ನಿಯಮ ಉಲ್ಲಂಘನೆ: 343 ಮನೆಗಳಿದ್ದ ಅಪಾರ್ಟ್‌ಮೆಂಟ್ಸ್‌ ಕ್ಷಣದಲ್ಲಿ ನೆಲಸಮ!

ಕೇರಳದಲ್ಲಿ ಅಕ್ರಮ ಕಟ್ಟಡಗಳ ನೆಲಸಮ| ಮರಡು ಫ್ಲ್ಯಾಟ್ ಟವರ್ ನೆಲಸಮ| ಕೊಚ್ಚಿಯಲ್ಲಿರುವ ಅಕ್ರಮ ಕಟ್ಟಡಗಳು| 800 ಕೆಜಿ ಸ್ಫೋಟಕ ಬಳಸಿ ಅಕ್ರಮ ಕಟ್ಟಡಗಳು ಧ್ವಂಸ

Maradu Flats Kochi Luxury Apartments Come Crashing Down In Seconds Demolition On

ಕೊಚ್ಚಿ[ಜ.11]: : ಕರಾವಳಿ ನಿಯಂತ್ರಣ ವಲಯದ ನಿಯಮಗಳನ್ನು ಗಾಳಿಗೆ ತೂರಿ ನಿರ್ಮಾಣ ಮಾಡಲಾಗಿದ್ದ ಕೊಚ್ಚಿಯ ಮರಾಡು ಫ್ಲ್ಯಾಟ್‌ಗಳನ್ನು ಸುಪ್ರೀಂ ಕೋರ್ಟ್‌ ಆದೇಶದಂತೆ ಜ.11 ಹಾಗೂ 12ರಂದು ಧ್ವಂಸಗೊಳಿಸಲು ಕೇರಳ ಸರ್ಕಾರ ಮುಂದಾಗಿದೆ. ಮೊದಲ ಹಂತವಾಗಿ ಬರೋಬ್ಬರಿ 800 ಕೆಜಿ ಸ್ಫೋಟಕ ಬಳಸಿ ಎರಡು ಅಪಾರ್ಟ್‌ಮೆಂಟ್‌ಗಳನ್ನು ನೆಲಸಮಗೊಳಿಸಲಾಗಿದೆ.

"

ಹೌದು ಸುಪ್ರೀಂ ಆದೇಶದ ಬೆನ್ನಲ್ಲೇ ಅಕ್ರಮವಾಗಿ ನಿರ್ಮಿಸಲಾಗಿದ್ದ ಐಷಾರಾಮಿ, ಅಪಾರ್ಟ್‌ಮೆಂಟ್ ನೆಲಸಮಗೊಳಿಸಲು ಆದೇಶ ನೀಡಿದ ಬೆನ್ನಲ್ಲೇ ಧ್ವಂಸಗೊಳಿಸುವ ಕಟ್ಟಡದ ಸುತ್ತಮುತ್ತ ನೆಲ, ಜಲ ಹಾಗೂ ವಾಯುಸೀಮೆಯಲ್ಲಿ ಸೆ.144ರ ಅನ್ವಯ ನಿಷೇಧಾಜ್ಞೆ ಹೇರಲಾಗಿತ್ತು. ಅಲ್ಲದೇ ಫ್ಲ್ಯಾಟ್‌ಗೆ ಹೋಗುವ ದಾರಿಗಳನ್ನು ಬಂದ್‌ ಮಾಡಲಾಗಿತ್ತು. ಆದೇಶದ ಅನ್ವಯ 4 ಅಪಾರ್ಟ್‌ಮೆಂಟ್‌ಗಳ ಪೈಕಿ ಎರಡು ಕಟ್ಟಡಗಳನ್ನು ಈಗಾಗಲೇ ಧ್ವಂಸಗೊಳಿಸಲಾಗಿದ್ದು, ಇನ್ನುಳಿದ ಎರಡು ಅಪಾರ್ಟ್‌ಮೆಂಟ್‌ಗಳನ್ನು ನಾಳೆ ಧ್ವಂಸಗೊಳಿಸಲಾಗುತ್ತದೆ.

ಈ ಕೋಟ್ಯಂತರ ಮೌಲ್ಯದ ಕಟ್ಟಡಗಳನ್ನು ಧ್ವಂಸಗೊಳಿಸಲು ಬರೋಬ್ಬರಿ 800 ಕೆಜಿ ಸ್ಫೋಟಕವನ್ನು ಬಳಸಲಾಗಿದೆ. ಹೀಗಾಗಿ ಕ್ಷಣ ಮಾತ್ರದಲ್ಲಿ 343 ಮನೆಗಳಿದ್ದ ಅಪಾರ್ಟ್‌ಮೆಂಟ್ಸ್ ನೆಲಕ್ಕುರುಳಿದೆ. ಈ ಕಟ್ಟಡಗಳಲ್ಲಿದ್ದ ಒಂದು ಫ್ಲ್ಯಾಟ್ ಮೌಲ್ಯ 50 ಲಕ್ಷದಿಂದ 1 ಕೋಟಿ ಎಂದು ಹೇಳಲಾಗಿದೆ. 

ಒಟ್ಟು 343 ಫ್ಲ್ಯಾಟ್‌ಗಳಿರುವ ಕಟ್ಟಡಗಳನ್ನು 138 ದಿನಗಳ ಒಳಗೆ ಕೆಡವಬೇಕು ಎಂದು ಸುಪ್ರೀಂ ಕೋರ್ಟ್‌ ಸೆ.19ರಂದು ಅದೇಶ ನೀಡಿತ್ತು.

ಜನವರಿ 11ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ:

Latest Videos
Follow Us:
Download App:
  • android
  • ios