ಬಿಸಿಲಿನಿಂದ ರಕ್ಷಣೆ ಪಡೆಯಲು ಚಾಲಕನ ಕೂಲ್ ಕೂಲ್ ಐಡಿಯಾ, ಆಟೋ ಮೇಲೆ ಗಾರ್ಡನ್!
ಉರಿ ಬಿಸಿಲು ತಡೆದುಕೊಳ್ಳಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ದೆಹಲಿಯಲ್ಲಿನ ಬಿಸಿಲ ಬೇಗೆಗೆ ಹಲವರು ಬಳಲುತ್ತಿದ್ದಾರೆ. ದೆಹಲಿಯಲ್ಲಿ ಉಷ್ಣಾಂಶ 45 ಡಿಗ್ರಿ ಸೆಲ್ಸಿಯಸ್ ಮೇಲ್ಪಟ್ಟಿದೆ. ಈ ಬಿಸಿಲಿನ ಶಾಖದಿಂದ ತನಗೂ ಹಾಗೂ ಪ್ರಯಾಣಿಕರಿಗೆ ರಕ್ಷಣೆ ನೀಡಲು ಆಟೋ ಮೇಲೆ ಹಸಿರು ತೋಟ ನಿರ್ಮಾಣ ಮಾಡುವ ಮೂಲಕ ಎಲ್ಲರ ಗಮನಸೆಳೆದಿದ್ದಾರೆ.
ನವದೆಹಲಿ(ಸೆ.20): ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಉರಿ ಬಿಸಿಲಿಗೆ ಜನರು ಹೈರಾಣಾಗಿದ್ದಾರೆ. ಪ್ರಾಣಿ ಪಕ್ಷಗಳು ಉರಿ ಬಿಸಿಲಿನ ಬೇಗೆಗೆ ಅಸ್ವಸ್ಥಗೊಳ್ಳುತ್ತಿದೆ. ಇನ್ನು ಎಸಿ ಇಲ್ಲದ ವಾಹನದಲ್ಲಿ ಪ್ರಯಾಣ ಮಾಡುವುದು ಅಸಾಧ್ಯವಾಗುತ್ತಿದೆ. ಈ ಬಿಸಿಲಿನ ಬೇಗೆಯಿಂದ ದೆಹಲಿ ಆಟೋ ಚಾಲಕನ ಹೊಸ ಐಡಿಯಾ ಇದೀಗ ನಗರದಲ್ಲಿ ಭಾರಿ ಸಂಚಲನ ಸೃಷ್ಟಿಸಿದೆ. ಪ್ರಯಾಣಿಕರಿಗೆ ಹಾಗೂ ತನಗೆ ಉರಿ ಬಿಸಿಲಿನಿಂದ ರಕ್ಷಣೆ ಪಡೆಯಲು ತನ್ನ ಆಟೋ ಮೇಲೆ ಸಣ್ಣ ಸಸ್ಯತೋಟವನ್ನೇ ನಿರ್ಮಿಸಿದ್ದಾರೆ. ಇದರಿಂದ ನೈಸರ್ಗಿಕವಾಗಿ ರಕ್ಷಣೆ ಪಡೆದುಕೊಳ್ಳುವ ಹೊಸ ವಿಧಾನ ಇದೀಗ ಭಾರಿ ಟ್ರೆಂಡ್ ಆಗುತ್ತಿದೆ. ದೆಹಲಿ ಆಟೋ ಚಾಲಕ ಮಹೇಂದ್ರ ಕುಮಾರ್ ಹೊಸ ಕೂಲಿಂಗ್ ವಿಧಾನ ಇದೀಗ ದೇಶದಲ್ಲಿ ಸದ್ದು ಮಾಡುತ್ತಿದೆ. ಈ ಹೊಸ ಐಡಿಯಾದಿಂದ ಇದೀಗ ಪ್ರಯಾಣಿಕರು ಮೇಹೇಂದ್ರ ಕುಮಾರ್ ಆಟೋ ರಿಕ್ಷಾದಲ್ಲೇ ಪ್ರಯಾಣ ಮಾಡಲು ಇಚ್ಚಿಸುತ್ತಿದ್ದಾರೆ. ಈ ಮೂಲಕ ಕೆಲ ಹೊತ್ತಾದರೂ ಬಿಸಿಲಿನ ಬೇಗೆಯಿಂದ ತಪ್ಪಿಸಿಕೊಂಡು ರಕ್ಷಣೆ ಪಡೆಯಲು ಬಯಸುತ್ತಿದ್ದಾರೆ.
ಮಹೇಂದ್ರ ಕುಮಾರ್ ತನ್ನ ಆಟೋ(Delhi Auto) ಮೇಲ್ಬಾಗದಲ್ಲಿ ಸಣ್ಣ ಗಾರ್ಡನ(Garden) ಮಾಡಿದ್ದಾರೆ. 48 ವರ್ಷದ ಮಹೇಂದ್ರ ಕುಮಾರ್ ಕಳೆದೆರಡು ವರ್ಷದಿಂದ ದೆಹಲಿಯ(Delhi Heat)) ಬಿಸಿಲ ಬೇಗೆಯಿಂದ ರಕ್ಷಣೆ ಪಡೆಯಲು ಆಟೋ ಮೇಲೆ ಗಾರ್ಡನ್ ನಿರ್ಮಿಸುವ ಯೋಜನೆ ಹಾಕಿಕೊಂಡಿದ್ದರು. ಈ ಬಾರಿ ಅತೀ ಹೆಚ್ಚಿನ ಉಷ್ಣತೆ ದಾಖಲಾಗುತ್ತಿರುವ ಕಾರಣ ಸಣ್ಣ ಗಾರ್ಡನ್ ನಿರ್ಮಿಸಿದ್ದಾರೆ.
ಬಿಸಿಲಿನ ತಾಪ ತಾಳಲಾರದೆ ಪೆಂಡಾಲ್ ಜೊತೆಯಲ್ಲೇ ಸಾಗಿದ ಮದುವೆ ಮೆರವಣಿಗೆ!
ಆಟೋ ಪ್ರಯಾಣದಲ್ಲಿ(Auto Drive) ಎಸಿ ಅಸಾಧ್ಯ. ಇದು ಆರೋಗ್ಯಕ್ಕೂ ಉತ್ತಮವಲ್ಲ. ಆದರೆ ನೈಸರ್ಗಿಕವಾದ(Natural Cooling) ಎಸಿಗೆ ಪ್ರಯಾಣಿಕರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಇದೇ ಆಟೋದಲ್ಲಿ ಪ್ರಯಾಣ ಮಾಡಲು ಬಯಸುತ್ತಿದ್ದಾರೆ. ಬಿಸಿಲಿನ ಶಾಖ(Global Warming) ಒಳಗೆ ತಟ್ಟುವುದಿಲ್ಲ. ಜೊತೆಗೆ ಪ್ರಯಾಣದ ವೇಳೆ ಗಾಳಿಯೂ ಬೀಸುವುದರಿಂದ ಪ್ರಯಾಣಿಕರ ಆರಾಮವಾಗಿ ಆಟೋ ಪ್ರಯಾಣ ಮಾಡಬಹುದು ಎಂದು ಮೇಹಂದ್ರ ಕುಮಾರ್ ಹೇಳಿದ್ದಾರೆ. ಇತರ ಆಟೋ ಚಾಲಕರು ಸಣ್ಣ ಗಾರ್ಡನ್ ನಿರ್ಮಾಣದ ವಿಧಾನದ ಕುರಿತು ಕೇಳುತ್ತಿದ್ದಾರೆ. ಇತರ ಆಟೋಗಳಲ್ಲೂ ಈ ರೀತಿಯ ಕೂಲಿಂಗ್ ಅಳವಡಿಸಲು ಹಲವರು ಮುಂದಾಗಿದ್ದಾರೆ ಎಂದು ಮಹೇಂದ್ರ ಕುಮಾರ್ ಹೇಳಿದ್ದಾರೆ.
ಹಾಗಂತ ವಾಹನ ಮೇಲೆ ಸಣ್ಣ ಗಾರ್ಡನ್ ನಿರ್ಮಿಸಿ ಬಿಸಿಲ ಬೇಗೆಯಿಂದ ರಕ್ಷಣೆ ಪಡೆಯುತ್ತಿರುವ ಐಡಿಯಾ ಇದೇ ಮೊದಲಲ್ಲ. ದೆಹಲಿಯಲ್ಲಿ ಟಾಟಾ ನ್ಯಾನೋ ಕಾರಿನ ಮೇಲೆ ಈ ರೀತಿಯ ಗಾರ್ಡನ್ ನಿರ್ಮಾಣ ಮಾಡಿ ಬಿಸಿಲಿನಿಂದ ರಕ್ಷಣೆ ಪಡೆದಿದ್ದರು. ಇನ್ನು ಕೋಲ್ಕತಾ ಹಾಗೂ ಅಸ್ಸಾಂನಲ್ಲೂ ಇದೇ ರೀತಿಯ ರಿಕ್ಷಾ ಕಳೆದ ವರ್ಷ ಭಾರಿ ಸಂಚಲನ ಮೂಡಿಸಿತ್ತು.
ದೇಶದ ಹಲವು ಭಾಗಗಳಲ್ಲಿ ಉರಿ ಬಿಸಿಲು ತಾರಕಕ್ಕೇರಿದೆ. ಒಂದೆಡೆ ಅತೀಯಾದ ಮಳೆ ಕೊಂಚ ಬ್ರೇಕ್ ಕೊಟ್ಟ ಬೆನ್ನಲ್ಲೇ ಉರಿ ಬಿಸಿಲು ಆರಂಭಗೊಂಡಿದೆ. ಸೆಪ್ಟೆಂಬರ್ ತಿಂಗಳಲ್ಲೇ ಮಟ್ಟಿಗೆ ಬಿಸಿಲಿನ ಶಾಖ ಏರಿಕೆಯಾಗಿದ್ದರೆ, ಎಪ್ರಿಲ್, ಮೇ ತಿಂಗಳಲ್ಲಿ ಬಿಸಿಲಿನ ಶಾಖ ಯಾವ ಮಟ್ಟಿಗೆ ಇರಲಿದೆ ಅನ್ನೋದು ಊಹಿಸಲು ಸಾಧ್ಯವಿಲ್ಲ. ಈ ಬಾರಿ ಉರಿಬಿಸಿಲಿನ ಪರಿಣಾಮ ಹೆಚ್ಚಾಗಿರಲಿದೆ ಎಂದು ಹಲವು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಬೇಸಿಗೆಯಲ್ಲಿ ದೇಹದ ಶಾಖ ಕಡಿಮೆ ಮಾಡಬೇಕಾ? ಇಲ್ಲಿವೆ ಟಿಪ್ಸ್...