ನಗರದ ರಸ್ತೆಯಲ್ಲಿ ಕಾರಿನ ಪುಂಡರ ಶೋ ಆಫ್, 67000 ರೂಪಾಯಿ ದಂಡ ವಿಧಿಸಿದ ಪೊಲೀಸ್, ಆಲ್ಟರ್ ಮಾಡಿದ ಕಾರಿನ ಮೇಲೆ ನಿಂತು ಕುಣಿದಾಡಿದ್ದಾರೆ. ಬ್ಯೂಸಿ ರಸ್ತೆಯಲ್ಲಿ ಪುಂಡಾಟ ಮಾಡಿ ಟ್ರಾಫಿಕ್ ಜಾಮ್ ಮಾಡಿದ್ದಾರೆ.
ನೋಯ್ಡಾ (ಜ.03) ಕಾರು, ಬೈಕ್ ಮೂಲಕ ಸ್ಟಂಟ್, ವ್ಹೀಲಿಂಗ್, ಅಪಾಯಕಾರಿ ರೀತಿಯಲ್ಲ ಡ್ರೈವಿಂಗ್ ಮಾಡುವುದು ನಿಯಮ ಉಲ್ಲಂಘನೆಯಾಗಿದೆ. ಈಗಾಗಲೇ ಹಲವು ಪ್ರಕರಣಗಳು ಕಣ್ಣ ಮುಂದಿದೆ. ಇದೀಗ ಯುವಕರ ಗುಂಪು ನಗರದ ಬ್ಯೂಸಿ ರಸ್ತೆಯಲ್ಲಿ ಕಾರಿನ ಮೇಲೆ ನಿಂತು ಹುಚ್ಚಾಟ ಮೆರೆದ ಘಟನೆ ವಿಡಿಯೋ ಭಾರಿ ಸದ್ದು ಮಾಡುತ್ತಿದೆ. ಅಲ್ಟೋ ಕಾರಿನ ಮೇಲೆ ನಿಂತು ಕುಣಿದಾಡಿದ್ದು ಮಾತ್ರವಲ್ಲ, ಅಪಾಯಕಾರಿ ರೀತಿ ಸ್ಟಂಟ್ ಮಾಡಿದ್ದಾರೆ. ಸಾರ್ವಜನಿಕ ಸ್ಥಳದಲ್ಲಿ ಸಭ್ಯತೆ ಮೀರಿ ವರ್ತಿಸಿದ ಘಟನೆ ನೋಯ್ಡಾದಲ್ಲಿ ನಡೆದಿದೆ. ಈ ಘಟನೆ ವಿಡಿಯೋ ವೈರಲ್ ಆಗುತ್ತಿದ್ದಂತೆ ಪೊಲೀಸರು ಬರೋಬ್ಬರಿ 67,000 ರೂಪಾಯಿ ದಂಡ ವಿಧಿಸಿದ್ದಾರೆ.
6 ಯುವಕರ ಗುಂಪು
ಮಾಡಿಫಿಕೇಶನ್ ಮಾಡಿದ ಆಲ್ಟೋ ಕಾರಿನಲ್ಲಿ 6 ಯುವಕರು ಹುಟ್ಟಾಟ ಮೆರೆದಿದ್ದಾರೆ. ನೋಯ್ಡಾ ನಗರದ ರಸ್ತೆಯಲ್ಲೇ ಈ ಹುಚ್ಚಾಟ ನಡೆದಿದೆ. ನಾಲ್ವರು ಯುವಕರು ಕಾರಿನ ಮೇಲೆ ನಿಂತು ಕುಣಿದಾಡಿದ್ದರೆ. ಬಳಿಕ ಕಾರಿನ ಮುಂಭಾಗ, ರಸ್ತೆಯಲ್ಲಿ ಕುಣಿಡಾದಿದ್ದಾರೆ. ಈ ಪೈಕಿ ಇಬ್ಬರು ಶರ್ಟ್ ಬಿಚ್ಚಿ ಕುಣಿದಾಡಿದ್ದಾರೆ. ಇತ್ತೀಚೆಗೆ ಬಿಡುಗಡೆಯಾಗ ದುರಂಧರ್ ಸಿನಿಮಾದ ದಿಲ್ ಹೇ ಸುನ್ಹೇರಾ ಹಾಡನ್ನು ಕಾರಿನ ಸ್ಪೀಕರ್ ಮೂಲಕ ಹಾಕಿದ್ದಾರೆ. ಹೆಚ್ಚಿನ ಶಬ್ದದ ಮೂಲಕ ಹಾಡು ಹಾಕಿ ಕುಣಿದಾಡಿದ್ದಾರೆ.
ಕುಡಿದು ಡ್ಯಾನ್ಸ್ ಮಾಡಿದ ಯುವಕರ ಗಂಪು
ಈ ಘಟನೆ ನಡೆದಿರುವ ಹೊಸ ವರ್ಷದ ಸಂಭ್ರಮಾಚರಣೆ ದಿನ. ಕಂಠಪೂರ್ತಿ ಕುಡಿದ ಯುವಕರ ಗುಂಪು ಈ ರೀತಿ ವರ್ತಿಸಿದೆ. ಟ್ರಾಫಿಕ್ ರಸ್ತೆಯಲ್ಲಿ ಕಾರು ಚಲಿಸುತ್ತದ್ದಂತೆ ಇವರ ಕುಣಿತ ಜೋರಾಗಿದೆ. ಇತರ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರು ಯುವಕರ ವರ್ತನೆ ಕುರಿತು ವಿಡಿಯೋ ಮಾಡಿ ಎಕ್ಸ್ ಮೂಲಕ ಪೋಸ್ಟ್ ಮಾಡಿದ್ದಾರೆ.
ನೋಯ್ಡಾ ಪೊಲೀಸರಿಗೆ ಯುಪಿ ಪೊಲೀಸರ ಅಲರ್ಟ್
ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಉತ್ತರ ಪ್ರದೇಶ ಪೊಲೀಸರು, ನೋಯ್ಡಾ ಪೊಲೀಸರಿಗೆ ಅಲರ್ಟ್ ಸಂದೇಶ ನೀಡಿದ್ದಾರೆ. ಸಿಸಿಟಿವಿ ವಿಡಿಯೋಗಳನ್ನು ಪರಿಶೀಲಿಸಿದ್ದಾರೆ. ಕಾರಿನ ರಿಜಿಸ್ಟ್ರೇಶನ್ ನಂಬರ್ ತೆಗೆದು ದಾಖಲೆಗಳ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಸಾರ್ವಜನಿ ಪ್ರದೇಶದಲ್ಲಿ ಕುಡಿದು ಅಸಭ್ಯ ವರ್ತನೆ, ಅಪಾಯಕಾರಿ ಡ್ರೈವಿಂಗ್, ಇತರ ವಾಹನ ಸವಾರರಿಗೆ ತೊಂದರೆ, ಟ್ರಾಫಿಕ್ ಸಮಸ್ಯೆ, ಸೀಟ್ ಬೆಲ್ಟ್ ಹಾಕದೆ ಪ್ರಯಾಣ, ಅಪಾಯಾಕಾರಿ ಸ್ಟಂಟ್ ಸೇರಿದಂತೆ ವಾಹನ ಉಲ್ಲಂಘಿಸಿರುವ ನಿಯಮಗಳು ಪತ್ತೆಯಾಗಿದೆ. ಇತ್ತ ಕಾರಿನ ವಿಮೆ ನವೀಕರಣ ಮಾಡಿಲ್ಲ, ಎಮಿಶನ್ ಟೆಸ್ಟ್ ಮಾಡಿಸಿಲ್ಲ, ನಿಯಮ ಬಾಹಿರ ಮಾಡಿಫಿಕೇಶನ್ ಸೇರಿದಂತೆ ಹಲವು ನಿಯಮಗಳು ಉಲ್ಲಂಘನೆಯಾಗಿದೆ.
ದುಬಾರಿ ದಂಡದ ಇ ಚಲನ್
ಹಲವು ನಿಯಮ ಉಲ್ಲಂಘನೆಯಾಗಿರುವ ಕಾರಣ ಪೊಲೀಸರು ಈ ವಾಹನ ಮಾಲೀಕರಿಗೆ 67,000 ರೂಪಾಯಿ ಇ ಚಲನ್ ಜಾರಿಗೊಳಿಸಿದ್ದಾರೆ. ಇದರ ಜೊತೆಗೆ ನಿಯಮ ಅನುಸಾರ ಗರಿಷ್ಠ ಶಿಕ್ಷೆ ವಿಧಿಸಲು ಪೊಲೀಸರು ಮುಂದಾಗಿದ್ದಾರೆ.
ಹೊಸ ವರ್ಷ ಸಂಭ್ರಮಾಚರಣೆ ನಡುವೆ 868 ಚಲನ್
ಹೊಸ ವರ್ಷ ಸಂಭ್ರಮಾಚರಣೆಯಲ್ಲಿ ದೆಹಲಿ ಪೊಲೀಸರು 868 ದಂಡದ ಚಲನ್ ನೀಡಿದ್ದಾರೆ. ಡ್ರಿಂಕ್ ಆ್ಯಂಡ್ ಡ್ರೈವ್ ಸೇರಿದಂತೆ ಹಲವು ಟ್ರಾಫಿಕ್ ನಿಯಮ ಉಲ್ಲಂಘನೆಗೆ ಒಂದೇ ರಾತ್ರಿಯಲ್ಲಿ 868 ಇ ಚಲನ್ ನೀಡಿದ್ದಾರೆ.


