ಅಪಾಯದ ಮಟ್ಟ ಮೀರಿ 45 ವರ್ಷದ ದಾಖಲೆ ಮುರಿದ ಯಮುನಾ ನದಿ, ತುರ್ತು ಸಭೆ ಕರೆದ ಸಿಎಂ!

ದೆಹಲಿ, ಹರ್ಯಾಣ ಸೇರಿದಂತೆ ಉತ್ತರ ಭಾರತದಲ್ಲಿ ಸುರಿಯುತ್ತಿರುವ ಭಾರಿ ಮಳೆಗೆ ಯಮುನಾ ನದಿ ಉಕ್ಕಿ ಹರಿಯುತ್ತಿದೆ. ಈಗಾಗಲೇ ಅಪಾಯದ ಮಟ್ಟ ಮೀರಿದೆ. 207.55 ಮೀಟರ್ ಎತ್ತರದಿಂದ ಹರಿಯುತ್ತಿರುವ ಯಮುನಾ ನದಿ ಬರೋಬ್ಬರಿ 45 ವರ್ಷದ ದಾಖಲೆಯನ್ನು ಮುರಿದಿದೆ. ಆದರೆ ಹಲವು ಪ್ರದೇಶಗಳು ಮುಳುಗಡೆಯಾಗಿದ್ದರೆ, ನದಿ ಪಾತ್ರ ಪ್ರದೇಶಗಳಲ್ಲಿ 144 ಸಕ್ಷೆನ್ ಜಾರಿ ಮಾಡಲಾಗಿದೆ.
 

Delhi Rain Yamuna river breach 45 year old dangerous water level CM Arvind Kerjriwal call emergency meeting ckm

ನವದೆಹಲಿ(ಜು.12) ಉತ್ತರ ಭಾರತದಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದ ಭಾರತ ತತ್ತರಿಸಿದೆ. ದೆಹಲಿ ಹಾಗೂ ಹರ್ಯಾಣ ಭಾಗದಲ್ಲಿ ಮಳೆ ಪ್ರಮಾಣ ಹೆಚ್ಚಾಗಿದೆ. ಹೀಗಾಗಿ ಯಮುನಾ ನದಿ ದಾಖಲೆ ಮಟ್ಟ ಮೀರಿದೆ. 45 ವರ್ಷಗಳ ಹಿಂದೆ ಯಮುನಾ ನದಿ ಭಾರಿ ಮಳೆಗೆ ಯಮುನಾ ನದಿ ಮೀರು 207.49 ಮೀಟರ್ಮೀಟರ್ ಮಟ್ಟಕ್ಕೆ ತಲುಪಿತ್ತು. ಇದೀಗ ಈ ದಾಖಲೆ ಛಿದ್ರಗೊಂಡಿದೆ. ಸದ್ಯ  207.55 ಮೀಟರ್ ದಾಖಲೆ ಬರೆದಿದೆ. ಇದರಿಂದ ಹಲವರ ಬದುಕು ಛಿದ್ರಗೊಂಡಿದೆ. ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ಕಾರಣ ಹಲವು ಪ್ರದೇಶಗಳು ಮುಳುಗಡೆಯಾಗಿದೆ. ದೆಹಲಿಯ ಬಹುತೇಕ ಪ್ರದೇಶಗಳು ಜಲಾವೃತವಾಗಿದೆ. ಹೀಗಾಗಿ ಯಮುನಾ ನದಿ ಪಾತ್ರ ಸೇರಿದಂತೆ ಅಪಾಯದ ಮುನ್ಸೂಚನೆ ಇರುವ ಹಲವು ಪ್ರದೇಶಗಳಲ್ಲಿ ಸೆಕ್ಷನ್ 144 ಜಾರಿ ಮಾಡಲಾಗಿದೆ.

ಯಮುನಾ ನದಿ ಅಪಾಯ ಮಟ್ಟ ಮೀರಿದ ಬೆನ್ನಲ್ಲೇ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ತುರ್ತು ಸಭೆ ಕರೆದಿದ್ದಾರೆ. ಹಲವು ಪ್ರದೇಶಗಳು ಜಲಾವೃತಗೊಂಡಿದೆ. ನಗರದ ಪ್ರಮುಖ ಬಡಾವಣೆಗಳು, ಕಚೇರಿಗಳು ನೀರಿನಲ್ಲಿ ಮುಳುಗಿದೆ. ಹೀಗಾಗಿ ಪರಿಸ್ಥಿತಿ ನಿಯಂತ್ರಣ, ಅನಾಹುತಗಳನ್ನು ತಪ್ಪಿಸಲು ಕೇಜ್ರಿವಾಲ್ ತುರ್ತು ಸಭೆ ಕರೆದಿದ್ದಾರೆ. 

ಭೂಕುಸಿತಕ್ಕೆ ಕೊಚ್ಚಿ ಹೋದ ಗ್ರಾಮ; ಕಟ್ಟಡ, ಸೇತುವೆ, ವಾಹನ, ಮನೆ ನೀರು ಪಾಲು!

1978ರಲ್ಲಿ ಭಾರಿ ಮಳೆಯಿಂದ ಯಮುನಾ ನದಿ ಅಪಾಯದ ಮಟ್ಟ ಮೀರಿತ್ತು. 207.49 ಮೀಟರ್ ದಾಖಲೆ ಬರೆದಿತ್ತು. ಬಳಿಕ ದೆಹಲಿಯಲ್ಲಿ ಮಳೆ ಕೊರತೆ, ಪ್ರವಾಹ ಸೇರಿದಂತೆ ಹಲವು ಪ್ರಾಕೃತಿಕ ವಿಕೋಪಗಳು ಎದುರಾದರು ಈ ಮಟ್ಟ ತಲುಪಿಲ್ಲ. ಇದೀಗ ನೀರಿನ ಮಟ್ಟ  207.55 ಮೀಟರ್ ತಲುಪಿದೆ.  ಭಾನುವಾರ ಬೆಳಗ್ಗೆ 11 ಗಟೆಗೆ 203.14 ಮೀಟರ್, ಸೋಮವಾರ ಸಂಜೆ 5 ಗಂಟೆಗೆ 205.4 ಮೀಟರ್,  ಇಂದು ಬೆಳಗ್ಗೆ 205.33 ಮೀಟರ್ ಹಾಗೂ ಇದೀಗ  207.55 ಮೀಟರ್ ಮಟ್ಟ ತಲುಪಿದೆ. 
 
ಯಮುನಾ ನದಿ ಉಕ್ಕಿ ಹರಿಯುತ್ತಿರುವ ಕಾರಣ ಯಮುನಾ ಮಾರ್ಕೆಟ್ ಮುಳುಗಡೆಯಾಗಿದೆ. ನೂರಾರು ಕುಟುಂಬಗಳು, ಸಾವಿರಾರು ಮಂದಿ ಬೀದಿ ಪಾಲಾಗಿದ್ದಾರೆ.ದೆಹಲಿಯಲ್ಲಿ ಪ್ರತಿ ದಿನ ದಾಖಲೆ ಪ್ರಮಾಣ ಮಳೆಯಾಗುತ್ತಿದೆ. ಭಾನುವಾರ ಒಂದೇ ದಿನ ಸುಮಾರು 15 ಸೆಂ.ಮೀ.ಗಿಂತ ಅಧಿಕ ಮಳೆಯಾಗಿತ್ತು. ಇದು ಕಳೆದ 41 ವರ್ಷಗಳಲ್ಲೇ ಅಧಿಕ ಮಳೆಯಾಗಿದ್ದು, 1982ರಲ್ಲಿ 16.3 ಸೆಂ.ಮೀ. ಮಳೆಯಾಗಿತ್ತು.

 

ಭಾರಿ ಮಳೆಗೆ ಕೊಚ್ಚಿ ಹೋದ ಎಸ್‌ಬಿಐ ಎಟಿಎಂ, ಹಿಮಾಚಲ ಪ್ರದೇಶದಲ್ಲಿ ವಾಹನ, ಕಟ್ಟದ ಜಲಸಮಾಧಿ!

ಭಾರಿ ಮಳೆಯಿಂದಾಗಿ ಇಲ್ಲಿನ ಶ್ರೀನಿವಾಸಪುರಿಯಲ್ಲಿ 4 ತಿಂಗಳ ಹಿಂದೆ ನಿರ್ಮಾಣ ಮಾಡಲಾಗಿದ್ದ ಸರ್ಕಾರಿ ಶಾಲಾ ಕಟ್ಟವೊಂದು ಕುಸಿತಗೊಂಡಿದೆ. ಇದು ವಿಪಕ್ಷಗಳ ಟೀಕೆಗೆ ಗುರಿಯಾಗಿದ್ದು, ಉತ್ತಮ ಶಿಕ್ಷಣದ ಜೊತೆ ಉತ್ತಮ ಕಟ್ಟಡ ನಿರ್ಮಾಣಕ್ಕೂ ಒತ್ತು ನೀಡಬೇಕು. ಶಾಲಾ ಮಕ್ಕಳ ಸುರಕ್ಷತೆಗೆ ಕ್ರಮ ಕೈಗೊಳ್ಳಬೇಕು ಎಂದು ವಿಪಕ್ಷಗಳು ಆಗ್ರಹಿಸಿವೆ.
 

Latest Videos
Follow Us:
Download App:
  • android
  • ios