ಇಲ್ಲಿ ಕಾರಿಗಿಂತ ಪಾರ್ಕಿಂಗ್ ಬಲು ದುಬಾರಿ, ವಾಹನ ನಿಲ್ಲಿಸಲು ನೀಡಬೇಕು 6 ಕೋಟಿ ರೂ!
ನಗರದಲ್ಲಿ ಪಾರ್ಕಿಂಗ್ ಸಮಸ್ಯೆ ಹೆಚ್ಚು. ಆದರೆ ಈ ನಗರದಲ್ಲಿ ಐಷಾರಾಮಿ ಕಾರು ಬೇಕಾದರೂ ಖರೀದಿಸಬಹುದು. ಆದರೆ ಪಾರ್ಕಿಂಗ್ ಮಾತ್ರ ಬಲು ದುಬಾರಿ. ಒಂದು ಕಾರು ಪಾರ್ಕಿಂಗ್ ಚಾರ್ಜ್ ಬರೋಬ್ಬರಿ 6 ಕೋಟಿ ರೂಪಾಯಿ.
ನ್ಯೂಯಾರ್ಕ್(ನ.24): ಮಹಾ ನಗರಗಳಲ್ಲಿ ಪಾರ್ಕಿಂಗ್ ಅತೀ ದೊಡ್ಡ ಸಮಸ್ಯೆ. ಪಾರ್ಕಿಂಗ್ ಹುಡುಕಿ ಕಾರು ನಿಲ್ಲಿಸಿ ಬರುವಾಗ ಸುಸ್ತೋ ಸುಸ್ತೋ. ತಡವಾಗಿದೆ ಎಂದು ಖಾಲಿ ಜಾಗ ಇದೆ ಎಂದು ನಿಲ್ಲಿಸಿದರೆ ದಂಡ. ಬೆಂಗಳೂರು ಸೇರಿದಂತೆ ಹಲವು ನಗರಗಳಲ್ಲಿ ಈ ಸಮಸ್ಯೆಯನ್ನು ಬಹುತೇಕರು ಅನುಭವಿಸಿರುತ್ತಾರೆ. ಇದೇ ಕಾರಣಕ್ಕೆ ಪಾರ್ಕಿಂಗ್ ವೆಚ್ಚವೂ ದುಬಾರಿಯಾಗುತ್ತಿದೆ. ಆದರೆ ಅಮೆರಿಕದ ನ್ಯೂಯಾರ್ಕ್ ನಗರದಲ್ಲಿ ಪರಿಸ್ಥಿತಿ ಕೈಮೀರಿ ಹೋಗಿದೆ. ನಿಗದಿತ ಪಾರ್ಕಿಂಗ್ ಸ್ಥಳಗಳ ಸಂಖ್ಯೆ ಕಡಿಮೆ. ಹೀಗಾಗಿ ಕಾರು ಪಾರ್ಕಿಂಗ್ ಜಾಗ ಖರೀದಿ ಅತ್ಯಂತ ದುಬಾರಿಯಾಗಿದೆ. ನ್ಯೂಯಾರ್ಕ್‌ನ ಐಷಾರಾಮಿ ಅಪಾರ್ಟ್‌ಮೆಂಟ್‌ನಲ್ಲಿನ ಕಾರು ಪಾರ್ಕಿಂಗ್ ಜಾಗದ ಚಾರ್ಜ್ ಬರೋಬ್ಬರಿ 6 ಕೋಟಿ ರೂಪಾಯಿ.
ನ್ಯೂಯಾರ್ಕ್ ಖಾಸಗಿ ಅಪಾರ್ಟ್‌ಮೆಂಟ್‌ನಲ್ಲಿ ಮನೆ ಖರೀದಿಸುವವರು ತಮ್ಮ ತಮ್ಮ ಕಾರು ಪಾರ್ಕಿಂಗ್ ಜಾಗವನ್ನು ಖರೀದಿಸಬೇಕು. ಈ ಐಷಾರಾಮಿ ಅಪಾರ್ಟ್‌ಮೆಂಟ್‌ನಲ್ಲಿ ಕೇವಲ ಕಾರು ಪಾರ್ಕಿಂಗ್ ಸ್ಲಾಟ್ ಖರೀದಿಗೆ 6,12,69,183 ರೂಪಾಯಿ ನೀಡಬೇಕು. ಅದು ಅತ್ಯಂತ ದುಬಾರಿ ಪಾರ್ಕಿಂಗ್ ಎನಿಸಿಕೊಂಡಿದೆ.
ಎಲ್ಲೆಂದರಲ್ಲಿ ವಾಹನ ನಿಲ್ಲಿಸಿದರೆ ಜೋಕೆ, ಬೆಂಗಳೂರಿನ ಪೇ & ಪಾರ್ಕ್ 685 ರಸ್ತೆಗೆ ವಿಸ್ತರಣೆ!
ನ್ಯೂಯಾರ್ಕ್‌ನಲ್ಲಿನ ಬಹುತೇಕ ಅಪಾರ್ಟ್‌ಮೆಂಟ್‌ಗಳಲ್ಲಿನ ಪಾರ್ಕಿಂಗ್ ಸ್ಲಾಟ್ ಖರೀದಿಗೆ ಕೋಟಿ ರೂಪಾಯಿ ನೀಡಬೇಕು. ಕೊರೋನಾ ಮೊದಲು ಸರಿಸುಮಾರು 90 ಲಕ್ಷ ರೂಪಾಯಿಯಿಂದ 1 ಕೋಟಿ ರೂಪಾಯಿ ಇದ್ದ ಪಾರ್ಕಿಂಗ್ ವೆಚ್ಚ ಇದೀಗ ದುಪ್ಟಟ್ಟವಾಗಿದೆ. ಇನ್ನು ಐಷಾರಾಮಿ ಅಪಾರ್ಟ್‌ಮೆಂಟ್‌ಗಳಲ್ಲಿ ಕೋಟಿ ಕೋಟಿ ರೂಪಾಯಿ ಸುರಿಯಬೇಕು.
ನ್ಯೂಯಾರ್ಕ್ ನಗರದ ರಸ್ತೆಗಳು ವಿಶಾಲವಾಗಿದೆ. ನಗರದೊಳಗೆ ಹಲವು ಕಡೆಗಳಲ್ಲಿ ವಿಶಾಲ ಜಾಗಗಳಿವೆ. ಆದರೆ ಭಾರತದ ರೀತಿ ಎಲ್ಲೆಂದರಲ್ಲಿ ವಾಹನ ಪಾರ್ಕ್ ಮಾಡುವಂತಿಲ್ಲ. ಪೊಲೀಸರು ಇದ್ದಾರೋ, ಸಿಸಿಟಿವಿ ಇದೆಯೋ ಎಂದು ಗಮಿನಿಸಿ ಪಾರ್ಕ್ ಮಾಡುವ ಜಾಯಮಾನ ಅಮೆರಿಕದಲ್ಲಿ ಇಲ್ಲ. ನಿಗದಿತ ಸ್ಥಳದಲ್ಲಿ ಮಾತ್ರ ಪಾರ್ಕ್ ಮಾಡಬೇಕು. ಅಪಾರ್ಟ್‌ಮೆಂಟ್, ಮನೆ ಮುಂದೆ ರಸ್ತೆ ಖಾಲಿ ಇದೆ. ಸಣ್ಣ ಜಾಗ ಇದೆ ಅಂದರೂ ಕಾರು ಅಥವಾ ವಾಹನ ಪಾರ್ಕ್ ಮಾಡುವಂತಿಲ್ಲ. ಹೀಗಾಗಿ ನ್ಯೂಯಾರ್ಕ್ ನಗರದಲ್ಲಿ ಪಾರ್ಕಿಂಗ್ ಅತೀ ದುಬಾರಿ ಕೆಲಸ.
ಹೊಚ್ಚ ಹೊಸ ಕಾರಿನಲ್ಲಿ ಮನೆಗೆ ಬಂದ ಮಾಲೀಕ, ಪಾರ್ಕ್ ಮಾಡಿದ್ದ ಬೈಕ್ ಮೇಲೆ ಹತ್ತಿಸಿ ಅಪಘಾತ!
ಕಾರಿಗೆ ಗುದ್ದಿ 100 ಡಾಲರ್ ಪರಿಹಾರ ಇಟ್ಟು ಹೋದ!
ಫ್ಲೋರಿಡಾ ಎಪ್ಕಾಟ್ ಥೀಮ್ ಪಾರ್ಕ್ನಲ್ಲಿ ವ್ಯಕ್ತಿಯೊಬ್ಬ ಪಾರ್ಕಿಂಗ್ ಪ್ರದೇಶದಲ್ಲಿ ಕಾರು ನಿಲ್ಲಿಸಿ, ಪಾರ್ಕ್ ನೋಡಲು ಹೋಗಿದ್ದ. ಆತ ತುಂಬಾ ಹೊತ್ತು ಪಾರ್ಕ್ನಲ್ಲಿ ಎಂಜಾಯ್ ಮಾಡಿದ. ಆದರೆ ಮರಳಿ ಬರುವಷ್ಟರಲ್ಲಿ ಆತನ ಕಾರಿಗೆ ಯಾರೋ ಗುದ್ದಿ ಹಾನಿ ಮಾಡಿದ್ದರು. ಇದನ್ನು ಗಮನಿಸಿ ಆತ ತೀವ್ರ ಆಘಾತಗೊಂಡ. ಆದರೆ ನಜ್ಜುಗುಜ್ಜಾಗಿದ್ದ ಬಾನೆಟ್ ಮೇಲೆ ಅದೇನೋ ಕಾಗದ ಕಾಣಿಸಿತು. ಅದನ್ನು ನೋಡಿದಾಗ ಆತನಿಗೆ ಅಚ್ಚರಿ. ಕಾರು ಹಾಳು ಮಾಡಿದ್ದು ತಾನೇ ಎಂದು ಬರೆದಿಟ್ಟಿದ್ದ ವ್ಯಕ್ತಿಯೊಬ್ಬ 100 ಡಾಲರ್ ಹಣವನ್ನೂ ಅದರ ಜತೆ ಇಟ್ಟು ಕ್ಷಮೆ ಕೇಳಿದ್ದ. ಛೆ.. ಎಂಥ ಪ್ರಾಮಾಣಿಕತೆ!