Massive Jump In COVID 19 Case: ಒಂದೇ ದಿನ 16 ಲಕ್ಷ ಕೋವಿಡ್‌ ಕೇಸ್‌!

ಕೋವಿಡ್‌ ರೂಪಾಂತರಿಗಳಾದ ಒಮಿಕ್ರೋನ್‌ ಮತ್ತು ಡೆಲ್ಟಾ ವೈರಸ್‌ಗಳ ಅಬ್ಬರ ಮುಂದುವರೆದಿದ್ದು, ಶುಕ್ರವಾರ ವಿಶ್ವಾದ್ಯಂತ ಒಂದೇ ದಿನ 16.39 ಲಕ್ಷ ಕೋವಿಡ್‌ ಪ್ರಕರಣಗಳು ದಾಖಲಾಗಿವೆ. ಇದು ಸಾರ್ವಕಾಲಿಕ ಗರಿಷ್ಠ ದೈನಂದಿನ ಸಂಖ್ಯೆಯಾಗಿದೆ.

India sees massive jump in COVID 19 cases with 16 lakh new infections gvd

ನವದೆಹಲಿ (ಜ.2): ಕೋವಿಡ್‌ (Covid) ರೂಪಾಂತರಿಗಳಾದ ಒಮಿಕ್ರೋನ್‌ (Omicron) ಮತ್ತು ಡೆಲ್ಟಾ ವೈರಸ್‌ಗಳ (Delta Plus) ಅಬ್ಬರ ಮುಂದುವರೆದಿದ್ದು, ಶುಕ್ರವಾರ ವಿಶ್ವಾದ್ಯಂತ ಒಂದೇ ದಿನ 16.39 ಲಕ್ಷ ಕೋವಿಡ್‌ ಪ್ರಕರಣಗಳು ದಾಖಲಾಗಿವೆ. ಇದು ಸಾರ್ವಕಾಲಿಕ ಗರಿಷ್ಠ ದೈನಂದಿನ ಸಂಖ್ಯೆಯಾಗಿದೆ. ನವೆಂಬರ್‌ 24ರಂದು ದಕ್ಷಿಣ ಆಫ್ರಿಕಾದಲ್ಲಿ ಕಾಣಿಸಿಕೊಂಡ ಒಮಿಕ್ರೋನ್‌ ಸೋಂಕು ಅತ್ಯಂತ ವೇಗವಾಗಿ ಇಡೀ ಪ್ರಪಂಚವನ್ನು ಆಕ್ರಮಿಸಿಕೊಳ್ಳುತ್ತಿದೆ. ಒಮಿಕ್ರೋನ್‌ ಸೋಂಕು ವೇಗವಾಗಿ ಹರಡುತ್ತಿರುವುದರಿಂದ ಕೋವಿಡ್‌ ಪ್ರಕರಣಗಳು ಹೆಚ್ಚಾಗಿ ದಾಖಲಾಗುತ್ತಿವೆ. ಪ್ರಪಂಚದಲ್ಲಿ ಈವರೆಗೆ 28.86 ಕೋಟಿ ಕೋವಿಡ್‌ ಪ್ರಕರಣಗಳು ದಾಖಲಾಗಿದ್ದು, 54.55 ಲಕ್ಷ ಜನರು ಸಾವಿಗೀಡಾಗಿದ್ದಾರೆ.

ಮಹಾರಾಷ್ಟ್ರ, ದಿಲ್ಲಿಯಲ್ಲಿ ಕೋವಿಡ್‌ ಭಾರೀ ಸ್ಫೋಟ: 2ನೇ ಅಲೆಯಲ್ಲಿ ಅತಿ ಹೆಚ್ಚು ಅನಾಹುತ ಸಂಭವಿಸಿದ್ದ ಮಹಾರಾಷ್ಟ್ರ ಮತ್ತು ದೆಹಲಿಯಲ್ಲಿ ಹೊಸ ಕೋವಿಡ್‌ ಕೇಸುಗಳಲ್ಲಿ ಭಾರೀ ಏರಿಕೆಯಾಗಿದೆ. ಮಹಾರಾಷ್ಟ್ರದಲ್ಲಿ ಶನಿವಾರ 9170 ಪ್ರಕರಣ ಪತ್ತೆಯಾಗಿವೆ. ಶುಕ್ರವಾರಕ್ಕೆ ಹೋಲಿಸಿಕೊಂಡರೆ ಕೇಸಲ್ಲಿ ಶೇ.13ರಷ್ಟುಹೆಚ್ಚಾಗಿದೆ. ಜೊತೆಗೆ ಎರಡೇ ದಿನದಲ್ಲಿ ರಾಜ್ಯದಲ್ಲಿ ಹೊಸ ಕೇಸುಗಳು ದ್ವಿಗುಣವಾಗಿದೆ. ಗುರುವರ ರಾಜ್ಯದಲ್ಲಿ 5368 ಕೇಸು ದಾಖಲಾಗಿತ್ತು. ಇನ್ನು ರಾಜ್ಯದ ಒಟ್ಟಾರೆ ಸೋಂಕಿತರ ಪೈಕಿ 6347 ಕೋವಿಡ್‌ ಕೇಸ್‌ಗಳು ಮುಂಬೈ ನಗರವೊಂದರಲ್ಲೇ ಪತ್ತೆಯಾಗಿವೆ.

ಇನ್ನು ದೆಹಲಿಯಲ್ಲಿ ಶನಿವಾರ 2716 ಪ್ರಕರಣ ಪತ್ತೆಯಾಗಿವೆ. ಶುಕ್ರವಾರಕ್ಕೆ ಹೋಲಿಸಿಕೊಂಡರೆ ಸೋಂಕಿನ ಪ್ರಮಾಣ ಶೇ.51ರಷ್ಟುಹೆಚ್ಚಳವಾಗಿದೆ. ಶುಕ್ರವಾರ ಶೇ.2.4ರಷ್ಟಿದ್ದ ಕೋವಿಡ್‌ ಪಾಸಿಟಿವಿಟಿ ದರ ಶನಿವಾರ 3.64ಕ್ಕೆ ಜಿಗಿದಿದೆ. 7 ತಿಂಗಳ ನಂತರ ಇದೇ ಮೊದಲ ಸಲಹ ದಿಲ್ಲಿಯಲ್ಲಿ ದಾಖಲಾದ ಸಾರ್ವಕಾಲಿಕ ದೈನಂದಿನ ಗರಿಷ್ಠ ಸೋಂಕು ಇದು.

ದೇಶದಲ್ಲಿ ಮತ್ತೆ ವಿಶ್ವದಾಖಲೆಯ 3.54 ಲಕ್ಷ ಕೋವಿಡ್‌ ಕೇಸ್‌!

161 ಒಮಿಕ್ರೋನ್‌ ಕೇಸು ಒಟ್ಟು ಕೇಸು 1431ಕ್ಕೆ ಏರಿಕೆ: ಶನಿವಾರ ಮುಂಜಾನೆ 8 ಗಂಟೆಗೆ ಮುಕ್ತಾಯವಾದ 24 ತಾಸುಗಳ ಅವಧಿಯಲ್ಲಿ ದೇಶದಲ್ಲಿ ಹೊಸದಾಗಿ 161 ಒಮಿಕ್ರೋನ್‌ ಪ್ರಕರಣಗಳು ಪತ್ತೆಯಾಗಿದೆ. ಈ ಮೂಲಕ ಒಟ್ಟು ಒಮಿಕ್ರೋನ್‌ ಪ್ರಕರಣಗಳ ಸಂಖ್ಯೆ 1,431ಕ್ಕೆ ಏರಿಕೆಯಾಗಿದೆ ಎಂದು ಆರೋಗ್ಯ ಇಲಾಖೆಯ ಪ್ರಕಟಣೆ ತಿಳಿಸಿದೆ. ಒಟ್ಟು ಒಮಿಕ್ರೋನ್‌ ಸೋಂಕಿತರಲ್ಲಿ 488 ಜನ ಗುಣಮುಖರಾಗಿದ್ದಾರೆ. ಮಹಾರಾಷ್ಟ್ರದಲ್ಲಿ ಅತಿ ಹೆಚ್ಚು 454 ಪ್ರಕರಣಗಳು ದಾಖಲಾಗಿದೆ. ಉಳಿದಂತೆ ದೆಹಲಿಯಲ್ಲಿ 351, ಕೇರಳದಲ್ಲಿ 118 ಮತ್ತು ಗುಜರಾತ್‌ನಲ್ಲಿ 115 ಪ್ರಕರಣಗಳು ದಾಖಲಾಗಿದೆ. ಈವರೆಗೆ ಒಮಿಕ್ರೋನ್‌ ಸೋಂಕು 23 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಹರಡಿದೆ

22775 ಕೇಸು, 406 ಸಾವು: ಶನಿವಾರ ಮುಂಜಾನೆ 8 ಗಂಟೆಗೆ ಮುಕ್ತಾಯವಾದ 24 ತಾಸುಗಳ ಅವಧಿಯಲ್ಲಿ ದೇಶದಲ್ಲಿ ಹೊಸದಾಗಿ 22,775 ಕೋವಿಡ್‌ ಪ್ರಕರಣಗಳು ದಾಖಲಾಗಿದೆ. ಇದು 86 ದಿನಗಳ ಗರಿಷ್ಠ ದೈನಂದಿನ ಪ್ರಕರಣಗಳ ಸಂಖ್ಯೆಯಾಗಿದೆ. ಶುಕ್ರವಾರಕ್ಕಿಂತ 6011 ಪ್ರಕರಣಗಳು ಹೆಚ್ಚು ದಾಖಲಾಗಿವೆ. ಇದೇ ಅವಧಿಯಲ್ಲಿ 406 ಸೋಂಕಿತರು ಸಾವಿಗೀಡಾಗಿದ್ದು, ಒಟ್ಟು ಪ್ರಕರಣ 3.48 ಕೋಟಿಗೆ ಮತ್ತು ಒಟ್ಟು ಸಾವು 4.81 ಲಕ್ಷಕ್ಕೆ ಏರಿಕೆಯಾಗಿದೆ. ಇದೇ ವೇಳೆ ಸಕ್ರಿಯ ಪ್ರಕರಣ 1.04 ಲಕ್ಷ ದಾಟಿದೆ. ಇದರೊಂದಿಗೆ ತಿಂಗಳ ನಂತರ ಸಕ್ರಿಯ ಕೇಸು ಲಕ್ಷದ ಗಡಿ ದಾಟಿದಂತಾಗಿದೆ. ದೈನಂದಿನ ಪಾಸಿಟಿವಿಟಿ ದರವೂ 2.05ರಷ್ಟುದಾಖಲಾಗಿದೆ. ಅಲ್ಲದೇ ಕೇವಲ 2 ದಿನದಲ್ಲಿ ದೈನಂದಿನ ಪ್ರಕರಣಗಳ ಪ್ರಮಾಣ ಎರಡು ಪಟ್ಟಿಗಿಂತ ಹೆಚ್ಚಾಗಿದೆ. ಗುರುವಾರ 9195 ಕೇಸು ದಾಖಲಾಗಿದ್ದರೆ, ಶನಿವಾರ ಅದು 3 ಪಟ್ಟು ಹೆಚ್ಚಾಗಿದೆ.

Massive jump in COVID 19 case: 16764 ಕೋವಿಡ್‌ ಕೇಸ್‌, 64 ದಿನಗಳ ಗರಿಷ್ಠ

ಫ್ರಾನ್ಸ್‌ನಲ್ಲಿ 2.32 ಲಕ್ಷ ಇಟಲಿಯಲ್ಲಿ 1.44 ಲಕ್ಷ ಸಾರ್ವಕಾಲಿಕ ಗರಿಷ್ಠ ಕೇಸ್‌
ಪ್ಯಾರಿಸ್‌:
ಯುರೋಪಿಯನ್‌ ರಾಷ್ಟ್ರಗಳಲ್ಲಿ ಕೋವಿಡ್‌ ಅಬ್ಬರ ಮುಂದುವರೆದಿದ್ದು, ಫ್ರಾನ್ಸ್‌ನಲ್ಲಿ ಶುಕ್ರವಾರ ದಾಖಲೆಯ 2.32 ಲಕ್ಷ ಕೋವಿಡ್‌ ಪ್ರಕರಣಗಳು ದಾಖಲಾಗಿದ್ದು, ಈವರೆಗಿನ ಸಾರ್ವಕಾಲಿಕ ಗರಿಷ್ಠವಾಗಿದೆ. ದೇಶದಾದ್ಯಂತ ಶುಕ್ರವಾರ ಒಂದೇ ದಿನ 189 ಜನರು ಬಲಿಯಾಗಿದ್ದಾರೆ. ಸಕ್ರಿಯ ಸೋಂಕಿನ ಸಂಖ್ಯೆ 4.68 ಲಕ್ಷ ಇದ್ದು, ಈವರೆಗೆ 1.23 ಲಕ್ಷ ಜನರು ಬಲಿಯಾಗಿದ್ದಾರೆ. ಇಟಲಿಯಲ್ಲೂ ಪರಿಸ್ಥಿತಿ ಹದಗೆಡುತ್ತಿದ್ದು, ಶುಕ್ರವಾರ 1.44 ಲಕ್ಷ ಸಾರ್ವಕಾಲಿಕ ಗರಿಷ್ಠ ಕೋವಿಡ್‌ ಪ್ರಕರಣಗಳು ದಾಖಲಾಗಿವೆ. ಒಂದೇ ದಿನ 155 ಜನರು ಸೋಂಕಿಗೆ ಬಲಿಯಾಗಿದ್ದಾರೆ. ಒಟ್ಟು 9 ಲಕ್ಷ ಸಕ್ರಿಯ ಪ್ರಕರಣಗಳಿದ್ದು, ಈವರೆಗೆ 1.37 ಲಕ್ಷ ಜನರು ಬಲಿಯಾಗಿದ್ದಾರೆ.
 

Latest Videos
Follow Us:
Download App:
  • android
  • ios