ಸೆಮಿಸ್ಟರ್‌ನಲ್ಲಿ ಫೇಲ್‌ ಮಾಡಿದ್ದಕ್ಕೆ ಪ್ರಿನ್ಸಿಪಾಲ್‌ ಮೇಲೆ ಪೆಟ್ರೋಲ್‌ ಸುರಿದ ಬೆಂಕಿ ಹಚ್ಚಿದ ವಿದ್ಯಾರ್ಥಿ!

ಇಂದೋರ್‌ನಲ್ಲಿ ಆಘಾತಕಾರಿ ಘಟನೆ ವರದಿಯಾಗಿದ್ದು, ಸೆಮಿಸ್ಟರ್‌ನಲ್ಲಿ ಫೇಲ್‌ ಮಾಡಿದ್ದ ಕಾರಣಕ್ಕೆ ವಿದ್ಯಾರ್ಥಿಯೊಬ್ಬ ಪ್ರಿನ್ಸಿಪಾಲ್‌ ಮೇಲೆ ಪೆಟ್ರೋಲ್‌ ಸುರಿದು ಬೆಂಕಿ ಹಚ್ಚಿದ ಘಟನೆ ನಡೆದಿದೆ. ಸಾವು ಬದುಕಿನ ನಡುವೆ ಹೋರಾಟ ನಡೆಸಿದ್ದ ಪ್ರಿನ್ಸಿಪಾಲ್‌ ಶನಿವಾರ ಸಾವು ಕಂಡಿದ್ದಾರೆ.

BM Pharmacy College principal Vimukta Sharma dies after being set on fire by former student san

ಇಂದೋರ್‌ (ಫೆ.25): ಸೆಮಿಸ್ಟರ್‌ ಪರೀಕ್ಷೆಯಲ್ಲಿ ಫೇಲ್‌ ಮಾಡಿದ್ದಾರೆ ಎನ್ನುವ ಕಾರಣಕ್ಕಾಗಿ ವಿದ್ಯಾರ್ಥಿಯೊಬ್ಬ ಕಾಲೇಜಿನ ಪ್ರಿನ್ಸಿಪಾಲ್‌ ಮೇಲೆ ಪೆಟ್ರೋಲ್‌ ಸುರಿದು ಸಾಯಿಸಿದ ಘಟನೆ ವರದಿಯಾಗಿದೆ. ಇಂದೋರ್‌ನ ಬಿಎಂ ಫಾರ್ಮಸಿ ಕಾಲೇಜಿನ ಪ್ರಿನ್ಸಿಪಾಲ್‌ ಆಗಿದ್ದ ವಿಮುಕ್ತಾ ಶರ್ಮ ಅವರಿಗೆ ವಿದ್ಯಾರ್ಥಿಯೊಬ್ಬ ಬೆಂಕಿ ಇಟ್ಟಿದ್ದ. ಶೇ.80ರಷ್ಟು ಸುಟ್ಟ ಗಾಯಗಳೊಂದಿಗೆ ಆಸ್ಪತ್ರೆಗೆ ದಾಖಲಾಗಿದ್ದ ಅವರು ಸಾವು ಬದುಕಿನ ನಡುವೆ ಹೋರಾಟ ಮಾಡುತ್ತಿದ್ದರು. ವೆಂಟಿಲೇಟರ್‌ನಲ್ಲಿದ್ದ ಅವರು ಶನಿವಾರ ಮುಂಜಾನೆ 4 ಗಂಟೆಯ ವೇಳೆಗೆ ಸಾವು ಕಂಡಿದ್ದಾರೆ ಎಂದು ಅವರ ಸಹೋದರ ಅರವಿಂದ್‌ ತಿವಾರಿ ತಿಳಿಸಿದ್ದಾರೆ. ಆರೋಪಿಯನ್ನು 24 ವರ್ಷದ ಅಶುತೋಶ್‌ ಶ್ರೀವಾತ್ಸವ ಎಂದು ಗುರುತಿಸಲಾಗಿದೆ. 7ನೇ ಸೆಮಿಸ್ಟರ್‌ನಲ್ಲಿ ತಮ್ಮನ್ನು ಫೇಲ್‌ ಮಾಡಿದ್ದ ಸಿಟ್ಟಿಗೆ ಈ ಕೃತ್ಯ ಎಸಗಿದ್ದಾನೆ ಎಂದು ಇಂದೋರ್‌ ಗ್ರಾಮೀಣ ಪೊಲೀಸ್‌ ಠಾಣೆಯ ಎಸ್‌ಪಿ ಭಗವತ್‌ ಸಿಂಗ್‌ ವಿರ್ಡೆ ತಿಳಿಸಿದ್ದಾರೆ. 'ಪ್ರಿನ್ಸಿಪಾಲ್‌ ಅವರಿಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ, ಗಂಭೀರ ಪ್ರಮಾಣದ ಸುಟ್ಟ ಗಾಯಗಳಾಗಿದ್ದ ಕಾರಣ ಸಾವು ಕಂಡಿದ್ದಾರೆ. ಇವರ ಮೇಲೆ ಪೆಟ್ರೋಲ್‌ ಸುರಿದು ಬೆಂಕಿ ಹಚ್ಚಿದ ವಿದ್ಯಾರ್ಥಿ 7ನೇ ಸೆಮಿಸ್ಟರ್‌ನಲ್ಲಿ ಫೇಲ್‌ ಆಗಿದ್ದಾನೆ. ಅದೇ ಸಿಟ್ಟಿಗಾಗಿ ಈ ಕೃತ್ಯ ಮಾಡಿರಬಹುದು. ಈಗಾಗಲೇ ಆರೋಪಿಯನ್ನು ಬಂಧಿಸಲಾಗಿದೆ' ಎಂದು ಪೊಲೀಸರು ಎಎನ್‌ಐಗೆ ತಿಳಿಸಿದ್ದಾರೆ.

ಇಂದೋರ್ ಕಲೆಕ್ಟರ್ ಇಳಯರಾಜ ಟಿ ಹೊರಡಿಸಿದ ಆದೇಶದಂತೆ ಶ್ರೀವಾಸ್ತವ ಅವರಿಗೆ ಕಠಿಣ ರಾಷ್ಟ್ರೀಯ ಭದ್ರತಾ ಕಾಯ್ದೆ (ಎನ್‌ಎಸ್‌ಎ) ಅನ್ವಯ ಕೇಸ್‌ ದಾಖಲಿಸಲಾಗಿದೆ ಎಂದು ವಿರ್ಡೆ ಹೇಳಿದ್ದಾರೆ. 'ತನಿಖೆಯ ಸಮಯದಲ್ಲಿ, ಶ್ರೀವಾಸ್ತವ ವಿರುದ್ಧ ಫಾರ್ಮಸಿ ಕಾಲೇಜು ಅಧಿಕಾರಿಗಳು, ಮಹಿಳಾ ಪ್ರಾಂಶುಪಾಲರು ಮತ್ತು ಇತರ ಸಿಬ್ಬಂದಿಯಿಂದ ಎರಡು ಮೂರು ದೂರುಗಳು ಬಂದಿವೆ. ಇದಕ್ಕೂ ಮುನ್ನ ಆರೋಪಿ ಶ್ರೀವಾತ್ಸವ ಆತ್ಮಹತ್ಯೆ ಬೆದರಿಕೆಯನ್ನೂ ಹಾಕಿದ್ದ' ಎಂದು ಪಿಟಿಐಗೆ ವಿರ್ಡೆ ತಿಳಿಸಿದ್ದಾರೆ.

Viral News: 512 ಕೆಜಿ ಈರುಳ್ಳಿ ಮಾರಿದ್ದಕ್ಕೆ ರೈತನಿಗೆ ಸಿಕ್ಕಿದ್ದು 2 ರೂಪಾಯಿ!

ಕಳೆದ ವಾರ ಇಂದೋರ್‌ನ ಸಿಮ್ರೋಲ್‌ ಪ್ರದೇಶದದಲ್ಲಿ 54 ವರ್ಷ ವಿಮುಕ್ತಾ ಶರ್ಮಾ ಅವರ ಮೇಲೆ ದಾಳಿ ಮಾಡಿದ್ದ ಅಶುತೋಶ್‌ ಶ್ರೀವಾತ್ಸವ ಮೊದಲು ಅವರಿಗೆ ಚೂರಿಯಿಂದ ಹಲ್ಲೆ ಮಾಡಿದ್ದ. ಅವರು ನೋವಿನಿಂದ ನರಳುತ್ತಿದ್ದ ವೇಳೆ ಆಕೆಯ ಮೇಲೆ ಪೆಟ್ರೋಲ್‌ ಸುರಿದು ಬೆಂಕಿ ಹಚ್ಚಿದ್ದ. ಶೇ.80ರಷ್ಟು ಸುಟ್ಟ ಗಾಯಗಳೊಂದಿಗೆ ವಿಮುಕ್ತಾ ಶರ್ಮ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.

Viral Video: ನಡುರಸ್ತೆಯಲ್ಲೇ ವ್ಯಕ್ತಿಗೆ ಹೃದಯಾಘಾತ, ಸಿಪಿಆರ್‌ ನೀಡಿ ಬದುಕಿಸಿದ ಟ್ರಾಫಿಕ್‌ ಪೊಲೀಸ್‌!

ಪೆಟ್ರೋಲ್‌ ಸುರಿದು ಬೆಂಕಿ ಹಚ್ಚಿದ ಕಾರಣಕ್ಕೆ ಶ್ರೀವಾತ್ಸವ ಅವರಿಗೂ ಶೇ. 20ರಷ್ಟು ಸುಟ್ಟ ಗಾಯಗಳಾಗಿದ್ದವು. ಶರ್ಮಾ ಮೇಲೆ ಹರಿತವಾದ ಆಯುಧದಿಂದ ದಾಳಿ ಮಾಡಿದ್ದಕ್ಕಾಗಿ ಶ್ರೀವಾಸ್ತವ್ ಅವರನ್ನು ಬಂಧಿಸಿದ ನಂತರ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿತ್ತು. ಆದರೆ, ವಿಮುಕ್ತಾ ಅವರು ಸಾವು ಕಂಡಿದ್ದರಿಂದ ಕೊಲೆ ಆರೋಪದಲ್ಲಿ ಬಂಧಿಸಲಾಗಿದೆ. ಬಿ ಫಾರ್ಮಸಿ ಪರೀಕ್ಷೆಯಲ್ಲಿ ತಮ್ಮನ್ನು ವಿಮುಕ್ತಾ ಫೇಲ್‌ ಮಾಡಿದ್ದರು ಎಂದು ಶ್ರೀವಾಸ್ತವ ಆರೋಪ ಮಾಡಿದ್ದಾರೆ.

ಅಶುತೋಶ್‌ ದಾಳಿ ಮಾಡುವ ವೇಳೆ ವಿಮುಕ್ತಾ ಶರ್ಮ ತಮ್ಮ ಕಾರ್‌ನ ಬಳಿ ಇದ್ದರು. ಮೊದಲಿಗೆ ಚಾಕು ಇರಿದ ಆತ ಬಳಿಕ ಪೆಟ್ರೋಲ್‌ ಸುರಿದು ಬೆಂಕಿ ಹಚ್ಚಿದ. ಈ ವೇಳೆ ಅಕ್ಕಪಕ್ಕದಲ್ಲಿದ್ದ ಸ್ಥಳೀಯರು ಬೆಂಕಿಯನ್ನು ನಂದಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ ಎಂದು ವಿರ್ಡೆ ತಿಳಿಸಿದರು. ಈ ನಡುವೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ತವ್ಯ ನಿರ್ಲಕ್ಷ್ಯದ ಆರೋಪದ ಮೇಲೆ ಇಂದೋರ್‌ನ ಪೊಲೀಸ್ ಸಹಾಯಕ ಸಬ್ ಇನ್ಸ್‌ಪೆಕ್ಟರ್ ಸಂಜೀವ್ ತಿವಾರಿ ಅವರನ್ನು ಅಮಾನತುಗೊಳಿಸಲಾಗಿದೆ.

ತನಿಖೆಯ ಭಾಗವಾಗಿ ಅಪರಾಧವನ್ನು ಹೇಗೆ ಮಾಡಿದ್ದು ಎನ್ನುವುದನ್ನು ತಿಳಿಸಲು ಶ್ರೀವಾಸ್ತವ್ ಅವರನ್ನು ಮೊದಲು ಸ್ಥಳಕ್ಕೆ ಕರೆದೊಯ್ಯಲಾಯಿತು. 2022 ರ ಜುಲೈನಲ್ಲಿ ಬಿ ಫಾರ್ಮಾ ಪರೀಕ್ಷೆಯಲ್ಲಿ ಪಾಸ್‌ ಆಗಿದ್ದಾನೆ ಎಂದೂ ಶ್ರೀವಾತ್ಸವ ಪೊಲೀಸರಿಗೆ ತಿಳಿಸಿದ್ದಾನೆ ಎನ್ನುವ ವರದಿಗಳಿವೆ, ಆದರೆ ಹಲವಾರು ವಿನಂತಿಗಳ ಹೊರತಾಗಿಯೂ, ಬಿಎಂ ಫಾರ್ಮಸಿ ಕಾಲೇಜ್ ಮ್ಯಾನೇಜ್‌ಮೆಂಟ್ ತನ್ನ ಅಂಕ ಪಟ್ಟಿಯನ್ನು ನೀಡುತ್ತಿಲ್ಲ. ಈ ಆರೋಪಗಳನ್ನು ತಳ್ಳಿಹಾಕಿದ ಕಾಲೇಜು ಅಧಿಕಾರಿಗಳು, ಕ್ರಿಮಿನಲ್ ಪೂರ್ವಾಪರ ಹೊಂದಿರುವ ಶ್ರೀವಾಸ್ತವ್ ಹಲವಾರು ಸೂಚನೆಗಳ ಹೊರತಾಗಿಯೂ ಅಂಕಪಟ್ಟಿ ತೆಗೆದುಕೊಳ್ಳಲು ಬಂದಿರಲಿಲ್ಲ ಎಂದು ಹೇಳಿದ್ದಾರೆ.

Latest Videos
Follow Us:
Download App:
  • android
  • ios