ಭೂಕುಸಿತಕ್ಕೆ ಕೊಚ್ಚಿ ಹೋದ ಗ್ರಾಮ; ಕಟ್ಟಡ, ಸೇತುವೆ, ವಾಹನ, ಮನೆ ನೀರು ಪಾಲು!

ಹಿಮಾಚಲ ಪ್ರದೇಶ, ದೆಹಲಿ, ಹರ್ಯಾಣ ಸೇರಿದಂತೆ ಉತ್ತರ ಭಾರತ ಭಾರಿ ಮಳೆಗೆ ತತ್ತರಿಸಿದೆ. ಹಿಮಾಚಲ ಪ್ರದೇಶದ ಬಹುತೇಕ ಭಾಗದಲ್ಲಿ ಭೂಕುಸಿತ, ಪ್ರವಾಹ ಸೇರಿದಂತೆ ಹಲವು ಅವಾಂತರಗಳು ಸೃಷ್ಟಿಯಾಗಿದೆ. ಹಿಮಾಚಲ ಪ್ರದೇಶದ ಒಂದೊಂದು ವಿಡಿಯೋಗಳು ಬೆಚ್ಚಿ ಬೀಳಿಸುವಂತಿದೆ.
 

Monsoon Rain vehicle house buildings cars washed away in Himachal pradesh due to landslide and flood ckm

ನವದೆಹಲಿ(ಜು.10) ಉತ್ತರ ಭಾರತದ ಭಾರಿ ಮಳೆಗೆ ಹಲವು ರಾಜ್ಯಗಳು ತತ್ತರಿಸಿದೆ. ಹಿಮಾಚಲ ಪ್ರದೇಶದ ಚಿತ್ರಣವೇ ಬದಲಾಗಿದೆ. ಭೂಕುಸಿತದಿಂದ ಹಲವು ಗ್ರಾಮಗಳೇ ಸರ್ವನಾಶವಾಗಿದೆ. ಭೀಕರ ಪ್ರವಾಹದಲ್ಲಿ ಮನೆಗಳು, ವಾಹನಗಳು ಆಟಿಕೆಗಳಂತೆ ಕೊಚ್ಚಿ ಹೋಗುತ್ತಿದೆ. ಭಾರಿ ಮಳೆಯಿಂದ ಇದುವರೆಗೆ 19 ಮಂದಿ ಮೃತಪಟ್ಟಿದ್ದಾರೆ. ಹಿಮಾಚಲ ಪ್ರದೇಶದ ನದಿಗಳು ಅಪಾಯದ ಮೀರಿ ಹರಿಯುತ್ತಿರುವ ಕಾರಣ ಸೇತುವೆಗು, ನದಿ ಪಾತ್ರದ ಕಟ್ಟಡ, ಮನಗಳು ನೀರಿನಲ್ಲಿ ಕೋಚ್ಚಿ ಹೋಗುತ್ತಿದೆ. ಪ್ರವಾಹಕ್ಕೆ ಸಿಲುಕಿದ ಬಸ್ ಕೊಚ್ಚಿ ಹೋಗಿದೆ. ಆದರೆ ಬಸ್‌ನಲ್ಲಿದ್ದ ಪ್ರಯಾಣಿಕರನ್ನು ರಕ್ಷಿಸಲಾಗಿದೆ. ಹಿಮಾಚಲ ಪ್ರದೇಶದ ವಿಡಿಯೋಗಳು ಆತಂಕ ತರುತ್ತಿದೆ.

ಹಿಮಾಚಲ ಪ್ರದೇಶದ 10 ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ. ಈ 10 ಜಿಲ್ಲೆಗಳಲ್ಲಿ ಭೂಕುಸಿತ, ಪ್ರವಾಹ ಸೃಷ್ಟಿಯಾಗಿದೆ. ತುನಾಗ್ ಬಜಾರ್‌ನ ಮಂಡಿ ಬಳಿಯ ಗುಡ್ಡ ಕುಸಿದು ಸಂಪೂರ್ಣ ಮಣ್ಣ ಹಾಗೂ ಮರಗಳ ಮಿಶ್ರಿತ ಪ್ರವಾಹ ನೀರು ಪಟ್ಟಣಕ್ಕೆ ನುಗ್ಗಿದೆ.  ಇಡೀ ಪಟ್ಟಣವೇ ಕೆಸರು ನೀರಿನಲ್ಲಿ ತುಂಬಿ ಹೋಗಿದೆ. ಹಲವು ಮನೆಗಳು ಮಣ್ಣು ಪಾಲಾಗಿದೆ. ಎರಡು, ಮೂರು ಅಂತಸ್ತಿನ ಮನೆಗಳ ಒಳಗೂ ಕೆಸರು ತುಂಬಿಕೊಂಡಿದೆ. ಗುಡ್ಡ ಕುಸಿತ ಪರಿಣಾಮ ಭಾರಿ ಗಾತ್ರದ ಮರಗಳು ಮನೆಗೆ ಬಡಿದು ಹಲವು ಮನೆಗಳು ಕುಸಿದಿದೆ.

 

 

ಭಾರಿ ಮಳೆಗೆ ಕೊಚ್ಚಿ ಹೋದ ಎಸ್‌ಬಿಐ ಎಟಿಎಂ, ಹಿಮಾಚಲ ಪ್ರದೇಶದಲ್ಲಿ ವಾಹನ, ಕಟ್ಟದ ಜಲಸಮಾಧಿ!

ಮಂಡಿ ಪಕ್ಕದಲ್ಲಿನ ಗ್ರಾಮವೊಂದು ಭೂಕುಸಿದ ಪರಿಣಾಮ ಕೊಚ್ಚಿ ಹೋಗಿದೆ. ಬೃಹತ್ ಪರ್ವತವೇ ಕುಸಿದಿದೆ. ಇದರ ಮಣ್ಣು ಕಲ್ಲು ಹಾಗೂ ಪ್ರವಾಹ ನೀರಿನಿಂದ ಇಡೀ ಗ್ರಾಮವೇ ಕೊಚ್ಚಿ ಹೋಗಿದೆ. ಸಣ್ಣ ಗ್ರಾಮದಲ್ಲಿದ್ದ ಕೆಲವೇ ಕೆಲವು ಮನೆಗಳು ಭೂಕುಸಿತದಿಂದ ಕೊಚ್ಚಿ ಹೋಗಿದೆ. ಇದೀಗ ಇಡೀ ಗ್ರಾಮದಲ್ಲಿ ಸಂಪೂರ್ಣ ಮಣ್ಣು, ಕಲ್ಲು ಬಂಡೆ ಹಾಗೂ ಮರಗಳು ತುಂಬಿಕೊಂಡಿದೆ.

 

 

ಭಾರೀ ಮಳೆಯ ಕಾರಣ ಹಲವು ರಾಜ್ಯಗಳಲ್ಲಿ ನದಿಗಳು ಉಕ್ಕೇರಿ ಹರಿಯುತ್ತಿದ್ದು ಪ್ರವಾಹದ ಭೀತಿ ಎದುರಾಗಿದೆ. ಹಿಮಾಚಲಪ್ರದೇಶ, ಕಾಶ್ಮೀರದ ಹಲವೆಡೆ ದಿಢೀರ್‌ ಪ್ರವಾಹ, ಭೂಕುಸಿತದ ಮುನ್ನೆಚ್ಚರಿಕೆ ನೀಡಲಾಗಿದೆ. ದೆಹಲಿಯಲ್ಲಿ 41 ವರ್ಷಗಳಲ್ಲೇ ಗರಿಷ್ಠ ಪ್ರಮಾಣದ ಮಳೆಯಾಗಿದೆ. ಭಾರೀ ಮಳೆಯಿಂದಾಗಿ ಸಾಮಾನ್ಯ ಜನಜೀವನ ಅಸ್ತವ್ಯಸ್ತಗೊಂಡಿದ್ದು, ವಾಹನ, ರೈಲು ಸಂಚಾರಕ್ಕೆ ಅಡ್ಡಿಯಾಗಿದೆ. ಜೊತೆಗೆ ಕೆಲವು ರಾಜ್ಯಗಳಲ್ಲಿ ಎರಡು ದಿನಗಳ ಕಾಲ ಶೈಕ್ಷಣಿಕ ಸಂಸ್ಥೆಗಳಿಗೆ ರಜೆ ಘೋಷಿಸಲಾಗಿದೆ. ಘಟನೆ ಕುರಿತು ಕೇಂದ್ರ ಗೃಹ ಸಚಿವಾಲಯ ನಿಗಾ ವಹಿಸಿದ್ದು, ರಾಜ್ಯಗಳೊಂದಿಗೆ ನಿರಂತರ ಸಂಪರ್ಕದಲ್ಲಿದೆ. ಕೇಂದ್ರ ಗೃಹ ಸಚಿವ ಅಮಿತ್‌ ಶಾ ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳಿಗೆ ಕರೆ ಮಾಡಿ ಮಾಹಿತಿ ಪಡೆದುಕೊಂಡಿದ್ದಾರೆ.

ಮುಂಗಾರು ಚುರುಕು: ಉತ್ತರ ಭಾರತದ ಹಲವೆಡೆ ಭೂಕುಸಿತ, ರಸ್ತೆ ಬಂದ್‌; ಹಿಮಾಚಲದಲ್ಲಿ ನೂರಾರು ಪ್ರವಾಸಿಗರು ಅತಂತ್ರ; ಹಲವರು ಬಲಿ

ಹಿಮಾಚಲಪ್ರದೇಶ, ಉತ್ತರಾಖಂಡ, ಉತ್ತರಪ್ರದೇಶ, ದೆಹಲಿ, ಜಮ್ಮು ಮತ್ತು ಕಾಶ್ಮೀರ, ಲಡಾಖ್‌, ರಾಜಸ್ಥಾನ, ಪಂಜಾಬ್‌, ಹರ್ಯಾಣ ಭಾರೀ ಮಳೆಗೆ ತತ್ತರಿಸಿರುವ ರಾಜ್ಯಗಳಾಗಿವೆ. ಹಿಮಾಚಲ ಪ್ರದೇಶದಲ್ಲಿ ಕಳೆದ ಕೆಲ ದಿನಗಳಿಂದ ಭಾರೀ ಪ್ರಮಾಣದಲ್ಲಿ ಸುರಿಯುತ್ತಿರುವ ಮಳೆ, ಭಾನುವಾರವೂ ತನ್ನ ಉಗ್ರ ಪ್ರತಾಪ ಮುಂದುವರೆಸಿದ್ದು, 6 ಜನರನ್ನು ಬಲಿ ಪಡೆದಿದೆ. ಶಿಮ್ಲಾ ಜಿಲ್ಲೆಯ ಕೊಟಾಗಢ ಎಂಬಲ್ಲಿ ಮನೆ ಕುಸಿದು ಮೂವರು ಸಾವನ್ನಪ್ಪಿದ್ದಾರೆ. ಇನ್ನು ಕುಲು ನಗರದಲ್ಲಿ ಮನೆ ಕುಸಿತಕ್ಕೆ ಓರ್ವ ಮಹಿಳೆ ಬಲಿಯಾಗಿದ್ದರೆ, ವ್ಯಕ್ತಿಯೊಬ್ಬರು ಮಣ್ಣು ಕುಸಿತದ ಘಟನೆಯಲ್ಲಿ ಭೂಸಮಾಧಿಯಾಗಿದ್ದಾರೆ. ಶಿಮ್ಲಾ ನಗರದ ಹೊರವಲಯದಲ್ಲಿ ಬಾಲಕಿಯೊಬ್ಬಳು ಪ್ರವಾಹದಲ್ಲಿ ಕೊಚ್ಚಿ ಹೋಗಿದ್ದಾಳೆ.

 

 

Latest Videos
Follow Us:
Download App:
  • android
  • ios