Snake Dream: ಕನಸಲ್ಲಿ ಹಾವು ಕಚ್ಚಿದ್ರೆ ಮುಂದಾಗಲಿರೋ ಅನಾಹುತದ ಸೂಚನೆನಾ?

ಹಾವನ್ನು ಎದುರಿಗೆ ಕಂಡರೆ ಹೌಹಾರುವುದಿರಲಿ, ಅದು ಕನಸಿನಲ್ಲಿ ಕಂಡರೂ ಹೆದರಿ ಕಿರುಚುವವರಿದ್ದಾರೆ. ಕನಸಿನಲ್ಲಿ ಹಾವು ಕಾಣಿಸುವುದು ಅಪರೂಪವೇನಲ್ಲ. ಹೀಗೆ ಕಾಣಿಸಿಕೊಂಡಾಗ ಬಹುತೇಕರು ಅದು ದೇವರ ಸೂಚನೆಯೇನೋ ಎಂದು ಗೊಂದಲಕ್ಕೆ ಬೀಳುತ್ತಾರೆ. ಈ ರೀತಿ ಹಾವು ಕನಸಿನಲ್ಲಿ ಕಂಡರೆ ಅದರರ್ಥ ಏನು? ಅದು ಏನು ಸೂಚನೆ ಕೊಡುತ್ತಿದೆ ನೋಡೋಣ. 

This is the meaning of snake bite in dream skr

ಹಾವೆಂದರೆ ಭಯ ಪಡದವರು ಅಪರೂಪ. ಹಾವು ತನ್ನ ಭುಸುಗುಡುವಿಕೆಯಿಂದಲೇ ಯಾರನ್ನಾದರೂ ಬೆದರಿಸಬಲ್ಲ ಸಾಮರ್ಥ್ಯದ್ದು. ಹಿಂದೂಗಳು ಹಾವನ್ನು ದೇವರೆಂದೇ ಭಾವಿಸಿ ಪೂಜಿಸುತ್ತಾರೆ. ನಮ್ಮಲ್ಲ ಪೂಜೆಗಳಲ್ಲಿ, ಧಾರ್ಮಿಕ ಕಾರ್ಯಗಳಲ್ಲಿ ಸರ್ಪಕ್ಕೆ ವಿಶೇಷ ಸ್ಥಾನವಿದೆ. ಜಾತಕದಲ್ಲಿ ಕೂಡಾ ಸರ್ಪದೋಷವಿದ್ದರೆ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಹಾವುಗಳಿಗೆ ಸಂಬಂಧಿಸಿದಂತೆ ಕನಸು ಬಿದ್ದರೆ ಜನ ಭಯಭೀತರಾಗುತ್ತಾರೆ. ಕೆಲವೊಮ್ಮೆ ಕಾಳ ಸರ್ಪ ದೋಷವಿದ್ದರೆ ಆಗ ಹಾವಿನ ಕನಸು ಬೀಳುತ್ತದೆ ಎಂಬ ನಂಬಿಕೆಯೂ ಇದೆ. ಹೀಗಾಗಿ, ಹಾವಿನ ಕನಸು ಬೀಳುತ್ತಿದ್ದಂತೆ ನಾಗರಕಟ್ಟೆಗೆ ಪೂಜೆ ಮಾಡಿಸುವ ಅಭ್ಯಾಸ ಸಾಮಾನ್ಯವಾಗಿದೆ. ಸುಬ್ರಹ್ಮಣ್ಯಕ್ಕೆ ಹರಕೆ ಹೊತ್ತುಕೊಳ್ಳುವವರೂ ಇದ್ದಾರೆ. 

ಆದರೆ, ನಿಜವಾಗಿ ಕನಸಿನಲ್ಲಿ ಹಾವನ್ನು ಕಂಡರೆ ಅದರರ್ಥ ಏನು ನೋಡೋಣ. ಹಾವುಗಳಿಗೆ ಸಂಬಂಧಿಸಿದ ಕೆಲವು ಕನಸುಗಳು ಮಂಗಳಕರ ಅರ್ಥವನ್ನು ಹೊಂದಿದ್ದರೆ ಕೆಲವನ್ನು ಅಶುಭವೆಂದು ಪರಿಗಣಿಸಲಾಗುತ್ತದೆ. 
 
ಕನಸಿನಲ್ಲಿ ಹಾವು ಕಚ್ಚುವುದು 

ಪ್ರತಿಯೊಬ್ಬರೂ ಹಾವುಗಳನ್ನು ಕಂಡರೆ ಭಯ ಪಡುತ್ತಾರೆ- ಅದು ಕನಸಿನಲ್ಲೇ ಆಗಿರಲಿ ಅಥವಾ ವಾಸ್ತವದಲ್ಲಿರಲಿ. ಕನಸಿನಲ್ಲಿ ಹಾವು ಯಾರನ್ನಾದರೂ ಕಚ್ಚಿದರೆ, ಮುಂಬರುವ ದಿನಗಳಲ್ಲಿ ಅವನಿಗೆ ಗಂಭೀರ ಕಾಯಿಲೆ ಬರಬಹುದು ಎಂದು ಕನಸಿನ ಪುಸ್ತಕದಲ್ಲಿ ಹೇಳಲಾಗಿದೆ. ಮತ್ತೊಂದೆಡೆ, ಕನಸಿನಲ್ಲಿ ಹಾವು ನಿಮ್ಮ ಹಿಂದೆ ಬಿದ್ದಿದ್ದರೆ ಮತ್ತು ನಿಮ್ಮನ್ನು ಕಚ್ಚಲು ಸಾಧ್ಯವಾಗದಿದ್ದರೆ, ನಿಜ ಜೀವನದಲ್ಲಿ ನಿಮ್ಮ ಕೆಲವು ದೊಡ್ಡ ಸಮಸ್ಯೆಗಳು ಕೊನೆಗೊಳ್ಳಲಿವೆ ಮತ್ತು ನೀವು ಕೆಲವು ದೊಡ್ಡ ಯಶಸ್ಸನ್ನು ಪಡೆಯಬಹುದು ಎಂದು ಅರ್ಥ ಮಾಡಿಕೊಳ್ಳಿ.

Vastu Healthy Life: ಕುಟುಂಬದ ಆರೋಗ್ಯಕ್ಕಾಗಿ ವಾಸ್ತು ಸಲಹೆಗಳು..

ಕನಸಿನಲ್ಲಿ ಹಾವಿನ ಹಲ್ಲುಗಳು
ನಿಮ್ಮ ಕನಸಿನಲ್ಲಿ ಹಾವು ಬಾಯಿ ತೆರೆದು ಅದರ ಹಲ್ಲುಗಳು ಗೋಚರಿಸುವುದನ್ನು ನೀವು ನೋಡಿದರೆ, ಮುಂಬರುವ ದಿನಗಳಲ್ಲಿ ನಿಮಗೆ ಏನಾದರೂ ತುಂಬಾ ಅಶುಭ ಸಂಭವಿಸಲಿದೆ ಎಂದು ನಂಬಲಾಗಿದೆ. ಅಂತಹ ಪರಿಸ್ಥಿತಿಯಲ್ಲಿ, ನೀವು ಜಾಗರೂಕರಾಗಿರಬೇಕು. ಯಾರಾದರೂ ನಿಮ್ಮನ್ನು ಮೋಸಗೊಳಿಸಬಹುದು ಅಥವಾ ವ್ಯವಹಾರದಲ್ಲಿ ದೊಡ್ಡ ನಷ್ಟ ಉಂಟಾಗಬಹುದು.

ಕನಸಿನಲ್ಲಿ ಬಿಳಿ ಹಾವು ನೋಡಿದರೆ
ನಿಮ್ಮ ಕನಸಿನಲ್ಲಿ ಬಿಳಿ ಬಣ್ಣದ ಹಾವು ಕಾಣಿಸಿಕೊಂಡರೆ, ಅಂತಹ ಕನಸನ್ನು ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಅಂತಹ ಕನಸು ಬಂದರೆ, ಶೀಘ್ರದಲ್ಲೇ ಬಹಳಷ್ಟು ಹಣವು ವ್ಯಕ್ತಿಯ ಕೈಗೆ ಬರಲಿದೆ ಎಂಬ ಸೂಚನೆಯಾಗಿದೆ. ಅವರು ಹಣಕಾಸಿನ ಲಾಭದೊಂದಿಗೆ ವ್ಯಾಪಾರದಲ್ಲಿ ಪ್ರಗತಿಯನ್ನು ಪಡೆಯುತ್ತಾರೆ. ಅಂತಹ ಕನಸುಗಳು ಬಂದಾಗ ನೀವು ಸಂತೋಷವಾಗಿರಬೇಕು.

ಕನಸಿನಲ್ಲಿ ಹಾವನ್ನು ಕೊಲ್ಲುವುದು
ಕನಸಿನಲ್ಲಿ ಹಾವನ್ನು ಕೊಲ್ಲುವುದನ್ನು ನೀವು ನೋಡಿದರೆ, ಅಂತಹ ಕನಸುಗಳ ಅರ್ಥವನ್ನು ಒಳ್ಳೆಯದು ಎಂದು ಪರಿಗಣಿಸಲಾಗುತ್ತದೆ. ಇದರರ್ಥ ಮುಂಬರುವ ದಿನಗಳಲ್ಲಿ ನಿಮ್ಮ ಕೆಲವು ಪ್ರಮುಖ ಅಡೆತಡೆಗಳು ನಿವಾರಣೆಯಾಗಲಿವೆ ಮತ್ತು ನೀವು ಶತ್ರುಗಳ ಮೇಲೆ ವಿಜಯವನ್ನು ಪಡೆಯುತ್ತೀರಿ. ಬಹು ಕಾಲದಿಂದ ಬಾಕಿ ಉಳಿದಿರುವ ಯಾವುದೇ ಕೆಲಸಗಳು ಪೂರ್ಣಗೊಳ್ಳಲಿವೆ.

ಈ ದೇವಾಲಯಗಳಲ್ಲಿ ಪುರುಷರಿಗೆ ಪ್ರವೇಶವಿಲ್ಲ!

ಕನಸಿನಲ್ಲಿ ಅನೇಕ ಹಾವುಗಳನ್ನು ಒಟ್ಟಿಗೆ ನೋಡುವುದು
ಅನೇಕ ಹಾವುಗಳನ್ನು ಒಟ್ಟಿಗೆ ನೋಡುವಂತಹ ಕನಸನ್ನು ನೀವು ಹೊಂದಿದ್ದರೆ, ಈ ಕನಸನ್ನು ತುಂಬಾ ಅಶುಭವೆಂದು ಪರಿಗಣಿಸಲಾಗುತ್ತದೆ. ಅಂತಹ ಕನಸು ಕಂಡರೆ ನಿಜ ಜೀವನದಲ್ಲಿ ಅನೇಕ ಸಮಸ್ಯೆಗಳು ನಿಮ್ಮನ್ನು ಸುತ್ತುವರೆದಿರುತ್ತವೆ ಎಂಬುದರ ರೂಪಕವಾಗಿರುತ್ತದೆ. ಅಥವಾ ನಿಮ್ಮ ಜೀವನದಲ್ಲಿ ಹಣಕಾಸಿನ ಸಮಸ್ಯೆಗಳು ಹೆಚ್ಚಾಗಲಿವೆ, ನಿಮ್ಮ ಹಣದ ಕಾರಣದಿಂದಾಗಿ ಅನೇಕ ಕೆಲಸಗಳು ಅಪೂರ್ಣವಾಗಿ ಉಳಿಯುತ್ತವೆ ಎಂದೂ ತಿಳಿಯಬಹುದು.

ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣ ನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.

Latest Videos
Follow Us:
Download App:
  • android
  • ios