ಬಳ್ಳಾರಿ(ಏ.20): ರಾಜ್ಯದಲ್ಲಿ ಕೊರೋನಾ ವೈರಸ್‌ ರೋಗ ಹರಡಿರುವ ಹಿನ್ನೆಲೆಯಲ್ಲಿ ಹಾಗೂ ಕೇಂದ್ರ ಸರ್ಕಾರ ಲಾಕ್‌ಡೌನ್‌ ಜಾರಿ ಮಾಡಿರುವುದರಿಂದ ಸಾರ್ವಜನಿಕರು ತಮ್ಮ ಉದ್ಯೋಗಗಳಲ್ಲಿ ನಿಯಮಿತವಾಗಿ ತೊಡಗಲು ಸಾಧ್ಯವಾಗದ ಕಾರಣ ವೈಯುಕ್ತಿಕ ಆದಾಯ ಕುಂಠಿತಗೊಂಡಿರುವುದರಿಂದ ಭಾರತೀಯ ರಿಸರ್ವ್‌ ಬ್ಯಾಂಕ್‌ನ ಕಾರ್ಯವ್ಯಾಪ್ತಿಗೆ ಒಳಪಡುವ ಆರ್ಥಿಕ ಸಂಸ್ಥೆಗಳು ನೀಡಿರುವ ಸಾಲದ ಕಂತುಗಳ ಮರುಪಾವತಿ ಅವಧಿಯನ್ನು ಮೂರು ತಿಂಗಳ ಕಾಲ ಮುಂದೂಡಲಾಗಿದೆ ಎಂದು ಜಿಲ್ಲಾ ಸಹಕಾರ ಸಂಘಗಳ ಉಪ ನಿಬಂಧಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಎಲ್ಲಾ ಸಹಕಾರ ಬ್ಯಾಂಕ್‌ಗಳು/ಸಂಸ್ಥೆಗಳು ನೀಡಿರುವ ಕೃಷಿ ಸಾಲದ ಕಂತುಗಳ ಅವಧಿಯನ್ನು ಸಹ ಮೂರು ತಿಂಗಳವರೆಗೆ ಮುಂದೂಡಲಾಗಿದೆ. 

ಸಂಕಷ್ಟದಲ್ಲೂ ರಾಜಕೀಯ ಮಾಡುತ್ತಿರುವ ಪುಡಿ ರಾಜಕಾರಣಿಗಳು..!

ಲಾಕ್‌ಡೌನ್‌ ವಿಧಿಸಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರ ಅದಾಯ ಇಲ್ಲರುವುದರಿಂದ ಮಾನವೀಯತೆಯ ಹಿತದೃಷ್ಟಿಯಿಂದ ಕರ್ನಾಟಕ ಲೇವಾದೇವಿಗಾರರ ಕಾಯ್ದೆ 1961 ಹಾಗೂ ಕರ್ನಾಟಕ ಪಾನ್‌ಬ್ರೋಕ​ರ್ಸ್‌ ಅಧಿನಿಯಮ 1961ರನ್ವಯ ನೀಡಿರುವ ಸಾಲದ ಕಂತುಗಳ ವಸೂಲಿಯ ಬಗ್ಗೆ ಸಾಲ ಪಡೆದ ಸದಸ್ಯರಿಗೆ ಕಿರುಕುಳ/ತೊಂದರೆ ನೀಡಬಾರದೆಂದು ಹಾಗೂ ಈ ಕಂತುಗಳ ವಸೂಲಿಗೆ ಒತ್ತಾಯ ಮಾಡಬಾರದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.