ಒಂದೇ ದಿನ 16 ಲಕ್ಷ ಕೋವಿಡ್ ಕೇಸ್, ಪುಷ್ಪಾ ಡಿಲೀಟ್ ಸೀನ್ ನೋಡಲು ಮುಗಿಬಿದ್ದ ಫ್ಯಾನ್ಸ್ , ಜ.2ರ Top 10 News!
ಕೊರೋನಾ ಅಪಾಯ ಹೆಚ್ಚಾಗುತ್ತಿದ್ದು, ಒಂದೇ ದಿನ 16 ಲಕ್ಷ ಕೋವಿಡ್ ಪ್ರಕರಣ ದಾಖಲಾಗಿದೆ. ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿಗೆ ಡೆಲ್ಟಾಪ್ಲಸ್ ವೇರಿಯೆಂಟ್ ಹಾವಳಿ ಇಟ್ಟಿದೆ. ಮೀರತ್ ಬಂದ ಮೋದಿಗೆ ಜನ ಅದ್ಧೂರಿ ಸ್ವಾಗತ ನೀಡಿದ್ದಾರೆ. ಹೊಸ ವರ್ಷದ ಹೊಸ್ತಿಲಲ್ಲಿ ವಾಹನ ಸವಾರರಿಗೆ ನೆಮ್ಮದಿ, ಗಿಟ್‌ಹಬ್‌ನಲ್ಲಿ ಮುಸ್ಲಿಂ ಮಹಿಳೆಯರ ಹರಾಜು ಸೇರಿದಂತೆ ಜನವರಿ 2ರ ಟಾಪ್ 10 ಸುದ್ದಿ ವಿವರ ಇಲ್ಲಿವೆ.
PM Modi In Meerut: ಮೀರತ್‌ಗೆ ಬಂದ ಮೋದಿಗೆ ಅದ್ಧೂರಿ ಸ್ವಾಗತ, ಬೀದಿ ಬೀದಿಯಲ್ಲೂ ಸೇರಿದ ಜನ!
ಭಾನುವಾರ, ಪ್ರಧಾನಿ ನರೇಂದ್ರ ಮೋದಿ ಅವರು ಯುಪಿಯ ಮೀರತ್‌ಗೆ ಭೇಟಿ ನೀಡಿ ಮೇಜರ್ ಧ್ಯಾನ್ ಚಂದ್ ಕ್ರೀಡಾ ವಿಶ್ವವಿದ್ಯಾಲಯಕ್ಕೆ ಶಂಕುಸ್ಥಾಪನೆ ಮಾಡಲಿದ್ದಾರೆ. ಇದಕ್ಕೂ ಮುನ್ನ ಪ್ರಧಾನಿ ಮೋದಿ ಅವರನ್ನು ಸ್ವಾಗತಿಸಲು ಮೀರತ್ ನಿವಾಸಿಗಳಲ್ಲಿ ಭಾರಿ ಉತ್ಸಾಹದಿಂದ ನೆರೆದಿದ್ದಾರೆ.
Make in India: ವಾರ್ಷಿಕ $50 ಬಿಲಿಯನ್ ಮೌಲ್ಯದ ಆ್ಯಪಲ್ ಸರಕು ಉತ್ಪಾದನೆಗೆ ಕೇಂದ್ರ ಪ್ರಸ್ತಾಪ!
ಮೇಕ್ ಇನ್ ಇಂಡಿಯಾ' (Make in India) ಯೋಜನೆ ಮೇಲೆ ಹೆಚ್ಚಿನ ಗಮನ ಹರಿಸಲು ಟೆಕ್ ದೈತ್ಯ ಆ್ಯಪಲ್‌ಗೆ (Apple) ಕೇಂದ್ರ ಸರ್ಕಾರ ವಿಶೇಷ ಆಹ್ವಾನ ನೀಡಿದೆ. ಮುಂದಿನ 5-6 ವರ್ಷಗಳಲ್ಲಿ ಕಂಪನಿಯು ವಾರ್ಷಿಕ ಉತ್ಪಾದನೆಯನ್ನು 50 ಬಿಲಿಯನ್ ಡಾಲರ್‌ಗಳಷ್ಟು ಹೆಚ್ಚಿಸಲಿದೆ
Massive Jump In COVID 19 Case: ಒಂದೇ ದಿನ 16 ಲಕ್ಷ ಕೋವಿಡ್ ಕೇಸ್!
ಕೋವಿಡ್ ರೂಪಾಂತರಿಗಳಾದ ಒಮಿಕ್ರೋನ್ ಮತ್ತು ಡೆಲ್ಟಾ ವೈರಸ್‌ಗಳ ಅಬ್ಬರ ಮುಂದುವರೆದಿದ್ದು, ಶುಕ್ರವಾರ ವಿಶ್ವಾದ್ಯಂತ ಒಂದೇ ದಿನ 16.39 ಲಕ್ಷ ಕೋವಿಡ್ ಪ್ರಕರಣಗಳು ದಾಖಲಾಗಿವೆ. ಇದು ಸಾರ್ವಕಾಲಿಕ ಗರಿಷ್ಠ ದೈನಂದಿನ ಸಂಖ್ಯೆಯಾಗಿದೆ.
Delta Plus variant: ಒಮಿಕ್ರೋನ್ ಅಲ್ಲ, ಗಂಗೂಲಿಯನ್ನು ಕಾಡಿದ್ದು ಡೆಲ್ಟಾಪ್ಲಸ್
ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಅವರಲ್ಲಿ ಪತ್ತೆಯಾಗಿದ್ದು ಕೋವಿಡ್ ರೂಪಾಂತರಿ ಡೆಲ್ಟಾಪ್ಲಸ್ ವೈರಸ್ ಎಂದು ವೈದ್ಯರು ಶನಿವಾರ ಮಾಹಿತಿ ನೀಡಿದ್ದಾರೆ. ‘ಗಂಗೂಲಿಯ ಡೆಲ್ಟಾಪ್ಲಸ್ ಸೋಂಕಿನ ಪರೀಕ್ಷಾ ವರದಿ ಪಾಸಿಟಿವ್ ಬಂದಿದೆ
ಡಿಲೀಟ್ ಆದ ದೃಶ್ಯ ಬಿಡುಗಡೆ ಮಾಡಿದ Pushpa ತಂಡ, ವಿಡಿಯೋ ನೋಡಲು ಮುಗಿಬಿದ್ದ ಜನ!
ಡಿಲೀಟ್ ಸೀನ್ ವೈರಲ್. ಸಾಲ ತೀರಿಸುವವರ ಜೊತೆ ಹೀಗೂ ವರ್ತಿಸಬಹುದಾ ಎಂದು ಕಾಮೆಂಟ್ ಮಾಡಿದ ನೆಟ್ಟಿಗರು....
Bulli Bai Blocked: ಗಿಟ್‌ಹಬ್‌ನಲ್ಲಿ ಮುಸ್ಲಿಂ ಮಹಿಳೆಯರ ಹರಾಜು: ಮತ್ತೊಂದು Sulli Deals ಪ್ರಕರಣ?
‘Bulli Bai’ ಎಂಬ ಆ್ಯಪ್‌ನಲ್ಲಿ ನೂರಾರು ಮುಸ್ಲಿಂ ಮಹಿಳೆಯರ ಫೋಟೋಗಳನ್ನು ಅಪ್‌ಲೋಡ್ ಮಾಡಲಾಗಿದ್ದು, ದೆಹಲಿ ಮತ್ತು ಮುಂಬೈ ಪೊಲೀಸರು ದುಷ್ಕರ್ಮಿಗಳ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.
Petrol Diesel Rate: ಹೊಸ ವರ್ಷದ ಹೊಸ್ತಿಲಲ್ಲಿ ವಾಹನ ಸವಾರರಿಗೆ ನೆಮ್ಮದಿ!
: ಹೊಸ ವರ್ಷ 2022ನ್ನು ಇಡೀ ವಿಶ್ವವೇ ಅದ್ಧೂರಿಯಾಗಿ ಬರ ಮಾಡಿಕೊಂಡಿದೆ. ಹೊಸ ವರ್ಷ ಸುಖಮಯವಾಗಲಿ, ಆರೋಗ್ಯದಿಂದ ಕೂಡಿರಲಿ ಎಂಬುವುದು ಎಲ್ಲರ ಹಾರೈಕೆಯಾಗಿದೆ. ಹೀಗಿದ್ದರೂ ಈ ಹೊಸ ವರ್ಷದಲ್ಲಿ ಕೊರೋನಾ ಬೆಂಬಿಡದೇ ಕಾಡುತ್ತಿದೆ
Tata Electric Car sales ಎಲೆಕ್ಟ್ರಿಕ್ ವಾಹನ ಮಾರಾಟದಲ್ಲಿ ಟಾಟಾಗೆ ಮೊದಲ ಸ್ಥಾನ, ಶೇ.439 ಏರಿಕೆ ಮೂಲಕ ದಾಖಲೆ!
ವಿಶ್ವವೇ ಇದೀಗ ಎಲೆಕ್ಟ್ರಿಕ್ ವಾಹನಕ್ಕೆ(Electric Vehicle) ಹೆಚ್ಚಿನ ಪ್ರಾಶಸ್ತ್ಯ ನೀಡುತ್ತಿದೆ. ಎಲ್ಲಾ ದೇಶಗಳು 2030ರ ವೇಳೆ ಶೇಕಡಾ 30 ರಿಂದ 50 ರಷ್ಟು ಎಲೆಕ್ಟ್ರಿಕ್ ವಾಹನ ಬಳಕೆ ಗುರಿ ಇಟ್ಟುಕೊಂಡಿದೆ. ಈ ಕುರಿತು ಭಾರತ(India) ಸೇರಿದಂತೆ ಬಹುತೇಕ ರಾಷ್ಟ್ರಗಳು ಪ್ರೋತ್ಸಾಹಕ ಧನ, ಸಬ್ಸಿಡಿ ಸೇರಿದಂತೆ ಹಲವು ಯೋಜನೆ ಮೂಲಕ ಎಲೆಕ್ಟ್ರಿಕ್ ವಾಹನ ಬಳಕೆ ಹೆಚ್ಚಿಸಲು ಪ್ರಯತ್ನಿಸುತ್ತಿದೆ.