ವೈಯಕ್ತಿಕ ದ್ವೇಷಕ್ಕೆ ವ್ಯಕ್ತಿಯೊಬ್ಬನ ಕಾರಿಗೆ ಕಿಡಿಗೇಡಿಯೊಬ್ಬ ಹಚ್ಚಿದ ಬೆಂಕಿ ಇತರ ವಾಹನಗಳಿಗೂ ಹಬ್ಬಿ 20ಕ್ಕೂ ಹೆಚ್ಚು ವಾಹನಗಳು ಸುಟ್ಟು ಕರಕಲಾದ ಘಟನೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆದಿದೆ.
ನವದೆಹಲಿ: ವೈಯಕ್ತಿಕ ದ್ವೇಷಕ್ಕೆ ವ್ಯಕ್ತಿಯೊಬ್ಬನ ಕಾರಿಗೆ ಕಿಡಿಗೇಡಿಯೊಬ್ಬ ಹಚ್ಚಿದ ಬೆಂಕಿ ಇತರ ವಾಹನಗಳಿಗೂ ಹಬ್ಬಿ 20ಕ್ಕೂ ಹೆಚ್ಚು ವಾಹನಗಳು ಸುಟ್ಟು ಕರಕಲಾದ ಘಟನೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆದಿದೆ. ಹಲವು ಹಂತಗಳಿದ್ದ ಪಾರ್ಕಿಂಗ್ ಏರಿಯಾದಲ್ಲಿ ನಿಲ್ಲಿಸಿದ್ದ ಕಾರಿಗೆ ಬೆಂಕಿ ಹಚ್ಚಿದ ಪರಿಣಾಮ 20ಕ್ಕೂ ಹೆಚ್ಚು ಕಾರುಗಳು ಸುಟ್ಟು ಧ್ವಂಸವಾಗಿವೆ. ದೆಹಲಿಯ ಶುಭಾಷ್ ನಗರದ ಮಲ್ಟಿಲೆವೆಲ್ ಪಾರ್ಕಿಂಗ್ ಪ್ರದೇಶದಲ್ಲಿ ಸೋಮವಾರ ಮುಂಜಾನೆ ಈ ಘಟನೆ ನಡೆದಿದೆ. ತನ್ನ ಸಂಬಂಧಿ(cousion) ಜೊತೆ ಸಂಬಂಧ ಹೊಂದಿದ್ದ ಎಂಬ ದ್ವೇಷದ ಹಿನ್ನೆಲೆಯಲ್ಲಿ 23 ವರ್ಷದ ತರುಣ ಈ ಕೃತ್ಯವೆಸಗಿದ್ದಾನೆ.
ಬೆಂಕಿಯನ್ನು ಒಂದು ಗಂಟೆಯೊಳಗೆ ನಂದಿಸಲಾಗಿದೆ ಎಂದು ಅಗ್ನಿಶಾಮಕ ಸಿಬ್ಬಂದಿ ಹೇಳಿದ್ದಾರೆ. ಈ ಪಾರ್ಕಿಂಗ್ ಕಟ್ಟಡದ ಎನ್‌ಒಸಿ (no objection certificate) ಪ್ರಮಾಣಪತ್ರ (certificate) ಅವಧಿ ಮುಗಿದಿತ್ತು, ಜೊತೆಗೆ ಅಲ್ಲಿ ಅಗ್ನಿಶಾಮಕ ಉಪಕರಣವೂ ಕೆಲಸ ಮಾಡುವ ಸ್ಥಿತಿಯಲ್ಲಿ ಇರಲಿಲ್ಲ ಎಂದು ತಿಳಿದು ಬಂದಿದೆ. ಎಂಸಿಡಿಯ ಪಾರ್ಕಿಂಗ್ ಪ್ರದೇಶದಲ್ಲಿ ಅಗ್ನಿ ಅನಾಹುತ (Fire accident) ಸಂಭವಿಸಿದೆ ಎಂದು ಪೊಲೀಸರಿಗೆ ಮುಂಜಾನೆ 4.30ರ ಸುಮಾರಿಗೆ ಕರೆ ಬಂದಿದೆ. ಹೀಗಾಗಿ ಸ್ಥಳಕ್ಕೆ ಪೊಲೀಸರಲ್ಲದೇ 7 ಅಗ್ನಿಶಾಮಕ ವಾಹನ ಆಗಮಿಸಿ ಬೆಂಕಿ ನಂದಿಸಿತ್ತು. ಬೆಂಕಿ ಬಿದ್ದ ಸುದ್ದಿ ತಿಳಿದ ಕೂಡಲೇ ಅಲ್ಲಿ ತಮ್ಮ ವಾಹನವನ್ನು ಪಾರ್ಕಿಂಗ್ (Parking) ಮಾಡಿದ್ದ ವಾಹನಗಳ ಮಾಲೀಕರು ಅಲ್ಲಿಗೆ ಆಗಮಿಸಿ ತಮ್ಮ ವಾಹನವನ್ನು ತಮ್ಮ ತಮ್ಮ ಕಾರುಗಳನ್ನು ರಕ್ಷಿಸಿಕೊಳ್ಳಲು ಮುಂದಾದರು.
Bengaluru: ರಸ್ತೆ ಬದಿ ವಾಹನ ನಿಲ್ಲಿಸುವ ಸವಾರರೇ ಎಚ್ಚರ: ನಂಬರ್ ಪ್ಲೇಟ್ ಸರಿಯಿಲ್ಲದಿದ್ದರೆ ಬೈಕ್ ಲಾಕ್
ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿದ ಮೇಲೆ ನೋಡಿದಾಗ ಸುಮಾರು 20 ಕಾರುಗಳು ಬೆಂಕಿಗೆ ಆಹುತಿಯಾಗಿ ಸಂಪೂರ್ಣ ಕರಕಲಾಗಿದ್ದವು. ಪಾರ್ಕಿಂಗ್ ಕಟ್ಟಡದ 3ನೇ ಬೇಸ್‌ಮೆಂಟ್‌ನಲ್ಲಿ ಈ ಅನಾಹುತ ನಡೆದಿದೆ. ಕೆಲವು ವಾಹನಗಳ ಪಳೆಯುಳಿಕೆ ಮಾತ್ರ ಅಲ್ಲಿ ಲಭ್ಯವಾಗಿದ್ದವು. ಇನ್ನು ವೈಯಕ್ತಿಕ ಸಿಟ್ಟಿಗೆ ಕಾರಿಗೆ ಬೆಂಕಿ ಹಚ್ಚಿದ ಯುವಕನ ವಿರುದ್ಧ ಐಪಿಸಿ ಸೆಕ್ಷನ್ 436( ಬೆಂಕಿಯೊಂದಿಗೆ ಕಿಡಿಗೇಡಿತನ), ಸೆಕ್ಷನ್ 427, ಸೆಕ್ಷನ್ 4(ಸಾರ್ವಜನಿಕ ಆಸ್ತಿಗೆ ಹಾನಿ ಮಾಡುವುದನ್ನು ತಡೆಯುವ ಕಾಯ್ದೆ ಅಡಿ ಪ್ರಕರರಣ ದಾಖಲಾಗಿದೆ ಎಂದು ಹೆಚ್ಚುವರಿ ಡಿಸಿಪಿ ಅಕ್ಷತ್ ಕೌಶಲ್(Akshat Kaushal) ಹೇಳಿದ್ದಾರೆ. ಈ ಅನಾಹುತಕಾರಿ ದೃಶ್ಯವೂ ಅಲ್ಲಿದ್ದ ಸಿಸಿ ಕ್ಯಾಮರಾದಲ್ಲಿ ಸೆರೆ ಆಗಿದೆ. ವಿಡಿಯೋದಲ್ಲಿ ಕಾಣಿಸುವಂತೆ ಆರೋಪಿ ಬಿಳಿ ಬಣ್ಣದ ಹೋಂಡಾ ಸಿಆರ್‌ವಿ (Honda CRV) ವಾಹನದಲ್ಲಿ ವಾಹನ ಪಾರ್ಕಿಂಗ್ ಸ್ಥಳಕ್ಕೆ ಆಗಮಿಸಿದ್ದಾನೆ. ಅಲ್ಲಿ ಪಾರ್ಕ್ ಮಾಡಲಾಗಿದ್ದ, ಎರ್ಟಿಗಾ ಕಾರಿನ ಟೈರ್‌ಗೆ ಬೆಂಕಿ ಹಚ್ಚಿ ನಂತರ ಬಂದ ಕಾರಿನಲ್ಲೇ ವಾಪಸ್ ಹೋಗಿದ್ದಾನೆ.
ಘಟನೆಯ ಬಳಿಕ ಪೊಲೀಸರು ಈ ಕಿಡಿಗೇಡಿಯನ್ನು ಪತ್ತೆ ಮಾಡಿದ್ದು, ಆತನನ್ನು 23 ವರ್ಷದ ಶುಭಾಷ್ ನಗರದ (Subhash Nagar) ನಿವಾಸಿ ಯಶ್ ಅರೋರಾ (Yash Arora) ಎಂದು ಗುರುತಿಸಲಾಗಿದ್ದು, ಆತನನ್ನು ಪೊಲೀಸರು ಬಂಧಿಸಿದ್ದಾರೆ. ವಿಚಾರಣೆ (nterrogation) ವೇಳೆ ಆತ ಸೇಡು ತೀರಿಸಿಕೊಳ್ಳುವ ಸಲುವಾಗಿ ಈ ಕೃತ್ಯವೆಸಗಿದ್ದಾಗಿ ಹೇಳಿದ್ದಾನೆ. ಎರ್ಟಿಗಾ ಕಾರಿನ ಮಾಲೀಕ ಇಶಾನ್ ಹಾಗೂ ಆರೋಪಿ ಯಶ್ ಆರೋರಾನ ಸಂಬಂಧಿಯೊಂದಿಗೆ ಸಂಬಂಧವನ್ನು ಹೊಂದಿದ್ದು, ಹೀಗಾಗಿ ಇದರ ವಿರುದ್ಧ ಸೇಡು ತೀರಿಸಿಕೊಳ್ಳುವ ಸಲುವಾಗಿ ಇಶಾನ್ ಕಾರಿಗೆ ಬೆಂಕಿ ಹಚ್ಚಿದ್ದಾಗಿ ಆರೋಪಿ ಯಶ್ ಆರೋರಾ ಹೇಳಿದ್ದಾನೆ.
ಇಲ್ಲಿ ಕಾರಿಗಿಂತ ಪಾರ್ಕಿಂಗ್ ಬಲು ದುಬಾರಿ, ವಾಹನ ನಿಲ್ಲಿಸಲು ನೀಡಬೇಕು 6 ಕೋಟಿ ರೂ!