Asianet Suvarna News Asianet Suvarna News

Note Ban: ಕೇಂದ್ರದ ನಿರ್ಧಾರ ಸರಿಯೋ ಇಲ್ವೋ..? ಜನವರಿ 2ರಂದು ಸುಪ್ರೀಂಕೋರ್ಟ್‌ ತೀರ್ಪು

ದೇಶದ ಉನ್ನತ ನ್ಯಾಯಾಲಯದ ನ್ಯಾಯಮೂರ್ತಿ ಅಬ್ದುಲ್ ನಜೀರ್ (Justice Abdul Nazeer) ನೇತೃತ್ವದ ಐದು ನ್ಯಾಯಮೂರ್ತಿಗಳ ಪೀಠವು ಈ ತೀರ್ಪು ನೀಡಲಿದೆ. ನ್ಯಾಯಮೂರ್ತಿ ಅಬ್ದುಲ್ ನಜೀರ್ ನಿವೃತ್ತರಾಗಲು 1 ದಿನ ಮುಂಚಿತವಾಗಿ ಈ ತೀರ್ಪು ಹೊರಬೀಳುತ್ತಿದೆ.

demonetisation challenge supreme court to pronounce verdict on january 2 ash
Author
First Published Dec 22, 2022, 9:43 PM IST

2016 ರಲ್ಲಿ 500 ಮತ್ತು 1000 ರೂಪಾಯಿಗಳ ಕರೆನ್ಸಿ ನೋಟುಗಳನ್ನು (Currency Notes) ಅಮಾನ್ಯಗೊಳಿಸುವ (Demonetise) ಕೇಂದ್ರ ಸರ್ಕಾರದ (Central Government) ನಿರ್ಧಾರವನ್ನು ಪ್ರಶ್ನಿಸಿ 50ಕ್ಕೂ ಹೆಚ್ಚು ಅರ್ಜಿಗಳು ಸಲ್ಲಿಕೆಯಾಗಿವೆ. ಈ ಎಲ್ಲ ಅರ್ಜಿಗಳನ್ನು ಸುಪ್ರೀಂಕೋರ್ಟ್‌ (Supreme Court) ಪರಿಗಣಿಸಿ ವಾದ - ವಿವಾದ ನಡೆದಿದ್ದು, ಈ ಸಂಬಂಧ  ಜನವರಿ 2 ರಂದು ತೀರ್ಪು ನೀಡಲಿದೆ. ದೇಶದ ಉನ್ನತ ನ್ಯಾಯಾಲಯದ ನ್ಯಾಯಮೂರ್ತಿ ಅಬ್ದುಲ್ ನಜೀರ್ (Justice Abdul Nazeer) ನೇತೃತ್ವದ ಐದು ನ್ಯಾಯಮೂರ್ತಿಗಳ ಪೀಠವು ಈ ತೀರ್ಪು ನೀಡಲಿದೆ. ನ್ಯಾಯಮೂರ್ತಿ ಅಬ್ದುಲ್ ನಜೀರ್ ನಿವೃತ್ತರಾಗಲು 1 ದಿನ ಮುಂಚಿತವಾಗಿ ಈ ತೀರ್ಪು ಹೊರಬೀಳುತ್ತಿದೆ.

ಇದು ಐವರು ನ್ಯಾಯಮೂರ್ತಿಗಳ ಸಾಂವಿಧಾನಿಕ ಪೀಠವಾಗಿದ್ದು (Constitutional Bench), ಈ ಪೈಕಿ ಕರ್ನಾಟಕ ಮೂಲದ ಇಬ್ಬರು ನ್ಯಾಯಮೂರ್ತಿಗಳಿರುವುದು ವಿಶೇಷ. ನ್ಯಾಯಮೂರ್ತಿಗಳಾದ ಎ.ಎಸ್. ಬೋಪಣ್ಣ ಹಾಗೂ ಬಿ.ವಿ.ನಾಗರತ್ನ ಅವರನ್ನು ಒಳಗೊಂಡಿದೆ. ಈ ಸಾಂವಿಧಾನಿಕ ಪೀಠದಲ್ಲಿ ಅಬ್ದುಲ್ ನಜೀರ್ ಅವರೊಂದಿಗೆ ನ್ಯಾಯಮೂರ್ತಿ ಬಿ.ಆರ್ ಗವಾಯಿ, ಎ.ಎಸ್. ಬೋಪಣ್ಣ, ವಿ.ರಾಮಸುಬ್ರಮಣಿಯನ್, ಮತ್ತು ಬಿ.ವಿ.ನಾಗರತ್ನ ಅವರನ್ನು ಒಳಗೊಂಡಿದೆ. 

ಇದನ್ನು ಓದಿ: 2000 ರೂ. ನೋಟು ಶೀಘ್ರ ಮಾಯ..? ಸಂಸತ್ತಲ್ಲಿ ಬಿಜೆಪಿ ಸಂಸದ ಆಗ್ರಹ

ಮೋದಿ ಸರ್ಕಾರ ನೋಟ್‌ ಬ್ಯಾನ್‌ ನೀತಿಯನ್ನು ತಂದ 6 ವರ್ಷಗಳ ನಂತರ ಡಿಸೆಂಬರ್ 7 ರಂದು ಸುಪ್ರೀಂಕೋರ್ಟ್ ತನ್ನ ತೀರ್ಪನ್ನು ಕಾಯ್ದಿರಿಸಿತ್ತು. ತನ್ನ ತೀರ್ಪನ್ನು ಕಾಯ್ದಿರಿಸುವಾಗ, 2016 ರ ನೋಟು ಅಮಾನ್ಯೀಕರಣ ನೀತಿಗೆ ಸಂಬಂಧಿಸಿದಂತೆ ಎಲ್ಲಾ ಸಂಬಂಧಿತ ದಾಖಲೆಗಳನ್ನು ನೀಡುವಂತೆ ನ್ಯಾಯಾಲಯವು ಕೇಂದ್ರ ಸರ್ಕಾರ ಮತ್ತು ಆರ್‌ಬಿಐಗೆ ಸೂಚಿಸಿತ್ತು. ಎಲ್ಲಾ ದಾಖಲೆಗಳನ್ನು ಮುಚ್ಚಿದ ಲಕೋಟೆಯಲ್ಲಿ ಸಲ್ಲಿಸಲಾಗುವುದು ಎಂದು ಅಟಾರ್ನಿ ಜನರಲ್ ಹೇಳಿದ್ದರು.

ಅರ್ಜಿದಾರರ ವಾದ:
ಅರ್ಜಿದಾರರ ಪರವಾಗಿ ವಾದ ಮಂಡಿಸಿದ ಹಿರಿಯ ವಕೀಲ ಮತ್ತು ಮಾಜಿ ಹಣಕಾಸು ಸಚಿವ ಪಿ. ಚಿದಂಬರಂ ಅವರು ಕೇಂದ್ರದ 2016 ರ ನೋಟು ಅಮಾನ್ಯ ನೀತಿಯನ್ನು ಹರಿದು ಹಾಕಿದರು ಮತ್ತು ಸರ್ಕಾರವು ಅನುಸರಿಸುತ್ತಿರುವ ಪ್ರಕ್ರಿಯೆಯು ಆಳವಾಗಿ ದೋಷಪೂರಿತವಾಗಿದೆ ಮತ್ತು ಅದನ್ನು ರದ್ದುಗೊಳಿಸಬೇಕು ಎಂದು ನ್ಯಾಯಾಲಯಕ್ಕೆ ಮನವಿ ಮಾಡಿದ್ದರು. ಹಾಗೂ, ಇದು ಅತ್ಯಂತ ಅತಿರೇಕದ ನಿರ್ಧಾರ ತೆಗೆದುಕೊಳ್ಳುವ ಪ್ರಕ್ರಿಯೆ ಎಂದು ಕರೆದ ಚಿದಂಬರಂ, ಈ ಪ್ರಕ್ರಿಯೆಯು ಈ ದೇಶದ ಕಾನೂನು ಸುವ್ಯವಸ್ಥೆಯನ್ನು ಅಣಕಿಸಿದೆ ಎಂದು ಹೇಳಿದ್ದರು.

ಇದನ್ನೂ ಓದಿ: ಸುಮ್ಮನೆ ಕೈ ಕಟ್ಟಿ ಕೂರಕ್ಕಾಗಲ್ಲ..! ನೋಟ್‌ ಬ್ಯಾನ್‌ ವಿಚಾರವಾಗಿ ಕೇಂದ್ರದ ವಿರುದ್ಧ ಸುಪ್ರೀಂ ಕಿಡಿ

ನೋಟು ಅಮಾನ್ಯಗೊಳಿಸುವ ಸರ್ಕಾರದ ಯಾವುದೇ ಅಧಿಕಾರವು ಕೇಂದ್ರೀಯ ಮಂಡಳಿಯ ಶಿಫಾರಸಿನ ಮೇರೆಗೆ ಮಾತ್ರ ಎಂದು ಅವರು ಹೇಳಿದ್ದರು. ಆದರೆ ಪ್ರಸ್ತುತ ಪ್ರಕರಣದಲ್ಲಿ ಕಾರ್ಯವಿಧಾನವನ್ನು ಬದಲಾಯಿಸಲಾಗಿದೆ ಎಂದೂ ಚಿದಂಬರಂ ವಾದಿಸಿದರು.

ಕೇಂದ್ರ ಸರ್ಕಾರದ ವಾದ:
ಭಾರತದ ಅಟಾರ್ನಿ ಜನರಲ್ ಆರ್. ವೆಂಕಟರಮಣಿ ಅವರು ನೋಟು ಅಮಾನ್ಯೀಕರಣ ನೀತಿಯನ್ನು ಸಮರ್ಥಿಸಿಕೊಂಡರು ಮತ್ತು ಒಂದು ಕಡೆ ಆರ್ಥಿಕ ವ್ಯವಸ್ಥೆಯಲ್ಲಿ ತಂದ ದೊಡ್ಡ ಪ್ರಯೋಜನಗಳನ್ನು ಹೋಲಿಸಿದರೆ, ಕೇವಲ ಒಂದು ಬಾರಿ ಜನರು ಎದುರಿಸಿದ ಕಷ್ಟಗಳನ್ನು ಹೋಲಿಸಲಾಗದು ಎಂದಿದ್ದಾರೆ ಹಾಗೆ, ನೋಟ್ ಬ್ಯಾನ್‌ ತನ್ನ ಉದ್ದೇಶಿತ ಉದ್ದೇಶದಲ್ಲಿ ವಿಫಲವಾಗಿದೆ ಮತ್ತು ಅನಗತ್ಯ ತೊಂದರೆಗಳನ್ನು ಉಂಟುಮಾಡುತ್ತದೆ ಎಂಬ ವಾದವು ತಪ್ಪು ಕಲ್ಪನೆಯಾಗಿದೆ ಎಂದೂ ಎಜಿ ಹೇಳಿದರು. "ಆರ್ಥಿಕ ಮತ್ತು ಸಾಮಾಜಿಕ ಪ್ರಯೋಜನಗಳ ದೊಡ್ಡ ದೃಷ್ಟಿಕೋನದಿಂದ ನೋಡಿದರೆ, ನೋಟು ಅಮಾನ್ಯೀಕರಣವು ವಿಫಲವಾಗಿದೆ ಎಂದು ಹೇಳಲಾಗುವುದಿಲ್ಲ" ಎಂದೂ ಆರ್‌. ವೆಂಕಟರಮಣಿ ಹೇಳಿದರು.

ಇದನ್ನೂ ಓದಿ: Note Ban: 500, 1000 ರೂಪಾಯಿಯ ನೋಟು ಬಳಕೆ ಏರಿದ್ದಕ್ಕೆ ನಿಷೇಧ!

ನೋಟು ಅಮಾನ್ಯೀಕರಣ ವ್ಯವಸ್ಥೆಯಿಂದ ನಕಲಿ ಕರೆನ್ಸಿಯನ್ನು ಗಮನಾರ್ಹವಾಗಿ ಹೊರತೆಗೆದಿದೆ ಮತ್ತು ನಕಲಿ ಕರೆನ್ಸಿಗಳು ಹಾಗೂ ಕಪ್ಪುಹಣವು "ಸುಲಭವಾಗಿ ಗುರುತಿಸಲಾಗದ ಮತ್ತು ಎಲ್ಲಾ ಸಮಯದಲ್ಲೂ ಮುಖವಾಡಗಳನ್ನು ಧರಿಸುವ ಅಂತಹ ಶತ್ರುಗಳಾಗಿರುವುದರಿಂದ ಹೊರತೆಗೆಯುವುದು ಮುಖ್ಯವಾಗಿದೆ ಎಂದೂ ಅಟಾರ್ನಿ ಜನರಲ್ ವಾದ ಮಾಡಿದ್ದರು. 
 

Follow Us:
Download App:
  • android
  • ios