Asianet Suvarna News Asianet Suvarna News

ಯುವಕನ ಮೇಲೆ ಫೇಕ್‌ ರೇಪ್‌ ಕೇಸ್‌ ಹಾಕಿ ಜೈಲಿಗಟ್ಟಿದ್ದ ಮಹಿಳೆಗೆ ವರ್ಷಗಟ್ಟಲೆ ಜೈಲು, 6 ಲಕ್ಷ ದಂಡ!

ಯುವಕನ ಮೇಲೆ ಸುಳ್ಳು ಆರೋಪ ಹೊರಿಸಿ ಜೈಲಿಗೆ ಕಳಿಸಿದ್ದ ಮಹಿಳೆಗೆ ಯುವಕನು ಅನುಭವಿದಷ್ಟೇ ವರ್ಷಗಳ ಕಾಲ ಜೈಲು ಶಿಕ್ಷೆಯನ್ನು ಉತ್ತರ ಪ್ರದೇಶದ ಜಿಲ್ಲಾ ಕೋರ್ಟ್‌ ಪ್ರಕಟಿಸಿದೆ. ಅದರೊಂದಿಗೆ 5.88 ಲಕ್ಷ ದಂಡವನ್ನೂ ವಿಧಿಸಿದೆ.
 

Uttar Pradesh district court sentenced to Woman Who Filed false rape case san
Author
First Published May 8, 2024, 10:24 PM IST

ನವದೆಹಲಿ (ಮೇ.8): ಪುರುಷನ ವಿರುದ್ಧ ಸುಳ್ಳು ಅತ್ಯಾಚಾರ ಪ್ರಕರಣ ದಾಖಲಿಸಿದ ಮಹಿಳೆಗೆ ಉತ್ತರ ಪ್ರದೇಶದ ಬರೇಲಿಯ ಜಿಲ್ಲಾ ನ್ಯಾಯಾಲಯ ನಾಲ್ಕು ವರ್ಷ ಐದು ತಿಂಗಳ ಜೈಲು ಶಿಕ್ಷೆ ವಿಧಿಸಿದೆ. ಇನ್ನು ಆತ ಜೈಲಿನಲ್ಲಿದ್ದ 53 ತಿಂಗಳುಗಳ ಕಾಲ ಯಾವುದೇ ಕೆಲಸ ಮಾಡಲು ಸಾಧ್ಯವಾಗಿರಲಿಲ್ಲ. ಆತನ ಅವಕಾಶಗಳನ್ನು ಕಿತ್ತುಕೊಂಡ ಕಾರಣಕ್ಕೆ ಮಹಿಳೆಗೆ ಕೋರ್ಟ್‌ 5.88 ಲಕ್ಷ ರೂಪಾಯಿ ದಂಡವನ್ನೂ ವಿಧಿಸಲಾಗಿದೆ. ಈ ಮಹಿಳೆಉ ಮಾಡಿರುವ ಕೆಲಸದಿಂದ ಏನನ್ನೂ ಮಾಡದ ವ್ಯಕ್ತಿ ಸಮಸ್ಯೆ ಅನುಭವಿಸಬೇಕಾಗಿ ಬಂದಿದೆ. ಇದು ಸಮಾಜಕ್ಕೆ ಅತ್ಯಂತ ಗಂಭೀರವಾದ ಪರಿಸ್ಥಿತಿ.  ಒಬ್ಬರ ಉದ್ದೇಶವನ್ನು ಸಾಧಿಸಲು ಪೊಲೀಸ್ ಮತ್ತು ನ್ಯಾಯಾಲಯವನ್ನು ಮಾಧ್ಯಮವಾಗಿ ಬಳಸುವುದನ್ನೂ ಯಾರೂ ಮಾಡಬಾರದು. ಅನ್ಯಾಯದ ರೀತಿಯಲ್ಲಿ ಪುರುಷನ ಮೇಲೆ ದಾಳಿ ಮಾಡಲು ಯಾವುದೇ ಕಾರಣಕ್ಕೂ ಅವಕಾಶ ನೀಡಲಾಗುವುದಿಲ್ಲ' ಎಂದು ಕೋರ್ಟ್‌ ತೀರ್ಪು ಪ್ರಕಟಿಸುವ ವೇಳೆ ಹೇಳಿದೆ.

2019 ರಲ್ಲಿ, ಮಹಿಳೆಯ ತಾಯಿ ಅಜಯ್ ಅಲಿಯಾಸ್ ರಾಘವ್ ಎಂದು ಗುರುತಿಸಲಾದ ವ್ಯಕ್ತಿಯ ವಿರುದ್ಧ ಅಪಹರಣ ಮತ್ತು ಅತ್ಯಾಚಾರದ ಪ್ರಕರಣವನ್ನು ದಾಖಲಿಸಿದ್ದರು. ಆಗ ಮಹಿಳೆಗೆ 15 ವರ್ಷ ಮತ್ತು ಪುರುಷನಿಗೆ 21 ವರ್ಷ. ಅಜಯ್ ಮಹಿಳೆಯ ಸಹೋದರಿಯೊಂದಿಗೆ ಕೆಲಸ ಮಾಡುತ್ತಿದ್ದ. ಆಗಾಗ್ಗೆ ಅವರ ಮನೆಗೆ ಭೇಟಿ ನೀಡುತ್ತಿದ್ದ ಮತ್ತು ಇದರೊಂದಿಗೆ ಮಹಿಳೆಯೊಂದಿಗೆ ಸ್ನೇಹ ಬೆಳೆಸಿದ್ದರು ಎಂದು ಮಾಧ್ಯಮ ವರದಿ ತಿಳಿಸಿದೆ.

ಮಹಿಳೆ ಪೊಲೀಸರಿಗೆ ನೀಡಿರುವ ದೂರಿನಲ್ಲಿ ರಾಘವ್‌ ತಂದುಕೊಟ್ಟ ಪ್ರಸಾದದಲ್ಲಿ ಮತ್ತು ಬರುವಂಥ ವಸ್ತು ಹಾಕಿದ್ದ. ಬಳಿಕ ನನ್ನನ್ನು ದೆಹಲಿಗೆ ಕರೆದೊಯ್ದು ಕೊಠಡಿಯೊಂದರಲ್ಲಿ ಬಂಧಿಸಿ ಅತ್ಯಾಚಾರ ಎಸಗಿದ್ದಾನೆ ಎಂದು ದೂರು ನೀಡಲಾಗಿತ್ತು. ದೂರು ದಾಖಲಾದ ಕೂಡಲೇ ವ್ಯಕ್ತಿಯನ್ನು ಬಂಧಿಸಲಾಗಿತ್ತು. ಪ್ರಕರಣದಲ್ಲಿ ವಿಚಾರಣೆ ಪ್ರಾರಂಭವಾದ ನಂತರ, ಮಹಿಳೆ ತನ್ನ ಹೇಳಿಕೆಯನ್ನು ಹಿಂತೆಗೆದುಕೊಂಡಿದ್ದಳು. ಆರೋಪಿ ನನ್ನನ್ನು ಅಪಹರಿಸಿರಲಿಲ್ಲ ಅಥವಾ ಅತ್ಯಾಚಾರ ಮಾಡಿಲ್ಲ ಎಂದಿದ್ದರು. ಸುಳ್ಳು ಹೇಳಿಕೆ ದಾಖಲಿಸಿದ್ದ ಮಹಿಳೆಯನ್ನು ಜೈಲಿಗೆ ಕಳುಹಿಸಿದ್ದರೆ, ಪುರುಷನನ್ನು ನ್ಯಾಯಾಲಯವು ಬಿಡುಗಡೆ ಮಾಡಿದೆ.

ರಾಕೇಶ್‌ ಜುಂಜುನ್‌ವಾಲಾ ಪತ್ನಿಗೆ ಒಂದೇ ದಿನ 800 ಕೋಟಿ, ಒಂದು ತಿಂಗಳಲ್ಲಿ 2360 ಕೋಟಿ ನಷ್ಟ!

ಈತನ ವಿರುದ್ಧ ದಾಖಲು ಮಾಡಿದ್ದ ಸುಳ್ಳು ಕೇಸ್‌ನಿಂದ ಜೈಲಿನಲ್ಲಿ ನಾಲ್ಕೂವರೆ ವರ್ಷಗಳ ಕಾಲ ವಿಚಾರಣಾಧೀನ ಖೈದಿಯಾಗಿ ದಿನ ಕಳೆದಿದ್ದಾನೆ. ಲೆಕ್ಕ ಹಾಕಿದರೆ, ಈ ಸಮಯದಲ್ಲಿ ಆತ ಕನಿಷ್ಠವೆಂದರೆ, 5.88 ಲಕ್ಷ ರೂಪಾಯಿ ಹಣ ಸಂಪಾದನೆ ಮಾಡುತ್ತಿದ್ದ. ಇದನ್ನು ಗಮನದಲ್ಲಿಟ್ಟುಕೊಂಡ ಕೋರ್ಟ್‌, ಯುವಕನಿಗೆ 5.88 ಲಕ್ಷ ರೂಪಾಯಿ ಹಣವನ್ನು ಮಹಿಳೆ ನೀಡಬೇಕು ಹಾಗೂ ಆತ ಅನುಭವಿಸಿದಷ್ಟೇ ವರ್ಷಗಳ ಕಾಲ ಆಕೆ ಜೈಲು ಶಿಕ್ಷೆ ಎದುರಿಸಬೇಕು ಎಂದು ತೀರ್ಪು ನೀಡಿದೆ.

ಖ್ಯಾತ ಕಿರುತೆರೆ ನಟಿ ಜ್ಯೋತಿ ರೈ ಅವರದ್ದು ಎನ್ನಲಾದ ಅಶ್ಲೀಲ ವಿಡಿಯೋ ಲೀಕ್‌ ಮಾಡಿದ್ಯಾರು? ಉದ್ದೇಶವೇನು..

Latest Videos
Follow Us:
Download App:
  • android
  • ios