ಭಾರತವು ರಕ್ಷಣಾ ಕ್ಷೇತ್ರದಲ್ಲಿ ಸ್ವಾವಲಂಬಿ ಹಾಗೂ ರಫ್ತುದಾರ ದೇಶವಾಗಿ ಬೆಳೆಯಬೇಕು. 2024ರ ವೇಳೆಗೆ ರಕ್ಷಣಾ ಕ್ಷೇತ್ರದ ರಫ್ತು 25 ಸಾವಿರ ಕೋಟಿ ರು.ಗೆ ಹೆಚ್ಚಿಸುವ ಗುರಿ ಹೊಂದಿದ್ದೇವೆ. ಜತೆಗೆ ತೇಜಸ್‌ ಲಘು ಯುದ್ಧ ವಿಮಾನದ ಎಂಜಿನ್‌ ಸಹ ನಮ್ಮ ದೇಶದಲ್ಲೇ ತಯಾರಿಸುತ್ತೇವೆ ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್‌ಸಿಂಗ್‌ ತಿಳಿಸಿದ್ದಾರೆ. 

ಬೆಂಗಳೂರು (ಫೆ.13): ಭಾರತವು ರಕ್ಷಣಾ ಕ್ಷೇತ್ರದಲ್ಲಿ ಸ್ವಾವಲಂಬಿ ಹಾಗೂ ರಫ್ತುದಾರ ದೇಶವಾಗಿ ಬೆಳೆಯಬೇಕು. 2024ರ ವೇಳೆಗೆ ರಕ್ಷಣಾ ಕ್ಷೇತ್ರದ ರಫ್ತು 25 ಸಾವಿರ ಕೋಟಿ ರು.ಗೆ ಹೆಚ್ಚಿಸುವ ಗುರಿ ಹೊಂದಿದ್ದೇವೆ. ಜತೆಗೆ ತೇಜಸ್‌ ಲಘು ಯುದ್ಧ ವಿಮಾನದ ಎಂಜಿನ್‌ ಸಹ ನಮ್ಮ ದೇಶದಲ್ಲೇ ತಯಾರಿಸುತ್ತೇವೆ ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್‌ಸಿಂಗ್‌ ತಿಳಿಸಿದ್ದಾರೆ. ಭಾನುವಾರ ಸಂಜೆ ನಗರದ ಖಾಸಗಿ ಹೋಟೆಲ್‌ನಲ್ಲಿ ನಡೆದ ‘ಏರೋ ಇಂಡಿಯಾ-2023ರ ಕರ್ಟನ್‌ ರೈಸರ್‌’ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಪ್ರಸ್ತುತ ರಕ್ಷಣಾ ಕ್ಷೇತ್ರದಲ್ಲಿ 13 ಸಾವಿರ ಕೋಟಿ ರು.ಗಳಷ್ಟುರಫ್ತು ಮಾಡುತ್ತಿದ್ದೇವೆ. 2024ರ ವೇಳೆಗೆ 25 ಸಾವಿರ ಕೋಟಿ ರು.ಗಳಷ್ಟುಮೊತ್ತಕ್ಕೆ ರಫ್ತಿನ ಪ್ರಮಾಣವನ್ನು ಹೆಚ್ಚಿಸುವ ಗುರಿ ಹೊಂದಿದ್ದೇವೆ. ಇದಕ್ಕೆ ಏರೋ ಇಂಡಿಯಾ-2023 ನೆರವಾಗಲಿದೆ ಎಂದು ಹೇಳಿದರು. ಕೆಂಪೇಗೌಡ ಅವರು ನಿರ್ಮಾಣ ಮಾಡಿರುವ ಬೆಂಗಳೂರು ವಿಶ್ವಮಟ್ಟದಲ್ಲಿ ಖ್ಯಾತಿ ಪಡೆದಿದೆ. ಐಟಿ ರಾಜಧಾನಿಯಾಗಿ ಹೆಸರು ಮಾಡಿರುವುದಲ್ಲದೇ ರಕ್ಷಣಾ ಹಾಗೂ ಏರೋಸ್ಪೇಸ್‌ ಹಬ್‌ ಆಗಿ ಬದಲಾಗಿದೆ. ಸತತ 14ನೇ ಬಾರಿಗೆ ಏರೋ ಇಂಡಿಯಾ ಆಯೋಜನೆ ಮಾಡುತ್ತಿದ್ದು, ಪ್ರಸ್ತುತ ಸಾಲಿನ ಏರೋ ಇಂಡಿಯಾ ಆತ್ಮನಿರ್ಭರ ಭಾರತ ಸಾಧನೆಗೆ ನೆರವಾಗಲಿದೆ. ತನ್ಮೂಲಕ ರಫ್ತು ಹೆಚ್ಚಳಕ್ಕೂ ಪೂರಕವಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಸಂಬಳ ಸಿಗದೆ ಅರಣ್ಯ ರಕ್ಷಕರು ಸಂಕಷ್ಟದಲ್ಲಿ: ಇಂದಿನಿಂದ ಪ್ರತಿಭಟನೆ

75 ಸಾವಿರ ಕೋಟಿ ರು.ಗಳ ಒಪ್ಪಂದ: ಪ್ರಸಕ್ತ ಏರೋ ಇಂಡಿಯಾದಲ್ಲಿ 800ಕ್ಕೂ ಹೆಚ್ಚು ಪ್ರದರ್ಶಕರು ಭಾಗವಹಿಸಲಿದ್ದಾರೆ. ಸುಮಾರು 100 ದೇಶಗಳು ವೈಮಾನಿಕ ಪ್ರದರ್ಶನದಲ್ಲಿ ಭಾಗಿಯಾಗಲಿವೆ. ಕೇವಲ ರಕ್ಷಣಾ ಕ್ಷೇತ್ರ, ಏರೋಸ್ಪೇಸ್‌ ಮಾತ್ರವಲ್ಲದೆ ತಂತ್ರಜ್ಞಾನದ ಭವಿಷ್ಯವಾಗಿರುವ ಕೃತಕ ಬುದ್ಧಿಮತ್ತೆ, ರೊಬೊಟಿಕ್‌ ತಂತ್ರಜ್ಞಾನದಂತಹ ಕ್ಷೇತ್ರಗಳ ಬಗ್ಗೆ ಬೆಳಕು ಚೆಲ್ಲಲಿದೆ. ಸ್ಟಾರ್ಟ್‌ ಅಪ್‌ ಮಂಥನ್‌ ಯುವ ಉದ್ಯಮಿಗಳಿಗೆ ಪ್ರೋತ್ಸಾಹದಾಯಕವಾಗಲಿದ್ದು, ಸಿಇಓಗಳ ದುಂಡುಮೇಜಿನ ಸಮ್ಮೇಳನ ಪ್ರಮುಖ ಕಾರ್ಯಕ್ರಮವಾಗಲಿದೆ. ಇನ್ನು ಬಂಧನ್‌ ಕಾರ್ಯಕ್ರಮದಲ್ಲಿ ಹಲವು ಒಡಂಬಡಿಕೆಗಳಿಗೆ ಸಹಿ ಬೀಳಲಿದ್ದು, 75 ಸಾವಿರ ಕೋಟಿ ರು. ಮೊತ್ತದ ಒಪ್ಪಂದಗಳು ಆಗುವ ನಿರೀಕ್ಷೆಯಿದೆ ಎಂದು ಮಾಹಿತಿ ನೀಡಿದರು.

ಶೇ.100ರಷ್ಟು ಸ್ವದೇಶಿ ಎಂಜಿನ್‌: ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ತೇಜಸ್‌ ಯುದ್ಧವಿಮಾನದ ಎಂಜಿನ್‌ ಸಹ ಶೇ.100ರಷ್ಟುಸ್ವದೇಶಿ ಎಂಜಿನ್‌ ಆಗಿ ಅಭಿವೃದ್ಧಿಪಡಿಸುವ ಗುರಿ ಹೊಂದಿದ್ದೇವೆ. ನಮ್ಮ ದೇಶದಲ್ಲೇ ತಯಾರಿಸುವ ಕೆಲಸವನ್ನು ಮಾಡೇ ಮಾಡುತ್ತೇವೆ. ಆ ಗುರಿ ನಮ್ಮ ಮುಂದಿದೆ ಎಂದು ಹೇಳಿದರು.

ಪಕ್ಷಕ್ಕೆ ದ್ರೋಹ ಮಾಡಿದವರಿಗೆ ಪಾಠ ಕಲಿಸಿ: ಎಚ್‌.ಡಿ.ಕುಮಾರಸ್ವಾಮಿ

ಏರೋ ಇಂಡಿಯಾ ವಿಶ್ವೇಶ್ವರಯ್ಯಗೆ ಅರ್ಪಣೆ: ಸರ್‌ ಎಂ.ವಿಶ್ವೇಶ್ವರಯ್ಯ ಅವರು ಸ್ವಾತಂತ್ರ್ಯಕ್ಕೂ ಮೊದಲೇ ಕೈಗಾರಿಕೆಗಳನ್ನು ನಿರ್ಮಿಸುವ ಮೂಲಕ ಅಭಿವೃದ್ಧಿಯ ಹಾದಿ ತೋರಿದ್ದಾರೆ. ಅವರ ಹಾದಿಯಲ್ಲಿ, ಆತ್ಮನಿರ್ಭರ ಭಾರತ ಹಾಗೂ ವಿಂಗ್‌್ಸ ಆಫ್‌ ಫಯಚರ್‌ ಕಲ್ಪನೆಯಲ್ಲಿ ನಡೆಯುತ್ತಿರುವ 14ನೇ ಆವೃತ್ತಿಯ ಏರೋ ಇಂಡಿಯಾ ಅವರಿಗೆ ಸಲ್ಲಿಸುವ ಗೌರವ ಎಂದು ರಾಜನಾಥ್‌ಸಿಂಗ್‌ ಹೇಳಿದರು.