Asianet Suvarna News Asianet Suvarna News

ಬ್ಯಾಂಕಾಕ್-ಕೋಲ್ಕತ್ತಾ ವಿಮಾನದಲ್ಲಿ ಪ್ರಯಾಣಿಕರ ನಡುವೆ ಮಾರಾಮಾರಿ: ವಿಡಿಯೋ ವೈರಲ್‌

ಬ್ಯಾಂಕಾಂಕ್‌ನಿಂದ ಕೋಲ್ಕತ್ತಕ್ಕೆ ಬರುತ್ತಿದ್ದ ವಿಮಾನದಲ್ಲಿ ಮಾರಾಮಾರಿ ವರದಿಯಾಗಿದ್ದು, ಪ್ರಯಾಣಿಕರು ಕೈ ಕೈ ಮಿಲಾಯಿಸುವ ಹಂತಕ್ಕೆ ಹೋಗಿದ್ದಾರೆ. 

fight on flight physical brawl between passengers on bangkok kolkata flight watch viral video ash
Author
First Published Dec 29, 2022, 2:04 PM IST

ಮನೆಯಲ್ಲಿ, ಬೀದಿಯಲ್ಲಿ ಜಗಳಗಳು (Fight) ಇತ್ತೀಚೆಗೆ ಸಾಮಾನ್ಯವಾಗ್ತಿದೆ. ಈ ಮಧ್ಯೆ, ಈಗ ಆಕಾಶದಲ್ಲೂ ಜಗಳಗಳು ಹೆಚ್ಚಾಗುತ್ತಿರುವ ಬಗ್ಗೆ ವರದಿಯಾಗುತ್ತಿದೆ. ಇತ್ತೀಚೆಗಷ್ಟೇ ವಿಮಾನವೊಂದರಲ್ಲಿ (Flight) ಪ್ರಯಾಣಿಕ (Passenger) ಹಾಗೂ ಗಗನಸಖಿಯರು (Air Hostess) ಜಗಳವಾಡಿಕೊಂಡಿದ್ದು ಸುದ್ದಿಯಾಗಿತ್ತು. ನಾವು ಹೇಳಲು ಹೊರಟಿರುವ ಈ ಸ್ಟೋರಿಯಲ್ಲಿ ಪ್ರಯಾಣಿಕರೇ ಹೊಡೆದಾಡಿಕೊಂಡಿದ್ದಾರೆ. ಬ್ಯಾಂಕಾಂಕ್‌ನಿಂದ (Bangkok) ಕೋಲ್ಕತ್ತಕ್ಕೆ (Kolkata) ಬರುತ್ತಿದ್ದ ವಿಮಾನದಲ್ಲಿ ಈ ಮಾರಾಮಾರಿ ವರದಿಯಾಗಿದೆ. 

ಥಾಯ್ ಸ್ಮೈಲ್ ಏರ್‌ವೇಸ್ ವಿಮಾನದಲ್ಲಿದ್ದ ಕೆಲವು ಪ್ರಯಾಣಿಕರು ನೋಡು ನೋಡುತ್ತಿದ್ದಂತೆಯೇ ಜಗಳ ಆರಂಭಿಸಿದ್ದಾರೆ. ಹಲವರು ಈ ಜಗಳವನ್ನು ನೋಡಿಕೊಂಡು ಸುಮ್ಮನೆ ಕೂತಿದ್ದರೆ, ಇನ್ನು ಕೆಲವರು ಈ ಜಗಳದ ದೃಶ್ಯಗಳನ್ನು ರೆಕಾರ್ಡ್‌ ಮಾಡಿ ವಿಡಿಯೋ ಮಾಡಿದ್ದಾರೆ.  ಸಾಮಾಜಿಕ ಮಾಧ್ಯಮದಲ್ಲಿ (Social Media) ವ್ಯಾಪಕವಾಗಿ ಹಂಚಿಕೊಳ್ಳಲಾದ ವಿಡಿಯೋದಲ್ಲಿ, ಇಬ್ಬರು ಪುರುಷರು ಪರಸ್ಪರ ಜಗಳವಾಡುತ್ತಿರುವುದನ್ನು ಕಾಣಬಹುದು. ನಂತರ, ವಿಮಾನದ ಸಿಬ್ಬಂದಿ ಪರಿಸ್ಥಿತಿಯನ್ನು ತಹಬದಿಗೆ ತರಲು ಪ್ರಯಾಣಿಕರನ್ನು ಸಮಾಧಾನಪಡಿಸಲು ಪ್ರಯತ್ನಿಸಿದ್ದಾರೆ ಎಂದು ತಿಳಿದುಬಂದಿದೆ. ಕೆಲವು ಪ್ರಯಾಣಿಕರು ಸಹ ಅವರನ್ನು ಹೊಡೆದಾಡಿಕೊಳ್ಳದಂತೆ ಕೇಳಿಕೊಂಡಿದ್ದಾರೆ. 

ಇದನ್ನು ಓದಿ: Indigo Airlines ಪ್ರಯಾಣಿಕರು -ಗಗನಸಖಿ ನಡುವೆ ವಾಗ್ವಾದ: ವಿಡಿಯೋ ವೈರಲ್‌

ಪುರುಷರಲ್ಲಿ ಒಬ್ಬರು ಸದ್ದಿಲ್ಲದೆ ಕುಳಿತುಕೊಳ್ಳಿ ಎಂದು ಹಿಂದಿಯಲ್ಲಿ ಹೇಳುವುದನ್ನು ಕೇಳಬಹುದಾಗಿದೆ. ಆದರೆ ಇನ್ನೊಬ್ಬರು "ಹಾತ್ ನೀಚೆ ಕರ್"  ಅಂದರೆ, ನಿಮ್ಮ ಕೈಯನ್ನು ಕೆಳಕ್ಕೆ ಇರಿಸಿ ಎಂದು ಹೇಳಿದ್ದಾರೆ. ಬಳಿಕ, ಕೆಲವೇ ಸೆಕೆಂಡುಗಳಲ್ಲಿ, ಮಾತಿನಿಂದ ಆರಂಭವಾದ ಈ ಜಗಳ ಕೈ ಕೈ ಮಿಲಾಯಿಸುವ ಹಂತಕ್ಕೆ ಹೋಗಿದೆ. ಒಬ್ಬ ವ್ಯಕ್ತಿಯು ಆಕ್ರಮಣಕಾರಿಯಾಗಿ ಮತ್ತೊಬ್ಬರ ಮೇಲೆ ಹಲ್ಲೆ ಮಾಡಿದ್ದಾರೆ. ಆ ವ್ಯಕ್ತಿ ತನ್ನ ಕನ್ನಡಕವನ್ನು ತೆಗೆದು ನಂತರ ಇನ್ನೊಬ್ಬ ವ್ಯಕ್ತಿಗೆ ಹೊಡೆಯುವುದನ್ನು ವಿಡಿಯೋದಲ್ಲೂ ಕಾಣಬಹುದಾಗಿದೆ. ಬಳಿಕ, ಆತನ ಸ್ನೇಹಿತರು ಸಹ ಈ ಜಗಳಕ್ಕೆ ಸೇರಿಕೊಂಡಿದ್ದು, ಮತ್ತೊಬ್ಬ ವ್ಯಕ್ತಿ ಮೇಲೆ ಹೊಡೆಯಲು ಹೋಗುತ್ತಾರೆ.

ಆದರೆ, ಆ ವ್ಯಕ್ತಿ ಮಾತ್ರ ಇತರರ ಮೇಲೆ ಕೈ ಮಾಡಲಿಲ್ಲ, ಮತ್ತು ತನ್ನನ್ನು ತಾನು ರಕ್ಷಿಸಿಕೊಳ್ಳುವುದನ್ನು ಮಾತ್ರ ಕಾಣಬಹುದು. ಇನ್ನು, ಕೆಲವು ಫ್ಲೈಟ್ ಅಟೆಂಡೆಂಟ್‌ಗಳು ಈ ಜಗಳ ಬಿಡಿಸಲು ಪ್ರಯತ್ನ ಪಟ್ಟಿದ್ದು, ಆ ಇಬ್ಬರನ್ನು ಯಶಸ್ವಿಯಾಗಿ ಜಗಳ ಬಿಡಿಸುವ ಮೊದಲು ಜಗಳವನ್ನು ನಿಲ್ಲಿಸುವಂತೆ ಸಹ-ಪ್ರಯಾಣಿಕರು ಮತ್ತು ಕ್ಯಾಬಿನ್ ಸಿಬ್ಬಂದಿ ವ್ಯಕ್ತಿಯನ್ನು ಕೇಳಿಕೊಳ್ಳುವುದನ್ನು ವಿಡಿಯೋದಲ್ಲಿ ಕೇಳಬಹುದಾಗಿದೆ. ಬ್ಯಾಂಕಾಕ್‌ನಿಂದ ಕೋಲ್ಕತ್ತಾಗೆ ತೆರಳುತ್ತಿದ್ದ ವಿಮಾನದಲ್ಲಿ ಈ ಘಟನೆ ನಡೆದಿದೆ ಎಂದು ವರದಿಯಾಗಿದೆ.

ಇದನ್ನೂ ಓದಿ: ವಿಮಾನಗಳು ಏಕೆ ಬಿಳಿ ಬಣ್ಣದಲ್ಲಿರುತ್ತೆ?

ಇನ್ನು, ಈ ಘಟನೆ ಬಗ್ಗೆ, ಥಾಯ್ ಸ್ಮೈಲ್ ಏರ್‌ವೇಸ್ ಈವರೆಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಅಲ್ಲದೆ, ತಪ್ಪಿತಸ್ಥರ ಮೇಲೆ ತೆಗೆದುಕೊಂಡ ಕ್ರಮದ ಬಗ್ಗೆಯೂ ಯಾವುದೇ ಅಪ್‌ಡೇಟ್ ನೀಡಿಲ್ಲ. ಇನ್ನೊಂದೆಡೆ, ವಿಮಾನದಲ್ಲಿ ಜಗಳದ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುತ್ತಿದ್ದು, ಈ ವಿಡಿಯೋವನ್ನು ಹಲವು ನೆಟ್ಟಿಗರು ಶೇರ್‌ ಮಾಡಿಕೊಳ್ಳುತ್ತಿದ್ದು, ವಿಭಿನ್ನ ಕ್ಯಾಪ್ಷನ್‌ ಅನ್ನೂ ನೀಡುತ್ತಿದ್ದಾರೆ. ಅಲ್ಲದೆ, ಈ ವಿಡಿಯೋ ಲಕ್ಷಾಂತರ ವೀಕ್ಷಣೆ, ನೂರಾರು ರೀಟ್ವೀಟ್‌ಗಳನ್ನು ಕಂಡಿದ್ದು, ಹಲವರು ಒಂದೊಂದು ರೀತಿಯ ಕಮೆಂಟ್‌ ಅನ್ನೂ ಮಾಡುತ್ತಿದ್ದಾರೆ. 

ಇಂಡಿಗೋ ವಿಮಾನದಲ್ಲಿ ಪ್ರಯಾಣಿಕ - ಸಿಬ್ಬಂದಿ ನಡುವೆ ವಾಗ್ವಾದ
ಇನ್ನು, ಇತ್ತೀಚೆಗಷ್ಟೇ ಇಂಡಿಗೋ ಏರ್‌ಲೈನ್‌ನ ಪ್ರಯಾಣಿಕರೊಬ್ಬರು ಮತ್ತು ಸಿಬ್ಬಂದಿಯೊಬ್ಬರ ನಡುವಿನ ವಾಗ್ವಾದದ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿವೈರಲ್ ಆಗಿದೆ. ಇಂಡಿಗೋ ಏರ್‌ಲೈನ್ಸ್‌ನ ಇಸ್ತಾನ್‌ಬುಲ್ - ದೆಹಲಿ ವಿಮಾನದಲ್ಲಿ ಆಹಾರದ  ವಿಚಾರಕ್ಕೆ ಈ ಜಗಳ ನಡೆದಿದೆ ಎಂದು ಈ ವಿಡಿಯೋ ಕ್ಲಿಪ್‌ ಅನ್ನು ಚಿತ್ರೀಕರಿಸಿದ ಮತ್ತು ಅದನ್ನು ಟ್ವಿಟ್ಟರ್‌ನಲ್ಲಿ ಪೋಸ್ಟ್ ಮಾಡಿದ ವ್ಯಕ್ತಿ ಹೇಳಿದ್ದಾರೆ. ಈ ವಿಡಿಯೋಗೆ ಸಂಬಂಧಪಟ್ಟಂತೆ ಪ್ರತಿಕ್ರಿಯಿಸಿದ ವಿಮಾನಯಾನ ಸಂಸ್ಥೆಯು, ಪ್ರಯಾಣಿಕರು ವಿಮಾನದಲ್ಲಿ ಕೆಟ್ಟ ನಡವಳಿಕೆ ತೋರಿದರು ಮತ್ತು ಗಗನಸಖಿಯೊಬ್ಬರನ್ನು ಅವಮಾನಿಸಿದರು. ಬಳಿಕ, ಸಿಬ್ಬಂದಿ ಮುಖ್ಯಸ್ಥರು ಈ ವಿಚಾರದಲ್ಲಿ ಮಧ್ಯ ಪ್ರವೇಶ ಮಾಡಬೇಕಾಯಿತು. ಹಾಗೂ, ಈ ಘಟನೆಯನ್ನು ಪರಿಶೀಲಿಸುತ್ತಿದ್ದೇವೆ ಮತ್ತು ಗ್ರಾಹಕರ ಸೌಕರ್ಯವು ಯಾವಾಗಲೂ ನಮ್ಮ ಪ್ರಮುಖ ಆದ್ಯತೆಯಾಗಿದೆ ಎಂದು ಏರ್‌ಲೈನ್ಸ್‌ ಭರವಸೆ ನೀಡಿತ್ತು.

ಇದನ್ನೂ ಓದಿ: ವಿಮಾನ ಸೇವೆಯಲ್ಲಿ ವಿಶ್ವದಲ್ಲೇ ಬೆಂಗಳೂರು ಏರ್‌ಪೋರ್ಟ್‌ ಉತ್ತಮ..!

Follow Us:
Download App:
  • android
  • ios