ಬಿಸಿಲಿನ ತಾಪ ತಾಳಲಾರದೆ ಪೆಂಡಾಲ್ ಜೊತೆಯಲ್ಲೇ ಸಾಗಿದ ಮದುವೆ ಮೆರವಣಿಗೆ!

ಹಲವು ರಾಜ್ಯಗಳಲ್ಲಿ ತಾಪಮಾನ 44 ಡಿಗ್ರಿ ಸೆಲ್ಸಿಯಸ್ ಗೆ ಏರುವ ಸಾಧ್ಯತೆ ಇರುವ ಕಾರಣ ದೇಶದ ಪ್ರಮುಖ ರಾಜ್ಯಗಳು ಉಷ್ಣಮಾರುತದ ಪ್ರತಾಪಕ್ಕೆ ನಲುಗಿದೆ. ಇದರ ನಡುವೆಯೂ ಭಾರತದಲ್ಲಿ ಮದುವೆಯ ಋತುವಿನಲ್ಲಿ ಸಾಂಪ್ರದಾಯಿಕ ಆಚರಣೆಗಳಿಗೆ ಯಾವ ಉಷ್ಣಮಾರುತವೂ ಅಡ್ಡಿಯಾಗಲಿಲ್ಲ. ಅಂಥದ್ದೊಂದು ವಿಡಿಯೋ ಇಂಟರ್ ನೆಟ್ ನಲ್ಲಿ ವೈರಲ್ ಆಗಿದೆ.

beat the heat during a wedding procession has grabbed attention online seen moving ahead under the shade of a pandal Viral Video san

ಬೆಂಗಳೂರು (ಏ.29):  ಮಾರ್ಚ್ (March) ಆರಂಭದಿಂದ ಭಾರತದ ಹಲವಾರು ಭಾಗಗಳಲ್ಲಿ ಬಿಸಿಲಿನ  ಪ್ರತಾಪದ  ಸಾಕಷ್ಟು ಸುದ್ದಿಗಳು ಬಿತ್ತರವಾಗಿದೆ. ಹಾಗಿದ್ದರೂ, ಉಷ್ಣಮಾರುತವು (heat wave ) ಮದುವೆಯ ಋತುವಿನ (Wedding Season) ಸಂಭ್ರಮದಲ್ಲಿರುವ ಜನರ ಉತ್ಸಾಹವನ್ನು ತಗ್ಗಿಸಲು ವಿಫಲವಾಗಿದೆ. ಮದುವೆಯ ಮೆರವಣಿಗೆಯ ಸಮಯದಲ್ಲಿ ಬಿಸಿಲಿನ ತಾಪಮಾನವನ್ನು ತಡೆಯಲು ಇಡೀ ಮೆರವಣಿಗೆ ಪೆಂಡಾಲ್ (Pendal) ಜೊತೆಗೇ ಸಾಗಿರುವ ವಿಡಿಯೋ ವೈರಲ್ ಆಗಿದೆ.

ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುವ ವೀಡಿಯೋದಲ್ಲಿ ಮದುವೆಯ ಮೆರವಣಿಗೆಯು ಪೆಂಡಾಲ್ ನ ನೆರಳಿನಲ್ಲಿ ಸಾಗುತ್ತಿರುವುದನ್ನು ಕಾಣಬಹುದು. ವರ ಕುದುರೆಯ ಮೇಲೆ ಕುಳಿತಿದ್ದರೆ, ವರನ ಸಂಬಂಧಿಕರು ಮತ್ತು ಸ್ನೇಹಿತರು ಡ್ರಮ್ ಬೀಟ್‌ಗಳಿಗೆ ನೃತ್ಯ ಮಾಡುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ.

ದೇವಯಾನಿ ಕೊಹ್ಲಿ ಅವರು ಈ ವಿಡಿಯೋ ಕ್ಲಿಪ್ ಅನ್ನು ಹಂಚಿಕೊಂಡಿದ್ದು, 25 ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಗಳಿಸಿದೆ. ಇದನ್ನು ನೋಡಿದರೆ ಗೊತ್ತಾಗುತ್ತದೆ, ಜಗತ್ತಿನ ಯಾವುದೇ ಸಮಸ್ಯೆಗಳಿಗೂ ಭಾರತ ಅತ್ಯಂತ ಸುಲಭದಲ್ಲಿ ಸಲ್ಯೂಷನ್ ಕಂಡುಕೊಳ್ಳುತ್ತದೆ ಎಂದು ಟ್ವಿಟರ್ ಬಳಕೆದಾರರೊಬ್ಬರು ಕಾಮೆಂಟ್ ಮಾಡಿದ್ದಾರೆ. ಅದರೊಂದಿಗೆ ನಾವು ಕಂಜೂಸ್ ಗಳ ರಾಜ ಎಂದೂ ಬರೆದಿದ್ದಾರೆ.


ಮಹಾರಾಷ್ಟ್ರದ ಔರಂಗಾಬಾದ್ ನಿಂದ ಇಂಥದ್ದೇ ವಿಡಿಯೋ ವೈರಲ್ ಆಗಿದೆ. ಮದುವೆಯ ಬ್ಯಾಂಡ್ ನೊಂದಿಗೆ ನಾಲ್ಕು ಪೆಂಡಾಲ್  ನ ಅಡಿಯಲ್ಲಿ ಮದುವೆಯ ಮೆರವಣಿಗೆ ನೆರಳಿನಲ್ಲಿ ಸಾಗುತ್ತಿರುವುದನ್ನು ಕಾಣಬಹುದಾಗಿದೆ. ಟ್ವಿಟರ್ ಬಳಕೆದಾರರಾದ ಡಾ ಜಿತೇಂದ್ರ ದೇಹಾಡೆ ಅವರು ಕ್ಲಿಪ್ ಅನ್ನು ಹಂಚಿಕೊಂಡಿದ್ದಾರೆ. “ಮದುವೆ ಸಮಯದಲ್ಲಿ ಸೂರ್ಯನ ಬೆಳಕಿನಿಂದ ರಕ್ಷಿಸಲು ಭಾರತೀಯ ಜುಗಾದ್. ಬಾರಾತ್‌ನೊಂದಿಗೆ ಪೆಂಡಾಲ್ ಕೂಡ ಚಲಿಸುತ್ತಿದೆ' ಎಂದು ಬರೆದುಕೊಂಡಿದ್ದಾರೆ.

ಈ ವರ್ಷದ ಮಾರ್ಚ್‌ನಲ್ಲಿ ಬೇಸಿಗೆಯ ಆರಂಭದಿಂದಲೂ, ದೇಶದ ಹಲವಾರು ಭಾಗಗಳಲ್ಲಿ ತೀವ್ರವಾದ ಶಾಖದ ಪರಿಸ್ಥಿತಿಗಳು ವರದಿಯಾಗುತ್ತಿವೆ. ಕಳೆದ ಎರಡು ತಿಂಗಳ ಅವಧಿಯಲ್ಲಿ, ಪಶ್ಚಿಮ ರಾಜಸ್ಥಾನ ಮತ್ತು ಮಹಾರಾಷ್ಟ್ರದ ವಿದರ್ಭದಲ್ಲಿ ಗರಿಷ್ಠ ತಾಪಮಾನವು 40 ಡಿಗ್ರಿ ಮತ್ತು 45 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ.

ಒಂದು ಪ್ರದೇಶದಲ್ಲಿ ದಾಖಲಾದ ಅತ್ಯಧಿಕ ತಾಪಮಾನವು ಬಯಲು ಪ್ರದೇಶಗಳಲ್ಲಿ ಕನಿಷ್ಠ 40 ಡಿಗ್ರಿ ಸೆಲ್ಸಿಯಸ್ ಅಥವಾ ಅದಕ್ಕಿಂತ ಹೆಚ್ಚು ಮತ್ತು ಗುಡ್ಡಗಾಡು ಪ್ರದೇಶಗಳಲ್ಲಿ ಕನಿಷ್ಠ 30 ಡಿಗ್ರಿ ಸೆಲ್ಸಿಯಸ್ ಅಥವಾ ಅದಕ್ಕಿಂತ ಹೆಚ್ಚಿನ ತಾಪಮಾನವನ್ನು ತಲುಪಿದರೆ, ಆ ಪ್ರದೇಶವನ್ನು ಉಷ್ಣಮಾರುತಕ್ಕೆ ಸಿಲುಕಿದ ಪ್ರದೇಶ ಎಂದು ಹೇಳಲಾಗುತ್ತದೆ.

ಅಶ್ಲೀಲ ಸಿನಿಮಾ ಚಿತ್ರೀಕರಣ ವೇಳೆ ಪೊಲೀಸರ ಕೈಗೆ ಸಿಕ್ಕಿಬಿದ್ರಾ ಉರ್ಫಿ? ವಿಡಿಯೋ ವೈರಲ್

ರಾಜಸ್ಥಾನದಂಥ ರಾಜ್ಯಗಳಲ್ಲಿ ಉಷ್ಣಮಾರುತದ ಕಾರಣದಿಂದಾಗಿ ತಾಪಮಾನ ದಾಖಲೆಯ ಮಟ್ಟಕ್ಕೆ ಏರಿಕೆಯಾಗಿದೆ. ಧೋಲ್ ಪುರ ಪ್ರದೇಶದಲ್ಲಿ ಗುರುವಾರ 46.6 ಡಿಗ್ರಿ ಸೆಲ್ಸಿಯಸ್ ನೊಂದಿಗೆ ಅತಿ ಹೆಚ್ಚು ಉಷ್ಣಾಂಶವನ್ನು ದಾಖಲು ಮಾಡಿದೆ. ದೇಶದ ಹಲವು ಕಡೆಗಳಲ್ಲಿ ತಾಪಮಾನ 45 ಡಿಗ್ರಿ ಗಡಿ ದಾಟಿದೆ. ಗುರುಗ್ರಾಮ್ (ದೆಹಲಿ-ಎನ್‌ಸಿಆರ್‌ನಲ್ಲಿ) ಸಾರ್ವಕಾಲಿಕ ಗರಿಷ್ಠ 45.6 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ. ಏಪ್ರಿಲ್ 28, 1979 ರಂದು ಹಿಂದಿನ ದಾಖಲೆಯ 44.8 ಡಿಗ್ರಿ ಸೆಲ್ಸಿಯಸ್ ಅನ್ನು ಇದು ಮುರಿದಿದೆ. ದೆಹಲಿ ಕೂಡ 12 ವರ್ಷಗಳಲ್ಲಿ ಏಪ್ರಿಲ್ ತಿಂಗಳ ಉಷ್ಣಾಂಶ 43.5 ಡಿಗ್ರಿ ಸೆಲ್ಸಿಯಸ್  ದಾಖಲು ಮಾಡಿತು. ರಾಷ್ಟ್ರ ರಾಜಧಾನಿಯು ಏಪ್ರಿಲ್ 18, 2010 ರಂದು 43.7 ಡಿಗ್ರಿ ಸೆಲ್ಸಿಯಸ್ ಗರಿಷ್ಠ ತಾಪಮಾನವನ್ನು ದಾಖಲಿಸಿದೆ.

ಫಾರ್ಮುಲಾ ರೇಸರ್‌ಗೆ ಯಾವುದರಲ್ಲೂ ಕಡಿಮೆ ಇಲ್ಲ ಈ ಹಾಲು ಮಾರಾಟಗಾರ: video viral

ಭಾರತದ ವಾಮಾನ ಇಲಾಖೆ (IMD) ವಾಯುವ್ಯ ಮತ್ತು ಮಧ್ಯ ಭಾರತದ ಮೇಲೆ ಮುಂದಿನ ಐದು ದಿನಗಳವರೆಗೆ ಮತ್ತು ಪೂರ್ವ ಭಾರತದ ಮೇಲೆ ಮುಂದಿನ ಮೂರು ದಿನಗಳವರೆಗೆ ಉಷ್ಣ ಮಾರುತ ಇರುತ್ತದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ಹೇಳಿದೆ.

Latest Videos
Follow Us:
Download App:
  • android
  • ios