Asianet Suvarna News Asianet Suvarna News

ಲಾಕ್‌ಡೌನ್‌ ಯಾವ್ಯಾವ ರಾಜ್ಯಗಳಲ್ಲಿ ಹೇಗಿದೆ?

 ಕೊರೋನಾ ನಿಗ್ರಹಕ್ಕಾಗಿ ಕೇಂದ್ರ ಸರ್ಕಾರ ಘೋಷಿಸಿದ್ದ ಲಾಕ್‌ಡೌನ್‌ಗೆ ಏ.20ರ ಸೋಮವಾರದಿಂದ ಕೆಲ ವಿನಾಯ್ತಿಗಳನ್ನು ಘೋಷಿಸಲಾಗಿದೆ. ಈ ಮೂಲಕ ಹೆಚ್ಚು ಸೋಂಕುಪೀಡಿತವಲ್ಲದ ರಾಜ್ಯಗಳಲ್ಲಿ ನಿಧಾನವಾಗಿ ಕೆಲವೊಂದು ಸೇವೆ, ಚಟುವಟಿಕೆ ಆರಂಭಕ್ಕೆ ಚಾಲನೆ ನೀಡಲಾಗುತ್ತಿದೆ. 

Covid 19 details of  lockdown relaxation in various states
Author
Bengaluru, First Published Apr 20, 2020, 9:54 AM IST

ನವದೆಹಲಿ (ಏ. 20):  ಕೊರೋನಾ ನಿಗ್ರಹಕ್ಕಾಗಿ ಕೇಂದ್ರ ಸರ್ಕಾರ ಘೋಷಿಸಿದ್ದ ಲಾಕ್‌ಡೌನ್‌ಗೆ ಏ.20ರ ಸೋಮವಾರದಿಂದ ಕೆಲ ವಿನಾಯ್ತಿಗಳನ್ನು ಘೋಷಿಸಲಾಗಿದೆ. ಈ ಮೂಲಕ ಹೆಚ್ಚು ಸೋಂಕುಪೀಡಿತವಲ್ಲದ ರಾಜ್ಯಗಳಲ್ಲಿ ನಿಧಾನವಾಗಿ ಕೆಲವೊಂದು ಸೇವೆ, ಚಟುವಟಿಕೆ ಆರಂಭಕ್ಕೆ ಚಾಲನೆ ನೀಡಲಾಗುತ್ತಿದೆ.

ಆದರೆ ಈ ವಿನಾಯ್ತಿ ನೀಡುವ ಅಥವಾ ತಿರಸ್ಕರಿಸುವ ಹಕ್ಕನ್ನು ಕೇಂದ್ರ ಸರ್ಕಾರ, ರಾಜ್ಯಗಳಿಗೆ ನೀಡಿರುವ ಕಾರಣ, ಸೋಂಕು ಹೆಚ್ಚಿರುವ ರಾಜ್ಯಗಳು ಪೂರ್ಣ ಪ್ರಮಾಣದಲ್ಲಿ ವಿನಾಯ್ತಿಗೆ ನಿರಾಕರಿಸಿವೆ. ದೆಹಲಿ, ಮಹಾರಾಷ್ಟ್ರ, ತೆಲಂಗಾಣ ಸೇರಿ ಕೆಲ ರಾಜ್ಯಗಳಲ್ಲಿ ಈ ಹಿಂದಿನ ನಿರ್ಬಂಧಗಳು ಹಿಂದಿನಂತೇ ಮುಂದುವರೆಯಲಿವೆ.

ಅಮೆರಿಕದಲ್ಲಿ ‘ಲಾಕ್‌ಡೌನ್‌’ ವಿರುದ್ಧ ಪ್ರತಿಭಟನೆ: ಅದಕ್ಕೆ ಟ್ರಂಪ್‌ ಕುಮ್ಮಕ್ಕು!

ಇನ್ನು ಕೆಲವು ರಾಜ್ಯಗಳು ಕೇಂದ್ರ ಸರ್ಕಾರ ಘೋಷಿಸಿದ್ದ ವಿನಾಯ್ತಿಯನ್ನು ಯಥಾವತ್ತು ಜಾರಿಗೆ ತರಲು ನಿರ್ಧರಿಸಿವೆ. ಈ ಹಿನ್ನೆಲೆಯಲ್ಲಿ ಯಾವ್ಯಾವ ರಾಜ್ಯಗಳಲ್ಲಿ ಏನು ಪರಿಸ್ಥಿತಿ ಇದೆ ಎಂಬುದರ ಅವಲೋಕನ ಇಲ್ಲಿದೆ.

1. ತಮಿಳು ನಾಡು

ಲಾಕ್‌ಡೌನ್‌ ಸಡಿಲಿಕೆ ಇಂದು ನಿರ್ಧಾರ

ತಮಿಳುನಾಡಲ್ಲಿ ಲಾಕ್‌ಡೌನ್‌ ಸಡಿಲಿಕೆ ಬಗ್ಗೆ ಸೋಮವಾರ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆ ಇದೆ. ಲಾಕ್‌ಡೌನ್‌ ನಿರ್ಬಂಧಗಳ ಸಡಿಲಕ್ಕೆ ಸಮಿತಿ ರಚಿಸಲಾಗಿದ್ದು, ಸೋಮವಾರ ಮುಖ್ಯಮಂತ್ರಿಗಳಿಗೆ ವರದಿ ಸಲ್ಲಿಸಲಿದೆ. ವರದಿ ಪರಿಶೀಲನೆ ನಡೆಸಿ ಬಳಿಕ ಮುಖ್ಯಮಂತ್ರಿ ಕೆ. ಪಳನಿಸ್ವಾಮಿ ನಿರ್ಧಾರ ಪ್ರಕಟಿಸಲಿದ್ದಾರೆ. ಮೂಲಗಳ ಪ್ರಕಾರ ಸೂಕ್ಷ್ಮ ವಲಯಗಳನ್ನು ಹೊರೆತು ಪಡಿಸಿ ಬೇರೆಡೆ ಕೈಗಾರಿಕೆ ಆರಂಭಿಸುವ ನಿರೀಕ್ಷೆ ಇದೆ.

1372: ಸೋಂಕಿತರು

15: ಸಾವನ್ನಪ್ಪಿದವರು

2. ದೆಹಲಿ

ನಿರ್ಬಂಧ ಮುಂದುವರಿಕೆ

ಕೊರೋನಾ ಪೀಡಿತರ ಸಂಖ್ಯೆಯಲ್ಲಿ ಎರಡನೇ ಸ್ಥಾನದಲ್ಲಿರುವ ದೆಹಲಿಯಲ್ಲಿ ಲಾಕ್‌ಡೌನ್‌ ನಿಯಮಗಳನ್ನು ಸಡಿಲಿಸದೇ ಇರಲು ಕೇಜ್ರಿವಾಲ್‌ ಸರ್ಕಾರ ನಿರ್ಧರಿಸಿದೆ. ಕಂಟೈನ್ಮೆಂಟ್‌ ಪ್ರದೇಶಗಳಲ್ಲಿ ಸೋಂಕು ವ್ಯಾಪಕವಾಗುತ್ತಿದ್ದು ಹಾಗಾಗಿ ನಿರ್ಬಂಧ ಹಿಂದಿನಂತೆ ಮುಂದುವರಿಯಲಿದೆ. ಪರಿಸ್ಥಿತಿ ನಿಯಂತ್ರಣದಲ್ಲಿದ್ದು, ಒಂದು ವಾರದ ಬಳಿಕ ಸಭೆ ನಡೆಸಿ ಲಾಕ್‌ಡೌನ್‌ ಸಡಿಲಗೊಳಿಸುವ ಬಗ್ಗೆ ನಿರ್ಧರಿಸಲಾಗುತ್ತದೆ ಎಂದು ಕೇಜ್ರಿವಾಲ್‌ ಹೇಳಿದ್ದಾರೆ. ದಿಲ್ಲಿಯಲ್ಲಿ 1893 ಮಂದಿಗೆ ಸೋಂಕು ಇದ್ದು, 43 ಮಂದಿ ಸಾವನ್ನಪ್ಪಿದ್ದಾರೆ.

ಲಾಕ್‌ ಭಾಗಶಃ ಓಪನ್‌! ಇಂದಿನಿಂದ ಏನೇನು ಸೇವೆ ಲಭ್ಯ?

1893: ಸೋಂಕಿತರು

43: ಸಾವನ್ನಪ್ಪಿದವರು

3. ಪಂಜಾಬ್‌

ಗಣಿಗಾರಿಕೆ, ಕ್ರಷರ್‌ಗಳಿಗೆ ಅನುಮತಿ

ಕಂಟೈನ್ಮೆಂಟ್‌ ಪ್ರದೇಶ ಹೊರೆತು ಪಡಿಸಿ ಉಳಿದೆಡೆ ಗಣಿಗಾರಿಕೆ, ಮರಳುಗಾರಿಕೆ ಹಾಗೂ ಕ್ರಶರ್‌ಗಳಿಗೆ ಸೋಮವಾರದಿಂದ ಕಾರ್ಯರಂಭಿಸಲು ಪಂಜಾಬ್‌ ಅನುಮತಿಸಿದೆ. ಶಾಲಾ ಕಾಲೇಜು ಆರಂಭವಾಗುವ ಸಮಯವಾಗಿದ್ದರಿಂದ ಸ್ಟೇಷನರಿ ಅಂಗಡಿ, ಬೇಸಿಗೆಯಾಗಿದ್ದರಿಂದ ಫ್ಯಾನ್‌ ಏ.ಸಿ ಅಂಗಡಿಗಳಿಗೆ ಅವಕಾಶ. ಡಾಬಾಗಳಲ್ಲಿ ಪಾರ್ಸಲ್‌ಗಳಿಗೆ ಮಾತ್ರ ಅನುಮತಿಸಲಾಗಿದೆ. ಇವುಗಳ ಕಾರ್ಯಾಚರಣೆಗೆ ಆಯಾ ಜಿಲ್ಲಾಡಳಿತ ಸಮಯ ನಿಗದಿ ಮಾಡಲಿದೆ.

234: ಸೋಂಕಿತರು

16: ಸಾವನ್ನಪ್ಪಿದವರು

-------------

4. ಮಹಾರಾಷ್ಟ್ರ

ಇನ್ನಷ್ಟುದಿನ ನಿರ್ಬಂಧ ಮುಂದುವರಿಕೆ

ದೇಶದಲ್ಲೇ ಅತೀ ಹೆಚ್ಚು ಕೋವಿಡ್‌ ಪ್ರಕರಣಗಳಿರುವ ಮಹಾರಾಷ್ಟ್ರದಲ್ಲಿ ಹಸಿರು ಹಾಗೂ ಕಿತ್ತಾಳೆ ವಲಯಗಳಲ್ಲಿ ಇಂದಿನಿಂದ ಕೈಗಾರಿಕಾ ಚಟುವಟಿಕೆಗಳು ಆರಂಭವಾಗಲಿದೆ. ಆದರೆ ಕಾರ್ಮಿಕರಿಗೆ ಊಟ ಹಾಗೂ ವಸತಿ ಸೌಲಭ್ಯಗಳನ್ನು ಕಂಪನಿಗಳೇ ಕಲ್ಪಿಸಬೇಕು. ಹಾಟ್‌ಸ್ಪಾಟ್‌ ಮುಂಬೈನಲ್ಲಿನಲ್ಲಿ ಕಟ್ಟುನಿಟ್ಟಿನ ಲಾಕ್‌ಡೌನ್‌. ಜಿಲ್ಲಾ ಗಡಿಗಳು ಬಂದ್‌. ಕೃಷಿ ಉತ್ಪನ್ನ ಹಾಗೂ ಅಗತ್ಯ ವಸ್ತುಗಳ ಸಾಗಣೆ, ಪೂರೈಕೆಗೆ ಅಡ್ಡಿ ಇಲ್ಲ. ಮಹಾರಾಷ್ಟ್ರದಲ್ಲಿ 3,648 ಮಂದಿಗೆ ಸೋಂಕು ತಟ್ಟಿದ್ದು, 211 ಮಂದಿ ಸಾವಿಗೀಡಾಗಿದ್ದಾರೆ.

ಲಾಕ್‌ಡೌನ್‌ನಿಂದ ಕೈಯಲ್ಲಿ ದುಡ್ಡಿಲ್ಲ: ಸಾಲದ ಕಂತುಗಳ ಅವಧಿ ಮೂರು ತಿಂಗಳ ಮುಂದೂಡಿಕೆ

3648: ಸೋಂಕಿತರು

211: ಸಾವನ್ನಪ್ಪಿದವರು

5. ತೆಲಂಗಾಣ

ಲಾಕ್‌ಡೌನ್‌ ಯಥಾಸ್ಥಿತಿ

ಶನಿವಾರ ಸೋಂಕಿತರ ಸಂಖ್ಯೆಯಲ್ಲಿ ದಿಢೀರ್‌ ಏರಿಕೆಯಾಗಿದ್ದರಿಂದ, ಲಾಕ್‌ಡೌನ್‌ ನಿರ್ಬಂಧಗಳಿಗೆ ತೆಲಂಗಾಣ ಸರ್ಕಾರ ಯಾವುದೇ ವಿನಾಯಿತಿ ನೀಡುವುದಿಲ್ಲ ಎಂದು ಘೋಷಿಸಿದೆ. ಅಲ್ಲದೇ ನಿರ್ಬಂಧ ನಿಯಮಗಳನ್ನು ಕಟ್ಟು ನಿಟ್ಟಾಗಿ ಪಾಲಿಸಬೇಕು ಎಂದು ಮುಖ್ಯಮಂತ್ರಿ ಕೆ. ಚಂದ್ರಶೇಖರ್‌ ರಾವ್‌ ಅಧಿಕಾರಿಗಳಿಗೆ ತಾಕೀತು ಮಾಡಿದ್ದಾರೆ. ಹಸಿದವರಿಗೆ ಆಹಾರ ನೀಡಲು ಕ್ರಮ ಕೈಗೊಳ್ಳಲಾಗಿದ್ದು, ಬಡವರಿಗೆ ತೊಂದರೆಯಾಗದಂತೆ ಕ್ರಮ ತೆಗೆದುಕೊಳ್ಳಲಾಗಿದೆ.

809: ಸೋಂಕಿತರು

18: ಸಾವನ್ನಪ್ಪಿದವರು

6. ಕೇರಳ

ಕೆಂಪು ವಲಯದಲ್ಲಿ ಯಥಾಸ್ಥಿತಿ

ಕೇರಳದಲ್ಲಿ ಲಾಕ್‌ಡೌನ್‌ ಸಡಿಲಗೊಳಿಸಲು ನಿರ್ಧರಿಸಲಾಗಿದೆ. ಇದರನ್ವಯ ಮೂಲಭೂತ ಸೌಕರ್ಯಗಳು, ಅಗತ್ಯ ವಸ್ತುಗಳ ಮಾರಾಟ, ಹೋಟೆಲ್‌, ಬ್ಯಾಂಕ್‌ಗಳು, ಸರ್ಕಾರಿ ಕಚೇರಿಗಳು, ಆಟೋಗಳು, ಟ್ಯಾಕ್ಸಿಗಳು ಸೇರಿದಂತೆ ಇತರ ಸಾರಿಗೆ ವ್ಯವಸ್ಥೆ ಹಾಗೂ ಸರಕು ಸಾಗಣೆ ವಾಹನಗಳ ಸಂಚಾರಕ್ಕೆ ವಿನಾಯ್ತಿಗೆ ನಿರ್ಧರಿಸಲಾಗಿದೆ. ಆದರೆ, ಕೆಂಪು ವಲಯಗಳಲ್ಲಿರುವ ಕಾಸರಗೋಡು, ಕಣ್ಣೂರು, ಕಲ್ಲಿಕೋಟೆ ಹಾಗೂ ಮಲಪ್ಪುರಂಗಳಲ್ಲಿ ಮೇ 3ರವರೆಗೂ ಲಾಕ್‌ಡೌನ್‌ ಯಥಾಸ್ಥಿತಿ ಮುಂದುವರಿಯಲಿದೆ.

39: ಸೋಂಕಿತರು

3: ಸಾವನ್ನಪ್ಪಿದವರ

7. ಉತ್ತರ ಪ್ರದೇಶ

ಆರ್ಥಿಕ ಉತ್ತೇಜನಕ್ಕಾಗಿ ಲಾಕ್‌ಡೌನ್‌ ಸಡಿಲ

ಉತ್ತರ ಪ್ರದೇಶ ಸರ್ಕಾರ ಆರ್ಥಿಕ ಉತ್ತೇಜನಕ್ಕಾಗಿ ಕೊರೋನಾ ಪ್ರಕರಣಗಳು ದಾಖಲಾಗದೆ ಇರುವ ವಲಯಗಳಲ್ಲಿ ಲಾಕ್‌ಡೌನ್‌ ನಿರ್ಬಂಧಗಳನ್ನು ಸಡಿಲಗೊಳಿಸಿದೆ. ಕೊರೋನಾದಿಂದ ಮುಕ್ತವಾಗಿರುವ ಹಸಿರು ವಲಯಗಳಲ್ಲಿ ಕೆಲವು ಷರತ್ತುಗಳನ್ನು ವಿಧಿಸಿ ಉತ್ಪಾದನಾ ಉದ್ಯಮಗಳ ಕಾರ್ಯಚಟುವಟಿಕೆಗೆ ಉತ್ತರ ಪ್ರದೇಶ ಸರ್ಕಾರ ಅನುಮತಿ ಕಲ್ಪಿಸಿಕೊಟ್ಟಿದೆ. ಆದರೆ, ಶೇ.50ರಷ್ಟುಕಾರ್ಮಿಕರು ಮಾತ್ರವೇ ಕಾರ್ಯ ನಿರ್ವಹಿಸಲು ಅವಕಾಶ ಕಲ್ಪಿಸಲಾಗಿದೆ. ಉಳಿದಂತೆ ಮೂಲಭೂತ ಹಾಗೂ ಅಗತ್ಯ ವಸ್ತುಗಳ ಮಾರಾಟಕ್ಕೆ ಅನುಮತಿಸಲಾಗಿದೆ.

974: ಸೋಂಕಿತರು

14: ಸಾವನ್ನಪ್ಪಿದವರು

8. ಜಮ್ಮು-ಕಾಶ್ಮೀರ

ಜಮ್ಮು-ಕಾಶ್ಮೀರದಲ್ಲಿ ಕಠಿಣ ನಿರ್ಬಂಧ

ಕೆಲ ರಾಜ್ಯಗಳು ಲಾಕ್‌ಡೌನ್‌ ಸಡಿಲಿಕೆಗೆ ಮುಂದಾಗುತ್ತಿರುವ ಬೆನ್ನಲ್ಲೇ, ನಿರ್ಬಂಧ ಸಡಿಲಿಕೆಗೆ ಜಮ್ಮು-ಕಾಶ್ಮೀರ ಆಡಳಿತ ನಿರಾಕರಿಸಿದೆ. ಅಲ್ಲದೆ, ಹೆಚ್ಚು ಕೊರೋನಾ ಪ್ರಕರಣಗಳಿರುವ ವಲಯಗಳ ಸಂಪೂರ್ಣ ಸೀಲ್‌ ಡೌನ್‌ ಹಾಗೂ ಕೊರೋನಾ ಪೀಡಿತ ವ್ಯಕ್ತಿ ಹಾಗೂ ಆತನ ಜೊತೆಗಾರಿರರಿಗೆ ಕೆಂಪು ಬಣ್ಣದ ಸ್ಟ್ಯಾಂಟ್‌ ಅಂಟಿಸಲಾಗುತ್ತದೆ ಎಂದು ಮಾಹಿತಿ ನೀಡಿದೆ. ಈ ಕೆಂಪು ವಲಯದಿಂದ ಹೊರ ಹೋಗಬೇಕಾದರೂ, ಮ್ಯಾಜಿಸ್ಪ್ರೇಲ್‌ ಅನುಮತಿಯಿರಬೇಕು. ಇತರ ತುರ್ತು ಸಂದರ್ಭಗಳಿಗೆ ಜನ ಏನು ಮಾಡಬೇಕೆಂಬ ಮಾಹಿತಿಯನ್ನು ಸರ್ಕಾರ ಸ್ಪಷ್ಟಪಡಿಸಿಲ್ಲ.

350: ಸೋಂಕಿತರು

5: ಸಾವನ್ನಪ್ಪಿದವರು

9. ಆಂಧ್ರಪ್ರದೇಶ

ಹಸಿರು ವಲಯದಲ್ಲಿ ಕೈಗಾರಿಕೆಗಳಿಗೆ ಗ್ರೀನ್‌ ಸಿಗ್ನಲ್‌

ದೇಶಾದ್ಯಂತ ಜಾರಿಯಲ್ಲಿರುವ ಕೊರೋನಾ ಲಾಕ್‌ಡೌನ್‌ ಅನ್ನು ಹಂತ-ಹಂತವಾಗಿ ಇಳಿಸಬೇಕೆಂಬ ಕೇಂದ್ರ ಸರ್ಕಾರದ ಸೂಚನೆ ಪಾಲನೆಗೆ ಆಂಧ್ರಪ್ರದೇಶ ಮುಂದಾಗಿದೆ. ಇದರನ್ವಯ ಮೂಲಭೂತ ಸೌಕರ್ಯಗಳನ್ನಷ್ಟೇ ಅಲ್ಲದೆ, ಕೊರೋನಾ ಹೊರತಾದ ಪ್ರದೇಶಗಳಲ್ಲಿ ಕೈಗಾರಿಕೆಗಳ ಚಟುವಟಿಕೆಗೆ ಅವಕಾಶ ನೀಡಲು ಮುಂದಾಗಿದೆ. ಆದರೆ, ಒಂದು ವೇಳೆ ಕೊರೋನಾ ಪ್ರಕರಣಗಳು ದಾಖಲಾದರೆ, ಕಾರಾರ‍ಯರಂಭ ಮಾಡಿದ ಉದ್ಯಮವನ್ನು ಮುಚ್ಚಿಸಲಾಗುತ್ತದೆ ಎಂದು ಹೇಳಿದೆ.

647: ಸೋಂಕಿತರು

17: ಸಾವನ್ನಪ್ಪಿದವರು

10. ಅಸ್ಸಾಂ

ಶೇ.33ರಷ್ಟುಸರ್ಕಾರಿ ಸಿಬ್ಬಂದಿಗೆ ಅವಕಾಶ

ಅಸ್ಸಾಂನಲ್ಲಿ ಎಲ್ಲ ಸರ್ಕಾರಿ ಕಚೇರಿಗಳು ಏ.20ರ ಬಳಿಕ ಆರಂಭವಾಗಲಿವೆ. ಕಚೇರಿಯಲ್ಲಿ ಶೇ.33ರಷ್ಟುಪ್ರಮಾಣದ ನೌಕರರು ಮಾತ್ರ ಕಾರ್ಯ ನಿರ್ವಹಿಸಬೇಕು ಎಂದು ಸರ್ಕಾರ ಆದೇಶಿಸಿದೆ. ಕಚೇರಿಗಳಲ್ಲಿ ಸ್ವಚ್ಛತೆ ಕಾಪಾಡಬೇಕು. ತಂಬಾಕು, ಗುಟ್ಕಾ ಸೇರಿದಂತೆ ಯಾವುದೇ ಅಡಿಕೆ ಹಾಕಿಕೊಳ್ಳಬಾರದು. ಕಂಡಕಂಡಲ್ಲಿ ಉಗಿಯಬಾರದು ಎಂದು ಸೂಚಿಸಲಾಗಿದೆ. ಆದರೆ, ಖಾಸಗಿ ಕೈಗಾರಿಕೋದ್ಯಮಗಳು, ಕಟ್ಟಡ ನಿರ್ಮಾಣ ಸೇರಿದಂತೆ ಇನ್ನಿತರ ಖಾಸಗಿ ಮಳಿಗೆಗಳ ಚಟುವಟಿಕೆಗಳಿಗೆ ಅವಕಾಶ ನೀಡುವ ಕುರಿತು ಯಾವುದೇ ಮಾಹಿತಿ ಇಲ್ಲ.

34: ಸೋಂಕಿತರು

01: ಸಾವನ್ನಪ್ಪಿದವರು

11. ರಾಜಸ್ಥಾನ

ರಾಜಸ್ಥಾನದಲ್ಲೂ ನಿರ್ಬಂಧ ಸಡಿಲಿಕೆ

ರಾಜಸ್ಥಾನದಲ್ಲಿ ನಾಳೆಯಿಂದ ಏನೆಲ್ಲ ಸೇವೆಗಳು ಇರಲಿವೆ ಮತ್ತು ಏನೆಲ್ಲಾ ಸೇವೆಗಳು ಅಲಭ್ಯವಿರಲಿವೆ ಎಂಬುದರ ಪಟ್ಟಿಯನ್ನು ಸಿಎಂ ಅಶೋಕ್‌ ಗೆಹ್ಲೋಟ್‌ ಸರ್ಕಾರ ಭಾನುವಾರ ಬಿಡುಗಡೆ ಮಾಡಿದೆ. ಇದರನ್ವಯ ಆರೋಗ್ಯ ವಲಯದ ನಿರ್ಮಾಣ ಹಂತದ ಕಟ್ಟಡಗಳು, ಕೂಲಿ ಕಾರ್ಮಿಕರು ಇರುವ ಕಡೆಗಳಲ್ಲೇ ಇರುವ ಕಟ್ಟಡಗಳ ಕಾಮಗಾರಿ, ಎಲ್ಲ ರೀತಿಯ ಸರಕು ಸಾಗಣೆ ವಾಹನಗಳು, ಎಲೆಕ್ಟ್ರೇಷನ್‌, ಪ್ಲಂಬರ್‌, ಮೋಟಾರ್‌ ವಾಹನಗಳ ದುರಸ್ತಿ ಅಂಗಡಿಗಳು, ಕಾರ್ಖಾನೆಗಳು ಹಾಗೂ ಹಣ್ಣು ತರಕಾರಿ ಮತ್ತು ಮಾಂಸದ ಅಂಗಡಿಗಳಿಗೆ ಗ್ರೀನ್‌ ಸಿಗ್ನಲ್‌.

1431: ಸೋಂಕಿತರು

22 : ಸಾವನ್ನಪ್ಪಿದವರು

Follow Us:
Download App:
  • android
  • ios