Asianet Suvarna News Asianet Suvarna News

ಟ್ವಿಟರ್ ಫಾಲೋವರ್ಸ್ ಗೆ 65 ಕೋಟಿ ರೂ. ಹಂಚಿದ ಕೋಟ್ಯಾಧಿಪತಿ!

ಸಾಮಾಜಿಕ ಪ್ರಯೋಗ, ಟ್ವಿಟರ್ ಫಾಲೋವರ್ಸ್‌ಗೆ 65 ಕೋಟಿ ನೀಡಲು ಮುಂದಾದ ಕೋಟ್ಯಾಧಿಪತಿ| ಕಳೆದ ವರ್ಷವೂ 6.5 ಕೋಟಿ ಹಂಚಿದ್ದ ಯುಸಾಕೂ ಮೆಯಿಜಾವಾ| ಒಂದು ಟ್ವೀಟ್, 40 ಲಕ್ಷ ರೀಟ್ವೀಟ್

Social Experiment Japanese billionaire giving away 65 crore to Twitter Followers
Author
Bangalore, First Published Jan 11, 2020, 3:59 PM IST
  • Facebook
  • Twitter
  • Whatsapp

ಟೋಕಿಯೋ[ಜ.11]: ಜಪಾನ್ ಕೋಟ್ಯಾಧಿಪತಿ ಯುಸಾಕೂ ಮೆಯಿಜಾವಾ ತನ್ನ ಟ್ವಿಟರ್ ಫಾಲೋವರ್ಸ್ ಗೆ ಸರಿ ಸುಮಾರು 65 ಕೋಟಿ ರೂ ನೀಡುತ್ತಿದ್ದಾರೆ. ಅವರು ತಮ್ಮ 1 ಸಾವಿರ ಪಾಲೋವರ್ಸ್ ಗಳಿಗೆ 1 ಬಿಲಿಯನ್ ಎನ್ ಅಂದರೆ ಸುಮಾರು 65 ಕೋಟಿ ರೂಪಾಯಿ ಕೋಟಿ ಹಂಚಲಿದ್ದಾರೆ. 

ಮೆಯಿಜಾವಾ ತನ್ನ ಸಾಮಾಜಿಕ ಪ್ರಯೋಗಕ್ಕಾಗಿ ಯಾರನ್ನೆಲ್ಲಾ ಆಯ್ಕೆ ಮಾಡುತ್ತಾರೋ ಅವರಿಗೆ ಈ ಹಣ ಹಂಚಲಾಗುತ್ತದೆ. ಹಣ ಮನುಷ್ಯನನ್ನು ಹೆಚ್ಚು ಖುಷಿಯಾಗಿರಿಸುತ್ತಾ? ಎಂದು ತಿಳಿದುಕೊಳ್ಳುವುದು ಈ ಪ್ರಯೋಗದ ಉದ್ದೇಶವಾಗಿದೆ. ಈ ಹಣವನ್ನು ಗಳಿಸಲು ಜನರು ಜನವರಿ 7ಕ್ಕೂ ಮೊದಲು ಯುಸಾಕೂ ಮೆಯಿಜಾವಾ ಅವರ ಟ್ವೀಟ್ ರೀಟ್ವೀಟ್ ಮಾಡಬೇಕಿತ್ತು. 

ಮೆಯಿಜಾವಾ ಡಿಸೆಂಬರ್ 31 ರಂದು ಮಾಡಿದ್ದ ಈ ಟ್ವೀಟ್ ನ್ನು ಮಾಡುತ್ತಾ ತಮ್ಮ ಈ ಸಾಮಾಜಿಕ ಪ್ರಯೋಗದ ಕುರಿತು ಘೋಷಿಸಿದ್ದರು. ಅಂದಿನಿಂದ ಈವರೆಗೆ ಅವರ ಈ ಟ್ವೀಟ್ ಬರೋಬ್ಬರಿ 40 ಲಕ್ಷಕ್ಕೂ ಅಧಿಕ ಮಂದಿ ರೀಟ್ವೀಟ್ ಮಾಡಿದ್ದಾರೆ. ಯೂ ಟ್ಯೂಬ್ ವಿಡಿಯೋ ಒಂದರಲ್ಲಿ ಈ ಪ್ರಯೋಗದ ಬಹುಮಾನದ ಹಣ ಪಡೆದುಕೊಳ್ಳುವ 1 ಸಾವಿರ ಮಂದಿಯನ್ನು ಲಾಟರಿ ಮೂಲಕ ಆಯ್ಕೆ ಮಾಡಿಕೊಳ್ಳಲಾಗುತ್ತದೆ. ಆಯ್ಕೆಯಾದ ಟ್ವಿಟರ್ ಬಳಕೆದಾರರಿಗೆ ಸಂದೇಶದ ಮೂಲಕ ಮಾಹಿತಿ ನಿಡಲಾಗುತ್ತದೆ ಎಂದು ಬರೆದಿದ್ದರು.

ಕಳೆದ ವರ್ಷವೂ ಕೋಟ್ಯಾಧಿಪತಿ ತಮ್ಮ ಈ ಯುಸಾಕೂ ಮೆಯಿಜಾವಾ ಇಂತಹುದೇ ಪ್ರಯೋಗ ಮಾಡಿ 6.5 ಕೋಟಿ ವಿತರಿಸಿದ್ದರು. ಕಳೆದ ಬಾರಿ ಅವರ ಟ್ವೀಟ್ ನ್ನು 50 ಲಕ್ಷಕ್ಕೂ ಅಧಿಕ ಮಂದಿ ರೀಟ್ವೀಟ್ ಮಾಡಿದ್ದರು. ಈ ಬಾರಿ ಮಾಡುತ್ತಿರುವ ಟ್ವೀಟ್ ಗಂಭೀರ ಪ್ರಯೋಗ ಎಂದು ಯುಸಾಕೂ ಮೆಯಿಜಾವಾ ಉಲ್ಲೇಖಿಸಿದ್ದಾರೆ. ಈ ಸಂಬಂಧ ಪ್ರತಿಕ್ರಿಯಿಸಿರುವ ಯುಸಾಕೂ ಮೆಯಿಜಾವಾ6.5 ಲಕ್ಷ ಮೊತ್ತ ವ್ಯಕ್ತಿಯೊಬ್ಬರ ಜೀವನದ ಮೇಲೆ ಯಾವ ಪರಿಣಾಮ ಬೀರುತ್ತದೆ ಎಂದು ತಿಳಿಯುವ ಇಚ್ಛೆ ಅವರದ್ದು.

ಹಣವನ್ನು ತಮ್ಮಿಚ್ಛೆಯಂತೆ ಬಳಸಲು ಹಾಗೂ ಆ ಹಣದಿಂದ ತಾವೇನು ಮಾಡಲಿದ್ದೇವೆ ಎಂಬುವುದನ್ನು ಪದೇ ಪದೇ ತಿಳಿಸುವಂತೆ ಯುಸಾಕೂ ಮೆಯಿಜಾವಾ ಮನವಿ ಮಾಡಿಕೊಂಡಿದ್ದಾರೆ.

ಜನವರಿ 11ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ:

Follow Us:
Download App:
  • android
  • ios