು ಕರಾಚಿಯ ಅಬ್ಬಾಸಿ ಶಹೀದ್‌ ಆಸ್ಪತ್ರೆಗೆ ದಾಖಲಿಸಾಗಿತ್ತು. ಆಕೆ ಸಾವಿಗೀಡಾಗಿದ್ದಾಳೆ ಎಂದು ವೈದ್ಯರು ಪ್ರಮಾಣಪತ್ರವನ್ನೂ ನೀಡಿದ್ದರು. ಹೀಗಾಗಿ ಮನೆಗೆ ಕರೆದುಕೊಂಡು ಬಂದ ಸಂಬಂಧಿಗಳು ಅಂತ್ಯಕ್ರಿಯೆಯ ಸ್ನಾನವನ್ನು ನೆರವೇರಿಸಿದ್ದರು.

ಅಂತ್ಯಕ್ರಿಯೆಗೆ ಸಿದ್ಧತೆ: ಕಣ್ಣು ತೆರೆದು ನೋಡಿದ ಮಹಿಳೆ, ಕಕ್ಕಾಬಿಕ್ಕಿಯಾದ ಜನತೆ

ಈ ವೇಳೆ ಆಕೆಯ ತುಟಿಗಳು ಅದುರುತ್ತಿರುವುದು ಮಹಿಳೆಯೊಬ್ಬಳ ಗಮನಕ್ಕೆ ಬಂದಿದೆ. ಬಳಿಕ ನಾಡಿ ಮಿಡಿತವನ್ನು ತಪಾಸಣೆ ಮಾಡಿದಾಗ ಆಕೆಗೆ ಇನ್ನೂ ಜೀವ ಇರುವುದು ಕಂಡು ಬಂದಿದೆ. ರಷೀದಾ ಬೀಬಿಗೆ ಈಗ ಪುನಃ ಅದೇ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಬೆಳಗಾವಿಯಲ್ಲೂ ಹಲವು ತಿಂಗಳಿಂದ ಮಿದುಳು ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ಮಾಲು ಯಲ್ಲಪ್ಪ ಚೌಗುಲೆ ಅವರನ್ನ ಜನವರಿ 7ರಂದು ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಮಾಲು ಅವರಿಗೆ ಆಸ್ಪತ್ರೆಯಲ್ಲಿ ವೆಂಟಿಲೇಟರ್‌ನಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಬದುಕುವುದು ಖಚಿತವಿಲ್ಲ ಎಂದಾಗ ಆ್ಯಂಬುಲೆನ್ಸ್‌ನಲ್ಲಿ ಕರೆತರುವ ವೇಳೆ ಮಾಲು ಅವರು ಮೃತಪಟ್ಟಿದ್ದಾಳೆ ಎಂದು ಕುಟುಂಬಸ್ಥರು ಭಾವಿಸಿದ್ದರು. ಆದರೆ ಅಂತ್ಯಕ್ರಿಯೆಗೆ ಸಿದ್ಧತೆ ನಡೆಸುತ್ತಿದ್ದಾಗ ಮಹಿಳೆ ಏಕಾಏಕಿ ಕಣ್ಣು ಬಿಟ್ಟಿದ್ದರು.

ಜನವರಿ 11ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ:

Follow Us:
Download App:
  • android
  • ios