ಬಿಹಾರದ ಕಾಂತಿ ಬ್ಲಾಕ್‌ನಲ್ಲಿ 500 ವರ್ಷ ಹಳೆಯ ಮರದ ಬೇರಿನಲ್ಲಿ ನಾಗರ ಹಾವನ್ನು ಹೋಲುವ ಆಕೃತಿ ಕಂಡುಬಂದಿದೆ. ಸ್ಥಳೀಯರು ಇದನ್ನು ದೈವಿಕ ಚಿಹ್ನೆ ಎಂದು ಪರಿಗಣಿಸಿ ಪೂಜಿಸುತ್ತಿದ್ದಾರೆ. ಈ ಘಟನೆಯಿಂದಾಗಿ ಪ್ರದೇಶದಲ್ಲಿ ಭಕ್ತಿಯ ವಾತಾವರಣ ಮನೆಮಾಡಿದೆ.

ಮುಜಫರ್ ಪುರ್ : ಇತ್ತೀಚಿನ ದಿನಗಳಲ್ಲಿ ಬಿಹಾರದ ಕಾಂತಿ ಬ್ಲಾಕ್ ನಲ್ಲಿ ಒಂದು ಅದ್ಭುತ ದೃಶ್ಯವು ಇಡೀ ಪ್ರದೇಶದಲ್ಲಿ ಒಂದು ರೀತಿ ದೈವಿಕ ವಾತಾವರಣವನ್ನು ಸೃಷ್ಟಿಸಿದೆ. ಹೌದು, ಕಾಂತಿ ನಿಲ್ದಾಣದ ಬಳಿ ಇರುವ ಪ್ರಾಚೀನ ಮರದ ಬೇರಿನಿಂದ 'ನಾಗ ದೇವರ'ನ್ನು ಹೋಲುವ ಆಕೃತಿ ಹೊರಹೊಮ್ಮಿದ್ದು, ಜನರು ಅದನ್ನು ನೋಡಿ ಮೂಕವಿಸ್ಮಿತರಾಗಿದ್ದಾರೆ. ಸ್ಥಳೀಯ ಜನರು ಇದನ್ನು ದೈವಿಕ ಪವಾಡವೆಂದೇ ಪರಿಗಣಿಸುತ್ತಿದ್ದಾರೆ. ಅಷ್ಟೇ ಅಲ್ಲ, ಭಕ್ತಿಯಿಂದ ಪೂಜಿಸಲು ಪ್ರಾರಂಭಿಸಿದ್ದಾರೆ. ಅಂದಹಾಗೆ ಈ ಮರವು ಸುಮಾರು 500 ವರ್ಷಗಳಷ್ಟು ಹಳೆಯದು ಎಂದು ಹೇಳಲಾಗುತ್ತದೆ. ಬ್ರಹ್ಮ ಸ್ಥಾನವು ಅದರ ಸುತ್ತಲೂ ಇದ್ದು, ಇಲ್ಲಿ ಬಹಳ ಹಿಂದಿನಿಂದಲೂ ಹಬ್ಬದ ವಾತಾವರಣ ಇದೆ.

ಮರದ ಬೇರಿನಲ್ಲಿ ಪತ್ತೆಯಾದ ನಾಗ ದೇವರ ಆಕೃತಿ
ಈಗ ಮುಜಫರ್‌ಪುರದಲ್ಲಿರುವ ಈ ಮರದ ಬೇರಿನಿಂದ ಹೊರಹೊಮ್ಮಿರುವ ಆಕೃತಿಯನ್ನು 'ನಾಗ ದೇವರು' ಎಂದು ನೋಡಲಾಗುತ್ತಿದೆ. ಇದನ್ನು ಗ್ರಾಮಸ್ಥರು ಶುಭ ಸಂಕೇತವೆಂದು ಪರಿಗಣಿಸುತ್ತಿದ್ದಾರೆ. "ನಮ್ಮ ಜೀವನದಲ್ಲಿಯೇ ಮೊದಲ ಬಾರಿಗೆ ನಾವು ಇಂತಹ ಆಕೃತಿಯನ್ನು ನೋಡಿದ್ದೇವೆ" ಎಂದು ಸ್ಥಳೀಯ ನಿವಾಸಿ ಸಂತೋಷ್ ಕುಮಾರ್ ಹೇಳುತ್ತಿದ್ದಾರೆ. "ಇದು ಖಂಡಿತವಾಗಿಯೂ ಒಂದು ಪವಾಡ. ನಾವು ಇದನ್ನು ದೇವರ ಸಂದೇಶವೆಂದು ಪರಿಗಣಿಸುತ್ತಿದ್ದೇವೆ. ಗ್ರಾಮದ ಅನೇಕ ಜನರು ಈಗ ಪ್ರತಿದಿನ ಇಲ್ಲಿಗೆ ದೀಪಗಳನ್ನು ಬೆಳಗಿಸುವ ಮೂಲಕ ಪೂಜೆ ಮತ್ತು ಪ್ರಾರ್ಥನೆ ಸಲ್ಲಿಸಲು ಬರುತ್ತಿದ್ದಾರೆ" ಎಂದು ಅವರು ಹೇಳಿದ್ದಾರೆ.

ಪೂಜೆಯಲ್ಲಿ ತೊಡಗಿರುವ ಜನರು
ಘಟನೆಯ ಸುದ್ದಿ ಹರಡುತ್ತಿದ್ದಂತೆ, ಮಹಿಳೆಯರು, ಮಕ್ಕಳು, ವೃದ್ಧರು ಮತ್ತು ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ದರ್ಶನಕ್ಕಾಗಿ ಬರಲು ಪ್ರಾರಂಭಿಸಿದ್ದಾರೆ. ವಾತಾವರಣವು ಸಂಪೂರ್ಣವಾಗಿ ದೈವಿಕವಾಗಿದೆ. ವರ್ಷಗಳ ಹಿಂದೆಯೂ ಸಹ, ನಾಗ ದೇವರ ದರ್ಶನದ ಕಥೆಗಳು ಇಲ್ಲಿ ಕೇಳಿಬಂದವು ಮತ್ತು ಈಗ ಆ ನಂಬಿಕೆ ಪುನರುಜ್ಜೀವನಗೊಂಡಿದೆ ಎಂದು ಗ್ರಾಮಸ್ಥರು ಹೇಳುತ್ತಾರೆ.

Scroll to load tweet…

ಮೊದಲ ಮರದ ಮೇಲೆ ಅರಳಿದೆ ಕಮಲ
ಇದಕ್ಕೂ ಮೊದಲು, ಮುಜಫರ್‌ಪುರದ ಕುಧ್ನಿ ಬ್ಲಾಕ್‌ನ ಛಜನ್ ಗ್ರಾಮದಲ್ಲಿ ಒಂದು ಅಶ್ವತ್ಥ ಮರದ ಮೇಲೆ ಕಮಲದಂತಹ ಹೂವು ಕಾಣಿಸಿಕೊಂಡಿತು , ಇದರಿಂದಾಗಿ ಅಲ್ಲಿ ಅಪಾರ ಜನಸಮೂಹ ಜಮಾಯಿಸಿತ್ತು. ಪ್ರಸ್ತುತ, ಕಾಂತಿ ಬ್ಲಾಕ್‌ನಲ್ಲಿರುವ ಈ ಸ್ಥಳವು ಗ್ರಾಮಸ್ಥರ ನಂಬಿಕೆಯ ಕೇಂದ್ರವಾಗಿದೆ, ಇಲ್ಲಿ ದಿನವಿಡೀ ಪೂಜೆ, ಪಠಣ ಮತ್ತು ಭಜನೆ-ಕೀರ್ತನೆಗಳು ನಡೆಯುತ್ತಿವೆ. ಭಕ್ತರ ಗುಂಪನ್ನು ನಿಯಂತ್ರಿಸಲು ಮತ್ತು ಭದ್ರತೆಯನ್ನು ಕಾಪಾಡಿಕೊಳ್ಳಲು ಸ್ಥಳೀಯ ಆಡಳಿತವು ಪರಿಸ್ಥಿತಿಯ ಮೇಲ್ವಿಚಾರಣೆ ನಡೆಸುತ್ತಿದೆ.

ಒಟ್ಟು 7 ಹಾವುಗಳಿಗೆ ಪೂಜೆ
ನಮಗೆಲ್ಲರಿಗೂ ಗೊತ್ತಿರುವ ಹಾಗೆ ಬ್ರಹ್ಮಾಂಡದ ಮೂವರು ಸೃಷ್ಟಿಕರ್ತರಲ್ಲಿ ಇಬ್ಬರಾದ ಶಿವ ಮತ್ತು ವಿಷ್ಣು ಹಾವುಗಳ ಚಿಹ್ನೆಗಳನ್ನು ಹೊಂದಿದ್ದಾರೆ. ಶಿವನು ತನ್ನ ಕುತ್ತಿಗೆಗೆ ಅಲಂಕಾರವಾಗಿ ವಾಸುಕಿಯನ್ನು ಧರಿಸಿದರೆ, ವಿಷ್ಣು ಶೇಷನಾಗನ ಮೇಲೆ ಮಲಗಿದ್ದಾನೆ. ಭಾರತದಲ್ಲಿ ಹಾವುಗಳನ್ನು ದೇವರೆಂದು ಪೂಜಿಸಲಾಗುತ್ತದೆ. ನಿಜ ಜೀವನದಲ್ಲಿ ಹಾವುಗಳು ಭಯಾನಕ ಜೀವಿಗಳಾಗಿದ್ದರೂ, ಅವು ಫಲವತ್ತತೆ, ಶಕ್ತಿ ಮತ್ತು ರಕ್ಷಣೆಯ ಸಂಕೇತಗಳಾಗಿವೆ. ಹಿಂದೂ ಧರ್ಮದಲ್ಲಿ, ಹಾವನ್ನು ಕೊಲ್ಲುವುದು ಪಾಪವೆಂದು ಪರಿಗಣಿಸಲಾಗುತ್ತದೆ ಮತ್ತು ಹಾಗೆ ಮಾಡುವ ಜನರು ದುರದೃಷ್ಟಕ್ಕೆ ಸಿಲುಕುವ ಸಾಧ್ಯತೆಯಿದೆ. ಭಾರತದಲ್ಲಿ ಹಾವುಗಳನ್ನು ಹಿಂದೂ ಪುರಾಣಗಳಲ್ಲಿ ದೇವರುಗಳು ಎಂದು ಚಿತ್ರಿಸಲಾಗಿದೆ. ಭಾರತದಲ್ಲಿ ಒಟ್ಟು 7 ಹಾವುಗಳನ್ನು ಪೂಜಿಸಲಾಗುತ್ತದೆ.

ಪುರಾಣಗಳ ಪ್ರಕಾರ, ಶೇಷನಾಗನು ತನ್ನ ವಿಶಾಲವಾದ ಹೆಡೆಗಳ ಮೇಲೆ ವಿಶ್ವದ ಎಲ್ಲಾ ಗ್ರಹಗಳನ್ನು ಹಿಡಿದಿಟ್ಟುಕೊಳ್ಳುತ್ತಾನೆ. ಒಂದು ವೇಳೆ ಅವನು ಸುರುಳಿಯನ್ನು ಬಿಚ್ಚಿದರೆ ಸಮಯವು ಮುಂದೆ ಚಲಿಸಲು ಪ್ರಾರಂಭಿಸುತ್ತದೆ ಮತ್ತು ಸೃಷ್ಟಿ ನಡೆಯಲು ಪ್ರಾರಂಭವಾಗುತ್ತದೆ. ಅದು ಸುರುಳಿಯಾಕಾರದ ಸ್ಥಾನಕ್ಕೆ ಹಿಂತಿರುಗಿದಾಗ, ಸಮಯವು ನಿಲ್ಲುತ್ತದೆ ಮತ್ತು ವಿಶ್ವವು ಅಸ್ತಿತ್ವದಲ್ಲಿರಲ್ಲ ಎಂದು ಹೇಳಲಾಗುತ್ತದೆ.