ರಾಜ್ಯದಲ್ಲಿ ನಿರ್ಬಂಧ ನಾಳೆವರೆಗೆ ವಿಸ್ತರಣೆ | ದೇಶದಲ್ಲಿ ಹಾಟ್‌ಸ್ಪಾಟ್‌ ಅಲ್ಲದ ಕಡೆ ಇಂದಿನಿಂದ ನಿರ್ಬಂಧ ಸಡಿಲ | ರೈತರು, ಕಾರ್ಮಿಕರಿಗೆ ಅನುಕೂಲ | ದಿಲ್ಲಿ, ಮಹಾರಾಷ್ಟ್ರ ‘ಲಾಕ್‌’ ಬಿಗಿ

ಕೊರೋನಾ ವೈರಸ್‌ ನಿಗ್ರಹಕ್ಕಾಗಿ ದೇಶವ್ಯಾಪಿ ಘೋಷಿಸಿದ್ದ ಲಾಕ್‌ಡೌನ್‌ಗೆ ಕೆಲವೊಂದು ವಿನಾಯ್ತಿ ನೀಡಿ ಕೇಂದ್ರ ಸರ್ಕಾರ ಈ ಹಿಂದೆ ಹೊರಡಿಸಿದ್ದ ಆದೇಶ ಸೋಮವಾರದಿಂದ ಜಾರಿಗೆ ಬರಲಿದೆ. ಹಾಟ್‌ಸ್ಪಾಟ್‌ ಅಲ್ಲದ ಪ್ರದೇಶಗಳಲ್ಲಿ ರೈತರು, ಕಾರ್ಮಿಕರು, ಕೆಳಸ್ತರದ ಕೋಟ್ಯಂತರ ನೌಕರರಿಗೆ ಉದ್ಯೋಗ ಸಿಗುವಂತಹ ಕೆಲಸಗಳು ವಿನಾಯ್ತಿ ಅವಧಿಯಲ್ಲಿ ಪುನಾರಂಭವಾಗಲಿದೆ. ಹೀಗಾಗಿ ಹೆಚ್ಚೂ ಕಡಿಮೆ ಒಂದು ತಿಂಗಳಿನಿಂದ ಸ್ತಬ್ಧಗೊಂಡಿದ್ದ ದೇಶದ ಆರ್ಥಿಕ ಚಟುವಟಿಕೆಗಳಿಗೆ ಮತ್ತೆ ಸಣ್ಣಮಟ್ಟದಲ್ಲಿ ಚಾಲನೆ ಸಿಗಲಿದೆ.

ಆರೋಗ್ಯ ಸೇವೆ

ಎಲ್ಲ ಆರೋಗ್ಯ ಸೇವೆಗಳು, ಕೆಮಿಸ್ಟ್‌, ಫಾರ್ಮಾಸಿಸ್ಟ್‌, ಪಶು ಆಸ್ಪತ್ರೆ. ಔಷಧ, ವೈದ್ಯಕೀಯ ಉಪಕರಣ ಉತ್ಪಾದನಾ ಘಟಕ.

ಹಣಕಾಸು ವಲಯ

ಬ್ಯಾಂಕ್‌, ಎಟಿಎಂ, ಬ್ಯಾಂಕ್‌ ಸೇವೆ ಸಂಬಂಧಿತ ಐಟಿ ಕಂಪನಿ, ವಿಮಾ ಕಂಪನಿಗಳು

ವಾಣಿಜ್ಯ ಸೇವೆಗಳು

ಶೇ.50ರಷ್ಟುಸಿಬ್ಬಂದಿಯೊಂದಿಗೆ ಐಟಿ ಸೇವೆ, ಸರ್ಕಾರಿ ಸೇವೆ ನೀಡುವ ಡಾಟಾ, ಕಾಲ್‌ಸೆಂಟರ್‌, ಇ ಕಾಮರ್ಸ್‌ ತಾಣಗಳಿಂದ ಅಗತ್ಯ ವಸ್ತು ಪೂರೈಕೆ.

ಸಂಚಾರ ಸೇವೆ

ಕೋಲ್ಡ್‌ ಸ್ಟೋರೇಜ್‌, ಉಗ್ರಾಣ ಸೇವೆ, ಖಾಸಗಿ ಭದ್ರತಾ ಸೇವೆ.

ವೈಯಕ್ತಿಕ ಉದ್ಯೋಗ

ಎಲೆಕ್ಟ್ರಿಷಿಯನ್‌, ಪ್ಲಂಬರ್‌, ರಿಪೇರ್‌ಮೆನ್‌, ಕಾರ್ಪೆಂಟರ್‌, ಮೋಟರ್‌ ಮೆಕ್ಯಾನಿಕ್‌ಗಳಂತಹ ಸ್ವ ಉದ್ಯೋಗಿಗಳು

ಜನರ ಸಂಚಾರ

ವೈದ್ಯಕೀಯ ಮತ್ತು ದಿನ ಬಳಕೆ ವಸ್ತು ಖರೀದಿಗೆ ಖಾಸಗಿ ವಾಹನ. ಅಗತ್ಯ ಸೇವೆಗೆ ಕಾರಲ್ಲಿ ಇಬ್ಬರು, ಬೈಕ್‌ನಲ್ಲಿ ಒಬ್ಬರಿಗೆ ಮಾತ್ರ ಅವಕಾಶ. ಇಬ್ಬರು ಚಾಲಕರು, ಒಬ್ಬ ಕ್ಲೀನರ್‌ ಹೊಂದಿದ ಟ್ರಕ್‌ಗಳ ಸಂಚಾರ.

ಸಾಮಾಜಿಕ ಸೇವೆಗಳು

ಮಕ್ಕಳು, ಬುದ್ಧಿಮಾಂದ್ಯರು, ಹಿರಿಯ ನಾಗರಿಕರು, ಪರಿತ್ಯಕ್ತರ ಕೇಂದ್ರಗಳು, ಅಂಗನವಾಡಿಗಳು, ಪಿಂಚಣಿ, ಪ್ರಾವಿಡೆಂಡ್‌ ಹಂಚಿಕೆ ಸೇವೆಗಳು

ಕೃಷಿ ಚಟುವಟಿಕೆ

ಹೊಲ, ಗದ್ದೆಗಳಲ್ಲಿ ಕೃಷಿ ಚಟುವಟಿಕೆ. ಕೃಷಿ ಉಪಕರಣ ಸೇವೆ ನೀಡುವ ಸಂಸ್ಥೆಗಳು, ಮಾರಾಟ ಕೇಂದ್ರ. ಕೃಷಿ ಉಪಕರಣ ಬಾಡಿಗೆ ಕೇಂದ್ರ, ರಸಗೊಬ್ಬರ, ಬೀಜ ಸಂಬಂಧ ಮಳಿಗೆ. ಎಪಿಎಂಸಿ, ಮಂಡಿ, ಕೃಷಿ ಸಂಬಂಧಿತ ನೇರ ಮಾರುಕಟ್ಟೆಕೇಂದ್ರಗಳು. ಬಿತ್ತನೆ ಸಂಬಂಧಿತ ವಸ್ತುಗಳ ಸೇವೆ, ಮೀನು ಸಂಸ್ಕರಣೆ. ಟೀ, ಕಾಫಿ, ರಬ್ಬರ್‌ ಕೃಷಿ, ಪಶುಸಂಗೋಪನೆ, ಹಾಲು ಮಾರಾಟ

ಗ್ರಾಮೀಣ ಪ್ರದೇಶ,

ಆಹಾರ ಸಂಸ್ಕರಣೆ ಉದ್ಯಮ ಸೇರಿ ಗ್ರಾಮೀಣ ಪ್ರದೇಶದಲ್ಲಿ ಕಾರ್ಯನಿರ್ವಹಿಸುತ್ತಿರುವ ಉದ್ದಿಮೆಗಳು

ಗ್ರಾಮೀಣ ಪ್ರದೇಶದಲ್ಲಿ ರಸ್ತೆ, ನೀರಾವರಿ ಯೋಜನೆ, ಕಟ್ಟಡ, ಕೈಗಾರಿಕಾ ಯೋಜನೆಗಳ ನಿರ್ಮಾಣ