Asianet Suvarna News Asianet Suvarna News

ಪಂಚರಾಜ್ಯ ಚುನಾವಣೆ: ಮಧ್ಯ ಪ್ರದೇಶ, ಛತ್ತೀಸ್‌ಗಢ ಕೈ ಪಾಲು, ರಾಜಸ್ಥಾನ ಬಿಜೆಪಿಗೆ: ಸಮೀಕ್ಷೆ

ಪಂಚರಾಜ್ಯ ಚುನಾವಣೆ ಘೋಷಣೆ ಆಗುತ್ತಿದ್ದಂತೆಯೇ ಎಬಿಪಿ ನ್ಯೂಸ್‌-ಸಿ ವೋಟರ್‌ ಚುನಾವಣಾ ಪೂರ್ವ ಸಮೀಕ್ಷೆ ಪ್ರಕಟಿಸಿದ್ದು, ಮಧ್ಯಪ್ರದೇಶ, ಛತ್ತೀಸ್‌ಗಢ ಕಾಂಗ್ರೆಸ್‌, ರಾಜಸ್ಥಾನ ಬಿಜೆಪಿ ಪಾಲಾಗಲಿವೆ. ತೆಲಂಗಾಣ ಹಾಗೂ ಮಿಜೋರಂನಲ್ಲಿ ಅತಂತ್ರ ವಿಧಾನಸಭೆ ಸೃಷ್ಟಿ ಆಗಲಿದೆ ಎಂದು ಭವಿಷ್ಯ ನುಡಿದಿವೆ.

Five State Elections ABP News C Voter Pre Election Survey congress wins in Madhya Pradesh, Chhattisgarh lotus will bloom in Rajasthan akb
Author
First Published Oct 10, 2023, 11:35 AM IST

ನವದೆಹಲಿ: ಪಂಚರಾಜ್ಯ ಚುನಾವಣೆ ಘೋಷಣೆ ಆಗುತ್ತಿದ್ದಂತೆಯೇ ಎಬಿಪಿ ನ್ಯೂಸ್‌-ಸಿ ವೋಟರ್‌ ಚುನಾವಣಾ ಪೂರ್ವ ಸಮೀಕ್ಷೆ ಪ್ರಕಟಿಸಿದ್ದು, ಮಧ್ಯಪ್ರದೇಶ, ಛತ್ತೀಸ್‌ಗಢ ಕಾಂಗ್ರೆಸ್‌, ರಾಜಸ್ಥಾನ ಬಿಜೆಪಿ ಪಾಲಾಗಲಿವೆ. ತೆಲಂಗಾಣ ಹಾಗೂ ಮಿಜೋರಂನಲ್ಲಿ ಅತಂತ್ರ ವಿಧಾನಸಭೆ ಸೃಷ್ಟಿ ಆಗಲಿದೆ ಎಂದು ಭವಿಷ್ಯ ನುಡಿದಿವೆ.

ಮಧ್ಯಪ್ರದೇಶ: 230 ಸ್ಥಾನ ಇರುವ ಮಧ್ಯಪ್ರದೇಶದಲ್ಲಿ (Madhya Pradesh) ಕಾಂಗ್ರೆಸ್‌ 119 ಸ್ಥಾನ ಗೆದ್ದು ಸ್ಪಷ್ಟ ಬಹುಮತ ಪಡೆಯಲಿದೆ. ಬಿಜೆಪಿ 110ರಲ್ಲಿ ಗೆಲ್ಲಲಿವೆ ಎಂದು ಸಮೀಕ್ಷೆ ಹೇಳಿದೆ. ಹಾಲಿ ಇಲ್ಲಿ ಬಿಜೆಪಿ ಅಧಿಕಾರದಲ್ಲಿದೆ.

ಛತ್ತೀಸ್‌ಗಢ: 90 ಸ್ಥಾನ ಇರುವ ಛತ್ತೀಸ್‌ಗಢದಲ್ಲಿ (Chattisgarh) ಆಡಳಿತ ವಿರೋಧಿ ಅಲೆ ಮೆಟ್ಟಿ ನಿಂತು ಕಾಂಗ್ರೆಸ್‌ 48 ಸ್ಥಾನ ನೆಲ್ಲಲಿದೆ. ಬಿಜೆಪಿ 40 ಸೀಟು ಗೆಲ್ಲಬಹುದು ಎಂದು ಅಂದಾಜಿಸಲಾಗಿದೆ.

ದೇಶದ ನಿರುದ್ಯೋಗ ಪ್ರಮಾಣ 6 ವರ್ಷಗಳ ಕನಿಷ್ಠಕ್ಕೆ: ಸಮೀಕ್ಷೆ

ರಾಜಸ್ಥಾನ: 200 ಸೀಟು ಇರುವ ರಾಜಸ್ಥಾನದಲ್ಲಿ (Rajasthan) ಬಿಜೆಪಿ 132 ಸೀಟು ಗೆದ್ದು ಕಾಂಗ್ರೆಸ್‌ನಿಂದ ಅಧಿಕಾರ ಕೀಳಲಿದೆ. ಕಾಂಗ್ರೆಸ್‌ 64 ಸ್ಥಾನ ಗಳಿಸಲಿದೆ ಎಂದು ಸಮೀಕ್ಷೆ ಹೇಳಿದೆ.

ತೆಲಂಗಾಣ: 119 ಸ್ಥಾನಗಳ ತೆಲಂಗಾಣದಲ್ಲಿ ಅತಂತ್ರ ವಿಧಾನಸಭೆ ಸೃಷ್ಟಿ ಆಗಲಿದ್ದು, ಆಡಳಿತಾರೂಢ ಬಿಆರ್‌ಎಸ್‌ (BRS) 49 ಸ್ಥಾನ ಗಳಿಸಲಿದೆ. ಕಾಂಗ್ರೆಸ್‌ ಇಲ್ಲಿ ಪುಟಿದೆದ್ದು 54 ಸ್ಥಾನ ಗಳಿಸಲಿದೆ. ಇತರರು ಇಲ್ಲಿ ನಿರ್ಣಾಯಕ ಆಗಬಲ್ಲರು ಎನ್ನಲಾಗಿದೆ.

ಮಿಜೋರಂ: 40 ಸ್ಥಾನದ ಮಿಜೋರಂ ಅತಂತ್ರವಾಗಬಹುದು. ಆಡಳಿತಾರೂಢ ಎಂಎನ್‌ಎಪ್‌ 11 ಸ್ಥಾನಕ್ಕೆ ಕುಸಿಯಲಿದೆ. ಕಾಂಗ್ರೆಸ್‌ 12 ಹಾಗೂ ಝಡ್‌ಪಿಎಂ 11 ಸ್ಥಾನ ಗಳಿಸಬಹುದು ಎಂದು ಸಮೀಕ್ಷೆ ಹೇಳಿದೆ.

ನ.23ಕ್ಕೆ ರಾಜಸ್ಥಾನದಲ್ಲಿ 1 ಲಕ್ಷ ಮದುವೆ, ಅಂದು ಚುನಾವಣೆ ಬೇಡ: ಶೆಖಾವತ್

ಜೈಪುರ: ಕೇಂದ್ರ ಚುನಾವಣಾ ಆಯೋಗವು ಘೋಷಣೆ ಮಾಡಿರುವ ಪಂಚರಾಜ್ಯಗಳ ವಿಧಾನಸಭಾ ಚುನಾವಣೆಗಳ ಪೈಕಿ ನ.23ರಂದು ರಾಜಸ್ಥಾನ ಚುನಾವಣೆ ನಿಗದಿಯಾಗಿದ್ದು, ನ.23ರಂದೇ ರಾಜಸ್ಥಾನದಲ್ಲಿ ಬರೋಬ್ಬರಿ 1 ಲಕ್ಷ ಮದುವೆಗಳಿವೆ. ಹೀಗಾಗಿ ಅಂದು ಚುನಾವಣೆ ನಡೆಸುವುದು ಸೂಕ್ತವಲ್ಲ. ರಾಜ್ಯದಲ್ಲಿ ಚುನಾವಣಾ ದಿನಾಂಕವನ್ನು ಬದಲಾಯಿಸಿ ಎಂದು ರಾಜಸ್ಥಾನ ಬಿಜೆಪಿ ಮುಖಂಡ, ಕೇಂದ್ರ ಸಚಿವ ಗಜೇಂದ್ರ ಸಿಂಗ್‌ ಶೆಖಾವತ್‌ ಆಗ್ರಹಿಸಿದ್ದಾರೆ.

3 ರಾಜ್ಯಗಳಲ್ಲಿ ಟಿಕೆಟ್‌ ಘೋಷಣೆ ಮಾಡಿದ ಬಿಜೆಪಿ: ರಾಜಸ್ಥಾನದಲ್ಲಿ 7 ಮಂದಿ ಸಂಸದರು ಕಣಕ್ಕೆ

ಒಂದು ಲಕ್ಷ ಮದುವೆಯೆಂದರೆ ರಾಜ್ಯದ ಬಹುತೇಕ ಜನರು ಅಂದು ಮದುವೆ ಸಮಾರಂಭಗಳಲ್ಲಿ ತೊಡಗಿರುತ್ತಾರೆ. ಹೀಗಿರುವಾಗ ಮತದಾನ ತೀರಾ ಕನಿಷ್ಠಕ್ಕೆ ಕುಸಿತವಾಗಲಿದೆ. ಅಂದು ಜನರು ಮತದಾನಕ್ಕೆ ಮುಂದಾಗುವುದಿಲ್ಲ ಎಂಬುದು ಶೇಖಾವತ್‌ ಅವರ ಅಭಿಪ್ರಾಯವಾಗಿದೆ.

Follow Us:
Download App:
  • android
  • ios