Asianet Suvarna News Asianet Suvarna News

ಅಮೆರಿಕದಲ್ಲಿ ‘ಲಾಕ್‌ಡೌನ್‌’ ವಿರುದ್ಧ ಪ್ರತಿಭಟನೆ: ಅದಕ್ಕೆ ಟ್ರಂಪ್‌ ಕುಮ್ಮಕ್ಕು!

ಅಮೆರಿಕದಲ್ಲಿ ಟ್ರಂಪ್‌ ವರ್ಸಸ್‌ ಗವರ್ನ​ರ್‍ಸ್| ಅಮೆರಿಕದಲ್ಲಿ ‘ಲಾಕ್‌ಡೌನ್‌’ ವಿರುದ್ಧ ಪ್ರತಿಭಟನೆ: ಅದಕ್ಕೆ ಟ್ರಂಪ್‌ ಕುಮ್ಮಕ್ಕು!| ‘ಮನೆಯಲ್ಲೇ ಇರಿ’ ಆದೇಶದ ವಿರುದ್ಧ ಹಲವು ನಗರಗಳಲ್ಲಿ ಪ್ರತಿಭಟನೆ| ಕೆಲ ನಗರಗಳಲ್ಲಿ ನಿರ್ಬಂಧ ಸಡಿಲ: ಬೀಚ್‌, ಪಾರ್ಕ್ಗಳಲ್ಲಿ ಜನಸಂದಣಿ| ಡೆಮಾಕ್ರೆಟ್‌ ರಾಜ್ಯಗಳಲ್ಲಿ ಪ್ರತಿಭಟನೆಗೆ ಸ್ವತಃ ಟ್ರಂಪ್‌ ಪ್ರಚೋದನೆ

Donald Trump backs lockdown protesters during angry press briefing
Author
Bangalore, First Published Apr 20, 2020, 8:35 AM IST

ನ್ಯೂಯಾರ್ಕ್(ಏ.20): ಜಗತ್ತಿನಲ್ಲೇ ಕೊರೋನಾ ವೈರಸ್‌ನಿಂದ ಅತಿಹೆಚ್ಚು ಸಾವುನೋವು ಅನುಭವಿಸುತ್ತಿರುವ ಅಮೆರಿಕದ ಅನೇಕ ನಗರಗಳಲ್ಲಿ ಜನರು ಸರ್ಕಾರದ ವಿರುದ್ಧ ಪ್ರತಿಭಟನೆ ಆರಂಭಿಸಿದ್ದಾರೆ. ‘ಮನೆಯಲ್ಲೇ ಇರಿ’ ಎಂಬ ರಾಜ್ಯ ಸರ್ಕಾರಗಳ ಆದೇಶದ ವಿರುದ್ಧ ಈ ಪ್ರತಿಭಟನೆಗಳು ನಡೆಯುತ್ತಿದ್ದು, ಇದಕ್ಕೆ ಸ್ವತಃ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಪ್ರಚೋದನೆ ನೀಡುತ್ತಿದ್ದಾರೆ. ಹೀಗಾಗಿ ಕೊರೋನಾ ನಿರ್ವಹಣೆ ಇದೀಗ ಅಧ್ಯಕ್ಷ ಮತ್ತು ರಾಜ್ಯಗಳ ಗವರ್ನರ್‌ ನಡುವಿನ ಸಮರವಾಗಿ ರೂಪುಗೊಂಡಿದೆ.

ಅಮೆರಿಕದಲ್ಲಿ ಭಾರತದಂತೆ ಕಟ್ಟುನಿಟ್ಟಿನ ಲಾಕ್‌ಡೌನ್‌ ಜಾರಿಯಲ್ಲಿಲ್ಲ. ಆರ್ಥಿಕತೆಗೆ ಸಮಸ್ಯೆಯಾಗುತ್ತದೆ ಎಂಬ ಕಾರಣ ನೀಡಿ ರಾಷ್ಟ್ರವ್ಯಾಪಿ ಲಾಕ್‌ಡೌನ್‌ ಜಾರಿಗೆ ಟ್ರಂಪ್‌ ಈ ಹಿಂದೆಯೇ ನಿರಾಕರಿಸಿದ್ದಾರೆ. ಆದರೂ ವಿವಿಧ ರಾಜ್ಯಗಳ ಗವರ್ನರ್‌ಗಳು ‘ಮನೆಯಲ್ಲೇ ಇರಿ’ ಎಂಬ ಆದೇಶ ಹೊರಡಿಸಿ, ಸಾರ್ವಜನಿಕ ಸ್ಥಳಗಳಿಗೆ ಜನರು ಬಾರದಂತೆ ನಿರ್ಬಂಧ ವಿಧಿಸಿದ್ದಾರೆ. ಇದರ ವಿರುದ್ಧ ಅನೇಕ ರಾಜ್ಯಗಳಲ್ಲಿ ಟ್ರಂಪ್‌ ಅವರ ರಿಪಬ್ಲಿಕನ್‌ ಪಕ್ಷದಿಂದ ಪ್ರಚೋದನೆ ಪಡೆದವರು ಎನ್ನಲಾದ ಜನರ ಗುಂಪುಗಳು ಪ್ರತಿಭಟನೆ ಆರಂಭಿಸಿವೆ. ಶನಿವಾರ ಹಲವಾರು ನಗರಗಳಲ್ಲಿ ಪ್ರತಿಭಟನೆಗಳು ನಡೆದಿದ್ದು, ಗವರ್ನರ್‌ಗಳು ಒತ್ತಡಕ್ಕೆ ಸಿಲುಕಿದ್ದಾರೆ.

ದೇಶದಲ್ಲೀಗ 17000 ಸೋಂಕಿತರು, 565 ಸಾವು!

ಸಾವಿನ ಸಂಖ್ಯೆ ಏರುತ್ತಲೇ ಇದ್ದರೂ ಫೆä್ಲೕರಿಡಾದಂತಹ ಕೆಲ ರಾಜ್ಯಗಳಲ್ಲಿ ಗವರ್ನರ್‌ಗಳು ‘ಮನೆಯಲ್ಲೇ ಇರಿ’ ನಿರ್ಬಂಧವನ್ನು ಶನಿವಾರ ಸಡಿಲಿಸಿದ್ದಾರೆ. ಅದರ ಬೆನ್ನಲ್ಲೇ ಜನರು ಬೀಚ್‌ ಹಾಗೂ ಪಾರ್ಕ್ಗಳಿಗೆ ದೊಡ್ಡ ಸಂಖ್ಯೆಯಲ್ಲಿ ತೆರಳುತ್ತಿದ್ದಾರೆ. ಅವರನ್ನು ನಿಯಂತ್ರಿಸುವುದು ಕಷ್ಟವಾಗುತ್ತಿದ್ದು, ಇದರಿಂದ ಸೋಂಕು ಇನ್ನಷ್ಟುಹೆಚ್ಚಾಗಬಹುದು ಎಂದು ಆರೋಗ್ಯ ತಜ್ಞರು ಎಚ್ಚರಿಕೆ ನೀಡಲಾರಂಭಿಸಿದ್ದಾರೆ.

ಪ್ರತಿಭಟನಾಕಾರರಿಗೆ ಸ್ವತಃ ಅಧ್ಯಕ್ಷ ಟ್ರಂಪ್‌ ಅವರೇ ಕುಮ್ಮಕ್ಕು ನೀಡುತ್ತಿರುವುದು ರಾಜ್ಯಗಳ ಗವರ್ನರ್‌ಗಳಿಗೆ ನುಂಗಲಾಗದ ತುತ್ತಾಗಿದೆ. ವಿಶೇಷವಾಗಿ ಟ್ರಂಪ್‌ ತಮ್ಮ ವಿರೋಧಿ ಪಕ್ಷವಾದ ಡೆಮಾಕ್ರೆಟಿಕ್‌ ಪಕ್ಷ ಅಧಿಕಾರದಲ್ಲಿರುವ ರಾಜ್ಯಗಳನ್ನೇ ಗುರಿಯಾಗಿಸಿಕೊಂಡು ನಿರ್ಬಂಧ ಸಡಿಲಿಸಲು ಒತ್ತಾಯಿಸುತ್ತಿದ್ದಾರೆ. ‘ಲಿಬರೇಟ್‌ ಮಿನೆಸೋಟಾ’, ‘ಲಿಬರೇಟ್‌ ಮಿಶಿಗನ್‌’, ‘ಲಿಬರೇಟ್‌ ವರ್ಜೀನಿಯಾ’ ಎಂದು ಟ್ರಂಪ್‌ ಪ್ರತ್ಯೇಕ ಟ್ವೀಟ್‌ಗಳನ್ನು ಮಾಡಿದ್ದು, ಅವು ಈ ರಾಜ್ಯಗಳಲ್ಲಿರುವ ರಿಪಬ್ಲಿಕನ್‌ ಪಕ್ಷ ಬೆಂಬಲಿಗರನ್ನು ಬಡಿದೆಬ್ಬಿಸಿವೆ. ಈ ಮೂರೂ ರಾಜ್ಯಗಳಲ್ಲಿ ಡೆಮಾಕ್ರೆಟಿಕ್‌ ಪಕ್ಷದ ಪಕ್ಷದ ಗವರ್ನರ್‌ಗಳಿದ್ದಾರೆ. ಒತ್ತಡಕ್ಕೆ ಸಿಲುಕಿರುವ ಅನೇಕ ಗವರ್ನರ್‌ಗಳು ಮುಂದಿನ ವಾರದಿಂದ ಹಂತಹಂತವಾಗಿ ನಿರ್ಬಂಧ ಸಡಿಲಿಸುವುದಾಗಿ ಹೇಳುತ್ತಿದ್ದರೂ ಪ್ರತಿಭಟನಾಕಾರರು ಕಿವಿಗೊಡುತ್ತಿಲ್ಲ.

Follow Us:
Download App:
  • android
  • ios