ಭಾರಿ ಮಳೆಗೆ ಕೊಚ್ಚಿ ಹೋದ ಎಸ್‌ಬಿಐ ಎಟಿಎಂ, ಹಿಮಾಚಲ ಪ್ರದೇಶದಲ್ಲಿ ವಾಹನ, ಕಟ್ಟದ ಜಲಸಮಾಧಿ!
ಉತ್ತರ ಭಾರತದ ಹೆಲೆವೆಡೆ ಭಾರಿ ಮಳೆಯಾಗುತ್ತಿದೆ. ದೆಹಲಿ, ಹಿಮಾಚಲ ಪ್ರದೇಶಗಳಲ್ಲಿ ಪ್ರವಾಹ ಸೃಷ್ಟಿಯಾಗಿದೆ. ಕುಲು ಮನಾಲಿ ರಸ್ತೆಗಳು ನೀರಿನಲ್ಲಿ ಕೊಚ್ಚಿ ಹೋಗಿದೆ. ಸಾಲು ಸಾಲು ವಾಹನಗಳು ನೀರಿನಲ್ಲಿ ತೇಲಿ ಹೋಗಿದೆ. ಇತ್ತ ಎಟಿಎಂ ಮಶಿನ್ ಇದ್ದ ಕಟ್ಟಡವೇ ಜಲಸಮಾಧಿಯಾಗಿದೆ.
ಹಿಮಾಚಲ ಪ್ರದೇಶ(ಜು.09) ಭಾರಿ ಮಳೆಗೆ ಹಲವು ರಾಜ್ಯಗಳು ತತ್ತರಿಸಿದೆ. ಪ್ರವಾಹಕ್ಕೆ ಹಲವರು ಜೀವಗಳು ಬಲಿಯಾಗಿದೆ. ಕಟ್ಟಡಗಳು ಕುಸಿದಿದೆ. ಭೂಕುಸಿತ, ರಸ್ತೆಗಳು, ಸೇತುವೆಗಳು ಜಲಸಮಾಧಿಯಾಗಿದೆ. ಹಿಮಾಚಲ ಪ್ರದೇಶದಲ್ಲಿ ಪ್ರವಾಸಿಗರು ಅತಂತ್ರರಾಗಿದ್ದಾರೆ. ಹಲವು ಮನೆಗಳು, ಕಟ್ಟಡಗಳು ನೀರಿನಲ್ಲಿ ಕೊಚ್ಚಿ ಹೋಗಿದೆ. ಇತ್ತ ವಾಹನಗಳು ಇದಕ್ಕಿದ್ದಂತೆ ಕಣ್ಣರೆಯಾಗುತ್ತಿದೆ. ಇತ್ತ ಎಸ್‌ಬಿಎಂ ಎಟಿಎಂ ಮಶಿನ್ ಇದ್ದ ಕಟ್ಟಡವೇ ಜಲಸಮಾಧಿಯಾಗಿದೆ.
ಹಿಮಾಚಲ ಪ್ರದೇಶದ ದೃಶ್ಯಗಳು ಭೀಕರವಾಗಿದೆ. ಮನಾಲಿಯ ಬಂಹಗ್ ನಗರ ತತ್ತರಿಸಿದೆ. ರಸ್ತೆ ಬದಿಯಲ್ಲಿರುವ ಎಸ್‌ಬಿಐ ಎಟಿಎಂ, ಇತರ ವಾಣಿಜ್ಯ ವಹಿವಾಟು ಹೊಂದಿದ್ದ ಕಟ್ಟಡವೇ ಭೂಕುಸಿತದಿಂದ ಜಲಸಮಾಧಿಯಾಗಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ. ಕಟ್ಟದ ಹಿಂಭಾಗದಲ್ಲಿನ ನದಿ ನೀರಿನ ಮಟ್ಟ ಏರಿಕೆಯಾಗುತ್ತಿದ್ದಂತೆ ಭೂಕುಸಿತ ಆರಂಭಗೊಂಡಿದೆ. ನೋಡ ನೋಡುತ್ತಿದ್ದಂತೆ ಕಟ್ಟಡ ಕುಸಿದಿದೆ.
ಈ ವಿಡಿಯೋಗೆ ಹಲವು ಪ್ರವಾಸಿಗರು ಸೇರಿದಂತೆ ಸ್ಥಳೀಯರು ಪ್ರತಿಕ್ರಿಯೆ ನೀಡಿದ್ದಾರೆ. ಇದೇ ಎಟಿಎಂನಲ್ಲಿ ಇತ್ತೀಚೆಗೆ ಹಣ ಪಡೆದುಕೊಂಡಿದೆ. ಈ ವಿಡಿಯೋ ಬೆಚ್ಚಿಬೀಳಿಸಿದೆ ಎಂದು ಪ್ರವಾಸಿಗರೊಬ್ಬರು ಕಮೆಂಟ್ ಮಾಡಿದ್ದಾರೆ. ಭಾರಿ ಮಳೆ ಹಾಗೂ ಪ್ರವಾಹದಿಂದ ಹಿಮಾಚಲ ಪ್ರದೇಶದಲ್ಲಿ ಹಲವು ಪ್ರವಾಸಿಗರು ಸಿಲುಕಿಕೊಂಡಿದ್ದಾರೆ.
ಇದೇ ರಸ್ತೆ ಬದಿಯಲ್ಲಿನ ಹಲವು ಕಟ್ಟಡಗಳು ನೀರಿನಲ್ಲಿ ಕೊಚ್ಚಿ ಹೋಗಿದೆ. ಭೂಕುಸಿತದಿಂದ ಹಿಮಾಚಲ ಪ್ರದೇಶದಲ್ಲಿ ಹಲವು ಮನೆಗಳು ನೆಲಕ್ಕುರುಳಿದೆ. ಹಲವು ಪಟ್ಟಣ, ಗ್ರಾಮಗಳು ಸಂಪರ್ಕ ಕಡಿದುಕೊಂಡಿದೆ. ನಿಲ್ಲಿಸಿದ್ದ ಕಾರುಗಳು ಒಂದೇ ಸಮನೆ ನೀರಿನಲ್ಲಿ ಕೊಚ್ಚಿ ಹೋಗಿದೆ. ಮನಾಲಿ-ಚಂಡೀಘಡ ಹೆದ್ದಾರಿ ಬಂದ್ ಮಾಡಲಾಗಿದೆ. ಹೆದ್ದಾರಿಯ ಬಹುತೇಕ ಕಡೆಗಳಲ್ಲಿ ಭೂಕುಸಿತ ಸಂಭವಿಸಿದೆ.
Uttara kannada rains: ಭಾರೀ ಮಳೆಗೆ ತತ್ತರಿಸಿದ ಭಟ್ಕಳ, ಎಲ್ಲಿ ನೋಡಿದರೂ ನೀರೇ ನೀರು!
ಜೂನ್ ತಿಂಗಳ ಅಂತ್ಯದಿಂದ ಹಿಮಾಚಲ ಪ್ರದೇಶದಲ್ಲಿ ಭಾರಿ ಮಳೆಯಾಗುತ್ತಿದೆ. ಇದೀಗ ಮೆಘಸ್ಫೋಟವೇ ಸಂಭವಿಸಿ ಭಾರಿ ಅನಾಹುತವಾಗಿದೆ. ಜೂನ್ ತಿಂಗಳ ಅಂತ್ಯದಲ್ಲಿ ಹಿಮಾಚಲಪ್ರದೇಶದಲ್ಲಿ ಭಾರಿ ಪ್ರಮಾಣದಲ್ಲಿ ಮಳೆಯಾಗಿದ್ದರಿಂದ ದಿಢೀರ್ ಪ್ರವಾಹ ಕಾಣಿಸಿಕೊಂಡು ಭೂಕುಸಿತ ಉಂಟಾಗಿತ್ತು. ಮಳೆ ಸಂಬಂಧಿ ಘಟನೆಗೆ 6 ಜನರು ಬಲಿಯಾಗಿದ್ದರು. 10 ಜನರು ಗಾಯಗೊಂಡಿದ್ದರು. ಜೊತೆಗೆ 120 ರಸ್ತೆಗಳಿಗೆ ಹಾನಿಯಾಗಿತ್ತು.ಈ ಪೈಕಿ ಮಂಡಿಯಿಂದ ಕುಲು ಸಂಪರ್ಕಿಸುವ ಹೆದ್ದಾರಿ ಸಂಚಾರ ಪೂರ್ಣ ಬಂದ್ ಆಗಿತ್ತು. ಪರಿಣಾಮ ಸುಮಾರು 15 ಕಿ.ಮೀ. ಉದ್ದದಷ್ಟುಟ್ರಾಫಿಕ್ ಜಾಮ್ ಉಂಟಾಗಿದ್ದು, ವಾಹನಗಳು ಸಿಲುಕಿವೆ. ಹೋಟೆಲ್ ರೂಂ ಲಭಿಸದ ಕಾರಣ 200 ಪ್ರವಾಸಿಗರು ನಡುರಸ್ತೆಯಲ್ಲೇ ರಾತ್ರಿಯನ್ನು ಕಳೆದಿದ್ದರು. ಇದೀಗ ಕುಲು-ಮನಾಲಿ, ಚಂಡೀಘಡ ಸೇರಿದಂತೆ ಹಲವು ಹೆದ್ದಾರಿಗಳು ಬಂದ್ ಆಗಿವೆ.