ರಾಹುಲ್ ಗಾಂಧಿ ಅನರ್ಹಗೊಳಿಸಿರುವ ನಿರ್ಧಾರ ವಿರೋಧಿಸಿ ಕಾಂಗ್ರೆಸ್ ದೆಹಲಿಯಲ್ಲಿ ಭಾರಿ ಪ್ರತಿಭಟನೆ ನಡೆಸುತ್ತಿದೆ. ಕಾಂಗ್ರೆಸ್ ಹಿರಿಯ ನಾಯಕರು ಪ್ರತಿಭಟನೆಯಲ್ಲಿ ಧುಮುಕಿದ್ದಾರೆ. ಪರಿಸ್ಥಿತಿ ಕೈಮೀರುತ್ತಿದ್ದಂತೆ ಪೊಲೀಸರು ಹಲವು ಕಾಂಗ್ರೆಸ್ ನಾಯಕರನ್ನು ವಶಕಕ್ಕೆ ಪಡೆದಿದ್ದಾರೆ. ಇತ್ತ ಪ್ರತಿಭಟನೆ ತೀವ್ರಗೊಂಡಿರುವ ಕಾರಣ 144 ಸೆಕ್ಷನ್ ಜಾರಿಯಾಗಿದೆ.
ನವದೆಹಲಿ(ಮಾ.28): ಮೋದಿ ಸಮುದಾಯವನ್ನು ನಿಂದಿಸಿದ ಕಾರಣಕ್ಕೆ 2 ವರ್ಷ ಜೈಲು ಶಿಕ್ಷೆಗೆ ಗುರಿಯಾಗಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸಂಸದ ಸ್ಥಾನದಿಂದ ಅನರ್ಹಗೊಂಡಿದ್ದಾರೆ. ಇದನ್ನು ವಿರೋಧಿಸಿ ಕಾಂಗ್ರೆಸ್ ದೇಶಾದ್ಯಂತ ಪ್ರತಿಭಟನೆ ನಡೆಸುತ್ತಿದೆ. ಇಂದು ದೆಹಲಿಯಲ್ಲಿ ಕಾಂಗ್ರೆಸ್ ಪ್ರಮುಖ ನಾಯಕರು ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿದೆ. ಜೈರಾಂ ರಮೇಶ್, ಪಿ ಚಿದಂಬರಂ ಸೇರಿದಂತೆ ಹಲವು ಪ್ರಮುಖ ನಾಯಕರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದಾರೆ. ಪ್ರತಿಭಟನೆ ತೀವ್ರಗೊಳ್ಳುತ್ತಿದ್ದಂತೆ ಪೊಲೀಸರು ಹಲವರನ್ನು ವಶಕ್ಕೆ ಪಡೆದಿದ್ದಾರೆ. ಇದರಿಂದ ಉದ್ರಿಕ್ತ ವಾತಾವರಣ ನಿರ್ಮಾಣವಾಗಿತ್ತು. ಹೀಗಾಗಿ ದೆಹಲಿಯ ಕಾಂಗ್ರೆಸ್ ಪ್ರತಿಭಟನಾ ನಿರತ ಸ್ಥಳ ರೆಡ್ ಪೋರ್ಟ್ ಬಳಿ ಸೆಕ್ಷನ್ 144 ಜಾರಿ ಮಾಡಲಾಗಿದೆ.
ಪ್ರತಿಭಟನೆ ತೀವ್ರಗೊಳ್ಳುತ್ತಿದ್ದಂತ ದೆಹಲಿ ಪೊಲೀಸರು 50ಕ್ಕೂ ಹೆಚ್ಚು ಕಾಂಗ್ರೆಸ್ ನಾಯಕರನ್ನು ವಶಕ್ಕೆ ಪಡೆದಿದ್ದಾರೆ. ಇದರಿಂದ ವಾತಾವರಣ ಬಿಗಿಗೊಂಡಿತು. ಸಂಜೆ 7 ಗಂಟೆಗೆ ರೆಡ್ ಫೋರ್ಟ್ ವಲಯದಿಂದ ಪ್ರತಿಭಟನಾ ಮೆರೆವಣಿಗೆ ಆರಂಭಿಸಿ, ನವದೆಹಲಿಯ ಟೌನ್ ಹಾಲ್ ಬಳಿ ಪ್ರತಿಭಟನೆ ಮೆರವಣಿಗೆ ಅಂತ್ಯಗೊಳ್ಳಲಿದೆ. ಈ ಪ್ರತಿಭಟನೆಯಲ್ಲಿ ಕಾಂಗ್ರೆಸ್ ನಾಯಕರು ಮಾತ್ರವಲ್ಲ, ಕಾಂಗ್ರೆಸ್ ಮೈತ್ರಿ ಪಕ್ಷ ಸೇರಿದಂತೆ ವಿಪಕ್ಷಗಳ ಹಲವು ನಾಯಕರು ಪಾಲ್ಗೊಂಡಿದ್ದಾರೆ.
ರಾಹುಲ್ ಅನರ್ಹತೆ ಹಿಂದೆ ಬಿಜೆಪಿ ಕುತಂತ್ರ: ಮಲ್ಲಿಕಾರ್ಜುನ ಖರ್ಗೆ
ಇಂದು ರಾತ್ರಿ ಕಾಂಗ್ರೆಸ್ ಮೆರವಣಿಗೆ ಮಾಡಿ ಪ್ರತಿಭಟನೆ ನಡೆಸಿದೆ. ಹಳೆ ದೆಹಲಿಯ ಚಾಂದನಿ ಚೌಕ್‌ನಲ್ಲಿರುವ ಕೆಂಪುಕೋಟೆಯಿಂದ ಟೌನ್ ಹಾಲ್‌ವರೆಗೆ ಕಾಂಗ್ರೆಸ್ ಸಂಸದರು ಮೆರವಣಿಗೆ ಮಾಡಿ ತಮ್ಮ ವಿರೋಧ ವ್ಯಕ್ತಪಡಿಸಿದರು. ಈ ಜಾಥಾಗೆ ‘ಲೋಕ ತಂತ್ರ ಬಚಾವ್ ಮಶಾಲ್ ಶಾಂತಿ ಯಾತ್ರೆ’ ಎಂದು ಹೆಸರಿಡಲಾಗಿತ್ತು. ಆಗ ಕೆಲವು ನಾಯಕರನ್ನು ಪೊಲೀಸರು ವಶಕ್ಕೆ ಪಡೆದರು. ಈ ನಡುವೆ ಏಪ್ರಿಲ್ 2ನೇ ವಾರ ‘ಜೈ ಭಾರತ ಮಹಾ ಸತ್ಯಾಗ್ರಹ’ ಹೆಸರಿನ ಪ್ರತಿಭಟನೆಯನ್ನು ಕಾಂಗ್ರೆಸ್ ದೇಶಾದ್ಯಂತ ನಡೆಸಲಿದೆ.
ರಾಹುಲ್ ಗಾಂಧಿ ಸಂಸದ ಸ್ಥಾನ ಅನರ್ಹಗೊಂಡ ಬೆನ್ನಲ್ಲೇ ಸರ್ಕಾರಿ ಅಧಿಕೃತ ಬಂಗಲೆ ಖಾಲಿ ಮಾಡಲು ನೋಟಿಸ್ ನೀಡಲಾಗಿತ್ತು. ಇದರ ವಿರುದ್ಧವೂ ಹರಿಹಾಯ್ದ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿಯನ್ನು ದುರ್ಬಲಗೊಳಿಸಲು ಬಿಜೆಪಿ ಎಲ್ಲಾ ಪ್ರಯತ್ನ ಮಾಡುತ್ತಿದೆ. ರಾಹುಲ್ ಗಾಂಧಿ ತಾಯಿ ಜೊತೆ ಇರುತ್ತಾರೆ. ಅಥವಾ ನನ್ನ ಮನೆಗೆ ಬರಬಹುದು. ರಾಹುಲ್ ಗಾಂಧಿಗಾಗಿ ನಾನು ಮನೆ ಖಾಲಿ ಮಾಡುತ್ತೇನೆ ಎಂದು ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.
ರಾಹುಲ್, ಗಾಂಧಿ ಕುಟುಂಬವನ್ನು ಕಾನೂನು ವಿಶೇಷವಾಗಿ ಪರಿಗಣಿಸಬೇಕು, ಕಾಂಗ್ರೆಸ್ ನಾಯಕ ವಿವಾದ!
ಕಾರ್ಯಾಂಗ ಮತ್ತು ಸಂಸದೀಯ ಪ್ರಜಾಪ್ರಭುತ್ವ ಹಾಗೂ ನ್ಯಾಯಾಂಗ ವ್ಯವಸ್ಥೆ ಹಾಗೂ ಕೇಂದ್ರದ ಸರ್ವಾಧಿಕಾರಿ ಪ್ರಭುತ್ವ ಸಂಪೂರ್ಣ ಬುಡಮೇಲು ಮಾಡಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ವೈಯಕ್ತಿಕ ಜೀವನದಲ್ಲಿ ದ್ವೇಷ, ರಾಜಕಾರಣ ಮಾಡುತ್ತಿದೆ ಎಂದು ಪ್ರತಿಭಟನಾ ನಿರತ ಕಾಂಗ್ರೆಸ್ ಆರೋಪಿಸಿದೆ.
