ನವದೆಹಲಿ[ಡಿ.18]: ದೇಶವನ್ನೇ ಬೆಚ್ಚಿ ಬೀಳಿಸಿದ್ದ ನಿರ್ಭಯಾ ಅತ್ಯಾಚಾರ ಹಾಗೂ ಕೊಲೆ ಪ್ರಕರಣದ ದೋಷಿಗಳಿಗೆ ಗಲ್ಲು ಶಿಕ್ಷೆ ನಿಗಧಿಯಾಗಿದೆಯಾದರೂ, ಶಿಕ್ಷೆ ಮತ್ತಷ್ಟು ವಿಳಂಬವಾಗಲಿದೆ. ನಿರ್ಭಯಾ ತಾಯಿ ಅಪರಾಧಿಗಳಿಗೆ ಕೂಡಲೇ ಗಲ್ಲು ಶಿಕ್ಷೆ ವಿಧಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿ ಕೈಗೆತ್ತಿಕೊಂಡ ದೆಹಲಿ ನ್ಯಾಯಾಲಯ ವಿಚಾರಣೆಯನ್ನು ಜನವರಿ 7 ತಾರೀಖಿಗೆ ಮುಂದೂಡಿದೆ. 

"

ದೋಷಿಗಳ ವಿರುದ್ಧ ಡೆತ್‌ ವಾರಂಟ್‌ ಜಾರಿ ಮಾಡಬೇಕು ಎಂದು ಕೋರಿ ನಿರ್ಭಯಾ ಪೋಷಕರು ಸಲ್ಲಿಸಿರುವ ಅರ್ಜಿ ವಿಚಾರಣೆ ಕೈಗೆತ್ತಿಕೊಂಡ ದೆಹಲಿ ಕೋರ್ಟ್, ಅಪರಾಧಿಗಳಿಗೆ ಕ್ಷಮಾದಾನ ಅರ್ಜಿ ಸಲ್ಲಿಸಲು ಇಚ್ಛೆ ಇದೆಯಾ? ಎಂದು ಕೇಳಿ 7 ದಿನಗಳೊಳಗೆ ಹೊಸ ನೋಟೀಸ್ ಜಾರಿಗೊಳಿಸುವಂತೆ ತಿಹಾರ್ ಜೈಲು ಸಿಬ್ಬಂದಿಗೆವ ಆದೇಶಿಸಿದೆ. ಲ್ಲದೇ ಅರ್ಜಿ ವಿಚಾರಣೆಯನ್ನು 2020ರ ಜನವರಿ 7ಕ್ಕೆ ಮುಂದೂಡಿದೆ.

ನ್ಯಾಯಾಲಯದ ಆಧೇಶ ಹೊರಬೀಳುತ್ತಿದ್ದಂತೆಯೇ ನಿರ್ಭಯಾ ತಾಯಿ ಕಣ್ಣೀರಿಟ್ಟಿದ್ದಾರೆ. ಈ ವೇಳೆ ನಿರ್ಭಯಾ ತಾಯಿಯನ್ನು ಸಂತೈಸಿದ ನ್ಯಾಯಾಧೀಶರು 'ನಮಗೆ ನಿಮ್ಮ ಮೇಲೆ ಅನುಕಂಪವಿದೆ. ನಿಮ್ಮ ಮಗಳು ಸಾವನ್ನಪ್ಪಿದ್ದಾಳೆಂಬ ಅರಿವಿದೆ. ಆದರೆ ಅಪರಾಧಿಗಳಿಗೂ ಕೆಲ ಹಕ್ಕು ಇದೆ. ನಿಮ್ಮನ್ನು ನಾವು ಆಲಿಸುತ್ತೇವೆ ಆದರೆ ನಾವು ಕಾನೂನಿನ ಹಿಡಿತದಲ್ಲಿದ್ದೇವೆ' ಎಂದಿದ್ದಾರೆ.

ವಿಚಾರಣೆ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ನಿರ್ಭಯಾ ತಾಯಿ ಆಶಾ ದೇವಿ 'ನ್ಯಾಯಾಲಯ ಅಪರಾಧಿಗಳಿಗೆ ಮತ್ತಷ್ಟು ಸಮಯ ನೀಡಿದೆ. ಕೋರ್ಟ್ ಕೇವಲ ದೋಷಿಗಳ ಹಕ್ಕನ್ನು ಪರಿಗಣಿಸುತ್ತಿದೆ, ನಮಗಾದ ನಷ್ಟವನ್ನಲ್ಲ. ಜನವರಿ 7ರಂದು ಕೂಡಾ ಚಯಾವುದೇ ತೀರ್ಪು ಹೊರಬೀಳುತ್ತದೆ ಎನ್ನುವ ಖಚಿತತೆ ಇಲ್ಲ' ಎಂದಿದ್ದಾರೆ.

ದೋಷಿಗಳಿಗೆ ಗಲ್ಲು ಫಿಕ್ಸ್

ಈಗಾಗಲೇ ನಿರ್ಭಯಾ ದೋಷಿಗಳಲ್ಲೊಬ್ಬನಾದ ಅಕ್ಷಯ್ ಸಿಂಗ್ ಸುಪ್ರೀಂಗೆ ಗಲ್ಲು ಶಿಕ್ಷೆ ವಿರುದ್ಧ ಸಲ್ಲಿಸಿದ್ದ ಮೇಲ್ಮನವಿ ಅರ್ಜಿ ವಿಚಾರಣೆ ಪೂರ್ಣಗೊಂಡಿದೆ. ಅಕ್ಷಯ್ ಸಿಂಗ್ ಅರ್ಜಿ ವಜಾಗೊಳಿಸಿದ ಜಸ್ಟೀಸ್ ಭಾನುಮತಿ ನೇತೃತ್ವದ ಸುಪ್ರೀಂ ತ್ರಿಸದಸ್ಯ ಪೀಠ ನಾಲ್ವರೂ ಪರಾಧಿಗಳ ಗಲ್ಲು ಶಿಕ್ಷೆ ಖಾಯಂಗೊಳಿಸಿದೆ.

ಡಿಸೆಂಬರ್ 18ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ