International Snake Day: ಶಿವಮೊಗ್ಗದಲ್ಲಿ ಪ್ರತ್ಯಕ್ಷವಾಯಿತು ಬಿಳಿ ನಾಗರ!
ಶ್ರಾವಣ ಮಾಸ ಆರಂಭವಾಗುತ್ತದೆ. ನಾಗರ ಪಂಚಮಿಯ ಸಂಭ್ರಮ ಎಲ್ಲೆಡೆ ಶುರುವಾಗುತ್ತದೆ. ಅಲ್ಲದೇ ಇವತ್ತು ಅಂತಾರಾಷ್ಟ್ರೀ ಉರಗ ದಿನವೂ ಹೌದು. ಇಂಥ ಹೊತ್ತಲ್ಲಿ ಶಿವಮೊಗ್ಗದಲ್ಲಿ ಕಾಣಿಸಿಕೊಂಡ ಬಿಳಿ ನಾಗರ ಎಲ್ಲರನ್ನೂ ಆಶ್ಚರ್ಯಗೊಳಿಸಿದೆ.
ವರದಿ: ರಾಜೇಶ್ ಕಾಮತ್ ಶಿವಮೊಗ್ಗ
ಶಿವಮೊಗ್ಗ(ಜು.16): ಇಂದು ವಿಶ್ವ ಹಾವುಗಳ ದಿನಾಚರಣೆ (World Snake Day) ಆಚರಿಸಲಾಗುತ್ತಿದೆ. ಮಾನವನ ಆಹಾರ ಸರಪಳಿಯಲ್ಲಿ ಹಾವುಗಳ ಪಾತ್ರ ಬಹುಮುಖ್ಯವಾಗಿ ದೆಸಹಜವಾಗಿ ಮಾಂಸಹಾರಿ ಆಗಿರುವ ಹಾವುಗಳು ಹೊಲಗದ್ದೆಗಳಲ್ಲಿ ಇಲ್ಲಿ , ಮೊಟ್ಟೆ ಸೇರಿದಂತೆ ಸಣ್ಣಪುಟ್ಟ ಪ್ರಾಣಿಗಳನ್ನು ತಿಂದು ಬದುಕುವ ಹಾವುಗಳ ಮಾನವನ ಸಹಜೀವಿಯಂತೆ ಬದುಕಿ ಕೃಷಿ ಬದುಕಿನ ಭಾಗವಾಗಿವೆ. ಇಂತಹ ಸಂದರ್ಭದಲ್ಲಿ ವಿಶ್ವ ಹಾವುಗಳ ದಿನಾಚರಣೆ ದಿನದಂದು ಶಿವಮೊಗ್ಗದಲ್ಲಿ ಅಪರೂಪದಲ್ಲಿ ಅಪರೂಪ ಅಲ್ಬೆನ್ ಎಂದು ಕರೆಯಲ್ಪಡುವ ಬಿಳಿ ನಾಗರ ಹಾವೊಂದು ಪತ್ತೆಯಾಗಿದೆ. ಶಿವಮೊಗ್ಗ ತಾಲೂಕಿನ ರಾಮೇನಕೊಪ್ಪ ಗ್ರಾಮದ ತೋಟವೊಂದರಲ್ಲಿ ಬಿಳಿ ನಾಗರ ಕಾಣಿಸಿಕೊಂಡಿತ್ತು
ಇದನ್ನೂ ಓದಿ: ಎಚ್ಚರ ಎಚ್ಚರ : ಸುರಿಯುವ ಮಳೆಗೆ ಶೂ ಒಳಗೆ ಬೆಚ್ಚಗೆ ಮಲಗಿದ ನಾಗರಹಾವು
ರಂಗಪ್ಪ ಗೌಡ (Lingappa gowda) ಎಂ ಬುವವರ ತೋಟದ ಮನೆಯಲ್ಲಿನ ಕಟ್ಟಿಗೆ ಒಳಗೆ ಸೇರಿಕೊಂಡಿದ್ದ ಬಿಳಿ ನಾಗರ (white indian cobra)
ಸುಮಾರು ಮೂರುವರೆ ಅಡಿ ಉದ್ದವಿದ್ದು ಕಳೆದೊಂದು ವಾರದಿಂದ ಮನೆಯ ಸುತ್ತಲೂ ಸುತ್ತುತ್ತಿದ್ದ . ಇಂದು ಉರಗ ತಜ್ಞ ಸ್ನೇಕ್ ಕಿರಣ್ ರಿಂದ ಬಿಳಿ ನಾಗರ ರಕ್ಷಣೆ ಮಾಡಿ ಅರಣ್ಯ ಇಲಾಖೆಯ (forest depertment) ಮೂಲಕ ಕಾಡಿಗೆ ಬಿಡಲಾಯಿತು. ಕಳೆದ ನಾಲ್ಕು ವರ್ಷಗಳ ಹಿಂದೆ ಶಿವಮೊಗ್ಗದ ಮಂಡ್ಲಿ ಬಳಿ ಒಮ್ಮೆ ಬಿಳಿ ನಾಗರ ಕಾಣಿಸಿಕೊಂಡಿತ್ತು. ಇದು ಶಿವಮೊಗ್ಗದಲ್ಲಿ ಪ್ರತ್ಯಕ್ಷವಾದ ಎರಡನೇ ಬಿಳಿ ನಾಗರ ಎನ್ನಲಾಗಿದೆ.
ನಾಗಪಂಚಮಿ ಮಹತ್ವ:
ಹಿಂದು ಹಬ್ಬಗಳಲ್ಲಿ ನಾಗಪಂಚಮಿಗೆ ವಿಶೇಷ ಮಹತ್ವವಿದೆ. ಹಾಗಾಗಿಯೇ ನಾಗರಪಂಚಮಿ ನಾಡಿಗೆ ದೊಡ್ಡದು ಎನ್ನಲಾಗುತ್ತಿದೆ. ಶ್ರಾವಣ ಮಾಸದಲ್ಲಿ ಬರುವ ನಾಗಪಂಚಮಿ ಹಬ್ಬವು ಶಿವನ ಆರಾಧನೆಗೆ ಮಹತ್ವದ್ದಾಗಿದೆ. ಶ್ರವಣ ಮಾಸವನ್ನು ಅತ್ಯಂತ ಪವಿತ್ರವೆಂದು ಪರಿಗಣಿಸಲಾಗಿದೆ. ಈ ತಿಂಗಳಲ್ಲಿ ಭಕ್ತಿ, ಶ್ರದ್ಧೆಯಿಂದ ನಾಗನ ಪೂಜೆ ನಡೆಸಲಾಗುತ್ತದೆ. ಈ ದಿನದಂದು ವಿಶೇಷ ವಿಧಿ ವಿಧಾನಗಳಿಂದ ನಾಗದೇವತೆಯನ್ನು ಪೂಜಿಸಲಾಗುತ್ತದೆ.
ಇದನ್ನೂ ಓದಿ: ಪಿವಿಸಿ ಪೈಪ್ ನುಂಗಿದ ಹಾವು, ಮುಂದೇನಾಯ್ತು ನೋಡಿ
ನಾಗರ ಪಂಚಮಿ ದಿನಾಂಕ ಮತ್ತು ಶುಭ ಸಮಯ : ಶ್ರಾವಣ ಮಾಸದಲ್ಲಿ ನಾಗರ ಪಂಚಮಿ ಹಬ್ಬವನ್ನು ಶುಕ್ಲ ಪಕ್ಷದ ಪಂಚಮಿ ದಿನದಂದು ಆಚರಿಸಲಾಗುತ್ತದೆ. ಈ ಬಾರಿ ನಾಗರ ಪಂಚಮಿಯನ್ನು ಆಗಸ್ಟ್ 2 ರಂದು ಆಚರಿಸಲಾಗುತ್ತದೆ. ಆಗಸ್ಟ್ 2 ರಂದು ಬೆಳಗ್ಗೆ 5 ಗಂಟೆ 14 ನಿಮಿಷದಿಂದ ಪಂಚಮಿ ತಿಥಿ ಪ್ರಾರಂಭವಾಗುತ್ತಿದೆ. ಆಗಸ್ಟ್ 3 ರಂದು ಬೆಳಿಗ್ಗೆ 5 ಗಂಟೆ 42 ಕ್ಕೆ ಪಂಚಮಿ ತಿಥಿ ಮುಕ್ತಾಯವಾಗುತ್ತದೆ. ನಾಗರ ಪಂಚಮಿ ಮುಹೂರ್ತದ ಅವಧಿ 2 ಗಂಟೆ 41 ನಿಮಿಷವಿರುತ್ತದೆ. ಬೆಳಿಗ್ಗೆ 5 ಗಂಟೆ 42 ನಿಮಿಷದಿಂದ 8 ಗಂಟೆ 24 ನಿಮಿಷದವರೆಗೆ ಪೂಜೆ ಮಾಡಲು ಒಳ್ಳೆ ಮುಹೂರ್ತವಿದೆ.
ಇದನ್ನೂ ಓದಿ: ಅಪರೂಪದ ಎರಡು ತಲೆಯ ಹಾವಿನ ರಕ್ಷಣೆ
ನಾಗರಪಂಚಮಿಯಂದು ತಪ್ಪದೇ ಈ ಕೆಲಸ ಮಾಡಿ:
ಹಿಂದು ಧಾರ್ಮಿಕ ನಂಬಿಕೆಗಳ ಪ್ರಕಾರ, ನಾಗರ ಪಂಚಮಿಯ ದಿನದಂದು ಬೆಳ್ಳಿಯಿಂದ ಮಾಡಿದ ನಾಗ-ನಾಗಿಣಿ ಮೂರ್ತಿಗೆ ಪೂಜೆಯನ್ನು ಶ್ರದ್ಧೆ, ಭಕ್ತಿಯಿಂದ ಮಾಡಬೇಕು ಬಳಿಕ ಅದನ್ನು ಹರಿಯುವ ಶುದ್ಧ ನೀರಿನಲ್ಲಿ ತೇಲಿ ಬಿಡಬೇಕು. ನಿಮಗೆ ಸಾಧ್ಯವಾದರೆ ಶಿವನ ವಿಗ್ರಹದ ಮೇಲೆ ನಾಗನಿಲ್ಲದ ದೇವಸ್ಥಾನಕ್ಕೆ ಹೋಗಿ ಅಲ್ಲಿ ನಾಗರ ಸ್ಥಾಪನೆ ಮಾಡಿ. ಏಕೆಂದರೆ ಹೀಗೆ ಮಾಡುವುದರಿಂದ ನಾಗ ದೇವರ ಆಶೀರ್ವಾದ ಲಭಿಸುತ್ತದೆ. ಮನೆಯಲ್ಲಿ ಶಾಂತತೆ ತುಂಬುತ್ತದೆ ಎಂಬ ನಂಬಿಕೆ ಇದೆ.