ರಸ್ತೆ ದಾಟುವಾಗ ಡಿಕ್ಕಿಯಾದ ವಾಹನ, ನಟ ಅಶೀಷ್ ವಿದ್ಯಾರ್ಥಿ, ಪತ್ನಿಗೆ ಗಾಯ, ಘಟನೆ ಕುರಿತು ಸ್ವತಃ ಆಶಿಷ್ ವಿದ್ಯಾರ್ಥಿ ಅಪ್‌ಡೇಟ್ ನೀಡಿದ್ದಾರೆ. ನಡೆದುಕೊಂಡು ಹೋಗುತ್ತಿರುವಾಗ ವಾಹನ ಡ್ಕಿಕಿಯಾಗಿದೆ.
ಗುವ್ಹಾಟಿ( ಜ.03) ನಟ ಹಾಗೂ ವ್ಲಾಗರ್ ಆಶಿಷ್ ವಿದ್ಯಾರ್ಥಿ ಹಾಗೂ ಪತ್ನಿ ರೂಪಾಲಿ ಬರೌ ರಸ್ತೆ ಅಪಘಾತದಲ್ಲಿ ಗಾಯಗೊಂಡ ಘಟನೆ ಅಸ್ಸಾಂನ ರಾಜಧಾನಿ ಗೌವ್ಹಾಟಿಯಲ್ಲಿ ನಡೆದಿದೆ. ರಸ್ತೆ ದಾಟುವಾಗ ಬೈಕ್ ಬಂದು ಡಿಕ್ಕಿಯಾಗಿದೆ. ಸಣ್ಣ ಗಾಯಗಳಿಂದ ಆಶಿಷ್ ವಿದ್ಯಾರ್ಥಿ ಹಾಗೂ ರೂಪಾಲಿ ಬರೌ ಅಪಾಯದಿಂದ ಪಾರಾಗಿದ್ದಾರೆ. ಘಟನೆ ಬಳಿಕ ಖುದ್ದು ಅಶಿಷ್ ವಿದ್ಯಾರ್ಥಿ ವಿಡಿಯೋ ಮೂಲಕ ಅಪಘಾತದ ಕುರಿತು ಅಪ್‌ಡೇಟ್ ನೀಡಿದ್ದಾರೆ. ಸಣ್ಣ ಅಪಘಾತವಾಗಿದೆ ಅಷ್ಟೇ. ಗಂಭೀರ ಪರಿಣಾಮಗಳಿಲ್ಲ. ನಾವಿಬ್ಬರು ಆರೋಗ್ಯವಾಗಿದ್ದೇವೆ ಎಂದು ಅಶಿಷ್ ವಿದ್ಯಾರ್ಥಿ ಹೇಳಿದ್ದಾರೆ.
ತಡರಾತ್ರಿ ನಡೆದುಕೊಂಡು ತೆರಳುವಾಗ ಘಟನೆ
ಶುಕ್ರವಾರ (ಜ.02) ಆಶಿಷ್ ವಿದ್ಯಾರ್ಥಿ ಹಾಗೂ ರೂಪಾಲಿ ಗೌವ್ಹಾಟಿಯಲ್ಲಿ ನಡೆದುಕೊಂಡು ತೆರಳಿ, ರಸ್ತೆ ದಾಟಿದ್ದಾರೆ. ಬೈಕ್ ನಿಯಂತ್ರಣ ತಪ್ಪಿ ಡಿಕ್ಕಿಯಾಗಿದೆ. ಅಘಾತದ ಬೆನ್ನಲ್ಲೇ ಸ್ಥಳೀಯರ ಆಗಮಿಸಿದ್ದಾರೆ. ನಟ ಆಶಿಷ್ ವಿದ್ಯಾರ್ಥಿ, ರೂಪಾಲಿ ಹಾಗೂ ಬೈಕ್ ಸವಾರ ಮೂವರು ರಸ್ತೆ ಮೇಲೆ ಬಿದ್ದಿದ್ದಾರೆ.
ಘಟನೆ ಕುರಿತು ಆಶಿಷ್ ವಿದ್ಯಾರ್ಥಿ ಸ್ಪಷ್ಟನೆ
ಒಂದು ಕೆಟ್ಟ ಸಂದರ್ಭದಲ್ಲಿ ನಾನು ಲೈವ್ ಮಾಡುತ್ತಿದ್ದೇನೆ. ಕೆಲ ವಿಷಯಗಳನ್ನು ನಿಮಗೆ ಹೇಳಬೇಕಿತ್ತು. ಹಾಗಾಗಿ ಲೈವ್ ಬಂದಿದ್ದೇನೆ. ಸುದ್ದಿ ವಾಹಿನಿಗಳಲ್ಲಿ ಅಪಘಾತದ ಕುರಿು ಸುದ್ದಿಗಳು ಬರುತ್ತಿದೆ. ಇದನ್ನು ನಾನು ಗಮನಿಸಿದ್ದೇನೆ. ಹೌದು ಅಪಘಾತವಾಗಿದೆ. ನಾನು ಹಾಗೂ ರೂಪಾಲಿ ರಸ್ತೆ ದಾಡುತ್ತಿರುವಾಗ ಬೈಕ್ ಬಂದು ಡಿಕ್ಕಿಯಾಗಿದೆ. ರೂಪಾಲಿ ವೈದ್ಯರ ನಿಗಾದಲ್ಲಿದ್ದಾರೆ. ನಾವಿಬ್ಬರು ಆರೋಗ್ಯವಾಗಿದ್ದೇವೆ. ಯಾವುದೇ ಆತಂಕಪಡುವ ಅವಶ್ಯಕತೆ ಇಲ್ಲ. ಸಣ್ಣದಾದ ಅಪಘಾತ ಇದೆ. ನಾವಿಬ್ಬರು ಸಂಪೂರ್ಣವಾಗಿ ಆರೋಗ್ಯವಾಗಿದ್ದೇನೆ. ಯಾವುದೇ ಸಮಸ್ಯೆ ಇಲ್ಲ ಎಂದು ಅಶಿಷ್ ವಿದ್ಯಾರ್ಥಿ ವಿಡಿಯೋ ಮೂಲಕ ಹೇಳಿದ್ದಾರೆ.
ಅಪಘಾತದ ಬಳಿಕ ನಾನು ನಡೆದಾಡಿದ್ದೇನೆ. ವೈದ್ಯರು ಪರೀಕ್ಷಿಸಿದ್ದಾರೆ. ಈ ವಿಡಿಯೋ ಮೂಲಕ ಮಾಹಿತಿ ಹಂಚಿಕೊಂಡಿದ್ದೇನೆ. ಇದೇ ವೇಳೆ ಅಪಘಾತವಾಗಿದೆ ನಿಜ. ಆದರೆ ಗಂಭೀರವಲ್ಲ. ಹೀಗಾಗಿ ಅತೀರೇಖದಿಂದ ಯಾರೂ ಮಾಹಿತಿ ನೀಡಬೇಡಿ. ಬೈಕ್ ಸವಾರ ಕೂಡ ಚೇತರಿಸಿಕೊಂಡದ್ದಾನೆ.ಈ ಕುರಿತು ಪೊಲೀಸರು ಸ್ಪಷ್ಟಪಡಿಸಿದ್ದಾರೆ. ಎಲ್ಲರಿಗೂ ಶುಭವಾಗಲಿ ಎಂದು ಆಶಿಷ್ ವಿದ್ಯಾರ್ಥಿ ವಿಡಿಯೋ ಮೂಲಕ ಹೇಳಿದ್ದಾರೆ.
2023ರಲ್ಲಿ ರೂಪಾಲಿ ಮದುವೆಯಾಗಿದ್ದ ಅಶೀಷ್ ವಿದ್ಯಾರ್ಥಿ
ನಟನೆಯಲ್ಲಿ ಭಾರಿ ಛಾಪು ಮೂಡಿಸಿದ್ದ ಆಶಿಷ್ ವಿದ್ಯಾರ್ಥಿ ಸದ್ಯ ವ್ಲಾಗರ್ ಆಗಿ ಗುರುತಿಸಿಕೊಂಡಿದ್ದಾರೆ. 2023ರಲ್ಲಿ ಆಶಿಷ್ ವಿದ್ಯಾರ್ಥಿ ಹಾಗೂ ರೂಪಾಲಿ ಬೌರ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಇದಕ್ಕೂ ಮೊದಲು ಆಶಿಷ್ ವಿದ್ಯಾರ್ಥಿ ಪಿಲೂ ವಿದ್ಯಾರ್ಥಿಯನ್ನು ಮದುವೆಯಾಗಿದ್ದರು. ಬರೋಬ್ಬರಿ 22 ವರ್ಷಗಳ ದಾಂಪತ್ಯ ಜೀವನದ ಬಳಿಕ 2022ರಲ್ಲಿ ಇಬ್ಬರು ವಿಚ್ಚೇದನ ಪಡೆದಿದ್ದರು.


