ನಿರ್ಭಯಾ ದೋಷಿಗಳಿಗೆ ಗಲ್ಲು to ಟೀಂ ಇಂಡಿಯಾ; ಡಿಸೆಂಬರ್ 18ರ ಟಾಪ್ 10 ಸುದ್ದಿ!
ನಿರ್ಭಯಾ ಅತ್ಯಾಚಾರ ದೋಷಿಗಳಿಗೆ ಗಲ್ಲು ಶಿಕ್ಷೆ ಫಿಕ್ಸ್ ಆಗಿದೆ. ಆದರೆ ಗಲ್ಲು ಶಿಕ್ಷೆ ಮಾತ್ರ ವಿಳಂಭವಾಗುತ್ತಿದೆ. ನ್ಯಾಯಾಲಯ ವಿಚಾರಣೆಯನ್ನು ಜನವರಿ 7 ತಾರೀಖಿಗೆ ಮುಂದೂಡಿದೆ. ಹೀಗಾಗಿ ಅಲ್ಲೀವರಗೆ ದೋಷಿಗಳು ನಿರಾಳರಾಗಿದ್ದಾರೆ. ವೆಸ್ಟ್ ಇಂಡೀಸ್ ವಿರುದ್ದದ 2ನೇ ಏಕದಿನ ಪಂದ್ಯದಲ್ಲಿ ರೋಹಿತ್ ಶರ್ಮಾ ಹಾಗೂ ಕೆಎಲ್ ರಾಹುಲ್ ಸೆಂಚುರಿ ಸಿಡಿಸಿ ಅಬ್ಬರಿಸಿದ್ದಾರೆ. ರಶ್ಮಿಕಾ ಮಂದಣ್ಣ ಕ್ಯೂಟ್ ಸ್ಟೆಪ್ಸ್, ಬಿಜೆಪಿ ಹೊಸ ಅಧ್ಯಕ್ಷ ಸೇರಿದಂತೆ ಡಿಸೆಂಬರ್ 18ರ ಟಾಪ್ 10 ಸುದ್ದಿ ಇಲ್ಲಿವೆ.
1) ನಿರ್ಭಯಾ ದೋಷಿಗಳಿಗೆ ಗಲ್ಲು ಫಿಕ್ಸ್: ಶಿಕ್ಷೆ ಮಾತ್ರ ಮತ್ತಷ್ಟು ವಿಳಂಬ!...
ದೇಶವನ್ನೇ ಬೆಚ್ಚಿ ಬೀಳಿಸಿದ್ದ ನಿರ್ಭಯಾ ಅತ್ಯಾಚಾರ ಹಾಗೂ ಕೊಲೆ ಪ್ರಕರಣದ ದೋಷಿಗಳಿಗೆ ಗಲ್ಲು ಶಿಕ್ಷೆ ನಿಗಧಿಯಾಗಿದೆಯಾದರೂ, ಶಿಕ್ಷೆ ಮತ್ತಷ್ಟು ವಿಳಂಬವಾಗಲಿದೆ. ನಿರ್ಭಯಾ ತಾಯಿ ಅಪರಾಧಿಗಳಿಗೆ ಕೂಡಲೇ ಗಲ್ಲು ಶಿಕ್ಷೆ ವಿಧಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿ ಕೈಗೆತ್ತಿಕೊಂಡ ದೆಹಲಿ ನ್ಯಾಯಾಲಯ ವಿಚಾರಣೆಯನ್ನು ಜನವರಿ 7 ತಾರೀಖಿಗೆ ಮುಂದೂಡಿದೆ.
2) ಡಿಕೆಶಿ ತಾಯಿ ಮನವಿಗೆ ಕೋರ್ಟ್ ಓಕೆ: ರಾಮನಗರ SPಗೆ ಮಹತ್ವದ ಸೂಚನೆ
ಮಾಜಿ ಸಚಿವ ಡಿಕೆ ಶಿವಕುಮಾರ್ ಅಕ್ರಮ ಹಣ ಪ್ರಕರಣದಲ್ಲಿ ಗೌರಮ್ಮ ಮನವಿಯನ್ನು ಕೋರ್ಟ್ ಪುರಸ್ಕರಿಸಿದ್ದು, ಡಿಕೆಶಿ ತಾಯಿ ಮನವಿಗೆ ದೆಹಲಿ ಹೈಕೋರ್ಟ್ ಸಮ್ಮತಿಸಿದೆ. ಗೌರಮ್ಮ ಮನವಿ ಪುರಸ್ಕರಿಸಿದ ಹೈಕೋರ್ಟ್, ಕನಕಪುರದ ಮನೆಯಲ್ಲಿಯೇ ವಿಚರಣೆ ನಡೆಸುವಂತೆ ಕೋರ್ಟ್ ಆದೇಶ ನೀಡಿದೆ.
3) ಬಿಜೆಪಿಗೆ ಫೆಬ್ರವರಿಯಲ್ಲಿ ಹೊಸ ಅಧ್ಯಕ್ಷ?: ರಾಜ್ಯಗಳ ಅಧ್ಯಕ್ಷರೂ ಬದಲು?
ಕೇಂದ್ರದಲ್ಲಿನ ಅಧಿಕಾರೂರೂಢ ಬಿಜೆಪಿ, 2020ರ ಫೆಬ್ರುವರಿ ವೇಳೆಗೆ ನೂತನ ಅಧ್ಯಕ್ಷರನ್ನು ಹೊಂದುವ ಸಾಧ್ಯತೆ ಇದೆ. ಜೊತೆಗೆ ಇದಕ್ಕೂ ಮುನ್ನ ವಿವಿಧ ರಾಜ್ಯಗಳಿಗೆ ನೂತನ ರಾಜ್ಯಾಧ್ಯಕ್ಷರನ್ನೂ ಆಯ್ಕೆ ಮಾಡುವ ಸಾಧ್ಯತೆ ಇದೆ.
4) 2ನೇ ಏಕದಿನ: ರೋಹಿತ್ ಶರ್ಮಾ, ಕೆಎಲ್ ರಾಹುಲ್ ಸೆಂಚುರಿ!
ವೆಸ್ಟ್ ಇಂಡೀಸ್ ವಿರುದ್ದ 2ನೇ ಹಾಗೂ ಮಹತ್ವದ ಪಂದ್ಯದಲ್ಲಿ ಟೀಂ ಇಂಡಿಯಾ ಆರಂಭಿಕರಾದ ರೋಹಿತ್ ಶರ್ಮಾ ಹಾಗೂ ಕೆಎಲ್ ರಾಹುಲ್ ಶತಕ ಸಿಡಿಸಿದ್ದಾರೆ. ಸ್ಫೋಟಕ ಬ್ಯಾಟ್ಸ್‌ಮನ್ ರೋಹಿತ್ ಶರ್ಮಾ ಏಕದಿನ ಕ್ರಿಕೆಟ್‌ನಲ್ಲಿ 28 ನೇ ಶತಕ ಸಿಡಿಸಿದರೆ, ರಾಹುಲ್ 3ನೇ ಶತಕ ಪೂರೈಸಿದರು. ಇಷ್ಟೇ ಅಲ್ಲ ರೋಹಿತ್ ಹಾಗೂ ರಾಹುಲ್ ಶತಕದ ಮೂಲಕದ ದಾಖಲೆ ನಿರ್ಮಿಸಿದ್ದಾರೆ.
5) ಸ್ವೀಟ್ ಸಾಂಗ್‌ನಲ್ಲಿ ರಶ್ಮಿಕಾ ಕ್ಯೂಟ್ ಕ್ಯೂಟ್ ಸ್ಟೆಪ್ಸ್..!
ನಟಿ ರಶ್ಮಿಕಾ ಮಂದಣ್ಣ ಅಭಿನಯದ 'ಸರಿಲೇರು ನೀಕೆವರು' ಚಿತ್ರದ ಮೇಕಿಂಗ್ ಸಾಂಗ್ ರಿಲೀಸ್ ಆಗಿದೆ. ಎರಡು ಹಾಡುಗಳ ನಂತರ ಬಿಡುಗಡೆಯಾಗಿರೋ ಮೂರನೇ ಹಾಡಿನಲ್ಲಿ ರಶ್ಮಿಕಾ ಕಾಣಿಸಿಕೊಂಡಿರುವುದು ಅವರ ಫ್ಯಾನ್ಸ್‌ಗೆ ಖಷಿಕೊಟ್ಟಿದೆ.
6) ಮೊಬೈಲ್ ಬಳಕೆದಾರರಿಗೆ ಕಹಿ ಸುದ್ದಿ! ಇನ್ಮುಂದೆ ಸಿಗಲ್ಲ ಅಚ್ಚುಮೆಚ್ಚಿನ ಆಫರ್
ಭಾರತದ ಪ್ರಮುಖ ಟೆಲಿಕಾಂ ಕಂಪನಿಗಳು ತಮ್ಮ ಮೊಬೈಲ್ ಕರೆ ದರಗಳನ್ನು ಏರಿಕೆ ಮಾಡಿದ ಬೆನ್ನಲ್ಲೇ, ಭಾರತೀಯ ದೂರ ಸಂಪರ್ಕ ನಿಯಂತ್ರಣಾ ಸಂಸ್ಥೆ- ಟ್ರಾಯ್ ಉಚಿತ ಮೊಬೈಲ್ ಕರೆಗಳಿಗೆ ಕಡಿವಾಣ ಹಾಕುವ ಪ್ರಕ್ರಿಯೆಗೆ ಚಾಲನೆ ನೀಡಿದೆ.
7) 2ನೇ ಏಕದಿನ: ಕಪ್ಪು ಪಟ್ಟಿ ಧರಿಸಿ ಕಣಕ್ಕಿಳಿದ ವೆಸ್ಟ್ ಇಂಡೀಸ್, ಇಲ್ಲಿದೆ ಕಾರಣ!
ಭಾರತ ಹಾಗೂ ವೆಸ್ಟ್ ಇಂಡೀಸ್ ನಡುವಿನ 2ನೇ ಏಕದಿನ ಪಂದ್ಯ ಆರಂಭಗೊಂಡಿದ್ದು ತೀವ್ರ ಕುತೂಹಲ ಕೆರಳಿಸಿದೆ. ಟೀಂ ಇಂಡಿಯಾ ಗೆಲ್ಲಲೇಬೇಕಾದ ಒತ್ತಡದಲ್ಲಿದೆ. ವಿಶಾಖಪಟ್ಟಣಂ ಪಂದ್ಯದಲ್ಲಿ ಟಾಸ್ ಗೆದ್ದು ಫೀಲ್ಡಿಂಗ್ ಇಳಿದ ವೆಸ್ಟ್ ಇಂಡೀಸ್ ತಂಡದ ಆಟಗಾರರು ಕಪ್ಪು ಪಟ್ಟಿ ಧರಿಸಿ ಕಣಕ್ಕಿಳಿದಿದ್ದಾರೆ. ಇದರ ಕಾರಣವೂ ಬಹಿರಂಗವಾಗಿದೆ.
8) ನಟಿ ಶೃತಿ ಕಾರ್ ಡ್ರೈವರ್ ಆತ್ಮಹತ್ಯೆಗೆ ಶರಣು: ಕಾರಣ ನಿಗೂಢ?
ಕನ್ನಡದ ಹಿರಿಯ ನಟಿ ಶೃತಿ ಅವರ ಕಾರು ಚಾಲಕ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ರಾಮನಗರ ಜಿಲ್ಲೆಯ ಮಾಗಡಿ ಪಟ್ಟಣದಲ್ಲಿ ಇಂದು(ಬುಧವಾರ) ನಡೆದಿದೆ. ಆತ್ಮಹತ್ಯೆ ಮಾಡಿಕೊಂಡವರನ್ನು ಮಂಜುನಾಥ್ ಸಿಂಗ್ ಎಂದು ಗುರುತಿಸಲಾಗಿದೆ.
9) ಮತ್ತೆ ಯಡಿಯೂರಪ್ಪ ಜೊತೆ ಜೆಡಿಎಸ್‌ನ ಹೊರಟ್ಟಿ ಭೇಟಿ ಸಸ್ಪೆನ್ಸ್!
ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಜೆಡಿಎಸ್ ಹಿರಿಯ ನಾಯಕ ಬಸವರಾಜ ಹೊರಟ್ಟಿಭೇಟಿ ಮಾಡಿರುವುದು ರಾಜಕೀಯ ವಲಯದಲ್ಲಿ ಕುತೂಹಲ ಮೂಡಿಸಿದೆ. ಮಂಗಳವಾರ ರೇಸ್‌ಕೋರ್ಸ್ ರಸ್ತೆಯಲ್ಲಿನ ಶಕ್ತಿ ಭವನದಲ್ಲಿ ಮತ್ತೊಮ್ಮೆ ಭೇಟಿ ಮಾಡಿ ಚರ್ಚೆ ನಡೆಸಿದ್ದಾರೆ.
10) ದೇಶದಲ್ಲಿ ನಾವೆಲ್ಲರೂ ಕೂಡ ವಲಸಿಗರೇ!: ಕಾಯ್ದೆ ಹಿಂಪಡೆದು ಒಮ್ಮತದಿಂದ ಮತ್ತೆ ಮಂಡಿಸಿ
ಪೌರತ್ವ ತಿದ್ದುಪಡಿ ಕಾಯ್ದೆ ಹಿಂಪಡೆದು, ಇನ್ನಷ್ಟುಸುಧಾರಿಸಿ, ಒಮ್ಮತದಿಂದ ಮತ್ತೆ ಮಂಡಿಸಿ, ದೇಶದಲ್ಲಿ ನಾವೆಲ್ಲರೂ ಕೂಡ ವಲಸಿಗರೇ. ತಿದ್ದು ಪಡಿಗೆ ಎಲ್ಲರ ಸಲಹೆ ಅವಶ್ಯಕ. ಕೇಂದ್ರ ಸರ್ಕಾರ ಈ ನಿಟ್ಟಿನಲ್ಲಿ ಕೆಲಸ ಮಾಡಬೇಕಿದೆ.