ನಾಯಿಗೆ ಗುಂಡಿಕ್ಕಿ ಮನೆಗೆ ಬೆಂಕಿ ಹಚ್ಚಿ ಕ್ರೌರ್ಯ ತೋರಿದ ಹಮಾಸ್ ಉಗ್ರರು: ವೀಡಿಯೋ
ಯುದ್ಧಪೀಡಿತ ಇಸ್ರೇಲ್‌ನಲ್ಲಿ ಹಮಾಸ್ ಉಗ್ರರ ಅಮಾನವೀಯ ವರ್ತನೆಯ ಹಲವು ವೀಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಈಗಾಗಲೇ ವೈರಲ್ ಆಗಿವೆ. ಇಸ್ರೇಲ್ ಗಡಿಯಲ್ಲಿರುವ ಮನೆಯೊಂದಕ್ಕೆ ನುಗ್ಗಿದ ಹಮಾಸ್ ಉಗ್ರನೋರ್ವನನ್ನು ಹಿಮ್ಮೆಟ್ಟಿಸಲು ನೋಡಿದ ಬೀದಿ ನಾಯಿಯನ್ನು ಗುಂಡಿಕ್ಕಿ ಹತ್ಯೆ ಮಾಡಿದ ವೀಡಿಯೋವೊಂದು ವೈರಲ್ ಆಗಿದೆ.
ಜೆರುಸಲೇಂ: ಯುದ್ಧಪೀಡಿತ ಇಸ್ರೇಲ್‌ನಲ್ಲಿ ಹಮಾಸ್ ಉಗ್ರರ ಅಮಾನವೀಯ ವರ್ತನೆಯ ಹಲವು ವೀಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಈಗಾಗಲೇ ವೈರಲ್ ಆಗಿವೆ. ಇಸ್ರೇಲ್ ಗಡಿಯಲ್ಲಿರುವ ಮನೆಯೊಂದಕ್ಕೆ ನುಗ್ಗಿದ ಹಮಾಸ್ ಉಗ್ರನೋರ್ವನನ್ನು ಹಿಮ್ಮೆಟ್ಟಿಸಲು ನೋಡಿದ ಬೀದಿ ನಾಯಿಯನ್ನು ಗುಂಡಿಕ್ಕಿ ಹತ್ಯೆ ಮಾಡಿದ ವೀಡಿಯೋವೊಂದು ವೈರಲ್ ಆಗಿದೆ.
ಬಾಡಿಕ್ಯಾಮ್ (Bodycam) ಕ್ಯಾಮರಾದಲ್ಲಿ ಈ ವೀಡಿಯೋ ಸೆರೆ ಆಗಿದ್ದು, ನಾಯಿ ಮೊದಲಿಗೆ ಒಂದು ಗುಂಡು ತಾಗಿದ್ದರೂ ಶ್ವಾನ (dog) ಮತ್ತೆ ಎದ್ದು ಬಂದಾಗ ಮತ್ತೆರಡು ಬಾರಿ ನಾಯಿ ಮೇಲೆ ಗುಂಡು ಹಾರಿಸುತ್ತಾನೆ. ಈ ವೇಳೆ ನಾಯಿ ನೆಲಕ್ಕೆ ಕುಸಿದು ಪ್ರಾಣ ಬಿಡುವ ದೃಶ್ಯ ವೀಡಿಯೋದಲ್ಲಿದೆ. ಉಗ್ರರ ಇಂತಹ ಪೈಶಾಚಿಕ ಕೃತ್ಯಗಳಿಗೆ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ. ನಾಯಿಗೆ ಗುಂಡಿಕ್ಕಿ ಇಸ್ರೇಲಿಗರ ಮನೆಯೊಂದಕ್ಕೆ ನುಗ್ಗುವ ಉಗ್ರ ಅಲ್ಲಿದ್ದ ಪ್ರಿಡ್ಜ್‌ನ್ನು ತಲಾಶ್ ಮಾಡಿ ನಂತರ ಮನೆಗೆ ಬೆಂಕಿ ಹಚ್ಚುವ ದೃಶ್ಯ ಕ್ಯಾಮರಾದಲ್ಲಿ ಸೆರೆ ಆಗಿದೆ. ಈ ವೀಡಿಯೋವನ್ನು 7 ಮಿಲಿಯನ್‌ಗೂ ಹೆಚ್ಚು ಜನ ವೀಕ್ಷಿಸಿದ್ದು, ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹಮಾಸ್ ದಾಳಿಯಲ್ಲಿ 10 ನೇಪಾಳಿ ವಿದ್ಯಾರ್ಥಿಗಳು ಸಾವು
ಕಾಠ್ಮಂಡು: ಇಸ್ರೇಲ್‌ನ ದಕ್ಷಿಣ ಭಾಗದಲ್ಲಿ ಪ್ಯಾಲೆಸ್ತೀನಿ ಹಮಾಸ್ ಬಂಡುಕೋರರು ನಡೆಸಿದ ರಾಕೆಟ್ ದಾಳಿಯಲ್ಲಿ ನೇಪಾಳದ 10 ವಿದ್ಯಾರ್ಥಿಗಳು ಮೃತಪಟ್ಟಿದ್ದು ಇತರ ನಾಲ್ವರು ಗಾಯಗೊಂಡಿದ್ದಾರೆ ಎಂದು ನೇಪಾಳ ವಿದೇಶಾಂಗ ಸಚಿವಾಲಯ (Nepal foreign Ministry) ಸೋಮವಾರ ಹೇಳಿದೆ.
ಇಸ್ರೇಲ್ ಉಗ್ರ ಬೇಟೆ: 500 ಹಮಾಸ್ ನೆಲೆ ಧ್ವಂಸ: ಸಾವಿನ ಸಂಖ್ಯೆ 1400ಕ್ಕೆ ಏರಿಕೆ
‘ಗಾಜಾ ಪಟ್ಟಣದ ಬಳಿಯ ಕಿಬ್ಬುಟ್ಜ್ ಅಲುಮಿಮ್ ಪ್ರದೇಶದಲ್ಲಿ ಕೆಲಸ ಮಾಡುತ್ತಿದ್ದ 17 ಮಂದಿ ನೇಪಾಳ ಪ್ರಜೆಗಳ ಪೈಕಿ 10 ಮಂದಿ ದಾಳಿಯಲ್ಲಿ ಮೃತಪಟ್ಟಿದ್ದಾರೆ. ನಾಲ್ವರು ಗಾಯಗೊಂಡಿದ್ದು ಇಬ್ಬರು ಪಾರಾಗಿದ್ದಾರೆ. ಒಬ್ಬರು ಇನ್ನೂ ನಾಪತ್ತೆಯಾಗಿದ್ದಾರೆ ಎಂದು ದಾಳಿ ನಡೆದ ಸ್ಥಳದಿಂದ ನಮಗೆ ಮಾಹಿತಿ ಬಂದಿದೆ’ ಎಂದು ಜೆರುಸಲೇಂನಲ್ಲಿರುವ ನೇಪಾಳ ರಾಯಭಾರ ಕಚೇರಿ ಹೇಳಿಕೆಯೊಂದರಲ್ಲಿ ತಿಳಿಸಿದೆ. ಹಮಾಸ್ (Hamas) ಶನಿವಾರ ನಡೆಸಿದ ವೈಮಾನಿಕ ದಾಳಿಯಲ್ಲಿ ಸೈನಿಕರು ಸೇರಿ ಸುಮಾರು 600ಕ್ಕೂ ಹೆಚ್ಚು ಜನ ಮೃತಪಟ್ಟಿದ್ದರು. ಇಸ್ರೇಲ್ ಭದ್ರತಾ ಪಡೆ ಹಮಾಸ್ ಗುರಿಯಾಗಿಸಿ ನಡೆಸಿದ ಪ್ರತಿದಾಳಿಯಲ್ಲಿ ಇಸ್ರೇಲ್ ಮತ್ತು ಗಾಜಾದಲ್ಲಿ ಒಂದು ಸಾವಿರ ಮಂದಿ ಮೃತಪಟ್ಟರು.
ನಮ್ಮ ಯುದ್ಧ ನಾವೇ ಮಾಡುತ್ತೇವೆ: ಸುತ್ತಲೂ ಶತ್ರುಗಳನ್ನೇ ಹೊಂದಿರುವ ಪುಟ್ಟದೇಶ ಇಸ್ರೇಲ್‌ನ ಆತ್ಮವಿಶ್ವಾಸದ ನುಡಿ
ಗಾಜಾಪಟ್ಟಿ ವಶ ಏಕೆ ಮಹತ್ವ?
ವೆಸ್ಟ್‌ಬ್ಯಾಂಕ್ ಮತ್ತು ಗಾಜಾಪಟ್ಟಿ ಎರಡೂ ಸೇರಿ ಪ್ಯಾಲೆಸ್ತೀನ್ (Palestien) ದೇಶ ಎನ್ನಲಾಗುತ್ತದೆ. ಆದರೆ ಇವರೆಡೂ ಪ್ರತ್ಯೇಕ ಭಾಗಗಳು. ಪಾಲೆಸ್ತೀನ್‌ನಲ್ಲಿ ಪ್ರತ್ಯೇಕ ಸರ್ಕಾರವಿದೆ. ಆದರೆ ಅಲ್ಲಿಂದ 100 ಕಿ.ಮೀ ದೂರದ ಗಾಜಾಪಟ್ಟಿ ಪ್ರದೇಶ 365 ಚದರ ಕಿ.ಮೀ ವ್ಯಾಪ್ತಿಯ (41 ಕಿ.ಮೀ ಉದ್ದ- 6ರಿಂದ 12 ಕಿ.ಮೀ ಅಗಲದ ಪ್ರದೇಶ) ಸಣ್ಣ ಪ್ರದೇಶದಲ್ಲಿ 2.30 ಲಕ್ಷ ಜನರು ವಾಸಿಸುತ್ತಾರೆ. ಇದು ವಿಶ್ವದಲ್ಲೇ 3ನೇ ಅತಿದೊಡ್ಡ ಜನದಟ್ಟಣೆ ಪ್ರದೇಶ. 2007ರಲ್ಲಿ ನಡೆದ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಹಮಾಸ್ ಉಗ್ರರು ಅಧಿಕಾರ ಪಡೆದುಕೊಂಡಿದ್ದಾರೆ. ದೇಶದ ಶೇ.70ರಷ್ಟು ಜನರು ಕಡುಬಡವರು. ಈ ಪ್ರದೇಶ ಇಸ್ರೇಲ್‌ನೊಂದಿಗೆ 51 ಕಿ.ಮೀ ಮತ್ತು ಈಜಿಪ್ಟ್‌ನೊಂದಿಗೆ 14 ಕಿ.ಮೀ ಗಡಿ ಹಂಚಿಕೊಂಡಿದೆ. 2007ರಲ್ಲೇ ಗಾಜಾಗೆ ಇಸ್ರೇಲ್ ಮತ್ತು ಈಜಿಪ್ಟ್ ಹಲವು ನಿರ್ಬಂಧ ಹೇರಿವೆ. ಆದರೆ ಮಾನವೀಯ ನೆಲೆಯಲ್ಲಿ ಅಲ್ಲಿಗೆ ಇಂಧನ, ವಿದ್ಯುತ್ ಮತ್ತು ಆಹಾರ ವಸ್ತುಗಳನ್ನು ಇಸ್ರೇಲ್ ಪೂರೈಸುತ್ತಿತ್ತು. ಇದು ಹಮಾಸ್ ಉಗ್ರರ ಪ್ರಮುಖ ನೆಲೆ. ಇಲ್ಲಿಂದ ಹಮಾಸ್ ಉಗ್ರರು ನಾಮಾವಶೇ಼ಷವಾದರೆ ದಶಕಗಳ ಸಂಘರ್ಷ ಅಂತ್ಯವಾದಂತೆ ಎಂಬುದು ಇಸ್ರೇಲ್ ಲೆಕ್ಕಾಚಾರ. ಹೀಗಾಗಿಯೇ ಈ ಬಾರಿ ಅದು ಅಂತಿಮ ಯುದ್ಧಕ್ಕೆ ಸಜ್ಜಾಗಿದೆ.
ಹೆಂಗಸರು ಮಕ್ಕಳ ಮೇಲೆ ಹಮಾಸ್ ಉಗ್ರರ ರಕ್ಕಸ ಕೃತ್ಯಗಳು: ಬಾಲಕಿಯ ಕೊಂದು ಸ್ವರ್ಗ ಸೇರಿತು ಎಂದರು