Asianet Suvarna News Asianet Suvarna News

ಪ್ರಿಯಾಂಕಾ ವಾದ್ರಾ ಸ್ವಾಗತಕ್ಕೆ ರಾಯ್‌ಪುರದ 1 ಕೀ.ಮೀ ರಸ್ತೆಗೆ 'ರೋಸ್‌ ಕಾರ್ಪೆಟ್‌'!

Congress Plenary Session: ಕಾಂಗ್ರೆಸ್ ಪಕ್ಷದ 85ನೇ ಮಹಾಧಿವೇಶನಕ್ಕಾಗಿ ಪ್ರಿಯಾಂಕಾ ಗಾಂಧಿ ವಾದ್ರಾ ಛತ್ತೀಸ್‌ಗಢದ ರಾಯ್‌ಪುರಕ್ಕೆ ಆಗಮಿಸಿದರು. ಈ ವೇಳೆ ಅವರ ಸ್ವಾಗತಕ್ಕೆಸ ರಾಯ್‌ಪುರದ 1 ಕಿಲೋಮೀಟರ್‌ ರಸ್ತೆಗೆ ಗುಲಾಬಿ ಹೂವುಗಳ ಎಸಳುಗಳಿಂದ ಅಲಂಕರಿಸಲಾಗಿತ್ತು. ಇದಕ್ಕೀಗ ಪರ ವಿರೋಧ ಚರ್ಚೆ ಆರಂಭವಾಗಿದೆ.
 

Congress plenary session  Priyanka Gandhi Vadra arrived in Raipur Rose carpet on Road san
Author
First Published Feb 25, 2023, 12:36 PM IST

ನವದೆಹಲಿ (ಫೆ.25): ಮುಂಬರುವ ವಿವಿಧ ರಾಜ್ಯಗಳ ಚುನಾವಣೆ ಹಾಗೂ ಲೋಕಸಭೆ ಚುನಾವಣೆಯಲ್ಲಿ ಪಕ್ಷದ ರೂಪುರೇಷೆಯನ್ನು ಚರ್ಚೆ ಮಾಡಲು ಛತ್ತೀಸ್‌ಗಢದ ರಾಜಧಾನಿ ರಾಯ್‌ಪುರದಲ್ಲಿ ಮೂರು ದಿನಗಳ ಕಾಂಗ್ರೆಸ್‌ ಮಹಾಧಿವೇಶನ ಶುಕ್ರವಾರದಿಂದ ಆರಂಭವಾಗಿದೆ. 2ನೇ ದಿನವಾದ ಶನಿವಾರ ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ವಾದ್ರಾ ರಾಯ್‌ಪುರಕ್ಕೆ ಆಗಮಿಸಿದರು. ಈ ವೇಳೆ ಛತ್ತಿಸ್‌ಗಢ ಕಾಂಗ್ರೆಸ್‌ ವಿಶೇಷ ರೀತಿಯಲ್ಲಿ ಪ್ರಿಯಾಂಕಾ ವಾದ್ರಾ ಅವರನ್ನು ಬರಮಾಡಿಕೊಂಡಿದೆ. ಇದು ಸೋಶಿಯಲ್‌ ಮೀಡಿಯಾದಲ್ಲಿ ಭಾರೀ ವೈರಲ್‌ ಆಗಿದ್ದು, ಪರ-ವಿರೋಧ ಚರ್ಚೆಗಳೂ ಆರಂಭವಾಗಿದೆ. 'ರಾಜಕಾರಣಿಗಳು ಬಂದಾಗ ಹೂವುಗಳನ್ನು ಅವರ ಮೇಲೆ ಹಾರಿಸಿ ಸ್ವಾಗತಿಸೋದು ಸಾಮಾನ್ಯ. ಆದರೆ, ರೈತನೊಬ್ಬ ಬೆಳೆದ ಹೂವುಗಳನ್ನು ಅಂದಾಜು 1 ಕಿಲೋಮೀಟರ್‌ ದೂರದ ರಸ್ತೆಗೆ ಹಾಸಿ ಸ್ವಾಗತಿಸೋದು ಸರಿ ಕಾಣೋದಿಲ್ಲ. ಒಂದೊಂದು ಗುಲಾಬಿ ಹೂವುಗಳಿಗೆ 25 ರಿಂದ 30 ರೂಪಾಯಿ ಇದೆ. ಈ ಹಣವನ್ನು ಉತ್ತಮ ಕಾರ್ಯಗಳಿಗೆ ಬಳಸಬಹುದಿತ್ತು' ಎಂದು ಪತ್ರಕರ್ತ ಹೇಮೇಂದ್ರ ತ್ರಿಪಾಠಿ ಬರೆದುಕೊಡಿದ್ದಾರೆ. ರೈತ ಬೆಳೆದ ತಿಂಗಳುಗಟ್ಟಲೆ ಕಾದು ಬೆಳೆದ ಈ ಹೂವುಗಳನ್ನು ಕೆಲವೇ ನಿಮಿಷದಲ್ಲಿ ವಾಹನಗಳು ಹಾಗೂ ಶೂಗಳ ಅಡಿಯಲ್ಲಿ ತುಳಿಯಲಾಯಿತು ಎಂದು ಬರೆದಿದ್ದಾರೆ.


ರಾಯ್‌ಪುರಕ್ಕೆ ಬೆಳಗ್ಗೆ 8.30ರ ವೇಳೆಗೆ ಆಗಮಿಸಿದ ಪ್ರಿಯಾಂಕಾ ವಾದ್ರಾಗೆ ಛತ್ತೀಸ್‌ಗಢ ಕಾಂಗ್ರೆಸ್‌ ವಿಶೇಷ ರೀತಿಯಲ್ಲಿ ಸ್ವಾಗತಿಸಿತು. ಸಾಮಾನ್ಯವಾಗಿ ರೆಡ್‌ ಕಾರ್ಪೆಟ್‌ ಸ್ವಾಗತವನ್ನು ಕೇಳಿರುತ್ತೇವೆ. ಆದರೆ, ಪ್ರಿಯಾಂಕಾ ವಾದ್ರಾ ಸ್ವಾಗತಕ್ಕೆ ಅಂದಾಜು 1 ಕಿಲೋಮೀಟರ್‌ ರಸ್ತೆಗಳಲ್ಲಿ ಗುಲಾಬಿ ಹೂವಿನ ಎಸಳುಗಳಿಂದ ಅಲಂಕಾರ ಮಾಡಲಾಗಿತ್ತು. ಈ ದಾರಿಯಲ್ಲಿಯೇ ಬಂದ ಪ್ರಿಯಾಂಕಾ ಗಾಂಧಿ, ತಮ್ಮ ಕಾರ್‌ನ ಡೋರ್‌ ತೆಗೆದು ಅಭಿಮಾನಿಗಳಿಗೆ ಕೈಬೀಸಿದರು. ಈ ವೇಳೆ ಮೇಲಿಂದಲೂ ಹೂವುಗಳನ್ನು ಸುರಿಯಲಾಯಿತು.

ಇದಲ್ಲದೇ ಪ್ರಿಯಾಂಕಾ ಗಾಂಧಿ ಅವರನ್ನು ಸ್ವಾಗತಿಸಲು ಪುಷ್ಪಗಳ ಸುರಿಮಳೆಯನ್ನೇ ಮಾಡಲಾಗಿದೆ. ಈ ಹಿಂದೆ ಯಾವ ನಾಯಕರಿಗೂ ಇಷ್ಟೊಂದು ಅದ್ಧೂರಿ ತಯಾರಿ ನಡೆದಿರಲಿಲ್ಲ. ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಭೂಪೇಶ್ ಬಾಘೇಲ್ ಅವರು ಪ್ರಿಯಾಂಕಾ ಗಾಂಧಿ ವಾದ್ರಾ ಅವರೊಂದಿಗೆ ಕಾಣಿಸಿಕೊಂಡರು.

Viral News: 512 ಕೆಜಿ ಈರುಳ್ಳಿ ಮಾರಿದ್ದಕ್ಕೆ ರೈತನಿಗೆ ಸಿಕ್ಕಿದ್ದು 2 ರೂಪಾಯಿ!

ಅಧಿವೇಶನದಲ್ಲಿ ಪಾಲ್ಗೊಳ್ಳಲು ಆಗಮಿಸಿದ ಪ್ರಿಯಾಂಕಾ: ಮಹಾಧಿವೇಶನದಲ್ಲಿ ಪಾಲ್ಗೊಳ್ಳುವ ಸಲುವಾಗಿ ಶನಿವಾರ ಪ್ರಿಯಾಂಕಾ ವಾದ್ರಾ ರಾಯ್‌ಪುರಕ್ಕೆ ಆಗಮಿಸಿದರು. ಅವರನ್ನು ಸ್ವಾಗತಿಸಲು ಛತ್ತೀಸ್‌ಗಢ ಮುಖ್ಯಮಂತ್ರಿ ಭೂಪೇಶ್ ಬಘೇಲ್, ಪಿಸಿಎಸ್ ಮುಖ್ಯಸ್ಥ ಮೋಹನ್ ಮಾರ್ಕಮ್ ಮತ್ತು ಇತರ ಕಾಂಗ್ರೆಸ್ ಅಧಿಕಾರಿಗಳು ಆಗಮಿಸಿದ್ದರು. ಪ್ರಿಯಾಂಕಾ ಗಾಂಧಿ ವಾದ್ರಾ ಅವರನ್ನು ವಿಮಾನ ನಿಲ್ದಾಣದಲ್ಲಿ ಧೋಲ್ ನಗಾಡೆಯೊಂದಿಗೆ ಸ್ವಾಗತಿಸಲಾಯಿತು. ಇದಾದ ಬಳಿಕ ಬೆಂಗಾವಲು ಪಡೆ ವಿಮಾನ ನಿಲ್ದಾಣದಿಂದ ಹೊರ ಬಂದಾಗ ಸಾವಿರಾರು ಕಾಂಗ್ರೆಸ್‌ ಕಾರ್ಯಕರ್ತರು ರಸ್ತೆಯಲ್ಲಿ ನಿಂತಿದ್ದರು. ಪ್ರಿಯಾಂಕಾ ಗಾಂಧಿ ಅವರನ್ನು ನೋಡಲು ಉದ್ದನೆಯ ಸರತಿ ಸಾಲು ಇತ್ತು. ಡಿಜೆ ಕೂಡ ಹಾಕಲಾಗಿತ್ತು. ನೆಲದ ಮೇಲೆಹೂವಿನ ಅಲಂಕಾರ ಮಾಡಲಾಗಿತ್ತು.

ಸೆಮಿಸ್ಟರ್‌ನಲ್ಲಿ ಫೇಲ್‌ ಮಾಡಿದ್ದಕ್ಕೆ ಪ್ರಿನ್ಸಿಪಾಲ್‌ ಮೇಲೆ ಪೆಟ್ರೋಲ್‌ ಸುರಿದ ಬೆಂಕಿ ಹಚ್ಚಿದ ವಿದ್ಯಾರ್ಥಿ!

ಭವ್ಯ ಸ್ವಾಗತವನ್ನು ನೋಡಿದ ನಂತರ ಪ್ರಿಯಾಂಕಾ ಗಾಂಧಿ ವಾದ್ರಾ ಕಾರಿನಿಂದ ಇಳಿದು ಅಭಿಮಾನಿಗಳತ್ತ ಕೈಬೀಸಿದ್ದಾರೆ. ಪ್ರಿಯಾಂಕಾ ಗಾಂಧಿ ಅವರ ಬೆಂಗಾವಲು ಪಡೆಯ ಮೇಲೂ ಗುಲಾಬಿ ಹೂವುಗಳ ಮಳೆಗೆರೆಯಲಾಗಿದೆ. ಈ ದೃಶ್ಯವನ್ನು ನೋಡಿದ ಪ್ರಿಯಾಂಕಾ ಗಾಂಧಿ ವಾದ್ರಾ ಕೂಡ ತುಂಬಾ ಖುಷಿಪಟ್ಟಿದ್ದಾರೆ. ಅಲ್ಲದೆ ಎಲ್ಲರಿಗೂ ಕೈಮುಗಿದು ನಮಸ್ಕಾರ ಮಾಡಿದರು. ಅದೇ ಸಮಯದಲ್ಲಿ, ಮುಖ್ಯಮಂತ್ರಿ ಭೂಪೇಶ್ ಬಘೇಲ್ ಕೂಡ ಪ್ರಯಾಣದುದ್ದಕ್ಕೂ ಅವರೊಂದಿಗೆ ಕಾಣಿಸಿಕೊಂಡರು.

Follow Us:
Download App:
  • android
  • ios