Viral News: 512 ಕೆಜಿ ಈರುಳ್ಳಿ ಮಾರಿದ್ದಕ್ಕೆ ರೈತನಿಗೆ ಸಿಕ್ಕಿದ್ದು 2 ರೂಪಾಯಿ!
ಮಹಾರಾಷ್ಟ್ರದ ಸೊಲ್ಲಾಪುರದಲ್ಲಿ ರೈತನೊಬ್ಬ ಬರೋಬ್ಬರಿ 512 ಕೆಜಿ ಈರುಳ್ಳಿಯನ್ನು ಮಾರಾಟ ಮಾಡಿದ್ದರಿಂದ ಕೇವಲ 2 ರೂಪಾಯಿ ಪಡೆದುಕೊಂಡಿದ್ದಾರೆ. ಟ್ವಿಟರ್‌ನಲ್ಲಿ ವ್ಯಕ್ತಿಯೊಬ್ಬ ಈ ರೈತ ಪಡೆದುಕೊಂಡ 2 ರೂಪಾಯಿ ರಶೀದಿಯನ್ನು ಶೇರ್ ಮಾಡಿಕೊಂಡಿದ್ದಾರೆ.
ನವದೆಹಲಿ (ಫೆ.25): ಬಹುಶಃ ಈ ದೇಶದಲ್ಲಿ ಅನ್ನ ಹಾಕುವ ರೈತನಿಗೆ ಇರುವ ಸಂಕಷ್ಟ ಯಾರೊಬ್ಬರಿಗೂ ಇದ್ದ ಹಾಗೆ ಕಾಣೋದಿಲ್ಲ. ಭೂಮಿಯನ್ನೇ ನಂಬಿಕೊಂಡು ಬೆವರು ಸುರಿಸುವ ರೈತನಿಗೆ ಒಂದಲ್ಲಾ ಒಂದು ಸಂಕಷ್ಟಗಳು. ಒಮ್ಮೊಮ್ಮೆ ಪ್ರಕೃತಿಯೇ ಮುನಿದರೆ, ಇನ್ನೊಮ್ಮೆ ಅವರ ಹಿತ ಕಾಯುವವರೇ ದ್ರೋಹ ಮಾಡುತ್ತಾರೆ. ರೈತನ ಹೆಸರಿನಲ್ಲಿ ರಾಜಕೀಯ ಮಾಡುವ ಜನರು ರೈತರ ಕಷ್ಟಗಳನ್ನು ಕೇಳೋದೇ ಇಲ್ಲ ಅನ್ನೋದಕ್ಕೆ ಸ್ಪಷ್ಟ ಉದಾಹರಣೆ ಮಹಾರಾಷ್ಟ್ರದಲ್ಲಿ ದಾಖಲಾಗಿದೆ. ತಾನು ಬೆಳೆದ ಬೆಲೆಗೆ ಮಾರುಕಟ್ಟೆಯಲ್ಲಿ ಸರಿಯಾದ ಬೆಲೆ ಸಿಗಲಿ ಅನ್ನೋದಷ್ಟೇ ರೈತನ ಆಸೆಯಾಗಿರುತ್ತದೆ. ಅದಕ್ಕೂ ಕೂಡ ಈಗೀಗ ಬೆಲೆ ಸಿಗುತ್ತಿಲ್ಲ. ಮಹಾರಾಷ್ಟ್ರದ ಸೊಲ್ಲಾಪುರದ ರೈತ ರಾಜೇಂದ್ರ ತುಕರಾಂ ಚೌಹಾಣ್ ತಮ್ಮ ಹೊಲದಲ್ಲಿ ಕಷ್ಟಪಟ್ಟು ಬೆವರು ಸುರಿಸಿ 512 ಕೆಜಿ ಈರುಳ್ಳಿ ಬೆಳೆದಿದ್ದರು. ಇದನ್ನು ಫೆ.17ರಂದು ಸೊಲ್ಲಾಪುರದ ಮಂಡಿಯಲ್ಲಿ ಮಾರಾಟ ಮಾಡಿದಾಗ ಸಿಕ್ಕ ಲಾಭ ಬರೀ 2 ರೂಪಾಯಿ! ಹೌದು, ಇದನ್ನು ನಂಬೋದು ಕಷ್ಟವಾದರೂ ಸತ್ಯ. ಈತ ಪಡೆದುಕೊಂಡ 2 ರೂಪಾಯಿ ಲಾಭದ ರಶೀದಿಯನ್ನು ಚಿತ್ರವನ್ನು ಟ್ವಿಟರ್‌ನಲ್ಲಿ ವ್ಉಕ್ತಿಯೊಬ್ಬ ಪೋಸ್ಟ್ ಮಾಡಿದ್ದಾರೆ. ಸೊಲ್ಲಾಪುರ ಮಂಡಿಯಲ್ಲಿ ತಾವು ಬೆಳೆದ ಈರುಳ್ಳಿಯನ್ನು ತೆಗೆದುಕೊಂಡು ಹೋದಾಗ ವ್ಯಾಪಾರಿ ಇದನ್ನು ಕೆಳದರ್ಜೆಯ ಈರುಳ್ಳಿ ಎಂದಿದ್ದಾನೆ. ಕೆಜಿಗೆ 1 ರೂಪಾಯಿಯಂತೆ ಖರೀದಿ ಮಾಡುವುದಾಗಿ ತಿಳಿಸಿದ್ದಾನೆ. ಗಾಡಿ, ತೂಕ ಮತ್ತು ಕೂಲಿಗಾಗಿ ಹಣವನ್ನು ಕಡಿತ ಮಾಡಿದ ಬಳಿಕ ಅವರು ಪಡೆದ ಮೊತ್ತ 2.49 ರೂಪಾಯಿ ಆಗಿತ್ತು. ಇದರಿಂದ ಅವರು ಬೆಳೆದ 512 ಕೆಜಿ ಈರುಳ್ಳಿಯಿಂದ ಬಂದ ನಿವ್ವಳ ಲಾಭ ಕೇವಲ 2 ರೂಪಾಯಿ!
ಈ ರೈತ ಸೊಲ್ಲಾಪುರದ ಬಾರ್ಶಿ ಗ್ರಾಮದವನಾಗಿದ್ದು, ತನ್ನ ಬೆಳೆಯನ್ನು ಮಾರುಕಟ್ಟೆಯಲ್ಲಿ ಮಾರಾಟ ಮಾಡಲು ಸುಮಾರು 17 ಕಿಲೋಮೀಟರ್ ಪ್ರಯಾಣ ಮಾಡಿದ್ದ ಎನ್ನಲಾಗಿದೆ. ಟ್ವಿಟರ್ ಬಳಕೆದಾರರಾದ ರವೀಂದ್ರ ಕುಮಾರ್ ಆದಿ ಅವರು ರಸೀದಿ ಮತ್ತು ಚೆಕ್‌ನ ಚಿತ್ರಗಳೊಂದಿಗೆ ರೈತನ ಅಸಹಾಯಕತೆಯನ್ನು ಹಂಚಿಕೊಂಡಿದ್ದಾರ.ೆ ಸೊಲ್ಲಾಪುರದ ಬಾರ್ಶಿ ಗ್ರಾಮದ ರಾಜೇಂದ್ರ ತುಕಾರಾಂ ಚವ್ಹಾಣ ಎಂಬ ರೈತ ಫೆ.17ರಂದು ಮಾರುಕಟ್ಟೆಯಲ್ಲಿ 500 ಕೆಜಿ ಈರುಳ್ಳಿ ಮಾರಾಟ ಮಾಡಿದ್ದಾನೆ. ಗಾಡಿ, ತೂಕ, ಕೂಲಿ ಹಣ ಕಳೆದು ಸಿಕ್ಕಿದ್ದು ಕೇವಲ 2 ರೂಪಾಯಿ. ಬಿಲ್ ಮತ್ತು ಚೆಕ್ ಇಲ್ಲಿದೆ" ಎಂದು ಅವರು ಫೆಬ್ರವರಿ 24 ರಂದು ಟ್ವೀಟ್ ಮಾಡಿದ್ದಾರೆ.
ರಶೀದಿಯ ಆಧಾರದಲ್ಲಿ ಹೇಳುವುದಾದರೆ, ಸೊಲ್ಲಾಪುರ ಮಂಡಿಯ ಸೂರ್ಯ ಟ್ರೇಡಿಂಗ್ ಕಂಪನಿಗೆ ತಮ್ಮ ಈರುಳ್ಳಿಯನ್ನು ಕೆಜಿಗೆ 1 ರೂಪಾಯಿಯಂತೆ 512 ಕೆಜಿ ಈರುಳ್ಳಿ ಮಾರಾಟ ಮಾಡಿದ್ದಾರೆ ಎನ್ನುವುದು ಗೊತ್ತಾಗುತ್ತದೆ. ಫೆ. 17 ರಂದು ದಾಖಲಾದ ರಶೀದಿ ಇದಾಗಿದ್ದು, ರೈತನ ಹೆಸರನ್ನು ರಾಜೇಂದ್ರ ತುಕರಾಂ ಚೌಹಾಣ್ ಎಂದು ನಮೂದಿಸಲಾಗಿದೆ. 512 ಕೆಜಿ ಈರುಳ್ಳಿಯನ್ನು ಮಾರುಕಟ್ಟೆಗೆ ತಂದು ಹಾಕಿದ ಶುಲ್ಕ 15 ರೂಪಾಯಿ, ತೂಕದ ವೆಚ್ಚ 24 ರೂಪಾಯಿ ಹಾಗೂ ಇತರ ಶುಲ್ಕಗಳ ಕಡಿತದ ನಂತರ ರೈತನಿಗೆ ಕೇವಲ 2.49 ರೂಪಾಯಿ ಸಿಕ್ಕಿದೆ.
Viral Video: ನಡುರಸ್ತೆಯಲ್ಲೇ ವ್ಯಕ್ತಿಗೆ ಹೃದಯಾಘಾತ, ಸಿಪಿಆರ್ ನೀಡಿ ಬದುಕಿಸಿದ ಟ್ರಾಫಿಕ್ ಪೊಲೀಸ್!
ಇನ್ನೊಂದು ಚಿತ್ರದಲ್ಲಿ ರೈತನ ಹೆಸರಿಗೆ ಬರೆಯಲಾಗಿರುವ ಚೆಕ್‌ಅನ್ನು ತೋರಿಸಲಾಗಿದೆ. ರಾಜೇಂದ್ರ ಚೌಹಾಣ್ ಅವರ ಹೆಸರಿನಲ್ಲಿ 2 ರೂಪಾಯಿ ಚೆಕ್‌ಅನ್ನು ಬರೆಯಲಾಗಿದೆ. ತಾವು ಬೆಳೆದ ಈರುಳ್ಳಿ ಉತ್ತಮ ಗುಣಮಟ್ಟದ್ದಾಗಿದೆ ಎಂದು ಚೌಹಾಣ್ ಹೇಳಿದ್ದರೆ. ಇದು ಅತ್ಯಂತ ಕೆಳ ದರ್ಜೆಯ ಈರುಳ್ಳಿ ಎಂದು ವ್ಯಾಪಾರಿ ಹೇಳಿದ್ದಾನೆ.
'ಡಿಕೆ ರವಿ ಕೊನೆಯ ಮೆಸೇಜ್ ಆಧರಿಸಿ ರೋಹಿಣಿ ವಿರುದ್ಧ ತನಿಖೆ ಮಾಡಿ'
"ನಾನು ಸೋಲಾಪುರದ ಈರುಳ್ಳಿ ವ್ಯಾಪಾರಿಗೆ ಐದು ಕ್ವಿಂಟಾಲ್‌ಗಿಂತ ಹೆಚ್ಚು ತೂಕದ 10 ಚೀಲ ಈರುಳ್ಳಿಯನ್ನು ಮಾರಾಟಕ್ಕೆ ಕಳುಹಿಸಿದ್ದೇನೆ. ಆದರೆ ಲೋಡಿಂಗ್, ಸಾರಿಗೆ, ಕಾರ್ಮಿಕ ಮತ್ತು ಇತರ ಶುಲ್ಕಗಳನ್ನು ಕಡಿತಗೊಳಿಸಿದ ನಂತರ ನಾನು ಕೇವಲ 2.49 ರೂಪಾಯಿ ನಿವ್ವಳ ಲಾಭವನ್ನು ಪಡೆದಿದ್ದೇನೆ ಎಂದು ಅವರು ಹೇಳಿಕೊಂಡಿದ್ದನ್ನು ಪಿಟಿಐ ವರದಿ ಮಾಡಿದೆ.