Asianet Suvarna News Asianet Suvarna News

ದೇಶದ ರಕ್ಷಣಾ ರಫ್ತು ದಾಖಲೆಯ .15920 ಕೋಟಿಗೆ: 6 ವರ್ಷಗಳಲ್ಲಿ 10 ಪಟ್ಟು ಏರಿಕೆ

ರಕ್ಷಣಾ ವಲಯದಲ್ಲಿ ಆತ್ಮನಿರ್ಭರತೆ ಸಾಧಿಸುವಲ್ಲಿ ಮಹತ್ವದ ಸಾಧನೆ ಜೊತೆಜೊತೆಗೆ ಭಾರತ ಇದೀಗ ರಕ್ಷಣಾ ಪರಿಕರಗಳ ರಫ್ತಿನಲ್ಲೂ ಹೊಸ ದಾಖಲೆ ಬರೆದಿದೆ. 2022-23ನೇ ಸಾಲಿನಲ್ಲಿ ದೇಶದಿಂದ ದಾಖಲೆಯ 15920 ಕೋಟಿ ರು. ಮೌಲ್ಯದ ರಕ್ಷಣಾ ಉಪಕರಣಗಳನ್ನು ರಫ್ತು ಮಾಡಲಾಗಿದೆ.

countrys defense export reaches to 15920 crores 10 fold increase in 6 years akb
Author
First Published Apr 2, 2023, 7:43 AM IST

ನವದೆಹಲಿ: ರಕ್ಷಣಾ ವಲಯದಲ್ಲಿ ಆತ್ಮನಿರ್ಭರತೆ ಸಾಧಿಸುವಲ್ಲಿ ಮಹತ್ವದ ಸಾಧನೆ ಜೊತೆಜೊತೆಗೆ ಭಾರತ ಇದೀಗ ರಕ್ಷಣಾ ಪರಿಕರಗಳ ರಫ್ತಿನಲ್ಲೂ ಹೊಸ ದಾಖಲೆ ಬರೆದಿದೆ. 2022-23ನೇ ಸಾಲಿನಲ್ಲಿ ದೇಶದಿಂದ ದಾಖಲೆಯ 15920 ಕೋಟಿ ರು. ಮೌಲ್ಯದ ರಕ್ಷಣಾ ಉಪಕರಣಗಳನ್ನು ರಫ್ತು ಮಾಡಲಾಗಿದೆ.

ರಕ್ಷಣಾ ಸಚಿವ ರಾಜ್‌ನಾಥ್‌ ಸಿಂಗ್‌ ಈ ಮಾಹಿತಿ ಬಹಿರಂಗಪಡಿಸಿದ್ದಾರೆ. ಜೊತೆಗೆ ಈ ಬೆಳವಣಿಗೆಯನ್ನು ಅಭೂತಪೂರ್ವ ಸಾಧನೆ ಎಂದು ಬಣ್ಣಿಸಿದ್ದಾರೆ. ಮತ್ತೊಂದೆಡೆ ‘ಕಳೆದ ಕೆಲ ವರ್ಷಗಳಲ್ಲಿ ಈ ವಲಯದಲ್ಲಿ ಕೈಗೊಂಡ ಸುಧಾರಣೆಗಳು ಇದೀಗ ಫಲ ನೀಡುತ್ತಿವೆ ಎಂಬುದಕ್ಕೆ ಅಂಕಿ ಅಂಶಗಳೇ ಸಾಕ್ಷಿ. ದೇಶವನ್ನು ರಕ್ಷಣಾ ಉತ್ಪಾದನಾ ವಲಯದ ಕೇಂದ್ರ ಸ್ಥಾನವನ್ನಾಗಿ ಅಭಿವೃದ್ಧಿಪಡಿಸಲು ಕೇಂದ್ರ ಸರ್ಕಾರ ಎಲ್ಲಾ ನೆರವನ್ನು ನೀಡಲಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಕೂಡಾ ಸಾಧನೆಯನ್ನು ಕೊಂಡಾಡಿದ್ದಾರೆ.

ದಾಖಲೆ ರಫ್ತು:

ಈ ಕುರಿತು ಶನಿವಾರ ಟ್ವೀಟ್‌ ಮೂಲಕ ಮಾಹಿತಿ ನೀಡಿರುವ ರಾಜ್‌ನಾಥ್‌ ಸಿಂಗ್‌ (Rajnath Singh)‘ಭಾರತದ ರಕ್ಷಣಾ ರಫ್ತು 2022-23ನೇ ಸಾರ್ವಕಾಲಿಕ ಗರಿಷ್ಠ ಪ್ರಮಾಣವಾದ 15290 ಕೋಟಿ ರು. ತಲುಪಿದೆ. ಇದು ದೇಶದ ಪಾಲಿಗೆ ಅಭೂತಪೂರ್ವವಾದ ಸಾಧನೆ. ಪ್ರಧಾನಿ ನರೇಂದ್ರ ಮೋದಿ ಅವರ ಸಮರ್ಥ ನಾಯಕತ್ವದಲ್ಲಿ ಮುಂದಿನ ದಿನಗಳಲ್ಲಿ ರಕ್ಷಣಾ ವಲಯ ಇನ್ನಷ್ಟುವೇಗವಾಗಿ ಬೆಳವಣಿಗೆ ಕಾಣಲಿದೆ’ ಎಂದು ಹೇಳಿದ್ದಾರೆ.

2016-17ರಲ್ಲಿ 1521 ಕೋಟಿ ರು., 2017-18ರಲ್ಲಿ 4682 ಕೋಟಿ ರು., 2018-19ರಲ್ಲಿ 10745 ಕೋಟಿ ರು.ಮೌಲ್ಯದ, 2019-20ರಲ್ಲಿ 9115 ಕೋಟಿ ರು, 2020-21ರಲ್ಲಿ 8434 ಕೋಟಿ ರು. ಮತ್ತು 2021-22ರಲ್ಲಿ 12814 ಕೋಟಿ ರು. ಮೌಲ್ಯದ ರಕ್ಷಣಾ ಉಪಕರಣ ರಫ್ತು ಮಾಡಿದ್ದ ಭಾರತ 2022-23ರಲ್ಲಿ ಈ ಪ್ರಮಾಣವನ್ನು 15920 ಕೋಟಿ ರು.ಗೆ ತಲುಪಿದೆ. ಅಂದರೆ ಕಳೆದ 6 ವರ್ಷಗಳಲ್ಲಿ 1521 ಕೋಟಿ ರು.ಗಳಿಂದ 15290 ಕೋಟಿ ರು.ಗೆ ಹೆಚ್ಚಳ ಮಾಡುವಲ್ಲಿ ಯಶಸ್ವಿಯಾಗಿದೆ. ಅಂದರೆ 10 ಪಟ್ಟು ಏರಿಕೆ ದಾಖಲಾಗಿದೆ.

ಹೊಸ ದಾಖಲೆ:

ಜೊತೆಗೆ 2024-25ರ ವೇಳೆಗೆ ಒಟ್ಟಾರೆ 1.75 ಲಕ್ಷ ಕೋಟಿ ರು.ಮೌಲ್ಯದ ರಕ್ಷಣಾ ಉಪಕರಣ ಉತ್ಪಾದಿಸುವ ಮತ್ತು 35,000 ಕೋಟಿ ರು. ಮೌಲ್ಯದ ಉಪಕರಣ ರಫ್ತು ಮಾಡುವ ಗುರಿಯನ್ನೂ ಕೇಂದ್ರ ಸರ್ಕಾರ ಹಾಕಿಕೊಂಡಿದೆ.

ಏನೇನು ರಫ್ತು?:

ಪ್ರಸಕ್ತ ಭಾರತವು ವಿಶ್ವದ 85 ದೇಶಗಳಿಗೆ ಕ್ಷಿಪಣಿ (missiles), ಸುಧಾರಿತ ಲಘು ಹೆಲಿಕಾಪ್ಟರ್‌ (advanced light helicopters) , ಕಣ್ಗಾವಲು ನೌಕೆ, ವೈಯಕ್ತಿಕ ರಕ್ಷಣಾ ಉಪಕರಣ, ಕಣ್ಗಾವಲು ವ್ಯವಸ್ಥೆ, ರಾಡಾರ್‌, ತೇಜಸ್‌ ಯುದ್ಧ ವಿಮಾನ (Tejas fighter aircraft), ಆರ್ಟಿಲರಿ ಗನ್ಸ್‌ (artillery guns), ಟ್ಯಾಂಕ್‌ ಮೊದಲಾದ ಶಸ್ತ್ರಾಸ್ತ್ರಗಳನ್ನು ರಫ್ತು ಮಾಡುತ್ತಿದೆ.

ರಕ್ಷಣಾ ರಫ್ತು 25000 ಕೋಟಿಗೆ ಹೆಚ್ಚಿಸುವ ಗುರಿ: ಕೇಂದ್ರ ಸಚಿವ ರಾಜನಾಥ್‌ ಸಿಂಗ್‌


ಕಳೆದ 6 ವರ್ಷಗಳ ರಪ್ತು ಪ್ರಮಾಣ

ವರ್ಷ ರಫ್ತು ಪ್ರಮಾಣ

2016-17 1521 ಕೋಟಿ ರು.

2017-18 4682 ಕೋಟಿ ರು.

2018-19 10745 ಕೋಟಿ ರು.

2019-20 9115 ಕೋಟಿ ರು.

2020-21 8434 ಕೋಟಿ ರು.

2021-22 12814 ಕೋಟಿ ರು.

2022-23 15920 ಕೋಟಿ ರು.

2030ಕ್ಕೆ 165 ಲಕ್ಷ ಕೋಟಿ ರೂ. ರಫ್ತಿನ ಬೃಹತ್‌ ಗುರಿ: ಕೇಂದ್ರದಿಂದ ಹೊಸ ವಿದೇಶಿ ವ್ಯಾಪಾರ ನೀತಿ ಅನಾವರಣ


ಮೇಕ್‌ ಇನ್‌ ಇಂಡಿಯಾ ಹಾದಿಯಲ್ಲಿ ಭಾರತದ ಸಾಮರ್ಥ್ಯ ಮತ್ತು ಉತ್ಸಾಹಕ್ಕೆ ಇದೊಂದು ಸ್ಪಷ್ಟಉದಾಹರಣೆ. ಕಳೆದ ಕೆಲ ವರ್ಷಗಳಲ್ಲಿ ಈ ವಲಯದಲ್ಲಿ ಕೈಗೊಂಡ ಸುಧಾರಣೆಗಳು ಇದೀಗ ಉತ್ತಮ ಫಲ ನೀಡುತ್ತಿವೆ. ಭಾರತವನ್ನು ರಕ್ಷಣಾ ಉತ್ಪಾದನಾ ಕೇಂದ್ರಸ್ಥಾನವನ್ನಾಗಿ ಮಾಡಲು ನಮ್ಮ ಸರ್ಕಾರ ಎಲ್ಲಾ ರೀತಿಯ ನೆರವು ನೀಡಲಿದೆ.

- ನರೇಂದ್ರ ಮೋದಿ, ಪ್ರಧಾನಿ

Latest Videos
Follow Us:
Download App:
  • android
  • ios