'ಜೀವನದಲ್ಲಿ ಜನ ಬರ್ತಾರೆ.. ಹೋಗ್ತಾರೆ..' ಹಾಟ್ ಫೋಟೋ ಜೊತೆ ಈ ಮಾತು ಹೇಳಿದ್ದೇಕೆ ನಟಿ?
ತೆಲುಗು ಭಾಷೆಯ ಜನಪ್ರಿಯ ನಟಿ ಸುರೇಖಾ ವಾಣಿ ಹಾಗೂ ಅವರ ಪುತ್ರಿ ಭಂಡಾರು ಸುಪ್ರಿತಾ ನಾಯ್ಡು ಅವರ ವಿಚಾರಗಳು ಸೋಶಿಯಲ್ ಮೀಡಿಯಾದಲ್ಲಿ ಸಖತ್ ಸುದ್ದಿಯಾಗುತ್ತಲೇ ಇರುತ್ತವೆ. ಇತ್ತೀಚೆಗೆ ಸುಪ್ರಿತಾ ನಾಯ್ಡು ಅವರ ಇನ್ಸ್ಟಾಗ್ರಾಮ್ ಪೋಸ್ಟ್ ಈ ಕುತೂಹಲಕ್ಕೆ ಕಾರಣವಾಗಿದೆ.
ಸುರೇಖಾ ವಾಣಿ ಪುತ್ರಿ ಸುಪ್ರೀತಾ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದಾರೆ. ಅದಕ್ಕೆ ಕಾರಣ ಸುಪ್ರೀತಾ ಅವರ ಪೋಸ್ಟ್. ಸುಪ್ರೀತಾ ತಮ್ಮ ಫೋಟೋಗಳನ್ನು ಹಂಚಿಕೊಳ್ಳುವಾಗ ಮಾಡಿರುವ ಕಾಮೆಂಟ್ ಗಮನಸೆಳೆದಿದೆ.
ನಟಿ ಸುರೇಖಾ ವಾಣಿ ಬಗ್ಗೆ ಪರಿಚಯದ ಅಗತ್ಯವಿಲ್ಲ. ಸುರೇಖಾ ವಾಣಿ ತೆಲುಗು ಸಿನಿಮಾಗಳಲ್ಲಿ ಕ್ಯಾರೆಕ್ಟರ್ ಆರ್ಟಿಸ್ಟ್ ಆಗಿ ಮಿಂಚುತ್ತಿದ್ದಾರೆ.
ಸುರೇಖಾ ವಾಣಿ ತನ್ನ ಮಗಳು ಸುಪ್ರೀತಾ ಜೊತೆಗೆ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟುವಿಡಿಯೋ ಹಂಚಿಕೊಳ್ಳುತ್ತಾರೆ. ತಾಯಿ ಮತ್ತು ಮಗಳು ಇಬ್ಬರೂ ಆಗಾಗ್ಗೆ ನೃತ್ಯದ ವೀಡಿಯೊಗಳು ಮತ್ತು ಫೋಟೋಗಳನ್ನು ಹಂಚಿಕೊಳ್ಳುತ್ತಾರೆ.
ಕೆಲವೊಮ್ಮೆ ಸುರೇಖಾ ವಾಣಿ ಮತ್ತು ಸುಪ್ರೀತಾ ಅವರ ಪೋಸ್ಟ್ಗಳಿಂದಾಗಿ ಟ್ರೋಲ್ ಆಗುತ್ತಾರೆ. ಆದರೆ ಸುರೇಖಾ ವಾಣಿ ಮತ್ತು ಸುಪ್ರೀತಾ ಕೆಲವೊಮ್ಮೆ ಕೌಂಟರ್ ನೀಡುವುದನ್ನು ನೋಡಿದ್ದೇವೆ.
'ನನ್ನ ಜೀವನದಲ್ಲಿ ಕೆಲವರು ಬರ್ತಾರೆ.. ಹೋಗ್ತಾರೆ.. ಅದೇ ಜೀವನದ ಅರ್ಥ' ಎನ್ನುವ ಸಾಲಿನೊಂದಿಗೆ ಹಾಟ್ ಫೋಟೋಗಳನ್ನು ಸುಪ್ರಿತಾ ಹಂಚಿಕೊಂಡಿದ್ದಾರೆ.
ಸುಪ್ರೀತಾ ಈ ಸಾಲಿನೊಂದಿಗೆ ಗ್ಲಾಮರಸ್ ಚಿತ್ರವನ್ನು ಹಂಚಿಕೊಂಡಿದ್ದು ಅಚ್ಚರಿಗೆ ಕಾರಣವಾಗಿದೆ. ಆಕೆ ಬರೆದ ಸಾಲಿನ ಒಳಾರ್ಥವೇನು ಅನ್ನೋದನ್ನು ಯೋಚಿಸಲು ಆರಂಭಿಸಿದ್ದಾರೆ.
ಸದ್ಯ ಬಿಗ್ ಬಾಸ್ ಅಮರ್ ದೀಪ್ ಅವರ ಚಿತ್ರದಲ್ಲಿ ಸುಪ್ರೀತಾ ನಾಯಕಿಯಾಗಿ ನಟಿಸುತ್ತಿದ್ದಾರೆ. ಅದಕ್ಕಾಗಿಯೇ ಸಾಮಾಜಿಕ ಜಾಲತಾಣಗಳಲ್ಲಿ ಗ್ಲಾಮರ್ ಚಿತ್ರಗಳನ್ನು ಹೆಚ್ಚಾಗಿ ಹಂಚಿಕೊಳ್ಳುತ್ತಿದ್ದಾರೆ.
Supritha
ಇನ್ನು ಅವರು ಬರೆದಿರುವ ಸಾಲಿಗಳು ಬಹುಶಃ ಆಕೆಗೆ ಲವ್ ಅಫೇರ್ ಇದ್ದಿರಬಹುದು ಎಂದೂ ಸೂಚಿಸಿದೆ. ತಮ್ಮ ಬಾಯ್ಫ್ರೆಂಡ್ ಕುರಿತಾಗಿಯೇ ಅವರು ಈ ಸಾಲು ಬರೆದಿರಬಹುದು ಎನ್ನಲಾಗಿದೆ.
Supritha
ಈ ಹಿಂದೆ ಕೆಲವೊಂದು ಮ್ಯೂಸಿಕ್ ವಿಡಿಯೋದಲ್ಲಿಯೂ ಸುಪ್ರೀತಾ ನಾಯ್ಡು ಕಾಣಿಸಿಕೊಂಡಿದ್ದರು. ಇತ್ತೀಚೆಗೆ ಅವರು ತಾಯಿಗೆ 2ನೇ ಮದುವೆ ಮಾಡುವ ವಿಚಾರದಲ್ಲಿ ಮಾಡಿದ್ದ ಕಾಮೆಂಟ್ ವೈರಲ್ ಆಗಿತ್ತು.
ಈಗ ತಾಯಿ ಸುರೇಖಾ ರಾಣಿ ನೆರವಿನಿಂದ ನಾಯಕಿಯಾಗಿ ಬೆಳೆಯುವ ಪ್ರಯತ್ನದಲ್ಲಿದ್ದಾರೆ. ಸುಪ್ರೀತಾ ನಾಯಕಿಯಾಗಿ ಯಶಸ್ವಿಯಾಗುತ್ತಾರಾ ಎನ್ನುವುದನ್ನು ಕಾದುನೋಡಬೇಕಿದೆ.