Asianet Suvarna News Asianet Suvarna News

Tata Electric Car sales ಎಲೆಕ್ಟ್ರಿಕ್ ವಾಹನ ಮಾರಾಟದಲ್ಲಿ ಟಾಟಾಗೆ ಮೊದಲ ಸ್ಥಾನ, ಶೇ.439 ಏರಿಕೆ ಮೂಲಕ ದಾಖಲೆ!

  • ಎಲೆಕ್ಟ್ರಿಕ್ ವಾಹನ ಮಾರಾಟದಲ್ಲಿ ಹೊಸ ದಾಖಲೆ ಬರೆದ ಟಾಟಾ
  • 2021 ಡಿಸೆಂಬರ್ ತಿಂಗಳಲ್ಲಿ ಶೇಕಡಾ 439 ರಷ್ಟು ಏರಿಕೆ ಕಂಡ ಟಾಟಾ
  • ಭಾರತದಲ್ಲಿ ಟಾಟಾ ಎಲೆಕ್ಟ್ರಿಕ್ ವಾಹನ ಮೇಲೆ ಗ್ರಾಹಕರಿಗೆ ಭರವಸೆ ಹೆಚ್ಚು
Tata Electric car witness Record sales At 2255 Units whopping 439 per cent growth December 2021 ckm
Author
Bengaluru, First Published Jan 2, 2022, 4:00 PM IST

ನವದೆಹಲಿ(ಜ.02); ವಿಶ್ವವೇ ಇದೀಗ ಎಲೆಕ್ಟ್ರಿಕ್ ವಾಹನಕ್ಕೆ(Electric Vehicle) ಹೆಚ್ಚಿನ ಪ್ರಾಶಸ್ತ್ಯ ನೀಡುತ್ತಿದೆ. ಎಲ್ಲಾ ದೇಶಗಳು 2030ರ ವೇಳೆ ಶೇಕಡಾ 30 ರಿಂದ 50 ರಷ್ಟು ಎಲೆಕ್ಟ್ರಿಕ್ ವಾಹನ ಬಳಕೆ ಗುರಿ ಇಟ್ಟುಕೊಂಡಿದೆ. ಈ ಕುರಿತು ಭಾರತ(India) ಸೇರಿದಂತೆ ಬಹುತೇಕ ರಾಷ್ಟ್ರಗಳು ಪ್ರೋತ್ಸಾಹಕ ಧನ, ಸಬ್ಸಿಡಿ ಸೇರಿದಂತೆ ಹಲವು ಯೋಜನೆ ಮೂಲಕ ಎಲೆಕ್ಟ್ರಿಕ್ ವಾಹನ ಬಳಕೆ ಹೆಚ್ಚಿಸಲು ಪ್ರಯತ್ನಿಸುತ್ತಿದೆ. ಭಾರತದಲ್ಲಿ ಎಲೆಕ್ಟ್ರಿಕ್ ಕಾರಿನ ಬಳಕೆ ಹೆಚ್ಚಿಸಲು ಟಾಟಾ ಮೋಟಾರ್ಸ್(Tata Motors) ಕೂಡ ಸರ್ಕಾರದ ಜೊತೆಗೆ ಕೈಜೋಡಿಸಿದೆ. ಭಾರತದಲ್ಲಿ ಟಾಟಾ, ಕೈಗೆಟುಕುವ ದರದಲ್ಲಿ ಅತ್ಯುತ್ತಮ ಎಲೆಕ್ಟ್ರಿಕ್ ಕಾರು(Electric Car) ನೀಡುತ್ತಿದೆ. ಇದರಿಂದ ಇತರ ಎಲ್ಲಾ ಎಲೆಕ್ಟ್ರಿಕ್ ವಾಹನ ಹಿಂದಿಕ್ಕಿರುವ ಟಾಟಾ ಮೋಟಾರ್ಸ್ ಗರಿಷ್ಟ ವಾಹನ ಮಾರಾಟ(Electric car sales) ದಾಖಲೆ ಹೊಂದಿದೆ. 

ಡಿಸೆಂಬರ್ 2021ರ ಎಲೆಕ್ಟ್ರಿಕ್ ವಾಹನ ಮಾರಾಟದ ಅಂಕಿ ಅಂಶ ಬಹಿರಂಗೊಂಡಿದೆ. ಡಿಸೆಂಬರ್ ತಿಂಗಳಲ್ಲಿ ಟಾಟಾ ಎಲೆಕ್ಟ್ರಿಕ್ ಕಾರು 2,225 ಇವಿಗಳನ್ನು ಮಾರಾಟ ಮಾಡಿದೆ. ಇದು ದಾಖಲೆಯಾಗಿದೆ. ಕಾರಣ 2020ರ ಡಿಸೆಂಬರ್ ತಿಂಗಳಲ್ಲಿ ಟಾಟಾ ಕೇವಲ 418 ಕಾರುಗಳನ್ನ ಮಾರಾಟ ಮಾಡಲು ಮಾತ್ರ ಸಾಧ್ಯವಾಗಿದೆ. ಆದರೆ ಈ ಬಾರಿ ಸಂಖ್ಯೆ ದುಪ್ಪಟ್ಟಾಗಿದೆ. ಶೇಕಡಾ 439 ರಷ್ಟು ಏರಿಕೆ ಕಾಣವು ಮೂಲಕ  ಟಾಟಾ ಭಾರತದಲ್ಲಿ ಅಗ್ರಜನಾಗಿ ಮುಂದುವರಿದಿದೆ.

MH Early Bird Incentive ಮಾರ್ಚ್ 31ರ ವರೆಗೆ ಎಲೆಕ್ಟ್ರಿಕ್ ವಾಹನ ಖರೀದಿ ಮೇಲಿನ ಸಬ್ಸಿಡಿ ವಿಸ್ತರಣೆ!

ಟಾಟಾ  ಭಾರತದಲ್ಲಿ ಅತೀ ಹೆಚ್ಚು ಎಲೆಕ್ಟ್ರಿಕ್ ವಾಹಾನ ಮಾರಾಟ ಮಾಡಿದ್ದ ಹೆಗ್ಗಳಿಕೆಗೆ ಪಾತ್ರವಾಗಿದೆ.2022ರ Q3 ಅವಧಿಯಲ್ಲಿ ಟಾಟಾ ಒಟ್ಟು 5,592 ವಾಹನ ಮಾರಾಟ ಮಾಡಿದ.  2021ರ Q3 ಅವಧಿಯಲ್ಲಿ ಈ ಸಂಖ್ಯೆ 1,256 ಆಗಿತ್ತು. ಕ್ವಾರ್ಟರ್ 3 ಅವಧಿಯಲ್ಲಿ ಟಾಟಾ ಎಲೆಕ್ಟ್ರಿಕ್ ವಾಹನಗಳ ಏರಿಕೆ ಶೇಕಡಾ 345.

2021ರ ಡಿಸೆಂಬರ್ ತಿಂಗಳಲ್ಲಿ 2,225 ಟಾಟಾ ಎಲೆಕ್ಟ್ರಿಕ್ ಕಾರುಗಳು ಮಾರಾಟವಾಗಿದೆ. ಇದೇ ಮೊದಲ ಬಾರಿಗೆ ಟಾಟಾ ಎಲೆಕ್ಟ್ರಿಕ್ ಕಾರು ತಿಂಗಳ ಮಾರಾಟದಲ್ಲಿ  2,000 ಗಡಿ ದಾಟಿದೆ. ಈ ಮೂಲಕ ಪ್ರತಿಸ್ಪರ್ಧಿಗಳನ್ನು ಹಿಂದಿಕ್ಕಿ ಅತೀ ದೂರ ಸಾಗಿರುವ ಟಾಟಾ ಮೋಟಾರ್ಸ್, ಭಾರತದಲ್ಲಿ ಅಗ್ರಜನಾಗಿ ಮುಂದುವರಿಯುವ ಸಾಧ್ಯತೆ ಹೆಚ್ಚಿದೆ.

Electric Bike 120 ಕಿ.ಮೀ ಮೈಲೇಜ್ ನೀಡಬಲ್ಲ ಆಕರ್ಷಕ ಸೈಬಾರ್ಗ್ ಯೋದಾ ಎಲೆಕ್ಟ್ರಿಕ್ ಕ್ರ್ಯೂಸರ್ ಬೈಕ್ ಅನಾವರಣ!

ಟಾಟಾ ಎಲೆಕ್ಟ್ರಿಕ್ ಕಾರು:
ಟಾಟಾ ಭಾರತದಲ್ಲಿ ಎರಡು ಎಲೆಕ್ಟ್ರಿಕ್ ಕಾರುಗಳನ್ನು ಬಿಡುಗಡೆ ಮಾಡಿದೆ. ಟಾಟಾ ನೆಕ್ಸಾನ್ ಇವಿ(Tata Nexon EV) ಹಾಗೂ ಟಾಟಾ ಟಿಗೋರ್ ಇವಿ(Tata Tigor EV) ಕಾರುಗಳು ಭಾರತದ ಮಾರುಕಟ್ಟೆಗಳಲ್ಲಿ ಲಭ್ಯವಿದೆ. ಸದ್ಯ ಭಾರತದ ಮಾರುಕಟ್ಟೆಯಲ್ಲಿ ಲಭ್ಯವಿರುವ ಕಡಿಮೆ ಬೆಲೆಯ ಹಾಗೂ ಅತ್ಯುತ್ತಮ ಎಲೆಕ್ಟ್ರಿಕ್ ಕಾರುಗಳಾಗಿವೆ.

ಟಾಟಾ ನೆಕ್ಸಾನ್ ಇವಿ
ಭಾರತದಲ್ಲಿ ಹ್ಯುಂಡೈ, ಎಂಜಿ ಮೋಟಾರು ಎಲೆಕ್ಟ್ರಿಕ್ SUV ಕಾರು ಲಭ್ಯವಿದೆ. ಆದರೆ ಕೈಗೆಟುವ ದರದಲ್ಲಿ ಟಾಟಾ ನೆಕ್ಸಾನ್ ಇವಿ ಕಾರನ್ನು ಬಿಡುಗಡೆ ಮಾಡಿ ಮಾರುಕಟ್ಟೆ ಆಕ್ರಮಿಸಿಕೊಂಡಿದೆ. ಟಾಟಾ ನೆಕ್ಸಾನ್ ಕಾರಿನ ಬೆಲೆ ಸರಿಸುಮಾರು 14 ಲಕ್ಷ ರೂಪಾಯಿಂದ ಆರಂಭಗೊಳ್ಳುತ್ತಿದೆ. ಒಂದು ಬಾರಿ ಚಾರ್ಜ್ ಮಾಡಿದರೆ 312 ಕಿಲೋಮೀಟರ್ ಮೈಲೇಜ್ ರೇಂಜ್ ಹೊಂದಿದೆ. ಈ ಕಾರಿನಲ್ಲಿ 30.2kWh ಲಿಥಿಯಂ ಐಯಾನ್ ಬ್ಯಾಟರಿ ಬಳಸಲಾಗಿದೆ. ಈ ಬ್ಯಾಟರಿ ವಾರೆಂಟಿ 8 ವರ್ಷ ಅಥವಾ 160,000km. 29hp ಪವರ್ ಹೊಂದಿರುವ ನೆಕ್ಸಾನ್ ಇವಿ ಕಾರಿಗೆ ಸದ್ಯ ಪ್ರತಿಸ್ಪರ್ಧಿಗಳಿಲ್ಲ. ಬಿಡುಗಡೆಗೆ ಸಜ್ಜಾಗಿರುವ ಮಹೀಂದ್ರ XUV300 ಎಲೆಕ್ಟ್ರಿಕ್ ನೇರ ಪ್ರತಿಸ್ಪರ್ಧಿಯಾಗಿದೆ. ಆದರೆ ಸದ್ಯ ಭಾರತದ ಮಾರುಕಟ್ಟೆಯಲ್ಲಿ ಹ್ಯುಂಡೈ ಕೋನಾ ಹಾಗೂ ಎಂಜಿ ZS ಎಲೆಕ್ಟ್ರಿಕ್ SUV ಕಾರುಗಳು ಲಭ್ಯವಿದೆ. ಆದರೆ ಕೋನಾ ಕಾರಿನ ಬೆಲೆ 24 ಲಕ್ಷ ರೂಪಾಯಿ, ಎಂಜಿ ZS ಕಾರಿನ ಬೆಲೆ 20 ಲಕ್ಷ ರೂಪಾಯಿ(ಎಕ್ಸ್ ಶೋರೂಂ) ಆಗಿದೆ.

Upcoming Electric Cars ಹೊಸ ವರ್ಷದಲ್ಲಿ ಭಾರತದ ಮಾರುಕಟ್ಟೆ ಬರಲಿರುವ ಟಾಪ್ 10 ಎಲೆಕ್ಟ್ರಿಕ್ ಕಾರು!

ಟಾಟಾ ಟಿಗೋರ್ ಇವಿ
ಟಾಟಾ ಟಿಗೋರ್ ಇವಿ ಕಾರಿನ ಬೆಲೆ 11.99 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ). ಸರಿಸುಮಾರು 306 ಕಿಲೋಮೀಟರ್ ಮೈಲೇಜ್ ರೇಂಜ್ ಹೊಂದಿರುವ ನೂತನ ಟಿಗೋರ್ ಇವಿ ಕಾರು ಕೈಗೆಟುಕುವ ದರದ ಕಾರಾಗಿದೆ. ಪ್ರಾಯೋಗಿಕವಾಗಿ 180 ರಿಂದ 200 ಕಿಲೋಮೀಟರ್ ಮೈಲೇಜ್ ಸಿಗಲಿದೆ. ಕಡಿಮೆ ಬೆಲೆ, ಅತ್ಯಂತ ಸುರಕ್ಷಿತ ಕಾರಾಗಿದ್ದು, ಮಾರುಕಟ್ಟೆಯಲ್ಲಿ ಬಾರಿ ಬೇಡಿಕೆ ಪಡೆದುಕೊಂಡಿದೆ. 

Follow Us:
Download App:
  • android
  • ios