'ಯಾಕೆ ಸೈಲೆಂಟ್‌ ಆಗಿಬಿಟ್ರಿ..' ರಾಹುಲ್‌ ಗಾಂಧಿಗೆ ಅಂಬಾನಿ, ಅದಾನಿ ಕೌಂಟರ್‌ ನೀಡಿದ ಪ್ರಧಾನಿ ಮೋದಿ!


ಪ್ರಧಾನಿ ನರೇಂದ್ರ ಮೋದಿ ದೇಶದ ಅಗ್ರ ಕೈಗಾರಿಕೋದ್ಯಮಿಗಳಿಗೆ ಫೇವರ್‌ ಮಾಡುತ್ತಾರೆ ಎಂದು ಪ್ರತಿದಿನ ಎನ್ನುವಂತೆ ಆರೋಪ ಮಾಡಿದ್ದ ರಾಹುಲ್‌ ಗಾಂಧಿ ಚುನಾವಣೆ ಟೈಮ್‌ನಲ್ಲಿ ಈ ವಿಚಾರದಲ್ಲಿ ಸೈಲೆಂಟ್‌ ಆಗಿದ್ದರು. ಇದರ ಬೆನ್ನಲ್ಲಿಯೇ ಮೋದಿ ಕೌಂಟರ್‌ ಸ್ಟ್ರೈಕ್‌ ನೀಡಿದ್ದಾರೆ.
 

PM Narendra Modi  Ambani  Adani Counterstrike On Rahul Gandhi san

ನವದೆಹಲಿ (ಮೇ.8): ಲೋಕಸಭೆ ಚುನಾವಣೆ ಘೋಷಣೆ ಆದ ದಿನದಿಂದ ದೇಶದ ಕೈಗಾರಿಕೋದ್ಯಮಿಗಳಾದ ಅಂಬಾನಿ-ಅದಾನಿ ಅವರ ಕುರಿತಾಗಿ ಕಾಂಗ್ರೆಸ್ ನಾಯಕ ಏಕೆ ಮೌನವಾಗಿದ್ದಾರೆ ಎಂದು ರಾಹುಲ್ ಗಾಂಧಿ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ಪ್ರಶ್ನೆ ಮಾಡಿದ್ದಾರೆ. ಕಳೆದ ಐದು ವರ್ಷಗಳಿಂದ ಕಾಂಗ್ರೆಸ್‌ನ ಶೆಹಜಾದಾ ಒಂದೇ ಒಂದು ವಿಚಾರವನ್ನು ಪದೇ ಪದೇ ಪಠಿಸುತ್ತಿದ್ದರು. ಅವರ ರಫೇಲ್‌ ವಿಚಾರ ಫಲ ಕೊಡದೇ ಇದ್ದಾಗ, ಹೊಸದನ್ನು ಪಠಿಸಲು ಆರಂಭ ಮಾಡಿದ್ರು. ಐದು ಉದ್ಯಮಿಗಳು, ಐದು ಉದ್ಯಮಿಗಳು, ಐದು ಉದ್ಯಮಿಗಳು ಎಂದು ಆರಂಭ ಮಾಡಿದ್ದ ಅವರು ಕೊನೆಗೆ ಅಂಬಾನಿ-ಅದಾನಿಗೆ ಬಂದು ಮುಟ್ಟಿದ್ದರು. ಆದರೆ. ಚುನಾವಣೆ ಘೋಷಣೆ ಆದ ದಿನದಿಂದಲೂ ಅವರು ಅಂಬಾನಿ ಹಾಗೂ ಅದಾನಿ ಹೆಸರು ಹೇಳೋದನ್ನು ಬಿಟ್ಟಿದ್ದಾರೆ. ಇಂದು ನಾನು ತೆಲಂಗಾಣದ ನೆಲದಿಂದ ಈ ಪ್ರಶ್ನೆಯನ್ನು ಕೇಳಲು ಬಯಸುತ್ತೇನೆ? ಅಂಬಾನಿ ಹಾಗೂ ಅದಾನಿಯಿಂದ ಎಷ್ಟು ಹಣ ಸ್ವೀಕಾರ ಮಾಡಿದ್ದೀರಿ ಅನ್ನೋದನ್ನ ಮೊದಲು ತಿಳಿಸ್ತೀರಾ? ನಿಮ್ಮ ನಡುವೆ ಏನು ಡೀಲ್‌ ಆಗಿದೆ? ಏಕಾಏಕಿಯಾಗಿ ಅವರ ಮೇಲೆ ಟೀಕೆ ಮಾಡೋದನ್ನ ಯಾಕೆ ನಿಲ್ಲಿಸಿಬ್ರಿಟಿ ಅಂತಾ ಕೇಳಬಹುದಾ? ಬಹುಶಃ ಇಲ್ಲಿ ಏನೋ ತಪ್ಪಾಗಿರುವುದು ನಡೆದಿದೆ. ಕಳೆದ ಐದು ವರ್ಷಗಳಿಂದ ಅವರನ್ನು ಟೀಕೆ ಮಾಡುತ್ತಿದ್ದ ನೀವು ಏಕಾಏಕಿ ಸೈಲೆಂಟ್‌ ಆಗಿದ್ದೇಕೆ? ಎಂದು ತೆಲಂಗಾಣ ಸಮಾವೇಶದಲ್ಲಿ ಮೋದಿ ಪ್ರಶ್ನೆ ಮಾಡಿದ್ದಾರೆ.

ನರೇಂದ್ರ ಮೋದಿ ಸರ್ಕಾರವು ಉನ್ನತ ಕೈಗಾರಿಕೋದ್ಯಮಿಗಳಿಗೆ ಒಲವು ತೋರುತ್ತಿದೆ ಎಂದು ರಾಹುಲ್‌ ಗಾಂಧಿ ಪದೇ ಪದೇ ಆರೋಪಿಸಿದ್ದರಿಂದ ಪ್ರಧಾನಿಯವರ ಕೌಂಟರ್‌ಸ್ಟ್ರೈಕ್‌ ಮಹತ್ವ ಪಡೆದುಕೊಂಡಿದೆ. ಬಿಜೆಪಿ ಸರ್ಕಾರವು 22 ಭಾರತೀಯರನ್ನು "ಅರಬ್ಪತಿ (ಕೋಟ್ಯಾಧಿಪತಿಗಳು)" ಮಾಡಿದ್ದರೆ, ಈ ಚುನಾವಣೆಯಲ್ಲಿ ಅಧಿಕಾರಕ್ಕೆ ಬಂದರೆ ಕೋಟ್ಯಂತರ ಜನರನ್ನು "ಲಖ್ಪತಿ" ಮಾಡುವ ಗುರಿಯನ್ನು ಕಾಂಗ್ರೆಸ್ ಹೊಂದಿದೆ ಎಂದು ಕಾಂಗ್ರೆಸ್ ನಾಯಕ ಹೇಳಿದ್ದಾರೆ.

ಇನ್ನು ಪ್ರಧಾನ ಮಂತ್ರಿ ತೆಲಂಗಾಣದ ನೆಲದಲ್ಲಿಯೇ ಅಂಬಾನಿ-ಅದಾನಿ ಟೀಕೆ ಮಾಡಿದ್ದರ ಹಿಂದೆಯೂ ಕಾರಣವಿದೆ. ಕಾಂಗ್ರೆಸ್‌ ಆಡಳಿತವಿರುವ ರಾಜ್ಯ ಕಾಂಗ್ರೆಸ್‌ ಇತ್ತೀಚೆಗೆ, ಅದಾನಿ ಗ್ರೂಪ್‌ ಜೊತೆ ವಿವಿಧ ಕ್ಷೇತ್ರಗಳಿಗೆ ಹೂಡಿಕೆ ಎನ್ನುವಂತೆ 12400 ಕೋಟಿ ರೂಪಾಯಿ ಹೂಡಿಕೆಯನ್ನು ಪ್ರಕಟಿಸಿತ್ತು. ಸಂಪತ್ತು ಸೃಷ್ಟಿಕರ್ತರು ಮತ್ತು ಉನ್ನತ ಕೈಗಾರಿಕೋದ್ಯಮಿಗಳ ಮೇಲೆ ರಾಹುಲ್‌ ಗಾಂಧಿ ಪದೇ ಪದೇ ಮಾತಿನ ದಾಳಿ ನಡೆಸಿದ್ದನ್ನು ಬಿಜೆಪಿ ಪ್ರಶ್ನೆ ಮಾಡಿತ್ತು. ಇತ್ತೀಚೆಗೆ ಕಾಂಗ್ರೆಸ್‌ನಿಂದ ಬಿಜೆಪಿಗೆ ಸೇರಿದ್ದ ಗೌರವ್‌ ವಲ್ಲಭ್‌, ಪಕ್ಷದ ನಾಯಕತ್ವವವು ಕೋಟ್ಯಧಿಪತಿ ಗೌತಮ್‌ ಅದಾನಿ ವಿರುದ್ಧ ಪ್ರತಿ ದಿನ ಟೀಕೆ ಮಾಡುವಂತೆ ತಮಗೆ ಒತ್ತಾಯಿಸುತ್ತಿತ್ತು ಎಂದು ಹೇಳಿದ್ದರು.

"ನಾನು ಅದಾನಿ ವಿರುದ್ಧ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ್ದೇನೆ. ಆದರೆ ಸೆಬಿ ತನಿಖೆಯ ನಂತರ ಅದಾನಿ ಗ್ರೂಪ್‌ಗೆ ಕ್ಲೀನ್ ಚಿಟ್ ನೀಡಿತು, ನಾನು ವಿಷಯವನ್ನು ಕೈಬಿಡುವಂತೆ ಪಕ್ಷದ ಹಿರಿಯ ನಾಯಕರಿಗೆ ಹೇಳಿದೆ. ಆದರೆ ಅವರು ನಿಲ್ಲಿಸಲಿಲ್ಲ" ಎಂದು ಗೌರವ್‌ ವಲ್ಲಭ್‌ ಹೇಳಿದ್ದರು. ತಮ್ಮ ತೆಲಂಗಾಣ ಭಾಷಣದಲ್ಲಿ, ಗಾಂಧಿಯವರು ಚುನಾವಣಾ ಕಾಲದಲ್ಲಿ ವಿವಾದಗಳನ್ನು ಹುಟ್ಟುಹಾಕುವ ಅಭ್ಯಾಸವನ್ನು ಹೊಂದಿದ್ದಾರೆ. 2019 ರ ಸಾರ್ವತ್ರಿಕ ಚುನಾವಣೆಗೆ ಮುಂಚಿತವಾಗಿ ರಫೇಲ್ ವಿಮಾನ ಒಪ್ಪಂದದಲ್ಲಿ ಆಪಾದಿತ ಭ್ರಷ್ಟಾಚಾರದ ವಿಷಯವನ್ನು ಅವರು ಕೈಗೆತ್ತಿಕೊಂಡಿದ್ದರು ಎಂದು ಪ್ರಧಾನಿ ಮೋದಿ ತಿಳಿಸಿದ್ದಾರೆ.

ಒಂದೇ ದಿನದಲ್ಲಿ ಬರೋಬ್ಬರಿ 43000 ಕೋಟಿ ಲಾಸ್ ಮಾಡ್ಕೊಂಡ ಮುಕೇಶ್ ಅಂಬಾನಿ, ಕಾರಣವೇನು?

ಪ್ರಧಾನಿ ಹೇಳಿಕೆಗೆ ಪ್ರತಿಕ್ರಿಯಿಸಿದ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ, "ಪ್ರಧಾನಿ ಫುಲ್ ಟಾಸ್ ಆಡುವಾಗ, ಅವರು ಈ ರೀತಿಯ ಅರ್ಥಹೀನ ವಿಷಯಗಳನ್ನು ಪ್ರಸ್ತಾಪಿಸುತ್ತಾರೆ, ಉದ್ಯೋಗ, ಭ್ರಷ್ಟಾಚಾರ ಮತ್ತು ಮಹಿಳೆಯರ ಮೇಲಿನ ದೌರ್ಜನ್ಯಗಳ ಮೇಲೆ ಫುಲ್ ಟಾಸ್ ಹೊಡೆಯಲು ನಾನು ಅವರಿಗೆ ಸವಾಲು ಹಾಕುತ್ತೇನೆ. ಅಂತಹ ದುಷ್ಕೃತ್ಯಗಳನ್ನು ಎಸಗುವವರನ್ನು ನೀವು ರಕ್ಷಿಸುತ್ತಿದ್ದೀರಿ ಎಂಬುದು ಸತ್ಯ' ಎಂದಿದ್ದಾರೆ.

ಅದಾನಿ ಗ್ರೂಪ್‌ನ ಅತಿದೊಡ್ಡ ಕಂಪನಿಗೆ 449 ಕೋಟಿ ರೂಪಾಯಿ ನಷ್ಟ!

Latest Videos
Follow Us:
Download App:
  • android
  • ios