ಗುಡ್ಡಗಾಡು ಪ್ರದೇಶದಲ್ಲಿ ದಿವ್ಯಾಂಗ ವ್ಯಕ್ತಿಗೆ ಪಿಂಚಣಿ ವಿತರಿಸಿದ ಡ್ರೋಣ್
ಕುಗ್ರಾಮವೊಂದರಲ್ಲಿ ವಾಸವಿದ್ದ ದಿವ್ಯಾಂಗ ವ್ಯಕ್ತಿಗೆ ಪಿಂಚಣಿ ನೀಡಲು ತಂತ್ರಜ್ಞಾನ ನೆರವಾಗಿದೆ. ರಸ್ತೆ ಇಲ್ಲದಿದ್ದರೇನಂತೆ ಡ್ರೋಣ್ ಮೂಲಕ ಆತನಿಗೆ ಪಿಂಚಣಿ ಕಳುಹಿಸಲಾಗಿದೆ. ಒಡಿಶಾದ ನುವಾಪಾಡಾ ಜಿಲ್ಲೆಯ ದೂರದ ಹಳ್ಳಿಯಲ್ಲಿ ಈ ಘಟನೆ ನಡೆದಿದೆ.
ನುವಾಪಾಡಾ, ಒಡಿಶಾ: ಇವತ್ತು ತಂತ್ರಜ್ಞಾನ ಸಾಕಷ್ಟು ಮುಂದುವರೆದಿದೆ. ಆದರೆ ಕೆಲವು ಹಳ್ಳಿಗಳಿಗೆ ರಸ್ತೆ ಸೌಲಭ್ಯ ಮಾತ್ರ ಇಲ್ಲದಾಗಿದೆ. ಅನೇಕ ಕುಗ್ರಾಮಗಳು ರಸ್ತೆ ವಿದ್ಯುತ್ ಇಲ್ಲದೇ ಇನ್ನು ಕತ್ತಲಿನಲ್ಲೇ ಇದ್ದಾರೆ. ಇಂತಹ ಕುಗ್ರಾಮವೊಂದರಲ್ಲಿ ವಾಸವಿದ್ದ ದಿವ್ಯಾಂಗ ವ್ಯಕ್ತಿಗೆ ಪಿಂಚಣಿ ನೀಡಲು ತಂತ್ರಜ್ಞಾನ ನೆರವಾಗಿದೆ. ರಸ್ತೆ ಇಲ್ಲದಿದ್ದರೇನಂತೆ ಡ್ರೋಣ್ ಮೂಲಕ ಆತನಿಗೆ ಪಿಂಚಣಿ ಕಳುಹಿಸಲಾಗಿದೆ. ಒಡಿಶಾದ ನುವಾಪಾಡಾ ಜಿಲ್ಲೆಯ ದೂರದ ಹಳ್ಳಿಯಲ್ಲಿ ಈ ಘಟನೆ ನಡೆದಿದೆ.
ಈ ಹಳ್ಳಿಯಲ್ಲಿ ವಾಸ ಮಾಡುತ್ತಿದ್ದ ವಾಸಿಸುವ ದೈಹಿಕ ವಿಶೇಷಚೇತನ ವ್ಯಕ್ತಿ ಹೆಟರಾಮ್ ಸತ್ನಾಮಿ ಎಂಬುವವರಿಗೆ ಡ್ರೋಣ್ ಮೂಲಕ ಪಿಂಚಣಿ ನೀಡಲಾಗಿದೆ. ಇವರು ಸರ್ಕಾರದಿಂದ ತಮಗೆ ಬರುವ ಪಿಂಚಣಿ ಪಡೆಯಲು ಕಾಡಿನ ಹಾದಿಯಲ್ಲಿ 2 ಕಿಲೋ ಮೀಟರ್ ವರೆಗೆ ನಡೆದು ಬರಬೇಕಿತ್ತು. ಆದರೆ ಈ ಡ್ರೋಣ್ ಆತನ ಕೆಲಸವನ್ನು ಸುಲಭಗೊಳಿಸಿದೆ. ಈತನ ಪಿಂಚಣಿ ಹಣವನ್ನು ಹೊತ್ತು ತಂದ ಡ್ರೋಣ್ ಸೀದಾ ಅವರ ಮನೆ ಇದ್ದ ಭಾಲೇಶ್ವರ ಪಂಚಾಯತ್ ವ್ಯಾಪ್ತಿಯ ಭುತ್ಕಪದ ಗ್ರಾಮದ ಅವರ ಮನೆಗೆ ತಂದು ಬೀಳಿಸಿದೆ. ಇದರಿಂದ ಅವರು ಪಿಂಚಣಿಗಾಗಿ ಎರಡು ಕಿಲೋ ಮೀಟರ್ ದುರ್ಗಮ ರಸ್ತೆಯಲ್ಲಿ ಸಾಗುವ ಸಂಕಷ್ಟ ತಪ್ಪಿ ಹೋಗಿದೆ.
ಏರೋ ಇಂಡಿಯಾದಲ್ಲಿ ಗಮನಸೆಳೆದ ಬೆಳೆ ರೋಗ ಪತ್ತೆ ಮಾಡಿ ಔಷಧಿ ಸಿಂಪಡಿಸುವ ಕಿಸಾನ್ ಡ್ರೋನ್
ದಿವ್ಯಾಂಗ ವ್ಯಕ್ತಿಯ ಸಂಕಷ್ಟ ತಿಳಿದಿದ್ದ ಗ್ರಾಮ ಸರಪಂಚ್ ಸರೋಜ್ ಅಗರ್ವಾಲ್ ( Saroj Agarwal)ಅವರು ಇದಕ್ಕಾಗಿ ಆನ್‌ಲೈನ್‌ನಲ್ಲಿ ಡ್ರೋಣ್ ಒಂದನ್ನು ಖರೀದಿಸಿದ್ದರು. ಬಳಿಕ ಅದರಲ್ಲಿ ಅವರು ಪಿಂಚಣಿ ಹಣವನ್ನು ಅವರಿಗೆ ಡ್ರೋಣ್ ಮೂಲಕ ಕಳುಹಿಸಿಕೊಟ್ಟಿದ್ದಾರೆ. ದಿವ್ಯಾಂಗ ವ್ಯಕ್ತಿ ಹೆಟರಾಮ್ ಸತ್ನಾಮಿ ಅವರ ಮನೆ ಅರಣ್ಯದಿಂದ ಸುತ್ತುವರೆದಿರುವ ಗ್ರಾಮದಲ್ಲಿದ್ದು, ಅಲ್ಲಿಂದ ಪಂಚಾಯತ್ ಕಚೇರಿ 2 ಕಿಮೀ ದೂರದಲ್ಲಿದೆ. ಹೀಗಾಗಿ ಅವರಿಗೆ ಡ್ರೋಣ್‌ನಲ್ಲಿ ಪಿಂಚಣಿ ಕಳುಹಿಸಲಾಗಿದೆ, ಇದರಿಂದ ತನಗೆ ಬಹಳ ಸಹಾಯವಾಗಿದೆ ಎಂದು ದಿವ್ಯಾಂಗ ವ್ಯಕ್ತಿ ಹೆಟರಾಮ್ ಸತ್ನಾಮಿ ಹೇಳಿದ್ದಾರೆ. ಇವರು ರಾಜ್ಯ ಸರ್ಕಾರದ ಮಧುಬಾಬು ಪಿಂಚಣಿ ಯೋಜನೆಯ ಫಲಾನುಭವಿಯಾಗಿದ್ದಾರೆ.
ಈ ಬಗ್ಗೆ ಮಾತನಾಡಿದ ಗ್ರಾಮದ ಸರಪಂಚ್ ಸರೋಜ್ ಅಗರ್ವಾಲ್, ನಮ್ಮ ಪಂಚಾಯತ್ ಪ್ರದೇಶದಲ್ಲಿ, ಭುತ್ಕಪದ (Bhutkapada) ಎಂಬ ಅರಣ್ಯದಲ್ಲಿ ಒಂದು ಗ್ರಾಮವಿದೆ. ವಿಶೇಷ ಚೇತನರಾದ ಹೇತಾರಾಮ್ ಸತಾನಾಮಿ (Hetaram Satanami) ಆ ಗ್ರಾಮದಲ್ಲಿ ವಾಸಿಸುತ್ತಿದ್ದಾರೆ. ಹುಟ್ಟಿನಿಂದಲೂ ವಿಕಲಾಂಗರಾಗಿರುವ ಅವರಿಗೆ ನಡೆದಾಡಲು ಸಾಧ್ಯವಿಲ್ಲ. ನಾನು ಅವನನ್ನು ರಾಜ್ಯ ಯೋಜನೆಯಡಿ ಪಿಂಚಣಿಗಾಗಿ (pension)ದಾಖಲಿಸಿದ್ದೇನೆ. ಇತರ ದೇಶಗಳಲ್ಲಿ ಡ್ರೋನ್‌ಗಳ ಮೂಲಕ ವಸ್ತುಗಳನ್ನು ಹೇಗೆ ಕಳುಹಿಸಲಾಗುತ್ತದೆ ಎಂಬುದನ್ನು ನಾನು ಗಮನಿಸಿದ್ದೆ. ನಂತರ ಅದಕ್ಕಾಗಿಯೇ ನಾನು ಡ್ರೋನ್‌ಗಾಗಿ (drone)ಆರ್ಡರ್ ಮಾಡಿದ್ದೇನೆ ಮತ್ತು ಹಣವನ್ನು ಅವನ ಮನೆ ಬಾಗಿಲಿಗೆ ತಲುಪಿಸಿದೆ ಎಂದು ಹೇಳಿದ್ದಾರೆ.
ಪಕ್ಷೇತರ ಅಭ್ಯರ್ಥಿ ಜೊತೆ ತಿರುಗಾಡ್ತಿರುವ ಡ್ರೋಣ್ ಪ್ರತಾಪ್.... ರಾಜಕೀಯಕ್ಕೆ ಬರ್ತಾರಾ?
ನುವಾಪದ (Nuapada) ವಿಭಾಗದ ಡೆವಲಪ್‌ಮೆಂಟ್ ಅಧಿಕಾರಿ (BDO) ಸುಬದಾರ್ ಪ್ರಧಾನ್ (Subadar Pradhan) ಈ ಬಗ್ಗೆ ಮಾತನಾಡಿ, ಇಂತಹ ಸೇವೆಗಳನ್ನು ತಲುಪಿಸಲು ಅಂತಹ ಸಾಧನಗಳನ್ನು ಖರೀದಿಸಲು ಸರ್ಕಾರದ ಯೋಜನೆಯಡಿ ಅವಕಾಶ ಇಲ್ಲದ ಕಾರಣ ಸರೋಜಾ ಅಗರ್ವಾಲ್ ಅವರು ತಮ್ಮ ಸ್ವಂತ ಹಣದಿಂದ ಇದನ್ನು ಮಾಡಿದ್ದಾರೆ ಎಂದರು. , ಔಷಧಗಳು (medicines), ಪಾರ್ಸೆಲ್‌ಗಳು, ದಿನಸಿ (groceries)ಮತ್ತು ಆಹಾರ ಸೇರಿದಂತೆ, ವಿವಿಧ ಸರಕುಗಳನ್ನು ತಲುಪಿಸಲು ಪ್ರಪಂಚದಾದ್ಯಂತ ಡ್ರೋನ್‌ಗಳನ್ನು ಬಳಸಲಾಗುತ್ತಿದೆ. ಆದರೆ ನಗದು ವಿತರಣೆ, ಅದೂ ಸಹ ಭಾರತದಲ್ಲಿ ಇದೇ ಮೊದಲಾಗಿದೆ.